ಕಲಾವಿದನ ಬದುಕು.(ಮಕ್ಕಳ ಕತೆ)
ಒಂದು ಊರಿನಲ್ಲಿ ಒಬ್ಬ ಕಲಾವಿದ ಇದ್ದ. ಅವನನ್ನು ನೋಡಲು ಮಕ್ಕಳು ಕಾತರದಿಂದ ಹವಣಿಸುತ್ತಿದ್ದರು. ಏಕೆಂದರೆ ಆತ ಮಾಡುವ ಕಲೆಯ ಕೈ ಚಳಕವನ್ನು ಮಕ್ಕಳನ್ನು ಮೆಚ್ಚುವಂತೆ ಆತ ಕಲೆಯನ್ನು ಮಾಡಿ ಬಣ್ಣಗಳನ್ನು ಬಳಿದು ನೋಡಲು ಇಡುತ್ತಿದ್ದನು.
ಒಮ್ಮೆ ಶಾಲೆಯಲ್ಲಿ ಗುರುಗಳು ಪಾಠ ಮಾಡುವಾಗ ಅಲ್ಲಿರುವ ಮಕ್ಕಳಿಗೆ ಪಾಠದಲ್ಲಿ ಬಂದಿರುವ ಕಲೆಯ ಬಗ್ಗೆ ಸಂಸ್ಕೃತಿ ಸಂಪ್ರದಾಯದ ಬಗ್ಗೆ ತಿಳಿ ಹೇಳಿದರು. ಆಗ ರಾಮು ಎನ್ನುವ ವಿದ್ಯಾರ್ಥಿ ಗುರುಗಳೇ ನಮ್ಮ ಮನೆಯ ಹತ್ತಿರ ಕೆತ್ತನೆ ಮಾಡುವ ಒಬ್ಬ ವ್ಯಕ್ತಿ ಇದ್ದಾರೆ ಅವರು ದಿನಾಲು ಹೊಸ ಹೊಸ ಬಗೆಯ ವಸ್ತುಗಳನ್ನು ಕಟ್ಟಿಗೆಯಲ್ಲಿ ಕೆತ್ತಿ ದೇವರ ಮೂರ್ತಿ, ಮನೆ ವಸ್ತು ಕೃಷಿ ವಸ್ತುಗಳು ಮಾಡುತ್ತಾರೆ ” ಎಂದಾಗ
ಗುರುಗಳು ” ಹೌದು ಮಕ್ಕಳೇ ! ಕಲೆ ಎನ್ನುವುದು ದೇವರು ಕೊಟ್ಟ ಒಂದು ಉಡುಗೊರೆ ಅದು ಎಲ್ಲರಿಗೂ ಬರುವುದಿಲ್ಲ. ಆಸಕ್ತಿ ಶ್ರದ್ದೆ ಪ್ರೀತಿಯಿಂದ ಕಾಯಕ ಮಾಡುವವರಿಗೆ ಕಲೆ ಒಲಿದು ಬರುತ್ತದೆ.
ಇದರಿಂದ ಮಕ್ಕಳಾದ ನೀವು ಹಲವಾರು ರೀತಿಯ ಸಾಧನೆ ಮಾಡಬಹುದು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಚಿಕ್ಕ ವಯಸ್ಸಿನಲ್ಲಿ ಗುರಿ ಇದ್ದರೆ ಅದಕ್ಕೆ ತಕ್ಕಂತೆ ಕಾಯಕ ಮಾಡಿ ನೀವು ಒಂದು ದಿನ ಸಮಾಜ ದೇಶ ಒಪ್ಪುವ ಮಕ್ಕಳಾಗಲು ಸಾಧ್ಯವಾಗುತ್ತದೆ.
ವಿದ್ಯೆ ಕಲಿಯೋದು ಎಲ್ಲರೂ ತಿಳುವಳಿಕೆ ಮತ್ತು ಹೊಸದನ್ನು ಸೃಷ್ಟಿಸಿ ಬದುಕುವ ದಾರಿ ತಿಳಿದುಕೊಳ್ಳಲು ಹಾಗೆ ಹಣವನ್ನು ಗಳಿಸುವದಲ್ಲ ದೇಶ ಸೇವೆ ಮಾಡಿ ಮಕ್ಕಳೇ ಎಂದು ಗುರುಗಳು ಮಕ್ಕಳಿಗೆ ಆ ಕಲಾಕಾರನ ಕುರಿತು ಹೇಳುತ್ತಾರೆ.
ಒಮ್ಮೆ ಗುರುಗಳು ತರಗತಿ ಎಲ್ಲಾ ಮಕ್ಕಳನ್ನು ಕರೆದುಕೊಂಡು ಕಲಾವಿದನ ಮನೆಗೆ ಭೇಟಿ ನೀಡಿ ಆತ ಮಾಡಿರುವ ವಿವಿಧ ಬಗೆಯ ಕಲೆಗಳನ್ನು ನೋಡಿ ಮಕ್ಕಳಿಗೆ ಆತನ ಪರಿಚಯ ಕೂಡ ಮಾಡಿಸುತ್ತಾರೆ . ಕಲಾವಿದನ ಜೊತೆ ಮಾತನಾಡಿ ಆತ ಕಲಿತ ವಿದ್ಯೆಯ ಬಗ್ಗೆ ಮಕ್ಕಳೆದರೆ ಕೇಳುತ್ತಾರೆ . ಕಲಾವಿದ 8ನೇ ತರಗತಿ ಓದಿದ್ದು ಗುರುಗಳೇ ನಾನು ಮುಂದೆ ಓದಲಿಲ್ಲ ಆದರೆ ಇದನ್ನು ಇಷ್ಟಪಟ್ಟು ಮಾಡಿ ದೇವರ ಸೇವೆ ಮಾಡಲು ಪರರ ಬಳಕೆಗೆ ಬೇಕಾದ ಸಾಮಗ್ರಿ ಒದಗಿಸುವ ಕೆಲಸ ನನ್ನದು ಇದು ನಾನು ವೃತ್ತಿ ಜೀವನಕ್ಕಾಗಿ ಮತ್ತು ಸಮಾಜದ ಏಳಿಗೆಗಾಗಿ ಮಾಡುತ್ತಿದ್ದೇನೆ ಎಂದನು.
ಆಗ ರಾಮ ಮತ್ತು ಅವರ ಸ್ನೇಹಿತರು ತರಗತಿ ಎಲ್ಲಾ ಮಕ್ಕಳಿಗೂ ಕಲೆಯ ಬಗ್ಗೆ ತಿಳಿದು ಇದರಿಂದ ಎಷ್ಟು ಜನರಿಗೆ ಉಪಯೋಗ .
ನಮ್ಮ ನಾಡಿನ ಸಂಸ್ಕೃತಿ ಕಲೆ ಬಗ್ಗೆ ತಿಳಿದುಕೊಂಡು ಗುರುಗಳ ಮಾರ್ಗದರ್ಶನದಂತೆ ನಾನು ಮುಂದೆ ಸೈನಿಕ ಕಲಾವಿದ ಶಿಕ್ಷಕ ಪೊಲೀಸ್ ಇತ್ಯಾದಿ ಸಮಾಜ ಸೇವೆಗಳ ಅಲ್ಲಿ ಹೆಸರು ಮಾಡುತ್ತೇವೆ ಎಂದು ಗುರುಗಳಿಗೆ ಹೇಳಿದರು.
ಮಕ್ಕಳ ಮಾತು ಕೇಳಿ ಗುರುಗಳು ಸಂತಸದಿಂದ ಪಾಠವನ್ನು ಹೇಳಿ ಅವರ ಮಾತುಗಳನ್ನು ಕೇಳಿ ಖುಷಿಪಟ್ಟು ದಿನಾಲು ಶಾಲೆಗೆ ಬಂದು ಚೆನ್ನಾಗಿ ಓದುವ ಅಭ್ಯಾಸ ಮಾಡಿದರು.
ನೀತಿ:- ಒಳ್ಳೆಯದನ್ನ ಮತ್ತೊಬ್ಬರಿಂದ ಅರಿತು ನಾವು ಏನಾದರೂ ಮಾಡಲು ಮುಂದಾಗಬೇಕು .
– ಕವಿತಾ ಎಮ್ ಮಾಲಿ ಪಾಟೀಲ. ಜೇವರ್ಗಿ