Oplus_131072

ಸ್ನೇಹ.

ಸ್ನೇಹ, ಸ್ನೇಹ ಅಂದ್ರೆ ತಟ್ಟನೆ ನೆನಪಿಗೆ ಬರವುದೆ ಆತ್ಮೀಯತೆ, ಆತ್ಮೀಯತೆಯ ಭಾವ ನಿಷ್ಕಲ್ಮಶ ಪ್ರೀತಿ, ನೊಂದಿದಾಗ ಸಾಂತ್ವನ ನೀಡುವ ಹೃದಯ.     ಭಯವಾದಾಗ ಧೈರ್ಯ ತುಂಬುವ ಸ್ನೇಹ. ಸ್ನೇಹದಲ್ಲಿ ಖುಷಿಯಾದಾಗ ಸಂಭ್ರಮಿಸುವ ಕಪಟವಿಲ್ಲದ ಮನಸೇ ಸ್ನೇಹ.  ಸದಾ ಸೂರ್ಯನ ಬೆಳಕಷ್ಟೇ ಪ್ರಕಾಶಮಾನ ಕಿರಣಗಳಂತೆ ನಮ್ಮ ಜೀವನದ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಸ್ನೇಹಕ್ಕೆ ವರ್ಣಿಸಲು ಪದಗಳೇ ಸಿಗೋದಿಲ್ಲ.  ತಿಳಿ ನೀರಿನಂತಹ ಸ್ನೇಹ ಸಿಗೋದು ಅತಿ ವಿರಳ.  ಇತ್ತೀಚಿನ ದಿನಗಳಲ್ಲಿ ಸ್ನೇಹದಲ್ಲಿ ಸ್ವಾರ್ಥ ತುಂಬಿದೆ, ಅಸೂಯೆ ಹೆಚ್ಚಾಗಿದೆ. ದ್ವೇಷ ಮೆರೆಯುತ್ತಿದೆ ಹೊರಗಡೆ ಸ್ನೇಹದ ಮಾತು ಒಳಗಡೆ ಪಿತೂರಿಯ ಸ್ವಭಾವ, ಇದು  ಸ್ನೇಹಕ್ಕೆಸಲ್ಲದು.

ಸ್ನೇಹದಿ ಸವಿ ಭಾವ ತುಂಬಿರಬೇಕು ನೇರ ನಡೆ-ನುಡಿಯಿಂದ ಸ್ನೇಹ ಕೂಡಿದಾಗ ಮಾತ್ರ ಪವಿತ್ರವಾದ ಸ್ನೇಹ ಬಂಧನವಾಗುತ್ತದೆ . ಸ್ನೇಹದಲ್ಲಿ ನಂಬಿಕೆ ತುಂಬಿರಬೇಕು ಧರ್ಮ ಜಾತಿಯ ಆಧಾರದಲ್ಲಿ ಸ್ನೇಹ ಇರಬಾರದು.  ಹಿಂದೆ ನಮ್ಮ ಹಿರಿಯರು ಹೇಳಿದ ಹಾಗೆ “ಗುಣ ನೋಡಿ ಗೆಳೆತನ ಮಾಡಿದರೆ ಜೇನು ಸವಿದಂತೆ” ಸ್ನೇಹ ಅಷ್ಟಾಲ್ದೆ ಗಾದೆ ಮಾತಿದೆ. ‘ಸಜ್ಜನರ ಸಂಗವದು ಹೆಜ್ಜೆನು ಸವಿದಂತೆ ‘ಅಂತ ಗೆಳೆತನ ಕೊನೆಯವರೆಗೂ ಶಾಶ್ವತವಾಗಿ ಇರುತ್ತೆ ಮಕ್ಕಳ ಸ್ನೇಹ ಮನಸ್ಸಿಗೆ ತಂಗಾಳಿಯಂತೆ ಹಿತ ನೀಡುತ್ತದೆ.          ಆ ಮುಗ್ಧತೆ ನಗು, ತೊದಲು ಮಾತು , ಬಾಳಿನ ಮಿನುಗು ನಕ್ಷತ್ರದಂತೆ ಮಕ್ಕಳ ಸ್ನೇಹ ಒಳ್ಳೆಯ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೂ ಮತ್ತು ಹರ್ಷಕ್ಕೂ ಒಳ್ಳೆಯ ದೋಸ್ತ ಇರಲೇಬೇಕು ಎಲ್ಲಾ ಸಂಬಂಧಗಳಿಗಿಂತ ಮೀರಿದ ಸಂಬಂಧ ಸ್ನೇಹ ಸಂಬಂಧ , ಅಲ್ಲವೇ ಸ್ನೇಹದಲ್ಲಿ ಮುಚ್ಚುಮರೆ ಇರಬಾರದು ತೆರೆದ ಪುಸ್ತಕದಂತೆ ಮನಸ್ಸಿಗೆ ಅನಿಸಿದ್ದನ್ನು ಅನಿಸಿದ ಹಾಗೆ ಹೇಳುವಂತ ಒಂದು ನಿಜವಾದ ಸ್ನೇಹ ಇರಲೇಬೇಕು.
ಎಲ್ಲೋ ಹುಟ್ಟಿ, ಇನ್ನೆಲ್ಲೋ ! ಬೆಳೆದು ಇನ್ನೆಲ್ಲೋ! ಸ್ನೇಹಿತರಾಗಿ ಸಂಧಿಸುವ ಬಾಳಿನೊಳು ಅವರಿವರ ಮಾತು ಕಟ್ಟಿಕೊಂಡು ಸ್ನೇಹಕ್ಕೆ ತಿಲಾಂಜಲಿ ಇಡಬಾರದು.  ಏನೇ ಇದ್ದರೂ ಮುಖಾಮುಖಿಯಾಗಿ ಮಾತಾಡಿ ಬಗೆಹರಿಸಿಕೊಳ್ಳಬೇಕು . ಅದೇ ನಿಜವಾದ ಸ್ನೇಹ ಸಂಬಂಧ.

-ಬಂತನಾಳ ಶೋಭಾರಾಣಿ ಕಲಬುರ್ಗಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ