ಕಲ್ಯಾಣದಲೊಬ್ಬ ಸೃಜನಶೀಲ ಸಾಹಿತಿ – ವೀರಣ್ಣ ಮಂಠಾಳಕರ್
ಕಳೆದೆರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ವೀರಣ್ಣ ಮಂಠಾಳಕರ್ ಅವರು ಕವಿ ಸಾಹಿತಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದವರು.
ಇವರದೊಂದು ಕತೆ ಸಂಜೆವಾಣಿ ಚಂದನದಲ್ಲಿ 1997 ರಲ್ಲಿ ಪ್ರಕಟ. ‘ಸಂಕಲ್ಪ ‘ ಎನ್ನುವ ಸಾಹಿತ್ಯ ಪತ್ರಿಕೆ ತೆಗೆದು ಕೈಸುಟ್ಟು ಕೊಂಡರು. ಪತ್ರಿಕಾ ರಂಗದಲ್ಲಿ ‘ಛಲ’ ಬಿಡದೆ
ಬಸವಕಲ್ಯಾಣ ತಾಲೂಕಿನ
ಕನ್ನಡ ಪ್ರಭ, ವಿಜಯ ಕರ್ನಾಟಕ ಮೊದಲಾದ ಪತ್ರಿಕೆಗೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ರಚಿಸಿದ ಕೃತಿಗಳೆಂದರೆ
1 .ಭಾವಾಂತರಂಗ (ಚುಟುಕು ಸಂಕಲನ)
2.ಸುಳಿಗಳು ( ಕವನ ಹನಿಗವನ ಸಂಕಲನ)
3.ಹನಿಜೇನು (ಪ್ರಾತಿನಿಧಿಕ ರಾಜ್ಯಮಟ್ಟದ ಚುಟುಕು ಸಂಕಲನ)
4.. ಗಾಂಧಿ ಆಗ್ಬೇಕಂದುಕೊಂಡಾಗ ( ಕವನ ಸಂಕಲನ)
5.ಕಾಯುವ ದೇವರ ವರ (ಕವನ ಸಂಕಲನ)
7. ಬದುಕಿನ ಬೆನ್ನೇರಿ (ಕಥಾ ಸಂಕಲನ)
8. ಮಾಧ್ಯಮದೊಳಗಣ
(ಅಂಕಣ ಬರಹಗಳು)
9.ಗಜಲ್ ಗೆಜ್ಜೆನಾದ
(ಗಜಲ್ ಸಂಕಲನ)
10 . ಮೌನ ಪ್ರತಿಭೆ
( ವ್ಯಕ್ತಿ ಪರಿಚಯ )
11. ಹಸಿವು ಮತ್ತು ಇತರೆ ಕಥೆಗಳು
ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ.
ಮತ್ತು ಇವರ ಬರಹಗಳು
ಮಯೂರ, ತುಷಾರ, ಕರ್ಮವೀರ, ಸುಧಾ, ತರಂಗ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯಕರ್ನಾಟಕ, ಹೊಸತು, ಪ್ರೇರಣ, ಸಂಕಲ್ಪ ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರು ಮೈಸೂರಿನ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಮೇ 8.2019ರಲ್ಲಿ ಗಡಿಗೌಡಗಾಂವ ಗ್ರಾಮದಲ್ಲಿ ಜರುಗಿದ ಬಸವಕಲ್ಯಾಣ ತಾಲೂಕಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡಿದ್ದರು.
ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಹಾರಕೂಡ ಸುಕ್ಷೇತ್ರದಿಂದ ಶ್ರೀಚೆನ್ನ ರತ್ನ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ವೀದಾರೆ. ವೀರಣ್ಣ ಮಂಠಾಳಕರ್
ಇವರು ಕೆಲಕಾಲ ದಿಕ್ಸೂಚಿ ಮಾಸ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ನಿರ್ವಹಿಸಿದ್ದಾರೆ.
ಪ್ರಸ್ತುತವಾಗಿ ವೀರ ಸಂಕಲ್ಪ ಮೀಡಿಯಾ ಎಂಬ ಯ್ಯೂಟೂಬ್ ಚಾನಲ್ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
– ಮಚ್ಚೇಂದ್ರ ಪಿ ಅಣಕಲ್
(ಕೃಪೆ- ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.)