Oplus_131072

ಕಾಲನು ಕರೆದಾಗ (ಚಿಂತನ)

ಜೀವನವೆನ್ನುವುದು ಒಂದು ಗಣಿತದ ಲೆಕ್ಕವಿದಂತೆ
ಲೆಕ್ಕ ಸರಿ ಇದ್ದರೆ ಬದುಕು. ಲೆಕ್ಕ ತಪ್ಪಿದಾಗ ಬದುಕೆನ್ನುವುದು ಬರೀ ಬವಣೆಯ ಥಳಕು.

ಹೌದು ಆತ್ಮೀಯರೇ !                                  ಜೀವನದಲ್ಲಿ ಎಲ್ಲವೂ ಸರಿಯಿದ್ದರೆ ಬದುಕು ಬಲು ಸುಂದರವಾಗಿರುತ್ತದೆ.
‘ಬೆಳಕು’ ಎಂದಿನಂತೆ ಸಾಗುತ್ತದೆ. ದಿನಚರಿಯು ಕೂಡ ಪ್ರತಿದಿನದಂತೆ ಪುನರಾವರ್ತನೆ ಆಗುತ್ತಿರುತ್ತದೆ.
ಅದರ ನಡುವೆಯೆ ವಿಧಿ ಎನ್ನುವುದು ಇದೇಯಲ್ಲ ಇದು ಕ್ಷಣ ಮಾತ್ರದಲ್ಲಿ ಲೆಕ್ಕ ತಪ್ಪಿಸುತ್ತದೆ.
ಆ ಕ್ಷಣಕ್ಕೆ ಸಂತೋಷವಾಗಿರುವ ವ್ಯಕ್ತಿ, ವಿಚಲಿತನಾಗಿ ಚಿಂತೆಗಿಡಗುತ್ತಾನೆ. ಬದುಕೆಂಬುದು ಅವನಿಗೆ ತುಂಬ ಭಾರವಾಗುತ್ತ ಸಾಗುತ್ತದೆ. ಲೋಕವೆಲ್ಲ ಅವನಿಗೆ ಶೂನ್ಯಮಯವಾಗಿ ಕಾಣುತ್ತದೆ. ಅಂತಹ ವ್ಯಕ್ತಿಗೆ ಏಕಾಂತದಂತೆ ಭಾಸವಾಗುತ್ತದೆ. ಇಂತಹ ಸಂಧರ್ಭದಲ್ಲಿ ಆತ ತುಂಬ ಚಿಂತಾಕರ್ತನಾಗಿ ನರಳುತ್ತಾನೆ,
ಇದೇ ಕೊರಗಿನಲ್ಲಿ ಕೊನೆಗೆ ಆತ ಕೊನೆಯುಸಿರೆಳೆಯುತ್ತಾನೆ.

ಆತ್ಮೀಯರೇ !                                                  ರೋಗ – ರುಜಿನಗಳು ಅನ್ನೊದು ಆಕಸ್ಮಿಕವಾಗಿ ಬರುತ್ತವೆ. ದುರ್ಘಟನೇಯಂತಹ ವಿಷಯಗಳು ನಿಮಿತ್ಯ ಮಾತ್ರ ಎನಿಸಿಕೊಂಡರೂ
ಬ್ರಹ್ಮ ಲಿಖಿ ಕಭಿ ನ ಚುಕಿ‘ ಎನ್ನುವಂತೆ ಇವುಗಳೆಲ್ಲ ನಮ್ಮೆಲ್ಲರ ಬದುಕಿನಲ್ಲಿ ವಿಧಿ ಆಡುವ ಆಟದಂತೆ ನಡೆದು ಹೋಗಿರುತ್ತದೆ.
ಹಾಗಾಗಿ ಈ ವಿಧಿ ಲೆಕ್ಕ ಯಾರಿಂದಲೂ ತಪ್ಪಿಸಲು ಸಾಧ್ಯವಿವೇ ಇಲ್ಲ.

12 ನೇ ಶತಮಾನದ ಶರಣರು ಕೂಡ ತಮ್ಮ ವಚನದಲ್ಲಿ :

‘ನಾಳೆ ಬಪ್ಪುದು ನಮಗಿಂದೆ ಬರಲಿ                        ಇಂದು ಬಪ್ಪುದು ನಮಗೀಗಲೆ ಬರಲಿ      ಇದಕಾರಂಜುವರು                            ಇದಕಾರಳುಕುವರು                                         ‘ಜಾತಸ್ಯ ಮರಣಂ ಧ್ರುವಂ’ ಎಂದುದಾಗಿ ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ.” ಬಸವಣ್ಣ ಎಂದು ಹೇಳಿದ್ದಾರೆ.

”ಹುಟ್ಟು ಆಕಸ್ಮಿಕವಾದರೆ ಸಾವು ಖಚಿತ” ಎನ್ನುವ ಮಾತು ಶಾಶ್ವತ ಸತ್ಯವೆಂದು ಅರುಹಿದ್ದಾರೆ. ಈ ನಮ್ಮ ಬಸವಾದಿ ಶಿವಶರಣರು. ಮತ್ತೊಂದು ಕಡೆ ಶರಣರು

ನಿದ್ದೆಗೊಮ್ಮೆ ನಿತ್ಯ ಮರಣ.! 
ಎದ್ದಾಗಲೆ ನವೀನ ಜನನ.!’ ‘ಎಂದು ಕವಿ ಬೇಂದ್ರೆ ಹೇಳಿದ್ದಾರೆ. ಹೀಗೆ ಹಿರಿಯ ಕವಿತೆಗಳ ವಾಣಿಯಂತೆ ವಿಧಿಯು ತನ್ನ ಲೆಕ್ಕ ತಪ್ಪಿಸುವವರೆಗೂ ನಾವುಗಳು ನಮ್ಮ ಬದುಕಿನ ಲೆಕ್ಕ ಸರಿಯಾಗಿಟ್ಟಿಕೊಂಡು, ಇರುವಷ್ಟು ದಿನ ಪರರ ನಿಂದನೆ ಮಾಡದೆ, ಯಾರಿಗೂ ಕೇಡು ಮಾಡದೆ ಸಾಧ್ಯವಾದರೆ ಪರರ ಒಳಿತನ್ನು ಮಾಡಿ ಲೋಕ ಕಲ್ಯಾಣವನ್ನು ಬಯಸೋಣ.

ಸಾರ್ಥಕ ಬದುಕು ನಮ್ಮದಾಗಿಸಿಕೊಂಡು ಸಂತೋಷವಾಗಿರೋಣ. ಕಾಲನು ಕರೆದಾಗ ಆ ದೇವರ ಅಣತಿಯಂತೆ ನಾವು ನೀವೆಲ್ಲ ಒಂದು ದಿನ ಈ ಮಾಯ, ಮೋಹ ,ಮಮತೆಯ ಜೀವನದಿಂದ ಎದ್ದು ಹೋಗವುದು ನಿಶ್ಚಿತ. ಹಾಗಾಗಿ ಇರುವಷ್ಟು ದಿನ ಇದ್ದು, ಜಾತಿ ಬೇದ, ,ಧರ್ಮ ಬೇಧ, ವ್ಯಕ್ತಿ ಬೇಧ ಮಾಡದೇ ನಾವೇಲ್ಲ ಒಂದು. ಒಗ್ಗಟ್ಟಿನಲ್ಲಿ ಬಲವಿದೆ. ನಾವು ಭಾರತಾಂಬೆಯ ಮಕ್ಕಳು ಎಂದು ಸಹೋದರತೆಯಿಂದ ಬಾಳಿ ಬದುಕೊಣ.

ಓಂಕಾರ ಪಾಟೀಲ್ ಬೀದರ

ಲೇಖಕರ ಪರಿಚಯ:

ಓಂಕಾರ ಪಾಟೀಲ್. ಬೀದರ

ಓಂಕಾರ ಪಾಟೀಲ್ ರವರು
ಬೀದರ ನಿವಾಸಿ. ಇವರು ಓದಿದ್ದು ಪಿ.ಯು.ಸಿ ವರೆಗೆ ಮಾತ್ರ. ಲೇಖಕರು ತಮ್ಮ ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ ಚಿಂತನ ಹನಿಗವನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಬೀದರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ