ರತನ ಟಾಟಾ
ಭೂಮಿಯಲ್ಲಿನ
ಧೃವತಾರೆ
ಗಗನಕ್ಕೇರಿ
ಮಿನುಗುತಿದೆ/
ಮತ್ತೇ ಪ್ರಕಾಶಿಸುತ್ತಿದೆ
ಅಲ್ಲಿಂದಲೇ ಹೇಳುತ್ತಿದೆ
ಟಾಟಾ/
ಆದರ್ಶವೆಂಬ
ಶಬ್ಧವನ್ನು ಕೇಳಿದ್ದೆ
ನೋಡಿದ್ದು ಅನುಭವಿಸಿದ್ದು
ಇವರನ್ನು ನೋಡಿಯೇ/
ಹುಟ್ಟಿನಿಂದ ಶ್ರೀಮಂತರಾದರೂ
ಲವಲೇಶವೂ
ಇರಲಿಲ್ಲ
ಶ್ರೀಮಂತಿಕೆಯ
ಅಹಂ/
ನೂರು ಕೋಟಿಗೊಬ್ಬರೆ
ರತನ್
ಮತ್ತೊಬ್ಬರಿಲ್ಲವೋ
ಅವರಂತೆ
ಅಗಾಧ ದೇಶಭಕ್ತಿ
ದೇಶಕ್ಕಾಗಿ ಮಿಡಿದ ಹೃದಯ/
ಅವರೊಂದು
ಅನರ್ಘ್ಯ ರತ್ನ
ಅಮೋಘ ರತನ್
ಪದಗಳಲ್ಲಿ
ಕಟ್ಚಲಾಗದು
ಅವರ ವ್ಯಕ್ತಿತ್ವ/
ಅಮರ್ ರಹೇ ರತನ್ ಜಿ
ಆಪ್ ಅಭೀಭಿ ಜಿಂದಾಹೈ
ಭಾರತೀಯೋಂಕಾ ದಿಲ್ ಮೇ //
ಆಪ್ ಪರ್ವತ್ ಹೈ
ಹಿಮಾಲಯ ಕಾ
ಕೊಟ್ರೇಶ ಜವಳಿ
ಹಿರೇವಡ್ಡಟ್ಚ.ಗದಗ.
ಹೆಮ್ಮೆಯ ಭಾರತ ಪುತ್ರ ರತನ್ ಜೀ.
ಭಾರತ ಮಾತೆಯ ಹೆಮ್ಮೆಯ ಪುತ್ರರು
ಅವರೇ ರತನ್ ಜೀ ಟಾಟಾ
ದೇಶವ ಮುನ್ನಡೆಸಲು ಹೋರಾಡಿದ
ಕೈಗಾರಿಕೋದ್ಯಮ ಸಂಜಾತ.
ಟಾಟಾ ಸಮೂಹದ ಪ್ರೇರಕ ಶಕ್ತಿ
ಕೈಗಾರಿಕೋದ್ಯಮದ ಅದ್ಭುತ ವ್ಯಕ್ತಿ
ಪಡೆದರು ಅತ್ಯುನ್ನತ ಪದ್ಮ ಪ್ರಶಸ್ತಿ
ಭಾರತ ದೇಶಕೆ ಇವರೇ ಆಸ್ತಿ.
ವಿಶ್ವವು ಕಂಡ ಶ್ರೇಷ್ಠ ಉದ್ಯಮಿ
ಸಮಾಜ ಸೇವೆಯ ಪುರೋಗಾಮಿ
ಬಡವರ ಪಾಲಿಗೆ ಅನ್ನದಾತ
ಜಗದ ಜನರಿಗೆ ವಿಶ್ವ ವಿದಾತ.
ಸರಳ ಜೀವನದ ಕಾಯಕ ಯೋಗಿ
ದಾನಧರ್ಮಕೆ ಹೆಸರು ಈ ತ್ಯಾಗಿ
ಭಾರತ ದೇಶದ ‘ಅನರ್ಘ್ಯ ರತ್ನ ‘
ಪ್ರಶಸ್ತಿಗಳ ಮೀರಿದ ‘ಭಾರತ ರತ್ನ ‘.
ವಿಶ್ವವ ಬೆರಗುಗೊಳಿಸಿದ ಉದ್ಯಮಿ
ಅಜಾತಶತ್ರು ಈ ರಾಷ್ಟ್ರ ಪ್ರೇಮಿ
ಸಮಾಜ ಸೇವೆ, ಆರೋಗ್ಯ , ಶಿಕ್ಷಣ
ನೀಡಿದಂತಹ ದಾನಶೂರ ಕರ್ಣ.
ನಮ್ರತೆ, ಸರಳತೆ ಇವರ ವ್ಯಕ್ತಿತ್ವ
ಇವರಲಿ ಇತ್ತು ಯಾವುದೋ ಸತ್ವ
ವಿಶ್ವದ ಜನತೆಗೆ ಇವರೇ ಸ್ಫೂರ್ತಿ
ಹರಡಿದೆ ಎಲ್ಲೆಡೆ ಇವರ ಕೀರ್ತಿ.
ಅವಿರತವಾಗಿ ಕಾಯಕ ಮಾಡಿ
ಹಂತಹಂತದಲಿ ಮೇಲಕೆ ಏರಿ
ಉದ್ಯಮದಲ್ಲಿ ಯಶವನು ಪಡೆದರು
ನಮ್ಮಯ ರತನ್ ಜೀ ಟಾಟಾರವರು.
ಜಿ.ಎಸ್.ಗಾಯತ್ರಿ. ಹರಿಹರ.
ರತನ ಟಾಟಾ
ಅದ್ಬುತ ಸರಳ ರತನ್ ಟಾಟಾ ಅವರ ಅಪರೂಪ ದುಡಿಮೆ ಭಕ್ತಿ ಉದ್ಯೋಗದಲ್ಲಿ ಅಪಾರ ಶಕ್ತಿ ದೇಶ ವಿದೇಶಗಳ ಹೆಸರು ಕೀರ್ತಿ
ಹಲವಾರು ಕಂಪನಿಗಳು ನೀತಿ
ಸತ್ಯ ಕಾಯಕವೇ ರೀತಿ
ಸರಿ ಸಮಾನವೇ ಪ್ರೀತಿ
ಅದು ವಿಶ್ವದಲಿ ಮಾನವ ವ್ಯಕ್ತಿ
ಹಗರಣ ಇಲ್ಲದ ಜೀವನ ಸ್ಪೂರ್ತಿ
ಅದು ದೇಶಕ್ಕೆ ಮಹಾನ ವ್ಯಕ್ತಿ
ನೀನು ಸತ್ಯಕ್ಕೆ ಅಪಾರ ಭಕ್ತಿ
ಅದು ದೇಶಕ್ಕೆ ಸರಿಸಮಾನವೇ ರೀತಿ
ಟಾಟಾ ಉಳಯಿಲಿ
ಜಗಕ್ಕೆ ಬೆಳಿಲಿ
ಮಾನವ ಧರ್ಮ ಪ್ರೀತಿ ಉಳಿಲಿ
ರತನ್ ಟಾಟಾವಿಶ್ವಕ್ಕೆ ಹೊಳೆಯಲ್ಲಿ
ಇವರ ಜೀವನ ಸತ್ಯಕ್ಕೆ ಅಮರವಾಗಲಿ
– ವಿಜಯ ಕುಮಾರ ಚಟ್ಟಿ. ಹುಮನಾಬಾದ