ಮಹಾನ್ ಮೇಧಾವಿ ಡಾ.ಅಂಬೇಡ್ಕರ್ .
– ಅರವಿಂದ ಕುಲಕರ್ಣಿ. ಬೀದರ
ಡಿಸೆಂಬರ್ 6.1956 ರಂದು ಸಂವಿಧಾನ ಶಿಲ್ಪಿ ವಿಶ್ವ ರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 68 ವರ್ಷಗಳು ಗತಿಸಿ ಹೋದವು.ಅವರ ಸವಿ ನೆನಪಿಗಾಗಿ ಈ ಲೇಖನ ಪ್ರಕಟಿಸಲಾಗಿದೆ. ಈ ಲೇಖನ ಬರೆದ ಲೇಖಕರಿಗೆ ನಮ್ಮ ಪತ್ರಿಕಾ ಬಳಗ ಅಭಿನಂದನಿಸುತ್ತದೆ.
– ಸಂಪಾದಕರು
ಅಂಬೇಡ್ಕರಾ ನಿಮಗೆ ಕೋಟಿ ನಮಸ್ಕಾರ.
ನೀವು ಮಾಡಿರುವಿರಿ ದಲಿತೋದ್ಧಾರ
ಜಾತಿ ಜಾತಿ ಎಂಬ ಮೇಲು ಕೀಳು ಭಾವದ ಅಹಂಕಾರ
ಅಸ್ಪೃಶ್ಯತೆಯಿಂದ ಮೆರೆಯುತ್ತಿತ್ತು ಆಹಾಕಾರ
ನಾನು ನೀನು ಎಂಬ ಭೇದ ಭಾವ ಹೊಡೆದೋಡಿಸಿದ್ದೀರಿ ಒಂದೇ ಏಟಿನಲ್ಲಿ
ನೀವು ಮಾಡಿರುವಿರಿ ಇದು ಎಂತಹ ಚಮತ್ಕಾರ
ಅಜ್ಞಾನದಿಂದ ಸುಜ್ಞಾನದ ಹಾದಿಗೆ ತಂದು
ವಿಶ್ವಜ್ಞಾನಿಯಾಗಿ ಮೆರೆದಿರುವಿರಿ ಅಂಬೇಡ್ಕರ.
ಧರ್ಮದ ಅವನತಿ ಅಧರ್ಮದ ಉನ್ನತಿಯಾದಾಗ ಲೋಕಕಲ್ಯಾಣಕ್ಕಾಗಿ ದೀನದಲಿತರ ಆಶಾಕಿರಣವಾಗಿ ಸರ್ವ ಜನಾಂಗದ ಶಾಂತಿದೂತನಾಗಿ ಅವತರಿಸಿದ ಮಹಾನ್ ಮೇಧಾವಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು.
ಯಾವುದೇ ಜಾತಿಗೆ ಸೀಮಿತರಲ್ಲ ಒಂದು ಧರ್ಮಕ್ಕಾಗಲಿ ಪ್ರಾಂತಕ್ಕಾಗಲಿ ಸೀಮಿತರಾಗದೆ ಲೋಕೋದ್ಧಾರಕ್ಕಾಗಿ 1891 ಎಪ್ರಿಲ್ 14ರಂದು ಧರೆಗಿಳಿದು ಬಂದರು.
ಅಜ್ಜ ಮಾಲೋಜಿ ಸಕ್ಪಾಲ್ ಸೇನೆಯಲ್ಲಿದ್ದರು ಆರು ಜನ ಚಿಕ್ಕಪ್ಪಂದಿರು ಸೇನೆಯಲ್ಲಿರುವದರಿಂದ ಡಾ. ಬಾಬಾ ಸಾಹೇಬ್ ಅವರಲ್ಲಿ ರಕ್ತಗತವಾಗಿ ರಾಷ್ಟ್ರಭಕ್ತಿ ದೇಶಪ್ರೇಮ ಅಡಗಿತ್ತು. ತಂದೆ ಮಿಲಿಟರಿ ಶಾಲೆಯಲ್ಲಿ ಮುಖ್ಯ ಉಪಾಧ್ಯಾಯರಾಗಿ ಬಹು ಭಾಷೆ ಪರಿಣಿತರಾಗಿದ್ದರು ತಾಯಿ ಭೀಮಬಾಯಿ ಸಾತ್ವಿಕ ಆಧ್ಯಾತ್ಮಿಕ ಆದರ್ಶ ಗೃಹಿಣಿ ತನ್ನ 14ನೇ ಮಗನನ್ನು ಭಾರತದ ಕಿರೀಟವಾಗಿ ಜನ್ಮ ನೀಡಿದರು.
ಸುಸ್ಕೃತ ಆಧ್ಯಾತ್ಮಿಕ ಮನೆತನದ ತಂದೆ ತಾಯಿಗಳು ತನ್ನ ಮಕ್ಕಳಿಗೆ ಕಬೀರರ ದೋಹೆಗಳು ರಾಮಾಯಣ ಮಹಾಭಾರತ ಮತ್ತು ದೇಶ ಭಕ್ತಿ ರಾಷ್ಟ್ರ ಪ್ರೇಮದ ಕಥೆಗಳನ್ನು ಹೇಳುತ್ತಿದ್ದರು ಬಾಬಾ ಸಾಹೇಬ್ ಅಂಬೇಡ್ಕರ್ ಮಾಣಿಕ್ಯದಂತೆ ಬೆಳೆಯಲು ಅವರ ಮನೆತನದ ಸಂಸ್ಕಾರವೇ ಮೂಲ ಕಾರಣ .
ತನ್ನ ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರೂ ಅವರ ಸೋದರತ್ತೆ ಮೀರಾಬಾಯಿಯವರು ತಾಯಿಯ ಸ್ಥಾನವನ್ನು ತುಂಬಿದರು . ಆದಾಗ್ಯೂ ತಾಯಿಯ ಮಮತೆ ವಾತ್ಸಲ್ಯ ಲಾಲನೆ ಪಾಲನೆಯಿಂದ ದೂರ ಉಳಿಯಬೇಕಾಯಿತು. ಅವರು ಬಾಲ್ಯದಿಂದ ವೀರ ಶೂರ ,ಧೀರನಂತೆ ಎಲ್ಲವೂ ಸಹಿಸಿಕೊಂಡು ಮುನ್ನಡೆದರು .
ಬಾಲ್ಯದಲ್ಲಿ ಅವರು ಶಾಲೆಗೆ ಹೋದಾಗ ಕೆಳ ಜಾತಿಯವರೆಂದು ಅಸ್ಪೃಶ್ಯತೆಯಿಂದ ಸಹಪಾಠಿಗಳು ಶಿಕ್ಷಕರು ಎಲ್ಲರೂ ಅಸಹ್ಯವಾಗಿ ನೋಡುತ್ತಿದ್ದರು. ಹಾಗಂತ ಎಲ್ಲರೂ ಒಂದೇ ತರಹ ಇರುವುದಿಲ್ಲ. ದುಷ್ಟರಿಗೆ ಅಹಂಕಾರಿಗಳಿಗೆ ಅಧರ್ಮಿಗಳಿಗೆ ಜಾತಿ ಇಲ್ಲ ಅವರದೇ ಒಂದು ಜಾತಿಯಾಗಿರುತ್ತದೆ , ಬ್ರಾಹ್ಮಣ ಜಾತಿಯ ಶಿಕ್ಷಕ ಪೆಡೀಸ್ ಅಂಬೇಡ್ಕರ ರ್ಮುಗ್ಧ ಮಗುವಿನ ಮನಸ್ಸುನ್ನು ಕಂಡು ಅವರಿಗೆ ತುಂಬ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಜೊತೆಯಾಗಿ ಊಟ ಉಪಚಾರ ಮಾಡುತ್ತಿದ್ದರು ಬಾಲಕನ ಪ್ರತಿಭೆಯನ್ನು ಪ್ರೋತ್ಸಾಹಿಸಿ ಭೀಮರಾವ್ ರಾಮ್ ಜಿ ಅಂಬೇಡ್ಕರ್ ಎಂಬ ತಮ್ಮ ಅಡ್ಡ ಹೆಸರು ಬದಲಿಸಿದರು ಬಹುಶಃ ಈ ಅಡ್ಡ ಹೆಸರಿನಿಂದ ಅವರ ಅಸ್ಪೃಶ್ಯತೆ ಹಣೆಪಟ್ಟಿಯನ್ನು ಕಳೆಯಲು ಮಾಡಿರುವ ಪ್ರಯತ್ನ ಎನ್ನಬಹುದು.
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾಧಿಸುವ ಛಲ ಮಾತ್ರ ಬೇಕು ಎನ್ನುವಂತೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲಿಲ್ಲ. ಬಾಂಬೆ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದು ಅವರು ಅರ್ಥಶಾಸ್ತ್ರ ರಾಜಕೀಯ ಅಧ್ಯಯನ ವಿಷಯಗಳನ್ನು ಆಯ್ದುಕೊಂಡಿದ್ದರು. ಎರಡು ಸ್ನಾತಕೋರ ಮತ್ತು ಬಾರ್ ಅಟ್ ಲಾ ಅವರು ನಾಲ್ಕು ಡಾಕ್ಟರೇಟ್ ಪದವಿಗಳನ್ನು ಹೊಂದಿದ್ದರು. ಅರ್ಥಶಾಸ್ತ್ರದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ ಭಾರತದಲ್ಲಿ ಜಾತಿಗಳು ಅದರ ಕಾರ್ಯವಿಧಾನ ಜೇನಿಸಿಸ್ ಮತ್ತು ಅಭಿವೃದ್ಧಿಯ ಕುರಿತು ಅರ್ಥಗರ್ಭಿತವಾದ ಲೇಖನವನ್ನು ತನ್ನ 24ನೇ ವಯಸ್ಸಿನಲ್ಲಿ ಬರೆದರು.
1902 ರಲ್ಲಿ ಪ್ರೌಢಶಾಲಾ ಶಿಕ್ಷಣ ಮೆಟ್ರಿಕ್ 1907 ,ಇಂಟರ್ 1909 ,ಬಿಎ 1913 , ಎಂ ಎ 1915 ಪಿ ಎಚ್ಡಿ 1917 ಎಂ ಎಸ್ ಸಿ 1921 ಬ್ಯಾರಿಸ್ಟರ್ ಅಟ್ ಲಾ 1923 ಎಲ್ ಎಲ್ ಡಿ 1952 ಡಿ ಲೀಟ್ 1953 ಹೀಗೆ ಸುಮಾರು 51 ವರ್ಷ ಅವರು ದೇಶ ಮತ್ತು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಇತಿಹಾಸವಿದೆ. ಬಹುಶಃ ಭಾರತ ದೇಶದಲ್ಲಿ ಇವರಷ್ಟು ಪದವಿಯನ್ನು ಪಡೆದ ಬೇರೆ ಯಾವ ವ್ಯಕ್ತಿ ಅಥವಾ ರಾಜಕಾರಣಿಗಳನ್ನು ನಾವು ಕಾಣಲಾರೇವು .ಇದು ವಾಸ್ತವ. ಆಡು ಮುಟ್ಟದ ತಪ್ಪಲು ಇಲ್ಲ. ಬಾಬಾ ಸಾಹೇಬರು ಕಲಿಯದ ವಿದ್ಯೆ ಇಲ್ಲ ಎಂದರೆ ತಪ್ಪಲ್ಲ.
ಭಾರತ ದೇಶ ಒಂದೆಡೆ ಬ್ರಿಟಿಷರ ಕಪಿಮುಷ್ಠಿಯಲ್ಲಿ ಇನ್ನೊಂದೆಡೆ ಜಾತಿ ಅಸ್ಪೃಶ್ಯತೆ ಮೂಢನಂಬಿಕೆ ಡಾಂಬಿಕತೆ ಮುಂತಾದವುಗಳಿಂದ ತಾಂಡವಾಡುತ್ತಿತ್ತು .ಇಂತಹ ಪರಿಸ್ಥಿತಿಯಲ್ಲಿ ಡಾ. ಬಾಬಾ ಸಾಹೇಬರು ದೇಶದ ಏಕತೆ ಅಖಂಡತೆ ಸರ್ವಭೌಮತ್ವ ಕಾಪಾಡಲು ಹಗಲಿರುಳು ಚಿಂತನೆಯನ್ನು ಮಾಡುತ್ತಿದ್ದರು. ಅವರು ಬ್ರಿಟಿಷರ ವಿರುದ್ಧ ಹೋರಾಡಲು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು.
ಸ್ವಾತಂತ್ರ ಸೇನಾನಿಯಾಗಿ ಮೆರೆದರು ಜೊತೆಗೆ ದೇಶ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವದ ವ್ಯವಸ್ಥೆ ಪ್ರಜೆಗಳ ಉದ್ಧಾರಕ್ಕಾಗಿ ಸಕಲ ಜೀವಾತ್ಮಗಳಿಗೆ ಲೇಸನ್ನು ಬಯಸುವಂತಹ ಸಂವಿಧಾನವನ್ನು ರಚಿಸಲು ಮುಂದಾದರು . ಅವರು ಯಾವತ್ತೂ ತನ್ನನ್ನು ತಾನು ದೊಡ್ಡವ, ಜ್ಞಾನಿ ಎಂದು ಬಿಂಬಿಸಿಕೊಳ್ಳಲಿಲ್ಲ ಬದಲಾಗಿ ಅವರು ಈ ದೇಶದ ಜ್ಞಾನ ಭಂಡಾರವಾಗಿದ್ದರು. ಭಾರತದ ಸಂವಿಧಾನವನ್ನು ರಚಿಸಲು ಒಂದು ಕರಡು ಸಮಿತಿಯನ್ನು ರಚಿಸಿದಾಗ ಡಾ. ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಕರಡು ಸಮಿತಿಯಲ್ಲಿ ಸದಸ್ಯರಾದ ಕೆಎಮ್ ಮುನ್ಸಿ ಮೊಹಮ್ಮದ್ ಸದುಲ್ಲ ಅಲ್ಲಾಡಿ ಕೃಷ್ಣ ಸ್ವಾಮಿ ಗೋಪಾಲಸ್ವಾಮಿ ಅಯ್ಯಂಗಾರ್, ಬೆನಗಲ್ ನರಸಿಂಗರಾವ್ ಮುಂತಾದವರು ಕರುಡು ಸಮಿತಿಯ ಸದಸ್ಯರಾಗಿದ್ದರು ಬಾಬಾ ಸಾಹೇಬ್ ಅಂಬೇಡ್ಕರ್ ಎಲ್ಲರ ವಿಚಾರಧಾರೆಗಳನ್ನು ಸಂಗ್ರಹಿಸುತ್ತಿದ್ದರು ಮತ್ತು ಮನ್ನಣೆ ನೀಡುತ್ತಿದ್ದರು. ಕರುಡು ಸಮಿತಿಯ ಕೆಲ ಸದಸ್ಯರು ಅನಾರೋಗ್ಯದ ನಿಮಿತ್ಯ ಅಕಾಲ ಮರಣ, ಕೆಲವರ ನಿರಾಸಕ್ತಿ ಇಂದ ಸಂಪೂರ್ಣ ಜವಾಬ್ದಾರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೇಲೆ ಬಿದ್ದಿರುವುದು ವಾಸ್ತವ . ಇವರ ಇರೋಗ್ಯದಲ್ಲಿಯೂ ಏರುಪೇರಾಗಿದ್ದರು ಅನೇಕ ಅಡಚಣೆ ಗಳಿದ್ದರೂ ಅಧಾವುದಕ್ಕೂ ಜಗ್ಗದೆ ಬಗ್ಗದೆ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಉತ್ತಮವಾದ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.
ಭಾರತದ ಸಂವಿಧಾನವು ಇತರ ದೇಶಗಳ ಸಂವಿಧಾನಕ್ಕಿಂತ ದೀರ್ಘವಾಗಿದೆ.ಈ ನಮ್ಮ ಸಂವಿಧಾನ ವಿಶ್ವದ ಅತಿ ದೊಡ್ಡ ಮತ್ತು ಅರ್ಥಪೂರ್ಣ ಕಾನೂನನ್ನು ಒಳಗೊಂಡಿರುತ್ತದೆ .ಭಾರತ ದೇಶದ ಸಂವಿಧಾನವನ್ನು ಪವಿತ್ರ ಗ್ರಂಥ ಎಂದು ನಂಬಲಾಗುತ್ತದೆ. ಯಾವ ಜಾತಿ ಮತ ಪಂಥ ಎನ್ನದೆ ಎಲ್ಲರಿಗೂ ಸಮಾನತೆ ನೀಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮ್ಮನ್ನು ಅಗಲಿ ಇಂದಿಗೆ 68 ವರ್ಷಗಳು ,ಆದರೆ ಸೂರ್ಯ ಚಂದ್ರನಿರುವವರೆಗೆ ಅವರು ನೀಡಿರುವ ಕೊಡುಗೆ ಸದಾ ನಮ್ಮೊಂದಿಗೆ ಇರುತ್ತವೆ.
ಅವರು ಅಮರ ಮತ್ತು ಚಿರಂಜೀವಿಯಾಗಿದ್ದಾರೆ ಅವರ ವಿಚಾರಧಾರೆಗಳು ಜ್ಞಾನಿಗಳ ಮುಖಾಂತರ ಇಂದಿಗೂ ಸಂಚಲನವಾಗುತ್ತಿರುತ್ತದೆ .
ಹಳ್ಳಿಯಿಂದ ದಿಲ್ಲಿಯವರೆಗೆ ನಿನ್ನದೇ ಭೀಮ ನಾಮ
ಹಳ್ಳಿಯಿಂದ ದಿಲ್ಲಿಯವರೆಗೆ ನಿನ್ನದೇ ಭೀಮ ನಾಮ ಜಯಭೀಮ ಜೈ ಭೀಮ ಜೈ ಭೀಮ ಜೈ ಭೀಮ
ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು ಎಂದು ನೀ ಸಾರಿದೆ ಭೀಮ
ನಾನು ನೀನು ಎಂಬ ಭೇದ ಅಳಿಸಿ ಒಂದೇ ಮತ ದೇಶ ಹಿತ ಎಂದು ಸಾರಿದೆ ಜೈ ಭೀಮ.
ಸ್ವಾತಂತ್ರ್ಯಕ್ಕಾಗಿ ದುಡಿದೆ ಬ್ರಿಟಿಷರಿಂದ ಮುಕ್ತಿ ಕೊಡಿಸಿರುವೆ
ದೇಶದ ಪ್ರಜೆಗಳಿಗೆ ಆಡಳಿತದ ಹಿತಕ್ಕಾಗಿ
ಕಾನೂನಿನ ಚೌಕಟ್ಟಿನಲ್ಲಿ ನಡೆಯಿರಿ ಎಲ್ಲರೂ ತಲೆಬಾಗಿ
ಭೀಮರಾವ್ ಅಂಬೇಡ್ಕರ್ ನಿಮ್ಮ ಪೂರ್ಣನಾಮ
ದೇಶಕ್ಕೆ ದೇವನಾಗಿ ವಿಶ್ವಕ್ಕೆ ಜ್ಞಾನಿಯಾಗಿ ಎಲ್ಲೆಡೆಯೂ ನಿನ್ನದೇ ಭೀಮ ನಾಮ
ಜೈ ಭೀಮ ಜೈ ಭೀಮ.
– ಅರವಿಂದ ಕುಲಕರ್ಣಿ.
ಅಧ್ಯಕ್ಷರು
ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಬೀದರ್.