ಕಪ್ಪು ಸುಂದರಿಯ ಬದುಕು.
– ಭಾರತಿ ಬಾಯಿ .ಶಿವಮೊಗ್ಗ
ವಜ್ರ, ಅವಳು ನೋಡಲು ಎಣ್ಣೆಗಪ್ಪು ಆದರೂ ಅವಳಿಗೆ ಅಂದರೆ ಈ ಕಥಾ ನಾಯಕಿಗೆ ಅವಳ ಪೋಷಕರು ವಜ್ರ ಎಂದು ಕರೆದರು. ಬೆಂಗಳೂರು ನಮ್ಮ ನಾಯಕಿಯ ಜನ್ಮಸ್ಥಳ. ವಜ್ರಳಿಗೆ ಗೌರಿ, ಲಕ್ಷ್ಮಿ, ಅಂತ ಸಹೋದರಿಯರು. ಲಕ್ಷ್ಮಿ ನೋಡಲು ತುಂಬಾ ಸುಂದರವಾಗಿದ್ದಳು. 12ನೇ ವಯಸ್ಸಿಗೆ ಲಕ್ಷ್ಮಿಗೆ ತುಂಬಾ ಜ್ವರ ಬಂತು. ಅದಕ್ಕೆ
“ಅಯ್ಯೋ. ನನ್ನ ಬಂಗಾರಿ, ಲಕ್ಷ್ಮಿಗೆ ಟೈಫೈಡ್ ಬಂದುಬಿಟ್ಟಿದೆ ಯಲ್ಲಪ್ಪ ?. ಅವಳು ಚೆನ್ನಾಗಿ ಆರೋಗ್ಯವಂತಳಾಗಬೇಕು’ ಎಂದು ತಾನು ದುಡಿದಿದ್ದರಲ್ಲಿ ಮಗಳಿಗೆ ಹಣ್ಣು ಹಂಪಲು ತಂದು ಕೊಟ್ಟರು .ಹುಡುಗಿ ಎಲ್ಲವನ್ನು ತಿಂದು ದಷ್ಠ – ಪುಷ್ಟವಾಗಿ ಬೆಳೆದು, ದೊಡ್ಡವಳಾಗಿ ಬಿಟ್ಟಳು. ಆರತಿ ಶಾಸ್ತ್ರ ಸಹ ಮಾಡಿದರು.
ಇತ್ತ ವಜ್ರ ದೊಡ್ಡವಳಾಗದ ಕಾರಣ, ಎಲ್ಲರ ಬಳಿ ಮಾತು ಕೇಳಬೇಕಾಯಿತು. ಒಂದು ದಿನ ಆ ಸುದಿನ ಬಂದೇ ಬಿಟ್ಟಿತು.
“ಅಮ್ಮಾ, ಎಲ್ಲರಿಗೂ ಕರಿಸು, ನಾನು ದೊಡ್ಡವಳಾಗಿದ್ಫು ಗೊತ್ತಾಗಲಿ, ಎಂದು ಕೇಳಿ ಆರತಿಮಾಡಿಸಿ ಕೊಂಡಳು. ವಜ್ರಳ ತಂದೆ ಬಿನ್ನಿ ಮಿಲ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಬಂದ ದುಡ್ಡು ಕುಡಿಯಲು ತಿನ್ನಲು ಸಾಕಾಗಿ ಹೋಗುತ್ತಿತ್ತು. ವಜ್ರಳ ತಾಯಿ ಮಾಣಿಕ್ಯ ಸಹ ಲಕ್ಷ್ಮಿ ಸುಂದರವಾಗಿ ದ್ದಾಳೆಂದು ತುಂಬಾ ಕಾಳಜಿ ವಹಿಸುತ್ತಿದ್ದರು. ಇದು ವಜ್ರಳಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿ ಮನೆಯಲ್ಲಿ ಅಕ್ಕ ತಂಗಿಯರ ಜಗಳ ನಡೆಯುತ್ತಿತ್ತು.ಅಷ್ಟರಲ್ಲಿ ಲಕ್ಷ್ಮಿ ಹೈದರಾಬಾದ್ ಕಡೆ ಇಂದ ತುಂಬಾ ಸೂಪರ್ ಆಗಿರೋ ಹುಡುಗ ಬಂದು ನೋಡಿ. ತಾನೇ ಖರ್ಚು ಹಾಕಿ ಮದುವೆ ಮಾಡಿಕೊಂಡು ಹೋದನು.ಧರ್ಮಾವರಂಗೆ ಲಕ್ಷ್ಮಿ ಮದುಮಗಳಾಗಿ ಹೋದಳು.ಚಿನ್ನಪ್ಪ, ಲಕ್ಷ್ಮಿ ಅಪ್ಪ, ಸರ್ಕಾರಿ ಅಧಿಕಾರಿಗೆ ಬಹಳ ಚೆನ್ನಾಗಿ ಮದುವೆ ಮಾಡಿ ಕೊಟ್ಟನು. ಇಲ್ಲಿ ವಜ್ರಳಿಗೆ ಮದುವೆ ಆಗಿಲ್ಲ ಎಂದು ಅವಳ ಅಪ್ಪ ಅಮ್ಮ ಬೇಜಾರು ಮಾಡಿಕೊಂಡಿದ್ದರು. ವಜ್ರ ನೋಡಲು ಅಷ್ಟೇನೂ ಸೌಂದರ್ಯವಂತೆ ಅಲ್ಲ. ಅದಕ್ಕೆ ಯಾರೋ ಒಬ್ಬ ವಯಸ್ಸಾದ ಗಂಡಸು ಬಂದು ನಿಮ್ಮ ಮಗಳಿಗೆ ಮದುವೆ ಮಾಡಿಕೊಡಿ ಎಂದನು.
ಹೇಗೋ ಒಂದು ಗಂಡು ಬಂದಿದೆಯಲ್ಲ ಮದುವೆ ಮಾಡಿ ಕೊಟ್ಟು ಬಿಡೋಣ. ನಮ್ಮ ಜವಾಬ್ದಾರಿ ಮುಗಿಯುತ್ತೆ. ಎಂದು ಯೋಚಿಸಿ ವಜ್ರಳ ಮದುವೆ ಮುದುಕನ ಜೊತೆ ಮಾಡಿಬಿಟ್ಟರು.
ಮದುವೆಯಾದ ಮೇಲೆ ಅವನಿಗೆ ಟಿಬಿ ಕಾಯಿಲೆ ಬಂದಿತು. ಸರಿಯಾದ ಔಷಧ ಮಾಡದೇ ಅವನು ಸತ್ತೇ ಹೋದನು. ಈಗ ಮತ್ತೆ ತವರಿಗೆ ವಜ್ರ ವಾಪಸು ಬಂದಳು.
ಅಲ್ಲಿ ಅವಳ ಅಣ್ಣ ಅತ್ತಿಗೆ ಸರ್ಕಾರಿ ಅಧಿಕಾಗಳಾಗಿದ್ದರು. ಅವರಿಗೆ ದಾವಣಗೆರೆಗೆ ವರ್ಗಾವಣೆ ಆದಾಗ ವಜ್ರ ಸಹ ಅವರ ಜೊತೆಗೆ ಹೋದಳು.
ವಜ್ರ ಅಡುಗೆ ಕೆಲಸ ಚೆನ್ನಾಗಿ ಕಲಿತ್ತಿದ್ದಳು. ಎಲ್ಲರೂ ತುಂಬಾ ಹೋಗಳುತ್ತಿದ್ದರು. ಅಲ್ಲೇ ರಮಣ ಎಂಬ ಬಡ ಶಿಕ್ಷಕರ ಜೊತೆ ಮದುವೆ ಮಾಡಿದರು. ಆದಿನಾಥ ಎಂಬ ಮಗುವನ್ನು ಹೆತ್ತು ಹೊತ್ತು ಸಾಕಿದಳು.
– ಭಾರತಿ ಬಾಯಿ .ಶಿವಮೊಗ್ಗ