ಕುತಂತ್ರ ಬುದ್ದಿ ಅವಮಾನಕ್ಕೆ ದಾರಿ (ನೀತಿ ಕತೆ)
ರಾಮಪ್ಪನ ಬಳಿ ಮಾವಿನ ತೋಟವಿತ್ತು. ಮಾವಿನ ಮರಗಳ ಬಗ್ಗೆ ರಾಮಪ್ಪನಿಗೆ ತುಂಬಾ ಜ್ಞಾನವಿತ್ತು . ಒಮ್ಮೆ ಮಾವಿನ ಮರದಲ್ಲಿ ಕೊಂಚು ಕೊಂಚಲಾಗಿ ನೇತಾಡುತ್ತಿದ್ದ ಹಣ್ಣಾದ ನೂರಾರು ಮಾವುಗಳು ಖುಷಿಯಾಗಿ ಇದ್ದವು.
ಕಾಯದ ಮತ್ತು ಹುಳಿಯದ ಮಾವುಗಳು ಅವರ ಸಂತೋಷ ಕಂಡು ಪರಸ್ಪರ ಮಾತನಾಡಿಕೊಳ್ಳಲು ಶುರು ಮಾಡಿದರು.
ಹುಳಿಮಾವಿನ ಗೆಳೆಯ ನಮ್ಮ ರಾಮಪ್ಪ ನಮ್ಮ ನ್ನು ,ತಿನ್ನದೇ ಇದ್ದಾನೆ .ನಮ್ಮಿಬ್ಬರ ಬಿಟ್ಟು ಇನ್ನೆಲ್ಲಾ ಉಳಿದ ಕೊಂಬೆಯಲ್ಲಿ ನೇತಾಡುವ ಹಣ್ಣುಗಳನ್ನು ತಿಂದು ಬಿಡುತ್ತಾನೆ. ನಾವೇನು ಪಾಪ ಮಾಡಿದೀವಿ ಹೇಳು. ಬಾ ನಾವಿಬ್ಬರು ಹೋಗಿ ಹಣ್ಣಾದ ಮಾವುಗಳಿಗೆ ಚಾಡಿ ಹೇಳಿ ಬರೋಣ ಎಂದು ಮಾತಾಡಿಕೊಂಡು ಹಣ್ಣಾದ ಮಾವುಗಳ ಕೊಂಬೆಗೆ ಹಾರಿ ರಾಮಪ್ಪನ ಬಗ್ಗೆ ಚಾಡಿ ಹೇಳಿದವು
ಹುಳಿ ಮತ್ತು ಕಾಯದ ಮಾವು ಮಾತು ಕೇಳಿದ ಸಿಹಿಯಾದ ಹಣ್ಣುಗಳು ನಾವೆಲ್ಲರೂ ಒಂದೇ ಮರದಲ್ಲಿ ಇದ್ದಿವಿ. ನಮ್ಮ ರಾಮಪ್ಪ ನಮಗೆ ನೀಡುವ ಆಹಾರವನ್ನೇ ನಿಮಗೂ ಸಹ ನೀಡುವುದು ನಾವೆಲ್ಲರೂ ಹಣ್ಣಾಗಿ ರಾಮಪ್ಪನಿಗೆ ಸಿಹಿ ನೀಡಿ ಬದುಕಿಗೆ ಆಧಾರ ವಾಗಿದ್ದೀವಿ.
ರಾಮಪ್ಪನ ಮೇಲೆ ದೂರು ಹೇಳುವುದು ಬಿಟ್ಟು ಅವರು ಹಾಕುವ ಆಹಾರವನ್ನು ನಿಸ್ವಾರ್ಥ ಮನಸ್ಸಿನಿಂದ ಸೇವಿಸಿ ಆಗ ನೀವು ಸಹ ಹಣ್ಣಾಗುವಿರಿ, ಸಿಹಿಯಾಗುವಿರಿ ಎಂದು ಹೇಳಿದವು.ಹುಳಿ ಮತ್ತು ಕಾಯದ ಮಾವುಗಳು ಪೆಚ್ಚುಮೋರೆ ಹಾಕಿಕೊಂಡು ತಮ್ಮ ಕೊಂಬೆಗೆ ಹಾರಿದವು.
( ಕಥೆಯ ನೀತಿ: ತಂತ್ರ, ಕುತಂತ್ರದಿಂದ ಎಂದೂ ಜಯ ಸಿಗುವುದಿಲ್ಲ )
– ಬಸವೇಶ. ಎಸ್.(ಶಿಕ್ಷಕರು) ತಿ.ನರಸಿಂಹಪುರ ಮೈಸೂರು
ಲೇಖಕರ ಪರಿಚಯ:
ಬಸವೇಶ ಎಸ್. ರವರು ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಅನಾಪೂರ ಗ್ರಾಮದವರು. ಬಿ.ಕಾಂ.ಪದವಿಧರರಾದ ಇವರು ಖಾಸಗಿ ಶಾಲೆಯೊಂದರಲ್ಲಿ ಗಣಕಯಂತ್ರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೂರಾರು ಕತೆ ಕವನ ಲೇಖನಗಳು ಬರೆದಿದ್ದಾರೆ. ಇವರ ಬರಹಗಳು ನಾಡಿನಾದ್ಯಂತ ಹಲವು ಪತ್ರಿಕೆ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ.