Oplus_131072

ಕಡಲು ನೀನು ಎಲ್ಲರಿಗಿಂತ ಮಿಗಿಲು.

ಅನಂತ ನಿರ್ದಿಗಂತ ನೀಲ ನೀಲ ಕಡಲು
ನಿನ್ನ ಮೇಲೆ ತೇಲಿ ತೇಲಿ ಹೋಗುವ ಮುಗಿಲು
ಅದೆಷ್ಟೊ ಹಿರಿದು ಇರಬಹುದು ನಿನ್ನ ಒಡಲು
ನೀ ಅಲೆಯಂತೆ ಉಕ್ಕಿ ಬರುವಾಗ ನಮಗಂತೂ ದಿಗಿಲು

ಎತ್ತ ನೋಡಿದರು ನಿನಗಿಲ್ಲ ಸೀಮೆ
ನಿನ್ನ ತಬ್ಬಿ ನಿಂತಿಹಳು ಭೂರಮೆ
ನೀ ಶ್ಯಾಮ ಅವಳು ಭಾಮೆ
ಎಲ್ಲರಿಗೂ ಆದರ್ಶ ನಿಮ್ಮ ಈ ಒಲುಮೆ

ನಿನ್ನಂತೆ ನಾನಾಗುವ ತುಮುಲ
ನಿನ್ನ ಒಡಲು ಅದೆಷ್ಟು ನಿರ್ಮಲ
ಎಲ್ಲರ ಮನಸ್ಸು ಆಕರ್ಷಿಸುವ ನೀ ವಿಶಾಲ
ನಿನ್ನ ತನು ಮನದಲಿ ತುಂಬಿದೆ ಸುಜಲ

ಅದೆಷ್ಟೋ ಜೀವ ಸಂಕುಲಕೆ ನೀ ಆಸರೆ
ನಿನ್ನ ಸೌಂದರ್ಯವು ಎಲ್ಲರ ಕಣ್ಸರೆ
ಬಳ್ಳಿಯಂತೆ ಬಳಕುವ ಅಲೆಗಳ ಅಪ್ಸರೆ
ನಿನ್ನ ಮನೆಯಂಗಳದಿ ಸಿಹಿ ಇಲ್ಲದ ಸಕ್ಕರೆ

ವಸುಂಧರೆಯೆಡೆಗೆ ನಿನಗೆ ಧಾವಿಸಿ ಬರುವ ತವಕ
ಅವಳಿಗೆ ನಿನ್ನನ್ನು ಬಾಚಿ ತಬ್ಬುವ ಪುಳಕ
ನಿನ್ನ ಮನೆ ಬಾಗಿಲಿಗೆ ಬಂದವರಿಗೆ ನಿತ್ಯ ಜಳಕ
ನಿನ್ನ ಎಷ್ಟು ಬಾರಿ ನೋಡಿದರೂ ಆಕರ್ಷಕ

ವೀಮಲ ಆದರ್ಶ.
ಕುಂದಾಪುರ

ಕವಯತ್ರಿ ಪರಿಚಯ:

ವಿಮಲ ಆದರ್ಶ ಕುಂದಾಪುರ

ಕವಯತ್ರಿ ವಿಮಲ ಆದರ್ಶ ರವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮ ದವ ರಾಗಿದ್ದು, ಎಂ.ಎ. ಅರ್ಥ ಶಾಸ್ತ್ರ ಸ್ನಾತಕೋತ್ತರ ಪದವಿ ಧರರಾಗಿದ್ದಾರೆ. ಇವರು   2016ರಿಂದ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕಾಸನಮಕ್ಕಿ ಮುದ್ರಾಡಿ ಗ್ರಾಮದ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಕಾವ್ಯ ರಚನೆಯಲ್ಲಿ ತೊಡಗಿದ್ದಾರೆ. ಅವು ಈಗಾಗಲೇ ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

2 thoughts on “ಕಡಲು ನೀನು ಎಲ್ಲರಿಗಿಂತ ಮಿಗಿಲು.(ಕವಿತೆ)”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ