ಜೀವನ ಬದಲಾಗಬೇಕಿದೆ…
ಅತಿ ಆಸೆಯ ಮನದಿಂದಳಿಸಿ
ತುಸು ಪ್ರೀತಿಯ ಅದರೊಳಗಿರಿಸಿ
ನಾನು ನನ್ನದೆನ್ನುದ ತೊರೆಯಬೇಕಾಗಿದೆ
ಜೀವನ ಬದಲಾಗಬೇಕಿದೆ..
ಜಾತಿ ಬೇಧವನ್ನು ಮರೆತು
ಎಲ್ಲರೊಳಗೊಂದಾಗಿ ಬೆರೆತು
ನಾವೆಲ್ಲರೊಂದೆಂಬ ಭಾವ ಮೊಳಗಬೇಕಾಗಿದೆ
ಜೀವನ ಬದಲಾಗಬೇಕಿದೆ..
ಹಿರಿಯರನು ಗೌರವಿಸಿ
ಕಿರಿಯರನು ಪ್ರೀತಿಸಿ
ಸೌಹಾರ್ದತೆಯ ಸಾರಬೇಕಾಗಿದೆ
ಜೀವನ ಬದಲಾಗಬೇಕಿದೆ..
ಕಹಿ ನೆನಪುಗಳ ಸಂಹರಿಸಿ
ಅವಮಾನಗಳ ಸ್ವೀಕರಿಸಿ
ಸಿಡಿದೆದ್ದು ಗುರಿಯೆಡೆಗೆ ನಡೆಯಬೇಕಾಗಿದೆ
ಜೀವನ ಬದಲಾಗಬೇಕಿದೆ..
– ರೋಹಿಣಿ ಬೀರಾದರ್
ನಿಂಬೂರ
ತಾ:ಹುಮನಾಬಾದ್
ಜಿ:ಬೀದರ್