ಜೀವ ಪಯಣ.
ಬಹು ದೂರವೇನಿಲ್ಲ ನಾವು
ಬಂದು ಹೋಗುವ ದಾರಿ
ತಲುಪಲೂ ಬಹುದು ಅರಿವಿರದೆ
ಹುಟ್ಟಿದಾ ಮರುಕ್ಷಣವೇ.
ಬಂದಾಗ ಅಲ್ಲೊಂದು ಸಂಭ್ರಮ
ಹೋಗುವಾಗಲೂ ಮಗದೊಂದು ಸಂಭ್ರಮ
ನೆನಪಿರದು ಯಾರಿಗೂ ಆದಿನ
ಸುಖ , ಶೋಕಗಳ ಸಮಾಗಮ .
ಧನಿಕ ದರಿದ್ರನಿಗೂ ಒಂದೇ
ಹುಟ್ಟು ಸಾವಿನ ಸಂತೆ
ಅಡಗಿ ಕುಳಿತರೂ ನಮ್ಮ ಬಿಡದು
ಸಾವಿಗಾಗಿ ಮಾಡದಿರು ಚಿಂತೆ
ಮರಣ ಬರುವ ವರೆಗೂ
ಮಣ್ಣು ಮಹಲಿನ ಮೇಲಾಸೆ
ಮಣ್ಣಾಗಿ ಹೋಗುವ ನಿನಗೂ
ಬಾಗಿಲಿರದ ಮನೆ ಮೀಸಲು ಕೂಸೆ
ನಡೆಯಬೇಕು ಕೊನೆ ವರೆಗೂ
ಎಡರು ತೊಡರುಗಳ ಮೆಲ್ಲ ದಾಟಿ
ಜೀವ ಇರೋ ವರೆಗೂ
ಬಾಳಬೇಕು ಹೃದಯವಂತಿಕೆ ಮೀಟಿ.
✍️ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು