ಕನ್ನಡವೇ ನಮ್ಮ ಹೆಮ್ಮೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿಯು ಕಡಿಮೆಯಾದರೂ ಕನ್ನಡ ಸಾಹಿತ್ಯ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ತೋರುತ್ತಿರುವವರ ಸಂಖ್ಯೆಗೇನ ಕಡಿಮೆಯಿಲ್ಲ ಅದರಲ್ಲಿ ನಾನು ಒಬ್ಬಳು ಎಂದು ಹೇಳಲು ಹೆಮ್ಮೆಯಿದೆ .ಎಲ್ಲರಿಗೂ ನಮ್ಮ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಹೆಮ್ಮೆ ಯಿದ್ದರೆ ಸಾಲದು ಜೊತೆಗೆ ಗೌರವಿಸುವುದನ್ನು ಒಗ್ಗೂಡಿಸಿಕೋಳ್ಳಬೇಕು .
ಈಗಂತೂ ಹೊಟ್ಟೆಯಲ್ಲಿ ಮಗು ಇರುವಾಗಲೇ ಅನ್ಯ ಭಾಷೆ ಮತ್ತು ಸಂಸ್ಕೃತಿಗೆ ಮಾರು ಹೋಗಿ ಅದರಂತೆ ಅನುಕರಣೆ ಮಾಡವರು ತುಂಬಾ ಜನ ಇದ್ದಾರೆ. ಮತ್ತು ಮದುವೆ ಇತ್ಯಾದಿ ಯಾವುದೆ ಸಮಾರಂಭದಲ್ಲಿ ಎಲ್ಲ ಅನ್ಯ ಭಾಷೆ ಸಂಸ್ಕೃತಿಯ ವೈವಿಧ್ಯ ಎಲ್ಲೆಡೆ ನೋಡುತ್ತಿದ್ದೇವೆ.
ಅದನ್ನೆಲ್ಲ ತಡೆಯುವ ನಿಟ್ಟಿನಲ್ಲಿ ನಾವುಗಳು ಅವರಿಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ.
ಒಂದು ಹುಟ್ಟಿದ ಮಗುವಿಗೆ ಇದು ಮಮ್ಮಿ ಡ್ಯಾಡಿ ಅಂತ ಹೇಳಿದರೆ ಆ ಮಗುವಿನ ಅಪ್ಪ ಅಮ್ಮ ಅಂತ ಹೇಗೆ ಗೊತ್ತಾಗಬೇಕು.ನಾವೆಲ್ಲ ಸಣ್ಣವರಿದ್ದಾಗ ಪುಟ್ಟ ಮಕ್ಕಳಿಗೆ ಬಂಗಾರ ಚಿನ್ನ ಪುಟ್ಟ ಪುಟ್ಟಿ ತಾಯಿ ಪಾಪು ಅಂತ ಕರೆಯುತ್ತಿದ್ದೆವು.ಆದರೆ ಈಗ ಬೇಬಿ ಸೋನು ಇತ್ಯಾದಿ ಹೆಸರುಗಳನ್ನು ಕರೆಯುವರು ಮತ್ತೆ ಆವಾಗ ಎಲ್ಲ ದೇವರಗಳ ಹೆಸರನ್ನು ಕರೆಯುತ್ತಿದ್ದರು.ಈಗೆಲ್ಲಾ ನಾಯಿಗಳಿಗೆ ಕರೆಯುವ ರೀತಿ ಟಾಮಿ. ನಿಮ್ಮಿ.ಪ್ರಗ್ಗು ವಿಕ್ಕಿ.ಟಬ್ಬು ಅಂತ ಹೇಳುವರು ಅದು ಹೋಗಲಿ ಕೆಲವು ಹೆಸರುಗಳು ಹೇಳಲು ಸಾಧ್ಯವಿಲ್ಲ ಹಾಗಾಗಿದೆ ಇಂದಿನ ದಿನಗಳಲ್ಲಿ ಮತ್ತೆ ಮಗು ಬೆಳೆಯುವಾಗಲೇ ಎಬಿಸಿಡಿ ಪರಿಪಾಠ ಶುರುವಾಗುವುದು ಮತ್ತೆ ಎಲ್ಲ ಈ ಇಂಗ್ಲಿಷ್ನ ಕಂಗ್ಲೀಷ್ ನ ಗೀತೆ ಹೇಳಿಕೊಂಡು ಮಕ್ಕಳಿಗೆ ಕಲಿಸುತಾ ಅದರಲ್ಲಿ ಜಂಭದ ದರ್ಪ ಅಹಂಕಾರ ಇವರಿಗೆ ಬೆಳ್ಳಗೆ ಏಳುವಾಗಲೇ ಗುಡ್ ಮಾರ್ನಿಂಗ್ ನಿಂದ ಹಿಡಿದು ಗುಡ್ ನೈಟ್ ಗೆ ಆ ದಿನದ ಕಥೆ ಮುಗಿಯಿತು.ಈಗ ಶಾಲೆಗಳಲ್ಲಿ ಕನ್ನಡ ಭಾಷೆಗಿಂತ ಈ ಇಂಗ್ಲೀಷ್ ಭಾಷೆಗೆ ಒತ್ತಾಯಿಸಿ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸಲು ಆ ಪೋಷಕರು ಹಣದ ಸಲುವಾಗಿ ಪಡುವ ಪಾಡು ಅಷ್ಟಿಷ್ಟಲ್ಲ . ಯಾಕೆ ಅನ್ಯ ಭಾಷೆಯ ವ್ಯಾಮೋಹ ಯಾಕಿಷ್ಟು ಇದೆ ಅಂತ ಗೋತ್ತಿಲ್ಲ. ಹಣ ಇದ್ದವರು ಹೇಗೆ ನಡೆಯುತ್ತದೆ ಆದರೆ ಬಡವರು ಈ ವ್ಯವಸ್ಥೆಗೆ ಸಿಲುಕಿ ಸಾಯುವರು.
ಹಿಂದಿನ ಕಾಲದಲ್ಲಿ ಎಷ್ಟು ಚೆಂದವಾಗಿ ಅಕ್ಕಪಕ್ಕದವರೆ ಆಗಲಿ ಸಂಬಂಧಿಕರೇ ಆಗಲಿ ಅತ್ತೆ ಮಾವ ದೊಡ್ಡಮ್ಮ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಅಕ್ಕ ಅಣ್ಣ ತಂಗಿ ತಮ್ಮ ಹೀಗೆಲ್ಲಾ ಕರೆಯುತ್ತಿದ್ದರು ಅದರಲ್ಲಿ ಒಂದು ಚಿರ ಭಾಂದವ್ಯವು ಯಾವಾಗಲೂ ಇರುತ್ತಿತ್ತು.ಇಗೆಲ್ಲಾ ಅವು ಹೋಗಿ ಮನೆಯವರೆ ಆಗಲಿ ಹೊರಗಿನವರೇ ಆಗಲಿ ಅಂಟಿ ಅಂಕಲ್ ಗೆ ಸೀಮಿತವಾಗಿರುವುದು ತುಂಬಾ ವಿಷಾದ ಸಂಗತಿ ಎಂದರೆ ತಪ್ಪಾಗಲಾರದು.
ಸಣ್ಣವರಿಂದ ಹಿಡಿದು ದೊಡ್ಡ ವರೆಗೂ ತುಂಡು ಬಟ್ಟೆ ಹಾಕಿಕೊಳ್ಳುವುದು ನೋಡಿದರೆ ಇನ್ನೆಲ್ಲಿ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂಬ ಭಯವು ಪ್ರತಿ ಕ್ಷಣವೂ ನಮ್ಮನ್ನು ಕಾಡುತ್ತಿದೆ.
ಮಕ್ಕಳು ಓದಿ ಬೆಳೆದು ದೊಡ್ಡವರಾದ ಮೇಲೆ ತಮ್ಮ ಪಾಡಿಗೆ ತಾವು ವಿದೇಶಗಳಿಗೆ ಹಾರಿ ಹೋಗಿ ಅಲ್ಲಿಯ ಸಂಸ್ಕೃತಿಗೆ ಮಾರು ಹೋಗಿ ಅದರಂತೆ ನಡೆದುಕೋಳ್ಳುವರು.ಬಾರೆದೆಯಿರುವ ಮಕ್ಕಳಿಗೆ ಹಂಬಲಿಸಿ ಪ್ರಾಣ ಬಿಡುವ ತಂದೆ ತಾಯಿಗಳ
ಘನಘೋರ ಪರಿಸ್ಥಿತಿ ಯಾರಿಗೂ ಬೇಡವೆ ಬೇಡ ಇದು ತುಂಬಾ ದುಃಖಕರ ಸಂಗತಿ.ಇಂತಹ ಸ್ಥಿತಿ ಯಾಕೆ ಅನ್ನುವುದು ಪ್ರಶ್ನೆ ಕಾಡುತ್ತಿವುದಂತು ನಿಜ. ದಿನೇ ದಿನೇ
ತುಂಬುಕುಟುಂಬಗಳು ಕಡಿಮೆಯಾಗಿ ಎಲ್ಲೆಂದರಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆ.
ಕೆಲವರಿಗೆ ಸರ್ಕಾರಿ ಕೆಲಸ ಬೇಕು ಆದರೆ ಸರ್ಕಾರಿ ಶಾಲೆ ಬೇಡ ಈ ಅಭಿಪ್ರಾಯ ಮೊದಲು ಬದಲಾಗಬೇಕು.
ಹುಟ್ಟಿನಿಂದಲೇ ಬೆಳವಣಿಗೆಯಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಾಹಿತ್ಯ ಮತ್ತು ಬಾಷೆಯ ಬಗ್ಗೆ ಹೇಳಿಕೊಡುವುದು ಇಂದಿನ ಯುವ ಪೀಳಿಗೆಯ ತಂದೆ ತಾಯಿಗಳಿಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರ ಹೊಣೆಯಾಗಿದೆ.
ಬೆಳೆಯು ಸಿರಿ ಮೊಳಕೆಯಲ್ಲಿ ಎಂಬಂತೆ ನಾವು ಹೇಳಿಕೊಡುವುದರಲ್ಲಿದೆ. ಮನೆಯಲ್ಲಿ ಶುಭಮುಂಜನೆಯಿಂದ ರಂಗೋಲಿ ಬಿಡಿಸವುದು ಪೂಜೆ ಮಾಡುವುದು ಅಡಿಗೆ ಇತ್ಯಾದಿಗಳಿಂದ ಹಿಡಿದು ಸಂಜೆಗೆ ಶುಭರಾತ್ರಿ ಮುಕ್ತಯವಾಗಬೇಕು.
ಖಾಸಗಿ ಶಾಲೆ ಆಗಲಿ ಅಥವಾ ಸರ್ಕಾರಿ ಶಾಲೆಗಳ ಆಗಲೇ ಮಕ್ಕಳಿಗೆ ಬಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಪಠ್ಯ ಪುಸ್ತಕಗಳಲ್ಲಿ ಆಳವಡಿಸುವಂತಹ ಕ್ರಮ ಕೈಗೊಳ್ಳಬೇಕು ಅದನ್ನೇ ಒಂದು ವಿಷಯವನ್ನಾಗಿ ಬಳಸಿಕೊಂಡರೆ ಮಾತ್ರ ಆತ ಭಾಷೆಯ ಬಗ್ಗೆ ಅಭಿಮಾನ ಗೌರವ ಹೆಚ್ಚಾಗುತ್ತದೆ.
ಹಾಗಂತ ಬೇರೆ ವಿಷಯ ಬೇಡ ಅಂತ ಹೇಳುವುದಿಲ್ಲ ಅನ್ಯ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವು ಕೇವಲ ಬುದ್ಧಿಶಕ್ತಿಯ ಕಲಿಕೆಗೆ ಆದ್ಯತೆ ಇದ್ದರೆ ಸಾಕು.
ಖಾಸಗಿ.ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಎಲ್ಲ ಕಡೆಗಳಲ್ಲೂ ನಮ್ಮ ಕನ್ನಡ ಭಾಷೆಯಲ್ಲಿ ವ್ಯಾವಹಾರದ ಬರವಣಿಗೆ ಇದ್ದರೆ ಮಾತ್ರ ನಮ್ಮ ಕನ್ನಡತನವನ್ನು ಉಳಿಸಬಹುದು.
ಮತ್ತೆ ಸರ್ಕಾರದ ಕೆಲ್ಸ ಮಾಡುವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂಬ ಸುತ್ತೋಲೆ ಹೊರಡಿಸಬೇಕು ಇದು ಬಹಳ ಮುಖ್ಯವಾದ ಅಂಶ ಇದನ್ನು ಮೊದಲು ಜಾರಿಗೊಳಿಸಬೇಕು.
ಯಾಕೆಂದ್ರೆ ಮಾಡುವ ಸರ್ಕಾರಿ ಕೆಲಸದ ಸಂಬಳದ ಹಣವು ಹೋಗುವುದು ಖಾಸಗಿ ಸಂಘ ಸಂಸ್ಥೆಗಳ ಶಾಲೆಗೆ ಇದು ಎಷ್ಟರಮಟ್ಟಿಗೆ ಸರಿಯಾಗಿದೆ ಎಂಬುದು ಅರ್ಥವಾಗುತ್ತಿಲ್ಲ.
ಆಮೇಲೆ ಯಾರು ರಾ ಜಕೀಯದಲ್ಲಿರುವರು ಅವರ ಕುಟುಂಬದವರಲ್ಲಿ ಒಬ್ಬರಾದರು ನಮ್ಮ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವವರಿಗೆ ಟಿಕೆಟ್ ಕೊಡುವಂತೆ ಆಯೋಗವನ್ನು ರಚನೆ ಮಾಡಿ ಮಂಡಿಸಬೇಕು ಇದು ಮೊದಲು ನಮ್ಮ ಕರ್ನಾಟಕದಲ್ಲಿ ಆದರೆ ನಮ್ಮ ಕನ್ನಡಿಗರಿಗೆ ಇನ್ನೂ ಗೌರವ ಹೆಚ್ಚಾಗುತ್ತದೆ.
ಆಮೇಲೆ ಭಾಷೆ ಮತ್ತು ಸಾಹಿತ್ಯದ ಸಾಂಸ್ಕೃತಿಯ ಬಗ್ಗೆ ತಿಳಿದಿರುವರು ರಾಜಕೀಯದಲ್ಲಿ ಇದ್ದರೆ ತುಂಬಾ ಚೆನ್ನಾಗಿರುತ್ತದೆ.
ಮತ್ತೆ ಈ ದೂರವಾಣಿ ಕರೆಗಳನ್ನು ಸಂದೇಶಗಳನ್ನು ಇತ್ಯಾದಿ ಎಲ್ಲ ಕನ್ನಡದಲ್ಲೇ ವ್ಯವಹರಿಸಬೇಕು.
ಮತ್ತೆ ಇತ್ತಿಚಿನ ದಿನಗಳಲ್ಲಿ ಈ ದೂರದರ್ಶನದ ಧಾರಾವಾಹಿಗಳಲ್ಲಿ ಈ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಬಳಕೆ ತುಂಬಾ ಇದೆ ಅದನ್ನು ತಡೆಯಬೇಕು.ಸಿನಿಮಾಗಳಲ್ಲಿ ಅಲ್ಲಿಯೂ ಅಷ್ಟೇ ಅನ್ಯ ಭಾಷೆ ಪದ ಬಳಕೆ ಹಾಗೂ ಅರೆಬರೆ ಬಟ್ಟೆ ಧರಿಸಿ ತೋರಿಸುವುದು ಹೆಚ್ಚಾಗಿ ಅದನ್ನೇ ಇಂದಿನ ಜನ ಅನುಕರಣೆ ಮಾಡುವರು ಇದಕ್ಕೆ ಒಂದು ಕಡಿವಾಣ ಹಾಕಲೇಬೇಕು.
ಮತ್ತೆ ಹದಿಹರೆಯದವರಿಗೆ ಈ ದೂರವಾಣಿಯು ಒಂದು ಮೋಜಿನ ವಸ್ತುವಾಗಿದೆ.ಈ ಜಂಗಮವಾಣಿಯಲ್ಲಿ ಬರುವ ಆಶ್ಲೀಲ ಚಿತ್ರಗಳನ್ನು ವೀಕ್ಷಿಸುವುದನ್ನು ಎಲ್ಲರು ಒಟ್ಟಿಗೆ ಹೋರಾಟ ಮಾಡಿ ತಡೆಗಟ್ಟಿದರೆ ಅಲ್ಲಿಲ್ಲಿ ನಡೆಯು ಅತ್ಯಾಚಾರ ಪ್ರಕರಣ ಮತ್ತು ಆತ್ಮಹತ್ಯೆಯಂತಹ ಪ್ರಕಾರ ಇತ್ಯಾದಿಗಳು ಕಡಿಮೆಯಾಗುತ್ತದೆ.
ಇವೆಲ್ಲ ನಮ್ಮ ನಾಡಿನಲ್ಲಿ ಆದರೆ ನಮ್ಮ ಕನ್ನಡತನಕ್ಕೆ ಗೌರವ ಮತ್ತು ಘನತೆ ಸಲ್ಲಿಸಿದಂತಗುತ್ತದೆ.
ಈ ಮೇಲಿನ ಎಲ್ಲಾ ವಿಷಯಗಳ ಮಹತ್ವವನ್ನು ಅರಿತಾಗಲೇ ನಮ್ಮ ಕನ್ನಡತನವು ನಮಗೆಲ್ಲಾ ಅಚ್ಚು ಮೆಚ್ಚುಗುವುದು ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
– ರಾಧಾ ಹನುಮಂತಪ್ಪ ಟಿ
ಹರಿಹರ