ಕನಕದಾಸರು.
ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಸಮೀಪದ ಬಾಡ ಗ್ರಾಮದಲ್ಲಿ ಜನಿಸಿದವರು
ತಂದೆ ಬೀರಪ್ಪ ತಾಯಿ ಬಚ್ಚಮ್ಮರವರ ಪುತ್ರರು ಇವರು
ಬಾಲ್ಯದಲ್ಲಿಯೇ “ತರ್ಕ”, “ವ್ಯಾಕರಣ” “ಮೀಮಾಂಸೆ ಮತ್ತು ಸಾಹಿತ್ಯದಲ್ಲಿ ಬಲು ಪರಿಣತರಾದರು
ಬಂಕಾಪುರ ಕೋಟೆಯಲ್ಲಿ ಯೋಧರಾಗಿದವರು
ನಮ್ಮ ಮಹಾ ದಾಸ ಶ್ರೇಷ್ಟರಾದ ಭಕ್ತ ಕನಕದಾಸರು
ಸುಮಾರು 15- 16 ನೇ ಶತಮಾನದಲ್ಲಿ
ಕರುನಾಡಿನ ಈ ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ
ಬಹು ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರರಲ್ಲಿ
ಒಬ್ಬರಾಗಿದ್ದವರು ನಮ್ಮ ಭಕ್ತ ಕನಕದಾಸರನ್ನು ಕಾಣಬಹುದಿಲ್ಲಿ
ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾದವರು
ಶ್ರೀ ಕೃಷ್ಣನ ಅನನ್ಯ ಭಕ್ತರಾದವರು
ಕಾಗಿನೆಲೆಯ ಆದಿಕೇಶವನ ಭಕ್ತರು
ನಮ್ಮ ಶ್ರೀ ಭಕ್ತ ಕನಕದಾಸರು
ಆಡಳಿತಗಾರಾರಾಗಿದ್ದವರು ಸಂತರಾದವರು
ಮಹಾ ಕವಿಗಳಾದರು , ತತ್ವಜ್ಞಾನಿಯಾಗಿದ್ದವರು
ಕಾಗಿನೆಲೆಯ ಪೀಠಕ್ಕೆ ಭಕ್ತ ಕನಕದಾಸರ ಹೆಸರು
ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು
ಮೋಹನತರಂಗಿಣಿ, ನಳಚರಿತ್ರೆ,ರಾಮಧಾನ್ಯ ಚರಿತೆ
ಹರಿಭಕ್ತಿಸಾರ,ಎಂಬ ಮಹಾ ಕೃತಿಗಳನ್ನು ರಚಿಸಿದರು
ನಮ್ಮ ಹೆಮ್ಮೆಯ ನುಡಿ ಕನ್ನಡ ಭಾಷೆಯಲ್ಲಿ
ಅಪಾರವಾದ ಕೀರ್ತನೆಗಳನ್ನು ಕೊಡುಗೆಯಾಗಿ ನೀಡಿದವರು
ಬಹು ಪ್ರಸಿದ್ಧ ಕೀರ್ತನಕಾರರು ನಮ್ಮದಾಸ ಶ್ರೇಷ್ಠ ಭಕ್ತ ಕನಕದಾಸರು
ಬಸವೇಶ.ಎಸ್
ಶಿಕ್ಷಕರು, ಯುವ ಸಾಹಿತಿ
ತಿ. ನರಸೀಪುರ