ಮಹಾದಾಸೋಹಿ ಟಾಟಾ
ರತನ್ ಟಾಟಾ ಅವರೊಂದು ಅದ್ಭುತ ವ್ಯಕ್ತಿ
ದುಡಿಮೆಯಲಿತ್ತು ಅಪಾರವಾದ ಪ್ರೀತಿ ಭಕ್ತಿ
ಇತ್ತು ಅವರಲಿ ಉದ್ಯೋಗ ಬೆಳೆಸುವ ಯುಕ್ತಿ
ದುಡಿದರು ಹಗಲಿರುಳು ಆಗಿ ಅವರು ಶಕ್ತಿ
ಆಳದಿ ಜನಸಾಮಾನ್ಯರ ಬದುಕನು ಅರಿತರು
ಬೇಕಾದ ಉತ್ಪನ್ನಗಳು ಅತಿ ಸರಳ ಬೆಲೆಗಿತ್ತರು
ಬಡಜನರ ನೋವಿಗೆ ಕ್ಷಣದಲಿ ಸ್ಪಂದಿಸಿದರು
ಉಚಿತ ಸೌಲಭ್ಯಗಳಿತ್ತು ಉದಾರತೆ ಮೆರೆದರು
ವೀದೇಶಿ ಕಂಪನಿಗಳ ಕ್ಷಣದಲಿ ಖರೀದಿಸಿದರು
ಭಾರತಾಂಬೆಯ ಮುಡಿಗೆ ಗರಿಯ ಮುಡಿಸಿಹರು
ಇವರತ್ತ ಧಾವಿಸಿದವು ಹತ್ತು ಹಲವು ಪದಕಗಳು
ಕೊರಳೇರಿ ನಗುನಗುತ ಅಭಿಮಾನಗೊಂಡವು
ಜನಿಸಲಿ ನಾಡಲಿ ಟಾಟಾರಂತಹ ದಿವ್ಯ ಹರಳು
ಮೀಸಲಿಡಲಿ ದಾಸೋಹಕೆ ಗಳಿಕೆಯ ಬಹುಪಾಲು
ಜನಸಾಮಾನ್ಯರ ಏಳಿಗೆ ಬಯಸಲಿ ಹಗಲಿರುಳು
ಟಾಟಾರ ಮತಿ ಬರಲಿ ಉದ್ಯೋಗದಾತರೊಳು.
– ಮಾಣಿಕ ನೇಳಗಿ ತಾಳಮಡಗಿ. ಬೀದರ
ಕವಿಪರಿಚಯ:
ಸಾಹಿತಿ ಮಾಣಿಕ ನೇಳಗಿ ಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದವರು.
ಬಿ.ಎ. ಎಂ.ಎ ಕನ್ನಡ ಪದವಿಧರರಾಗಿದ್ದು, 1999ರಿಂದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಇವರು ಈಗ ಬೀದರ ಜಿಲ್ಲೆಯಲ್ಲಿ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.’ ಬದಲಾಗೋಣ. ಭರವಸೆ,ದಾಂಪತ್ಯ ಸವಿ, ಹರಿತವಾಗಲಿ (ಕವನ ಸಂಕಲನ) ‘ಬವಣೆ’ ‘ಗಾಂಧಿಜಿಗೆ ನಮನ‘ (ಹನಿಗವನ) ‘ರುಕ್ಕಿಣಿಯ ಆತುರ’ (ಕಥಾಸಂಕಲನ) ‘ಸಂಕೀರ್ಣ‘ (ಲೇಖನ) ‘ಮಾನವಿಯತೆ‘ (ಚಿಂತನ) ಎಂಬ ಕೃತಿಗಳು ಬರೆದಿದ್ದಾರೆ. ಇವರಿಗೆ ‘ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ,ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಮಾಣಿಕ ನೇಳಗಿ ಇವರ ಕವಿತೆ ಚನ್ನಾಗಿದೆ
ಅಭಿನಂದನೆಗಳು….. ಕವಿಗೂ, ಪತ್ರಿಕೆಯ ಸಂಪಾದಕರಿಗೆ ಧನ್ಯವಾದಗಳು