ಮಹಾಮಾನವ ಡಾ.ಅಂಬೇಡ್ಕರ್
ರಾಮಜಿ ಭೀಮಾಬಾಯಿಯವರ
ಹದಿನಾಲ್ಕನೆ ಪುತ್ರರತ್ನ
ಅಸ್ಪೃಶ್ಯತೆಯನಳಿಸಲು ಹೋರಾಡಿ
ಗೆದ್ದ ಭಾರತದ ರತ್ನ
ಬೃಹತ್ ಲಿಖಿತ ಸಂವಿಧಾನ ಬರೆದು
ಜನ ಮನ ಗೆದ್ದ ವಿಶ್ವ ರತ್ನ//
ಬಾಲ್ಯದ ಬಡತನದ ಝಳಕೆ ಬಗ್ಗದ
ಅಪಮಾನ ಅವಮಾನದಿ
ನೊಂದು ಬೆಂದರೂ ಅಗ್ನಿಯಲಿಸುಟ್ಟ
ಬಂಗಾರದ ಹೊಳಪಿನಂದದಿ
ಪದವಿಗಳ ಮೇಲೆ ಪದವಿ ಪಡೆದು
ಭಾರತದ ರತ್ನರಾದರು//
ಮಹಿಳೆಯರ ಹಕ್ಕು ಬಾಧ್ಯತೆಗಳಿಗೆ
ಪ್ರಾಮುಖ್ಯತೆ ಕೊಟ್ಟ
ದಲಿತರ ಮೂಲ ಅಧಿಕಾರಗಳಿಗೆ
ಸದಾವಕಾಶ ಕೊಟ್ಟ
ಹೃದಯವಂತ ಧೀಮಂತ ವ್ಯಕ್ತಿತ್ವದ
ಮಹಾ ಮಾನವನಿಗೆ ನಮನ//
ಸಮಾಜದಲಿ ಸಮಾನತೆಯ ಬೀಜ
ಬಿತ್ತಿ ಸರ್ವ ಜನಾಂಗದ
ಸತ್ಯ ಶಾಂತಿ ನೀತಿ ಬೌದ್ಧಧರ್ಮದ
ಜ್ಯೋತಿಯ ಬೆಳಗಿಸಿದ
ಮಾರ್ಗದರ್ಶಿ ಮಹಾಮಾನವ ಡಾ
ಅಂಬೇಡಕರವರಿಗೆ ನಮನ//
– ಅನ್ನಪೂರ್ಣ ಸುಭಾಶ್ಚಂದ್ರ ಸಕ್ರೋಜಿ ಪುಣೆ