ಮಹಾರಾಷ್ಟ್ರ ಮರಾಠವಾಡ
ಪ್ರಾಂತ್ಯದಲ್ಲಿ ಕನ್ನಡ ಡಿಂ ಡಿಂ.
ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ಕಡೆಗೆ ಗಮನ ಹಸಿಸಬೇಕಾಗಿದೆ. ಅಂದಾಗ ಮಾತ್ರ ಕನ್ನಡ ಭಾಷಾ ಸಂಸ್ಕೃತಿಯು ಕನ್ನಡ ನಾಡಿನಾಚೆಯಲ್ಲೂ ಬೆಳೆಯಲು ಸಾಧ್ಯವಾಗುತ್ತದೆ.
ಮರಾಠವಾಡ ಪ್ರಾಂತ್ಯವು ಮಹಾರಾಷ್ಟ್ರದ ಪ್ರಮುಖ ಕ್ಷೇತ್ರವಾಗಿದೆ. ಕರ್ನಾಟಕ, ತೆಲಂಗಾಣದ (ಹಿಂದಿನ ಆಂಧ್ರ ಪ್ರದೇಶ) ಗಡಿಗೆ ಹೊಂದಿಕೊಂಡಿರುವ ಈ
ಕ್ಷೇತ್ರವು ಲಾತೂರು, ಬಾರಂಗನಾದ, ನಾಂದೇಡ್, ಜಾಲನಾ, ಬೀಡ ಉಸ್ಮಾನಾಬಾದ
ಪರಭಣಿ, ಜಿಲ್ಲೆಗಳ ಗಡಿಯಿಂದ ಕೂಡಿದೆ. ಹಳೆಯ ಹೈದ್ರಾಬಾದ ರಾಜ್ಯದಿಂದ
ಮುಕ್ತಿಯನ್ನು ಹೊಂದಿ ಮಹಾರಾಷ್ಟ್ರ ರಾಜ್ಯದಲ್ಲಿ ವಿಲೀನಗೊಂಡಿದ್ದರಿಂದ ಈ ಕ್ಷೇತ್ರಕ್ಕೆ
“ಮರಾಠವಾಡ” ಎಂದು ಕಲೆಯುತ್ತಾರೆ, ಇಲ್ಲಿ ಗೋದಾವರಿ ನದಿಯು ಪ್ರಮುಖವಾಗಿ
ಹರಿಯುತ್ತದೆ. ಆ ನದಿಯ ಉಪನದಿಗಳಾದ ಮಾಂಜರಾ, ಶಾವರಜಾ ಲೇಂಡಿ, ತೋರಣಾ,
ಬೆಣ್ಣೆಕೋರಾ ಮುಂತಾದ ನದಿಗಳು ಹರಿಯುತ್ತವೆ,
ಈ ಪ್ರದೇಶದಲ್ಲಿ ಪ್ರಮುಖ ಶರಣ ಸಂತ ಪುರುಷರಾದ ಮಾಂಜರ ಸಂಬಾ, ಮನ್ಮಥ ಸ್ವಾಮಿ, ಉದಗೀರ ಹಾವಗಿ ಸ್ವಾಮಿ, ಅಹಮ್ಮದರ ಶಿವಲಿಂಗ ಶಿವಾಚಾರ್ಯರು, ಶಿರಸಿಯ ಕರಿಬಸವ, ಕಂದಾರ ಶರಣ ಉರಿಲಿಂಗ ಬಿದ್ದಿ
ಮುಂತಾದ ಮಹಾನ್ ಪುರುಷರು ನೆಲೆಸಿದ ಪುಣ್ಯಭೂಮಿ ಇದಾಗಿದೆ.
ಬಹಮನಿ
ನಿಜಾಮರು ಆಳಿದ ಐತಿಹಾಸಿಕ ಪರಂಪರೆ ಹೊಂದಿರುವ ಈ ಕ್ಷೇತ್ರವು ಚಾಲುಕ್ಯ
ವಿಕ್ರಮಾದಿಶ್ಯನ, ರಾಷ್ಟ್ರಕೂಟರ ದೊರೆ ಶ್ರೀ ವಿಜಯ ಮುಂತಾದರವರ ಕಾಲದಲ್ಲಿ
ದತ್ತಿದಾನ ನೀಡಿ ಕೆತ್ತಿದ ಕನ್ನಡ ಶಿಲಾ ಶಾಸನಗಳು ಈ ಭಾಗದಲ್ಲಿ ವಿರಳವಾಗಿ
ದೊರೆಯುತ್ತವೆ.
ಈ ಪ್ರದೇಶವು ಒಂದು ಕಾಲಕ್ಕೆ ಕನ್ನಡಮಯವಾಗಿತ್ತೆಂದು ಖ್ಯಾತ ಸಂಶೋಧಕ
ಡಾ। ಭಂಡಾರಕರ, ಶಂಭಾ, ಜೋಶಿ, ಕೆ.ಜಿ. ಕುಂದಣಗಾರ ಲೋಕಮಾನ್ಯ ತಿಲಕರು
ಅಭಿಪ್ರಾಯ ಪಡುತ್ತಾರೆ.
‘ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ನಾಡಾದ
ಕನ್ನಡದೊಳ್’ ಎಂದು ಶ್ರೀ ವಿಜಯ ಕವಿರಾಜ ಮಾರ್ಗದಲ್ಲಿ ಉಲ್ಲೇಖಿಸಿದ್ದಾರೆ.
ನಾಂದೇಡ ಜಿಲ್ಲೆಯಲ್ಲಿ ಸುಮಾರು ಮೂವತ್ತೈದು ಕನ್ನಡ ಶಿಲಾಶಾಸನಗಳು ಲಭ್ಯವಾಗಿವೆ.
ಎಂದು ತಿಳಿದುಬರುತ್ತದೆ.
ಒಂದನೆಯ ಸೋಮೇಶ್ವರ, ೨ ಎರಡನೆಯ ಸೋಮೇಶ್ವರ,
ಬಿಜ್ಜಳ, ಕಳಚೂರಿ, ರಾಷ್ಟ್ರಕೂಟರ ಕಾಲದ ಹಲವಾರು ಕನ್ನಡ ಶಾಸನಗಳು
ದೊರೆತಿವೆ. ಈ ಭಾಗದಲ್ಲಿ ವಾಸಿಸುವ ಕನ್ನಡಿಗರು ಬಹಮನಿ ಆಳ್ವಿಕೆಯಲ್ಲಿ
ನೆಲೆನಿಂತವರೆಂದು, ಅವರ ಮೂರ್ವಜರು ಮೂಲ ಕರ್ನಾಟಕದವರೆಂದು ತಿಳಿದು
ಬರುತ್ತದೆ. ಔರಂಗಬಾದ ಜಿಲ್ಲೆಯಲ್ಲಿ ” ಕನ್ನಡ” ಎಂಬ ಹೆಸರಿನ ಗ್ರಾಮವು
ತಾಲೂಕು ಕೇಂದ್ರವಾಗಿದೆ. ಈ ಪ್ರಾಂತದಲ್ಲಿ ಕನ್ನಡಿಗರು ಹೆಚ್ಚಾಗಿ ನೆಲೆಸಿರುವುದರಿಂದ
ಗ್ರಾಮ ನಾಮಗಳೇ ಸಾಕ್ಷಿಯಾಗಿವೆ. ಉದಾ: ದೇಗಲೂರು, ಲಾತೂರು, ತುಳಜಾಪೂರ,
ಕಲ್ಲೂರು, ತಮಲೂರ, ಆಲೂರು, ಸೋಮನಾಥಪೂರ, ಅಹ್ಮದಪೂರ
ಮುಂತಾದವುಗಳನ್ನು ಹೆಸರಿಸಬಹುದು.
ಕನ್ನಡ ಸಾಹಿತ್ಯ:-
ಈ ಪ್ರಾಂತದ ಹಲವಾರು ಗ್ರಾಮಗಳಲ್ಲಿ ಕನ್ನಡ ಮಾತೃ ಭಾಷೆಯಾಗಿ
ಬಳಕೆಯಲ್ಲಿದೆ, ಇಲ್ಲಿ ಅನೇಕ ಕನ್ನಡ ಕವಿಗಳು ಹುಟ್ಟಿ ಬೆಳೆದಿದ್ದಾರೆ. ಕನ್ನಡದಲ್ಲಿ ಕಾವ್ಯ ಪುರಾಣ, ವಚನ ಜನಪದ ಗೀತೆಗಳು, ಕಾದಂಬರಿ ಕಥೆ ಅನುವಾದ ಸಾಹಿತ್ಯ- ಹೀಗೆ
ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆಗೊಂಡಿದೆ. ೧೨ನೇ ಶತಮಾನದಲ್ಲಿ
ಬರುವ ಉರಿಲಿಂಗ ಪೆದ್ದಿ ವಚನಕಾರ ಈ ಭಾಗದವನು ನಂದವಾಡ ಜಿಲ್ಲೆಯ
ಕಂದಾರ ಗ್ರಾಮದವನ್ನು ಎಂದು ಹೇಳಲಾಗಿದೆ. ಅವನು ಹಲವಾರು ಕನ್ನಡ ಭಾಷೆಯಲ್ಲಿ ಹಲವಾರು ವಚನಗಳು
ರಚಿಸಿದ್ದಾರೆ. ಈತನ ಹೆಂಡತಿ ಕಾವೇಯು ವಚನ ರಚನೆ ಮಾಡಿದ್ದಾಳೆ.
ಬಸವಲಿಂಗಶಾಸ್ತ್ರಿ ಗಣಿಗಾಂವ ಅವರು ಶಿವಶರಣರ ವಚನಗಳು, ಶ್ರೀ ಹಾವಗಿ
ಸ್ವಾಮಿ ಮರಾಣ, ಎಂಬ ಗ್ರಂಥಿಗಳು ರಚನೆ ಮಾಡಿದ್ದಾರೆ.
ಶ್ರೀ ಕಾಶಿನಾಥ ಶಾಸ್ತ್ರಿಯವರು ಬಸವ ವಚನ, ಆರುತಿ ಪದಗಳು,
ಸಂಪಾದಿಸಿದ್ದಾನೆ. ಶಿವಲಿಂಗ ಶಿವಾಚಾರ್ಯರು ಲಿಂಗೇಶ್ವರವಾಣಿ ಕನ್ನಡ ಪರಮ
ರಹಸ್ಯ, ಮರಾಶನ ತ್ರಿವಿಧಿ, ಸಿದ್ದಲಿಂಗೇಶ್ವರ ವಚನಗಳು ಮುಂತಾದ
ಗ್ರಂಥಗಳು
ರಚಿಸಿದ್ದಾರೆ. ಸಮುದ್ರ ಗುಪ್ತ ಪಾಟೀಲ, ಕನ್ನಡ ಜಾಷಧಿ, ಗ್ರಂಥವನ್ನು, ರಾಜೇಂದ್ರ
ವಿರೋದ ಬಹುಭಾಷೆಯಲ್ಲಿ ಬಸವೇಶ್ವರ, ಪದ ಲಲಿತ ಶಿವಶರಣ, ಕಲ್ಯಾಣ
ಕ್ರಾಂತಿ, ಬಸವೇಶ್ವರ ವಚನಾಮೃತ, ಹೀಗೆ ಮುಂತಾದ ಕೃತಿಗಳು, ಅನುವಾದಿಸಿದ್ದಾರೆ.
ಮನ್ಮಥ ಸ್ವಾಮಿಯು ಪರಮ ರಹಸ್ಯ, ಲೀಲಾ ವಿಶ್ವಾಂಬರ, ಕೈಮಲಿ ಪದ್ಧತಿ,
ಅಲ್ಲದೇ ಮಲ್ಲಿಕಾರ್ಜುನಪ್ಪಾ ಶೋಳಸೆಯವರು, ಲಿಂಗಪೂಜೆ, ಜವಳಿ, ಶಿವಯೋಗ
ಮಂದಿರ ಎಂಬ ಗ್ರಂಥ ರಚಿಸಿದ್ದಾರೆ.
ಮಹೇಶ ಶಂಕರಪ್ಪ ನಾಗೂರೆಯವರು,
ಲಿಂಗಾಯತ ತತ್ವದರ್ಪಣ, ಲಿಂಗಾನಂದ ಸ್ವಾಮಿ ಗ್ರಂಥಗಳು ರಚಿಸಿದ್ದಾರೆ.
ಡಾ| ಅಮರನಾಥ ಸೋಲದೂರೆಯವರು ವೈದ್ಯಕೀಯ ಶರೀರ, ವಿಜ್ಞಾನ
ಶಾಸ್ತ್ರ ಲಾಂಗ ಮಾರ್ಚ, ತಾಯಂದಿರ ಬಾಣತನ ಸಾವಿನ ಕಾರಣದ ಕೈಪಿಡಿ
ಬಸವ ದರ್ಶನ, ಬಸವ ಸಂಸ್ಕೃತಿ ಇಷ್ಟಲಿಂಗ ಪೂಜಾ ಪದ್ಧತಿ ಎಂಬ ಗ್ರಂಥಗಳು
ರಚಿಸಿದ್ದಾರೆ. ಮಾಣಿಕರಾವ ಬಿರಾದಾರ ಅವರು ಗಡಿಯ ಜಾನಪದ ಗೀತೆಗಳು,
ಗಡಿಯ ಗೀತೆಗಳು ಸಂಗ್ರಹಿಸಿದ್ದಾರೆ. ರಾಚಪಣ್ಣಾ ಮಾಣಿಕಪ್ಪ ಲೋಹಾರ, ಅಪ್ಪವರಣ
ಮಸ್ತಕ ರಚಿಸಿದ್ದಾರೆ.
ಡಾ| ರಮೇಶ ಹೆಚ್, ಮೂಲಗೆಯವರು ಕನ್ನಡದಲ್ಲಿ ಹಲವಾರು
ಗ್ರಂಥಗಳು ರಚಿಸುತ್ತಿದ್ದಾರೆ.
ಕನ್ನಡ ಶಾಲೆಗಳು: 1934 ರಲ್ಲಿ ಉದಗೀರದಲ್ಲಿ ಸಂಗ್ರಾಮನವರು ‘ಕನ್ನಡ
ಭಾಷೆಯ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. 1962ರಲ್ಲಿ ಔರಂಗಬಾದ
ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯ ಅಧ್ಯಯನ ಸಂಸ್ಥೆಯ ಪ್ರಾರಂಭಗೊಂಡಿದೆ.
1962 ರಲ್ಲಿ ಉದಯಗಿರಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಯನ
ಪ್ರಾರಂಭಗೊಂಡಿತ್ತು. ಶ್ರೀ ಪ್ರಭುರಾವ ಕಂಬಳಿವಾಲೆ, ಧರ್ವವೀರ ಸಂಗ್ರಮಪ್ಪ,
ಅವರ ಪರಿಶ್ರಮದಿಂದ ಈ ಭಾಗದಲ್ಲಿ ಕನ್ನಡದಲ್ಲಿ ಪಾಠ ಪ್ರವಚನ ನಡೆಯುತ್ತಿದ್ದವು.
ಬಸವ ಜಯಂತಿ ನಾಡಹಬ್ಬ ಮುಂತಾದ ಕಾರ್ಯಕ್ರಮಗಳು ಕನ್ನಡದಲ್ಲೇ
ನಡೆಯುತ್ತಿದ್ದವು. 1939 ರಲ್ಲಿ ಸಂಗ್ರಾಮವೇ ಎಂಬ ವಿನೂತನ ಕಾರ್ಯಕ್ರಮವು
ಶ್ರಾವಣ ಮಾಸದಲ್ಲಿ ನಡೆಸುತ್ತಾರೆ. ವೀರಶೈವ ಸಮಾಜದವರು ಈ ಕಾರ್ಯಕ್ರಮದ
ಆಯೋಜನೆ ಮಾಡುತ್ತಿದ್ದಾರೆ.
ಸಮ್ಮೇಳನಗಳು: ಈ ಪ್ರಾಂತದಲ್ಲಿ ಕನ್ನಡ ಭಾಷೆಯ ಬಗ್ಗೆ ಹಲವಾರು
ಜನರಿಗೆ ಅಭಿಮಾನವಿತ್ತು. ಅಂತೆಯೇ ಇಲ್ಲಿ 6-7 ಮೇ 1955 ರಲ್ಲಿ ದೇಗಲೂರ
ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿತ್ತು. ಮಾನ್ವಿ ನರಸಿಂಗರಾವ
ಅವರ ಸಾನಿಧ್ಯದಲ್ಲಿ ಸಿದ್ದಯ್ಯ ಪುರಾಣಿಕ ಅವರ ಅಧ್ಯಕ್ಷತೆಯಲ್ಲಿ ಎರಡು ದಿವಸದ
ಸಮ್ಮೇಳನವು ಭಾಲ್ಕಿ ಹಿರೇಮಠದ ಲಿಂಗೈಕೆ ಡಾ|| ಚನ್ನಬಸವ ಪಟ್ಟದೇವರ
ಪರಿಶ್ರಮದಿಂದ ಯಶಸ್ವಿಯಾಗಿ ಜರುಗಿತ್ತು.
ಪ್ರಭುರಾವಜಿ ಕಂಬಳಿವಾಲೆ, ಸಂಗ್ರಾಮಪ್ಪನವರು ಕನ್ನಡ ಭಾಷೆಯ ಬೆಳವಣಿಗೆ
ಸಲುವಾಗಿ ಹಗಲಿರಳು ದುಡಿದರು. ಈ ಗಡಿ ಭಾಗದಲ್ಲಿ ಹರ್ಡೆಕರ್ ಮಂಜಪ್ಪ ಅ.ನ. ಕೃಷ್ಣರಾಯ, ಜಯದೇವಿ ತಾಯಿ ಲಿಗಾಡೆ, ಸಿದ್ದಯ್ಯಪುರಾಣಿ ಬಿ. ಮಹಾದೇವಪ್ಪ, ಸ್ವಾಮಿ ರಮಾನಂದ ತೀರ್ಥ ಮುಂತಾದವರು ಈ ಭಾಗದಲ್ಲಿ ಕನ್ನಡ ಭಾಷಾ ಬೆಳವಣಿಗೆಗೆ ಶ್ರಮಿಸಿದರು. ಈ ಪ್ರಾಂತದ ಲಿಂಗಾಯತರ ಮನೆಯಲ್ಲಿ ಇಂದಿಗೂ ಸಹ ಕನ್ನಡ ಮಾತನಾಡುತ್ತಾರೆ. ಕನ್ನಡ ಓದಲು, ಬರೆಯಲು ಬರುವುದಿಲ್ಲ.
ಆದರೂ ಕನ್ನಡ ಭಾಷೆಯ ಬಗ್ಗೆ ವ್ಯಾಮೋಹ ಕಾಳಜಿ ಇದೆ.
ಆದರೆ ಇತ್ತೀಚಿನ ಪೀಳಿಗೆಯಲ್ಲಿ ಕನ್ನಡ
ಭಾಷೆಯ ವ್ಯಾಮೋಹ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಜನಪದ ಸಾಹಿತ್ಯದ ಸ್ಥಿತಿಗತಿ:-
ಈ ಭಾಗದಲ್ಲಿ ಕನ್ನಡ ಜಾನಪದ ಸಾಹಿತ್ಯ
ಸೊಗಸಾಗಿ ಲಭಿಸುತ್ತದೆ. ಕನ್ನಡದಲ್ಲಿ ರಾಮಾಯಣ, ಮಹಾ ಭಾರತ, ದೊಡ್ಡಾಟ,
ಸಣ್ಣಾಟ ಸಂಗ್ಯಾ, ಬಾಳ್ಯಾ, ಡಪ್ಪಿನ ಆಟ, ಕೋಲಾಟ, ಪೈತ್ರಿಕುಣಿತ, ಸುಗ್ಗಿಕುಣಿತ,
ಜನಪದ ಗೀತೆ, ಮುಂತಾದವು ಇಂದಿಗೂ ಇಲ್ಲಿ ದೊರೆಯುತ್ತವೆ. ಹಬ್ಬಹರಿ ದಿನಗಳಲ್ಲಿ
ಸೀಗಿ ಹಾಡುಗಳು, ಸೋಬಾನಾ ಹಾಡುಗಳು, ಎಣ್ಣೆ ಹಚ್ಚುವ ಹಾಡುಗಳು,
ಜೋಗುಳು ಹಾಡುಗಳು, ಉಡಿ ತುಂಬುವ ಹಾಡುಗಳು, ಬೀಸುವ ಹಾಡುಗಳು,
ಕುಟ್ಟುವ ಹಾಡುಗಳು ಹೇರಳವಾಗಿ ದೊರೆಯುತ್ತವೆ. ಪಾಠ – ಪ್ರವಚನ ಕೀರ್ತನಗಾರರು
ಪುರಾಣಗಾರರು, ಭಾಷಣಕಾರರು, ಹಾಸ್ಯಗಾರರು, ಈ ಭಾಗದಲ್ಲಿ ನೆಲೆಸಿದ್ದಾರೆ.
ಇಂದಿಗೂ ಈ ಕ್ಷೇತ್ರದಲ್ಲಿ ಜನಪದ ಸಂಸ್ಕೃತಿ ರಾರಾಜಿಸುತ್ತಿದ್ದಾರೆ. ಅವುಗಳ
ಅಧ್ಯಾಯನ ಸಂಶೋಧನೆಯಾಗುವುದು ಅತಿ ಜರೂರಿಯಾಗಿದೆ.
ಕರ್ನಾಟಕ ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳ ರಕ್ಷಣೆಯ ಕಡೆಗೆ ಗಮನ ಹಸಿಸಬೇಕಾಗಿದೆ. ಅಂದಾಗ ಮಾತ್ರ ಕನ್ನಡ ಭಾಷಾ ಸಂಸ್ಕೃತಿಯು ಕನ್ನಡ ನಾಡಿನಾಚೆಯಲ್ಲೂ ಬೆಳೆಯಲು ಸಾಧ್ಯವಾಗುತ್ತದೆ.
– ಡಾ.ರಮೇಶ ಹೆಚ್. ಮೂಲಗೆ.
ಮುಖ್ಯಸ್ಥರು ಕನ್ನಡ ವಿಭಾಗ
ಉದಯಗಿರಿ ಕಾಲೇಜು, ಉದಗೀರ.ಜಿ.ಲಾತೂರ್
ಮಹಾರಾಷ್ಟ್ರ ರಾಜ್ಯ
ಲೇಖಕರ ಪರಿಚಯ.
ಹೊರನಾಡ ಸಾಹಿತಿ ಡಾ.ರಮೇಶ ಮೂಲಗೆ ಯವರು ಮೂಲತಃ ಬೀದರ ತಾಲೂಕಿನ ಮಮದಾಪೂರ ಗ್ರಾಮದವರು. ಎಂ.ಎ.ಎಂ.ಫಿಲ್. ಪಿ.ಎಚ್.ಡಿ ಪದವೀಧರರು. ಮಹಾರಾಷ್ಟ್ರ ಲಾತೂರ್ ಜಿಲ್ಲೆ ಉದಗಿರ ತಾಲೂಕಿನ ಉದಯಗಿರಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ‘ಸಿಡಿದ ಮುತ್ತುಗಳು, ‘ಬೀದರ ಜಿಲ್ಲೆಯ ವೀರಶೈವ ಮಠಗಳು’, ‘ಹಳೆಂಬರ ಶ್ರೀ ವೀರಭದ್ರಪ್ಪಾ’, ‘ನಾ ಕಂಡ ಮನೆ’, ‘ಮಾಣಿಕ್ಯ ದೀಪ್ತಿ’, ‘ಬೀದರ ಜಿಲ್ಲೆಯ ಬಿಸುವ ಪದಗಳು, ‘ಕರುನಾಡ ಸಿರಿ’, ‘ದಸ್ತಗಿರಿ ದೀಕ್ಷಾ ವಿಧಿ ವಿಧಾನ’, ‘ಲೇಸನ್ನೆ ಬಯಸಿದರು’,’ಶಿವಬಿಂಬ’, ‘ಬಾಗಿದ ತಲೆ ಮುಗಿದ ಕೈ’, `ನಮ್ಮ ಶರಣರು’,’ಬಸವ ಪರಿಶೋಧ’, ‘ಗಡಿನಾಡ ಕನ್ನಡಿಗರು’, ‘ಅಮರ ದರ್ಪಣ’, ‘ಸಮತಾ ನಾಯಕ ಬಸವಣ್ಣ’, ‘ಹೊಸ ಬೆಳಕು’, ‘ಸತ್ಯ ಹುಡುಕಿದಾಗ’, ‘ನಡುಗನ್ನಡ ಕವಿ-ಕಾವ್ಯ’. ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ.
ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಡಿನಾಡು ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಮರಾಠವಾಡ ವಿಶ್ವವಿದ್ಯಾಲಯ ನಾಂದೇಡದ ಪಿ.ಎಚ್.ಡಿ ಮಾರ್ಗದರ್ಶಕರಾಗಿ, ಬೊರ್ಡ ಆಪ್ ನಾಂದೇಡ
ಶಿವಾಜಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ. ಮತ್ತು 6ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆ ಮಾಡಿ ಗೌರವಿಸಲಾಗಿದೆ.