ಕವಿಗೋಷ್ಠಿ ಮತ್ತು ಉಲನ್ ಶಾಲು. (ಹಾಸ್ಯ ಬರಹ)
ಒಮ್ಮೆ ನಾನು ಒಂದು ಕವಿಗೋಷ್ಠಿಯ ಕವನ ವಾಚನ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಈ ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವಾಗಿತ್ತು.
ಅಲ್ಲಿ ನಾವು ಸುಮಾರು ಇಪ್ಪತ್ತು ಕವಿಗಳು ಕವನ ವಾಚನ ಮಾಡುವವರು ಇದ್ದಿವಿ. ಆಗ ಸರಿಯಾಗಿ ಹನ್ನೂಂದು ಘಂಟೆಗೆ ಕಾರ್ಯಕ್ರಮ ಶುರು ಮಾಡುವ ಮುನ್ನ ಅಲ್ಲಿ ಕಾರ್ಯಕರ್ತರು ಹೇಳಿದರು ಇಲ್ಲಿ ಸ್ಪಲ್ಪ ಬದಲಾವಣೆ ಇದೆ.ಒಬ್ಬರು ನಿಮ್ಮ ನಿರೂಪಕರಾಗಿ ಕುಳಿತುಕೋಳ್ಳುವರು.
ಅವರು ಏನು ಹೇಳುತ್ತಾರೆ ಅದಕ್ಕೆ ತಕ್ಕಂತೆ ನೀವು ಸ್ಪಂದಿಸಬೇಕು ಎಂದರು.
ನಾವು ಸರಿ ಅಂತ ಹೇಳಿದಿವಿ .ಆಗ ಎಲ್ಲ ಕವಿಗಳು ಕನ್ನಡದ ಶಾಲು ಧರಿಸಬೇಕು ಮತ್ತು ನಿರೂಪಕರಿಗೆ ಹಾಗೂ ಅವರ ಜೊತೆ ಕುಳಿತುಕೋಳ್ಳುವವರು ಉಲನ್ ಶಾಲು ಧರಿಸಬೇಕು ಅಂತ ಹೇಳಿದ್ರು.
ಆದರೆ ಅಲ್ಲಿ ಒಂದು ಉಲನ್ ಶಾಲು ಮಾತ್ರ ಇತ್ತು. ಆಗ ನಾನು ನನ್ನ ಹತ್ತಿರ ಇದೆ ಉಲನ್ ಶಾಲು ಅಂತ ನಿರೂಪಕರಿಗೆ ಕೊಟ್ಟೆ .
ಸರಿ ಅದನ್ನು ಅವರು ಹಾಕಿಕೊಂಡರು ಆಗ ಕಾರ್ಯಕ್ರಮ ಶುರುವಾಯಿತು.
ಒಬ್ಬರು ಆದ ನಂತರ ನಾನೇ ಎರಡನೇಯವಳಾಗಿ ಹೋಗಿ ಕನ್ನಡದ ಕವನ ವಾಚನ ಮಾಡಿ ಅದರ ತಾತ್ಪರ್ಯ ವನ್ನು ಹೇಳಿ ಮುಗಿಸಿದೆ. ಎಲ್ಲರು ಚಪ್ಪಾಳೆ ತಟ್ಟಿದ್ರು.
ನಾನು ಒಳ್ಳೆಯದಾಯಿತು ಅಂತ ಕವನ ವಾಚನ ಮಾಡಿ ಈಚೆಗೆ ಬಂದು
ಸುಮ್ಮನೆ ಕುಳಿತೆ.
ಆಮೇಲೆ ಒಬ್ಬರಾದ ಮೇಲೆ ಒಬ್ಬರು ಕವನ ಹೇಳಿ ಹೊರಟು ಹೋದರು ನಾನು ಹಾಗೆ ಸುಮ್ಮನೆ ಅಲ್ಲೇ ಕುಳಿತು ಬಿಟ್ಟೆ.
ಮದ್ಯಾಹ್ನದ ಲಘು ಉಪಹಾರದ ನಂತರ ಮತ್ತೆ ಕವನ ವಾಚನ ಶುರುವಾಯಿತು. ಹದಿನೈದು ಕವಿಗಳು ಕವಿತೆ ಓದಿದರು. ನಾನುಬ ಅಲ್ಲೇ ಕುಳಿತು ಕೊಂಡೆ.
ಆಗ ನನ್ನ ಸ್ನೇಹಿತೆಯರು ಮನೆಗೆ ಹೋರಟಿರುವೆ ಬಾ ಅಂದರು. ನಾನು ಇಲ್ಲ ನನ್ನ ‘ಉಲನ್ ಶಾಲು ‘ ಅಂತ ನಿರೂಪಕರ ಕಡೆಗೆ ನೋಡಿ ಹೇಳಿದೆ. ಆಗ ನನ್ನ ಸ್ನೇಹಿತೆಯ ನೋಟ ಒಂದು ಐವತ್ತು ರೂಪಾಯಿ ಕೊಟ್ಟರೆ ಇಂತಹ ಶಾಲು ತಗೊಬಹುದು ಅದಕ್ಕಾಗಿ ಇವಳು ಕುಳಿತಿದ್ದಾಳೆ ಎನ್ನುವಂತೆ ತೋರುತ್ತಿತ್ತು. ಆದರೆ ನಾನು ಯಾವುದೋ ತೆಲೆ ಕೆಡಿಸಿಕೊಳ್ಳುಲಿಲ್ಲ. ಮತ್ತೆ ಶಾಲು ನೋಡುತಾ ಕುಳಿತೆ. ಅಲ್ಲಿಯ ಎಲ್ಲರ ಕವನಗಳನ್ನು ಕೇಳಿದೆ.
ಮತ್ತು “ನನ್ನ ಮನಸ್ಸು ಆ ಶಾಲಿನಲ್ಲೇ ಇತ್ತು”.ಕಡೆಗೆ ಅಲ್ಲಿಯ ಆಯೋಚಕರು ನಾಲ್ಕು ಘಂಟೆ ಆಯಿತು ನಿಮ್ಮ ಕವನ ವಾಚನ ಮುಗಿದಿದೆ ನೀವು ಹೋಗಬಹುದು ಅಂದ್ರು. ಆವಾಗ ನಾನು ಅದು ನನ್ನ ಶಾಲು ಅಂತ ತೊರಿಸಿದೆ. ಆಗ ಅವರು ಈ ಸೀಮೆಗೆ ಇಲ್ಲದ ಶಾಲಿಗಾಗಿ ಕುಳಿತಿದ್ದಾಳೆ ಅಂತ ತಾತ್ಸರದ ನುಡಿಯಲ್ಲಿ ಏನೇನೋ ಹೇಳಿ ಗೊಣಗಿದರೆ.
ಅಷ್ಟರಲ್ಲಿ ಆ ನನ್ನ ಶಾಲು ಹೊದ್ದುಕೊಂಡ ನಿರೂಪಕರು ಎದ್ದು ಏನು ಕೆಲಸಕ್ಕೆ ಹೊರಗೆ ಹೋಗಿದ್ದಾಗ ಆ ಶಾಲನ್ನು ನಾನು ಎತ್ತಿಕೊಂಡಿದ್ದೆ. ಆದರೆ ಯಾಕೋ ಸರಿ ಅನಿಸಲಿಲ್ಲ. ಮತ್ತೆ ಹಾಗೆ ನಿರೂಪಕರ ಟೇಬಲ್ ಮೇಲೆ ಆ ಶಾಲನ್ನು ಇಟ್ಟೆ.
ಇನ್ನೇನು ಇಬ್ಬರು ಇದ್ದರು ನಿರೂಪಕರು ಏಕೆ ಇವರು ಇಲ್ಲೇ ಕುಳಿತ್ತಿದ್ದಾರೆ ಎನ್ನುವ ನೋಟ ನನ್ನನ್ನು ಕೇಳಿದ ಹಾಗಿತ್ತು. ನಾನು ಸನ್ನೆಯಲಿ ಶಾಲು ಅಂತ ತೊರಿಸಿದೆ.ಅವರು ಸ್ಪಲ್ಪ ಮುಜುಗರದಿಂದ ಒರೆ ನೋಟದಲಿ ನೋಡಿ ಕಾರ್ಯಕ್ರಮ ಮುಂದುವರೆಸಿದರು .
ಅಂತೂ ಇಂತೂ ಹೇಗೆ ಎಲ್ಲ ಕವಿಗಳು ಕವನ ವಾಚನ ಮಾಡಿ ಮುಗಿಸಿದರು ನಿರೂಪಕರು ಬಂದು ನನಗೆ ನನ್ನ ಶಾಲು ಕೊಟ್ಟು ವ್ಯಂಗ್ಯವಾಗಿ ಮುಜುಗರದಿಂದ ಏನು ಹೇಳಿದರು.ಅದಕ್ಕೆ ನಾನು ಅಲ್ಲಿ ಇದ್ದ ಕಾರ್ಯಕ್ರಮದ ನಿರೂಪಕರಿಗೆ ಹಾಗೂ ಆಯೋಜಿಕರಿಗೆ ಮೊದಲು ಕ್ಷಮೆ ಕೇಳಿ ಹೇಳಿದೆ.
ತಪ್ಪಾಗಿ ಭಾವಿಸಬೇಡಿ ಎಲ್ಲರು ಏಕೆಂದರೆ ನನಗೆ ಈ ಶಾಲು ನನಗೆ ಬಹಳ ಮುಖ್ಯ ಇಂತಹ ಶಾಲುಗಳು ಬಹಳಷ್ಟು ಸಿಗುತ್ತವೆ.ಇದು ನನಗೆ ಎಲ್ಲರಿಗಿಂತ ಪ್ರಮುಖವಾಗಿದೆ.ಅದನ್ನು ನನಗೆ ನಮ್ಮೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದಾಗ ಸನ್ಮಾನದಲ್ಲಿ ಕೊಟ್ಟಿರುವ ಶಾಲು ನನಗೆ ಅದರ ಮೇಲೆ ತುಂಬಾ ಪ್ರೀತಿ ಗೌರವವಿದೆ ಹಾಗಾಗಿ ಈ ಉಲನ್ ಶಾಲನ್ನು ಯಾವತ್ತೂ ಕಳೆದುಕೊಳ್ಳುಲು ಇಷ್ಟ ಪಡುವುದಿಲ್ಲ ನಾನು ಇರುವವರೆಗೂ ಈ ಶಾಲನ್ನು ಯಾರಿಗೂ ಕೊಡುವುದಿಲ್ಲ ಹಾಗೆ ಕಳೆಯುವುದಿಲ್ಲ .
ಎಂದು ತಪ್ಪಾದರೆ ಕ್ಷಮೆ ಇರಲಿ ಅಂತ ಹೇಳಿದೆ.ಅದಕ್ಕೆ ಅವರು ಸರಿ ಯಾವುದೇ ವಸ್ತುವಾಗಿಲಿ ಅದಕ್ಕೆ ತನ್ನದೇ ಆದಂತಹ ಬೆಲೆ ಇರುತ್ತದೆ.ಇರಲಿ ಇದನ್ನು ಜೋಪಾನವಾಗಿ ಕಾಪಾಡಿಕೊಳ್ಳಿ ಅಂತ ಹೇಳಿದರು.ನಾನು ಅವರು ನನಗೆ ಕವಿ ಕವನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆಲ್ಲ ಧನ್ಯವಾದಗಳನ್ನು ಹೇಳಿ ಹೊರಗೆ ಬಂದು ನನ್ನ ಉಲನ್ ಶಾಲನ್ನು ನೀಟಾಗಿ ಪಡಿಕೆ ಮಾಡಿ ನನ್ನ ಬ್ಯಾಗ್ ನಲ್ಲಿ ಇಟ್ಟುಕೊಂಡು ಮನೆದಾರಿ ಹಿಡಿದರು.ಆಲ್ಲಿ ಹೋಗಿ ಬಂದು ಸುಮಾರು ದಿನಗಳೇ ಕಳೆದಿವೆ ಅದರೂ ಆ ಶಾಲಿನಿ ಆವಾಂತರ ನಾನು ಇನ್ನೂ ಮರೆತಿಲ್ಲ ಆಗಾಗ್ಗೆ ನೆನಪು ಬರುತ್ತದೆ ಕೆಲವು ಸಲ ಅದು ನಾನು ಹೀಗೆ ಮಾಡಿದ್ದು ಸರಿಯೇ ಎನಿಸುತ್ತದೆ ಒಮ್ಮೆಮ್ಮೆ ನಾನು ಮಾಡಿದ್ರಲ್ಲಿ ತಪ್ಪಿಲ್ಲ ಅನುಸುವುದು ಒಮ್ಮೆ ನಗು ಬಂದರೆ ಒಮ್ಮೆ ಮುಜುಗರ ಅನಿಸುತ್ತದೆ ಏನೇ ಆದರೂ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿದಾಗ ಸನ್ಮಾನದಲ್ಲಿ ಕೊಟ್ಟಿರುವ ಶಾಲು ಎನ್ನುವ ಬಲವಾದ ಕಾರಣ ವಿತ್ತು ಹಾಗೆ ಆ ಶಾಲು ಮೇಲೆ ಈಗಲೂ ನನಗೆ ತುಂಬಾ ಗೌರವವಿದೆ ನೀವು ಏನಂತೀರಿ ?
ರಾಧಾ ಹನುಮಂತಪ್ಪ ಟಿ.
ಹರಿಹರ ತಾಲೂಕು
ದಾವಣಗೆರೆ ಜಿಲ್ಲೆ