ಜೀವನ
ವಿವೇಕಾನಂದರ ನುಡಿ ಕರೆಯಿತು
ಮರ ಮರಳಿ:
ಮಿಂಚಿನ ಹೂವಾಯಿತು
ಎದೆಯಲಿ ಅರಳಿ:
ಗಮಗಮಿಸಿತು ಸುತ್ತ
ತುಂಬಿತು ಚಿತ್ತ:
ಸಂಶಯವನು ಹುಡಿಗೈದು
ತಬ್ಬಿತು ನನ್ನನ್ನು:
ಕೈಹಿಡಿದು ಮೇಲೆತ್ತಿ
ಜೊತೆಯಾಯಿತು ಇನ್ನೂ:
ಸಿರಿಯಾಯಿತು ಗುರಿಯಾಯಿತು
ಬಾಳನು ಆವರಿಸಿ:
ಶಕ್ತಿಯ ಕಿಡಿ ಹೊತ್ತಿಸಿತು
ಜ್ವಾಲೆಯನೆ ಎಬ್ಬಿಸಿತು
ತಂದಿತು ಹೊಸಬೆಳಗು
ಮೂಡಿಸಿತು ಬೆರಗು:
ನಾನ್ನೆದ್ದೆ ಎದ್ದೆ
ಇನ್ನೆಲ್ಲಿ ನಿದ್ದೆ.
ಎಂ.ಜಿ.ಗಂಗನಪಳ್ಳಿ. ಬೀದರ