Oplus_131072

ಮಹಾರಾಷ್ಟ್ರದಲ್ಲೊಂದು  ‘ಕನ್ನಡ’  ಹೆಸರಿನ ತಾಲೂಕು.

 

 

ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ.

 

ಹಳಷ್ಟು ಸಲ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಗಾಗ ಒಂದು ಪ್ರಶ್ನೆ ಕೇಳಲಾಗಿರುತ್ತದೆ . ಅದೇನೆಂದರೆ ‘ಕನ್ನಡ‘ ಎಂಬ ಹೆಸರಿನ ತಾಲೂಕು ಹೊಂದಿರುವ ರಾಜ್ಯ ಯಾವುದು ? ಅಂತ.

ಹೌದು. ಈ ‘ಕನ್ನಡ‘ ಎಂಬ ತಾಲೂಕು ಮಹಾರಾಷ್ಟ್ರ ರಾಜ್ಯದಲ್ಲಿದೆ ಅನ್ನೊದು ಬಹಳಷ್ಟು ವಿದ್ಯಾರ್ಥಿಗಳಿಗೆ ಗೊತ್ತಿಲ್ಲದೆ ಗೊಂದಲಗಿಡಾಗಿ ಉತ್ತರಿಸದೆ ಪ್ರಶ್ನೆಯನ್ನು ಬಿಟ್ಟು ಬಂದ ಬಹಳಷ್ಟು ಉದಾಹರಣೆಗೆಗಳಿವೆ.

ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್” ಎಂದು ಕವಿರಾಜಮಾರ್ಗದಲ್ಲಿ ಹೇಳಲಾಗಿದೆ. ಇದರರ್ಥ ಕಾವೇರಿಯಿಂದ ಗೋದಾವರಿ ಯವರೆಗೆ ನಮ್ಮ ನಾಡು ಕನ್ನಡ ನಾಡಾಗಿತ್ತು ಎಂದು ತಿಳಿದು ಬರುತ್ತದೆ.

ಕರ್ನಾಟಕದ ದಕ್ಷಿಣದ ತುದಿಯಲ್ಲಿರುವ ಕಾವೇರಿಯಿಂದ ಮಹಾರಾಷ್ಟ್ರದ ಉತ್ತರದ ತುದಿಯಲ್ಲಿರುವ ಗೋದಾವರಿವರೆಗೆ ಕನ್ನಡ ನಾಡಿನ ಈ ಗಡಿಗಳ ನಡುವೆ ಅಷ್ಟೂ ಭಾಗ ಕನ್ನಡ ನಾಡಾಗಿತ್ತು ಎಂದು ಹೇಳಲಾಗಿತ್ತು.

ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ಈ ‘ಕನ್ನಡ‘ ಎಂಬ ಹೆಸರಿನ ಒಂದು ಅಭಿವೃದ್ಧಿ ಹೊಂದಿದ ತಾಲೂಕು ಇದಾಗಿದೆ.

ಈ ತಾಲೂಕು ಕೇಂದ್ರಕ್ಕೆ ಹೋಗಬೇಕಾದರೆ ಔರಂಗಾಬಾದ್ ಜಿಲ್ಲೆಯಿಂದ ಸುಮಾರು 58 ಕೀ.ಮಿ.ದೂರದಲ್ಲಿದೆ. ಇದು ಎಲ್ಲೋರಾ ಮತ್ತು ಅಜಂತಾ ಗುಹೆಗಳು ಮತ್ತು ಗ್ರೀಷ್ಮೇಶ್ವರ ದೇವಸ್ಥಾನದಿಂದ 24 ಕಿ.ಮೀ ದೂರದ ಅಂತರದಲ್ಲಿದೆ. ಮತ್ತು ದೌಲತಾಬಾದ ಹಾಗೂ ದಿಯೋಗಿರಿ ಕೋಟೆಯಿಂದ 45 ಕೀ.ಮೀ.ದೂರದಲ್ಲಿದೆ.

ಈ ‘ಕನ್ನಡ‘  ತಾಲೂಕಿಗೆ ‘ಮೂರು ಬಾಗಿಲುಗಳ  ನಗರ ‘ ಎಂದು ಕೂಡ ಕರೆಯುತ್ತಾರೆ. ಈ ಮೂರು ಬಾಗಿಲುಗಳೆಂದರೆ ಒಂದು ಬಾಗಿಲು ಮಲಿವಾಡದಲ್ಲಿದೆ, ಎರಡನೇಯದು ಮಸೀದಿಯ ಮುಂದೆ ಇತ್ತು. ಮತ್ತು ಮೂರನೆಯದು ಲಭ್ಯವಿಲ್ಲ. ಆದರೆ ಸ್ಥಳೀಯರು ಅದು ಅಲ್ಲಿತ್ತು. ಇಲ್ಲಿತ್ತು ಎಂದು ಹೇಳುತ್ತಾರೆ.ಆದರೆ ಇನ್ನೂ ಯಾವುದೇ ಪುರಾವೆಗಳು ಕಂಡು ಬಂದಿಲ್ಲ.

ಈ ನಗರವನ್ನು ಹಿಂದಿನ ಕಾಲದ ಜನ ‘ಕಂಕವಟಿ‘ ಎಂದು ಕರೆಯುತ್ತಿದ್ದರೆಂದು ತಿಳಿದು ಬರುತ್ತದೆ. ಈ ‘ಕಂಕವಟಿ’ ಎಂಬ ಪದ ಮುಂದೆ ‘ಕನ್ನಡ್‘ ಪದವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.

 

ಬ್ರಿಟಿಷ್ ವಸಾಹತು ಶಾಹಿ ಸೇನೆಯು ಈ ಪ್ರದೇಶದ ಸುತ್ತಲೂ 1898 ರವರೆಗೆ ಅಸ್ತಿತ್ವದಲ್ಲಿತ್ತೆಂದು ತೋರುತ್ತದೆ.
ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತಿಹೆಚ್ಚು ಆಣೆಕಟ್ಟು ಹೊಂದಿರುವ ಪ್ರದೇಶವೇ ಈ ಕನ್ನಡ ತಾಲೂಕು. ಒಟ್ಟು 15 ಅಣೆಕಟ್ಟುಗಳು ಮತ್ತು 7 ಸರೋವರಗಳನ್ನು ಇದು ಹೊಂದಿದೆ. ಈ ತಾಲೂಕಿನಲ್ಲಿ 244 ಹಳ್ಳಿಗಳಿವೆ. ಮರಾಠಿಗರು ಈ ಕನ್ನಡ ತಾಲ್ಲೂಕಿಗೆ ‘ಪ್ರವೇಶ ದ್ವಾರ’ ಎಂದು ಕೂಡ ಕರೆಯುತ್ತಾರೆ.

ಪ್ರವೇಶ ದ್ವಾರ

ಮರಾಠವಾಡ ಮತ್ತು ಖಾಂಡೇಶ ಪ್ರದೇಶಕ್ಕೆ ‘ಪ್ರವೇಶ ದ್ವಾರ’ ವೆಂದು ಕರೆಯುತ್ತಾರೆ. ಈ ಪ್ರದೇಶ ಮರಾಠವಾಡ ಮತ್ತು ಖಾಂಡೇಶ ಎರಡು ಪ್ರದೇಶವನ್ನು ಒಳಗೊಂಡಿದೆ ಹಾಗಾಗಿ ಈ ತಾಲೂಕಿಗೆ ಹಾಗೆ ಕರೆಯುವುದು ರೂಢಿಗತವಾಗಿದೆ. ಈ ಕನ್ನಡ ತಾಲೂಕು ಔರಂಗಾಬಾದ್ ಜಿಲ್ಲೆಯಲ್ಲಿಯೇ ಹೆಚ್ಚು ಅಭಿವೃದ್ಧಿ ಹೊಂದಿದ ತಾಲೂಕಾಗಿದೆ.ಇಲ್ಲಿ ಅತಿ ದೊಡ್ಡ ಸಕ್ಕರೆ ಕಾರ್ಖಾನೆ ಬಾರಾಮತಿ ಅಗ್ರೋ ಲಿಮಿಟೆಡ್ ಅನ್ನು ಕೂಡ ಇದು ಹೊಂದಿದೆ.

ಈ ಕನ್ನಡ ತಾಲೂಕು ಕೇಂದ್ರವು ಔರಂಗಾಬಾದ್ ಲೋಕಸಭಾ ಮತ ಕ್ಷೇತ್ರಕ್ಕೆ ಒಳಪಟ್ಟಿದೆ ಮತ್ತು ಮಹಾರಾಷ್ಟ್ರ ರಾಜ್ಯದ ಒಂದು ವಿಧಾನ ಸಭಾ ಕ್ಷೇತ್ರವಾಗಿದೆ.

ಪ್ರೇಕ್ಷಣೀಯ ಸ್ಥಳಗಳು:

ಈ ಕನ್ನಡ ತಾಲೂಕಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ

ಪೀಟಲ್ಖೊರಾ ಗುಹೆಗಳು:

ಪೀಟಲ್ಖೊರಾ ಗುಹೆಗಳು:  ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಸತ್ಮಾಲಾ ಶ್ರೇಣಿಯಲ್ಲಿರುವ ಪಿಟಲ್ಖೋರಾ ಗುಹೆಗಳು 14 ಬಂಡೆಗಳ ಗುಹೆ ಸ್ಮಾರಕಗಳನ್ನು ಒಳಗೊಂಡಿರುವ ಪುರಾತನ ಬೌದ್ಧ ತಾಣವಾಗಿದೆ. ಇದು ಕ್ರಿಸ್ತ ಪೂರ್ವ 3ನೇ ಶತಮಾನದಷ್ಟು ಹಿಂದಿನದು ಇದು ರಾಕ್ -ಕಟ್ ನ ಗುಹೆಗಳು, ಈ ಗುಹೆಗಳು ಬಸ್ಮಾಲ್ ಬಂಡೆಗಳಲ್ಲಿ ಕೆತ್ತಲಾಗಿದೆ. ಆದರೆ ಕೆಲವು ಪುಡಿಪುಡಿಯಾಗಿ ಹಾಳಾಗಿವೆ. 14 ರಲ್ಲಿ ನಾಲ್ಕು ಚೈತ್ಯಗಳು ಮತ್ತು ಉಳಿದವು ವಿಹಾರಗಳಾಗಿವೆ. ಇವು ಎಲ್ಲಾ ಗುಹೆಗಳು ಆರಂಭಿಕ ಬೌದ್ಧ ಶಾಲೆಗಳ ಅವಧಿಗೆ ಸೇರಿವೆ. ಮತ್ತು ಸಮಂಜಸವಾಗಿ ರಕ್ಷಿಸಲ್ಪಟ್ಟ ವರ್ಣಚಿತ್ರಗಳು ಮಹಾಯಾನ ಕಾಲದವು ಎನ್ನಲಾಗಿದೆ. ಈ ಗುಹೆಗಳಲ್ಲಿ ಎರಡು ಗುಂಪುಗಳಿಗೆ 10 ಗುಹೆಗಳು ಮತ್ತು 4 ಗುಹೆಗಳು ಇಲ್ಲಿ ಪ್ಯೋಲೆಮಿಯ ಪೆಟ್ರಿಗಲಾ ಮತ್ತು ಮಹಾಮಯೂರಿಯ ಪಿತಾಂಗಲ್ಯ’ ಬೌದ್ಧ ವೃತ್ತಾಂತದೊಂದಿಗೆ ಗುರುತಿಸಬಹುದು ಎಂದು ನಂಬಲಾಗಿದೆ.

ಗೌತಲ ಔತ್ರಮ್ ಘಾಟ್:

ಗೌತಲ ಔತ್ರಮ್ ಘಾಟ್: ಅಭಯಾರಣ್ಯ, – ಸಂರಕ್ಷಿತ ವನ್ಯಜೀವಿ ಅಭಯಾರಣ್ಯವಾಗಿದೆ ಇದು 1986 ರಲ್ಲಿ ಸ್ಥಾಪಿಸಲಾಗಿದೆ.ಇದು 64399 ಎಕರೆ ಪ್ರದೇಶದಲ್ಲಿದೆ. ಇದು ಜಲಗಾಂವ ಸಮೀಪದ ಗೌತಲಾ ಎಂಬ ಗ್ರಾಮದ ಹತ್ತಿರವಿದೆ. ಈ ಗೌತಲಾ ಗ್ರಾಮದಲ್ಲಿ ಪುರಾತನದ ಹಿಂದೂ ತಪಸ್ವಿ ಗೌತಮ ಋಷಿಯ ಚರಿತ್ರೆ ಒಳಗೊಂಡಿದೆ ಎಂದು ರಾಮಚರಿತಮಾನಸದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಅನೇಕ ಪ್ರಾಣಿ ಸಸ್ತನಿಗಳು ಕಿಟಗಳು ವಿವಿಧ ಪಕ್ಷಿಗಳು ಇಲ್ಲಿ ವಾಸಿಸುತ್ತವೆ. ಈ ಅಭಯಾರಣ್ಯ ಪ್ರದೇಶದಲ್ಲಿ ಅನೇಕ ಪುರಾತನ ದೇವಾಲಯಗಳು ಗುಹೆಗಳು, ಜಲಪಾತಗಳು ಪ್ರಯಾಣಿಕರಿಗೆ ಆಕರ್ಷಿಸುತ್ತವೆ.

ಅಂತೂರ್ ಕೋಟೆ : ಇದು ಕನ್ನಡ ತಾಲ್ಲೂಕಿನ ನಾಗಪುರ ಗ್ರಾಮದ ಹತ್ತಿರ ಇರುವ ಕೋಟೆಯಾಗಿದೆ. ಈ ಕೋಟೆ 15 ಶತಮಾನದ ಮಧ್ಯಭಾಗದಲ್ಲಿ ಮರಾಠ ಕಿಲ್ಲೆದಾರ ಎಂಬ ಮರಾಠ ಮುಖ್ಯಸ್ಥರಿಂದ ನಿರ್ಮಿಸಲಾಗಿದೆ. ಇದು 16 ನೇ ಮತ್ತು 17 ಶತಮಾನದ ನಡುವೆ ಅಹ್ಮದ್ ನಗರದ ನಿಜಾಮ್ ಶಾಹಿಗೆ ಸೇರಿತ್ತು.ಇದರ ಮುಂಭಾಗದಲ್ಲಿ ಹಲವಾರ ಶಾಸನಗಳಿವೆ.

ಅಂಬಾಡಿ ಆಣೆಕಟ್ಟು.

ಅಂಬಾಡಿ ಆಣೆಕಟ್ಟು : ಈ ಆಣೆಕಟ್ಟು ಕನ್ನಡ ನಗರದ ಹತ್ತಿರವೇ ಇದೆ.ಇದು ಶಿವನ ನದಿಯ ಮೇಲೆ ಮಣ್ಣು ತುಂಬುವ ಆಣೆಕಟ್ಟು ಇದಾಗಿದೆ. ಇದು 66 ಅಡಿ ಎತ್ತರ ಮತ್ತು 7250 ಅಡಿ ಉದ್ದವಾಗಿದೆ.ಮತ್ತು
ಶಿವನ ತಕ್ಲಿ ಆಣೆಕಟ್ಟು,ಎಂಬ ಕನ್ನಡ ತಾಲೂಕಿನಲ್ಲಿ ದೊಡ್ಡ ಆಣೆಕಟ್ಟುಗಳಾಗಿವೆ.ಈ ಕನ್ನಡ ತಾಲೂಕಿನಲ್ಲಿ ಹೆಚ್ಚು ನೀರಾವರಿ ಪ್ರದೇಶಗಳಿಂದ ರೈತರು ಸಂಪನ್ನರಾಗಿದ್ದಾರೆ.

ಮಲ್ಹಾರಗಡ್ : ಇದು ಪುಣೆಯಿಂದ 30 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಭಾರತದ ಒಂದು ಬೆಟ್ಟದ ಕೋಟೆಯಾಗಿದೆ.ಸೋನೆರಿ ಗ್ರಾಮವು ಅದರ ತಳದಲ್ಲಿ ಇರುವುದರಿಂದ ಇದಕ್ಕೆ ಸೋನೆರಿ ಕೋಟೆ ಎಂದು ಕರೆಯುತ್ತಾರೆ. ಈ ಕೋಟೆ 1775 ರಲ್ಲಿ ಮರಾಠರು ನಿರ್ಮಿಸಿದರು.

ವೆಲ್ಹಾ ತಾಲ್ಲೂಕಿನ ಪುಣೆಯ ಪಶ್ಚಿಮ ಘಟ್ಟದಲ್ಲಿರುವ ಸಹ್ಯಾದ್ರಿ ಶ್ರೇಣಿಯು ವಿಭಜಿಸಲ್ಪಟ್ಟಿದೆ. ಮತ್ತು ರಾಜ್ ಗಡ್ ಮತ್ತು ತೋರ್ನಾ ಕೋಟೆಗಳು ಒಂದು ಶಾಖೆಯಲ್ಲಿ ಇದ್ದರೆ ಸಿಂಹಗಡ,ಪುರಂದರ, ವಜ್ರಗಡ ಮತ್ತು ಮಲ್ಹಾರಗಡ್ ಕೋಟೆಗಳು ಇನ್ನೊಂದು ಕಡೆ ಇವೆ. ಈ ಕೋಟಿ ಸುಸ್ಥಿತಿಯಲ್ಲಿದೆ ಇದರ ಅಕ್ಕ ಪಕ್ಕ ಎರಡು ದೇವಾಲಯಗಳಿವೆ ಅವೆ ಖಂಡೊಬಾ ಮತ್ತು ಮಹಾದೇವ ದೇವಾಲಯಗಳು. ಈ ಕೋಟೆಯ ಮೇಲಿನಿಂದ ನೋಡಿದಾಗ ಜೇಜೂರಿ ಮತ್ತು ಪಾರ್ವತಿ ಬೆಟ್ಟಗಳು ಕಾಣಬಹುದು. ಈ ಔತ್ರಮ್ ಘಾಟ ಅಂಚಿನಲ್ಲಿರುವ ಖಂಡೋಬಾ ದೇವಾಲಯ ಪ್ರೇಕ್ಷಣೀಯ ಸ್ಥಳವಾಗಿ ತುಂಬ ಪ್ರಸಿದ್ದಿ ಪಡೆದಿದೆ.

ಭೂಗೋಳಿಕ ಪ್ರದೇಶ:
ಈ ಕನ್ನಡ ತಾಲೂಕು ಸರಾಸರಿ 633 ಮೀಟರ್ ( 2076 ಅಡಿ) ಎತ್ತರವನ್ನು ಹೊಂದಿದೆ. ಮತ್ತು ಶಿವನಾ ನದಿಯ ಮೂಲವು ಕನ್ನಡ ತಾಲ್ಲೂಕಿನಿಂದ ಬಂದಿದೆ. ಮತ್ತು ಈ ನದಿ ಕನ್ನಡದಲ್ಲಿ ಹುಟ್ಟಿ ಜೈಕ್ವಾಡಿ ಆಣೆಕಟ್ಟಿನೆಡೆಗೆ ಹರಿಯುತ್ತದೆ.
ಕನ್ನಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ತೇಗ ಮತ್ತು ಶ್ರೀಗಂಧದ ಮರಗಳಿಗೆ. ಈ ನಗರವು ಹಿರ್ವಾಖೇಡ ಗೌತಲಾ,ಪಿಶೋರ್, ಬರ್ಹಿಗಾಂವ, ಚಾಪನೇರ್, ಅಂಧಾನೇರ್,ನಾಗಾಡ್,ಔರಾಲಾ,ಕುಂಜೈಢ್ ಕರಂಜೈಡಾ,ನಾಗಾಪುರ,ಚಿಕಲತಾನಾ,ಸೇರಿದಂತೆ ದೊಡ್ಡ ದೊಡ್ಡ ಹಳ್ಳಿಗಳಿಂದ ಕೂಡಿದೆ.

ಇಲ್ಲಿ ಕೃಷಿ ಆಧಾರ. ಕಬ್ಬು, ಈರುಳ್ಳಿ, ಶುಂಠಿ, ಗೋಧಿ, ಮೆಕ್ಕೆಜೋಳ, ಮತ್ತು ಜೋಳ ಬೆಳೆಯುತ್ತಾರೆ.
ಈ ‘ಕನ್ನಡ‘ ತಾಲೂಕು ಮುಂಬಯಿ ಮತ್ತು ನಾಗಪೂರ ರಾಜ್ಯ ಹೆದ್ದಾರಿ ಮೂಲಕ ಹಾದು ಹೋಗುತ್ತದೆ. ಧುಳೆ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 211 ಕನ್ನಡ ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ. ಈ ತಾಲ್ಲೂಕಿನಲ್ಲಿ ನವೋದಯ ವಿದ್ಯಾಲಯವು ಇದೆ.

 

ಜನಸಂಖ್ಯೆ: ಈ ಕನ್ನಡ ತಾಲ್ಲೂಕಿನ ಜನಸಂಖ್ಯೆಯು 2011 ರ ಜನಗಣತಿಯ ಪ್ರಕಾರ 4,50,000 ಜನ ಸಂಖ್ಯೆ ಇದೆ. ಕನ್ನಡ ನಗರದಲ್ಲಿ 40759 ರಷ್ಟು ಜನಸಂಖ್ಯೆ ಹೊಂದಿದೆ. ಈ ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ರಷ್ಟಿದ್ದಾರೆ. ಮತ್ತು ಈ ಕನ್ನಡ ತಾಲೂಕಿನಲ್ಲಿ 84.46 %ರಷ್ಟು ಸಾಕ್ಷರತೆ ಹೊಂದಿದೆ. ಇದು ಮಹಾರಾಷ್ಟ್ರ ರಾಜ್ಯದ ಸರಾಸರಿ 82.34 % ಗಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತೆ 90.44% ಮತ್ತು ಮಹಿಳೆಯರ ಸಾಕ್ಷರತೆ 78.07%. ರಷ್ಟು ಇದೆ. ಮತ್ತು ಕನ್ನಡ ನಗರದಲ್ಲಿ ಜನಸಂಖ್ಯೆಯ 15%. 6ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.ಮತ್ತು ಪರಿಶಿಷ್ಟ ಜಾತಿ (SC) 7.19% ರಷ್ಟಿದ್ದರೆ, ಪರಿಶಿಷ್ಟ ಪಂಗಡ (ST). ಕನ್ನಡದ ಒಟ್ಟು ಜನಸಂಖ್ಯೆಯ 3.78 ರಷ್ಟಿದೆ. ಇಲ್ಲಿ 80% ರಷ್ಟು ಹಿಂದೂಗಳು 16% ರಷ್ಟು ಮುಸ್ಲಿಂ ರು ಮತ್ತು 3% ರಷ್ಟು ಬೌದ್ಧ ಧರ್ಮದ ಜನರಿದ್ದಾರೆ.
ಈ ಕನ್ನಡ ತಾಲೂಕಿನಲ್ಲಿ ಮರಾಠಿ ಕನ್ನಡ ಹಿಂದಿ ಮಾತನಾಡುವ ಜನ ಇದ್ದಾರೆ.

 

ಈ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡ ಭಾಷೆ ಮಾತನಾಡುವವರೆಂದರೆ ಮರಾಠ ಜಾತಿಯವರು.
ಇಲ್ಲಿ ಇಂದಿಗೂ ಕನ್ನಡವನ್ನು ಮಾತೃಭಾಷೆಯಾಗಿ ಮಾತನಾಡುವ ಕನ್ನಡಿಗರಿದ್ದಾರೆ ಆದರೆ ಮರಾಠಿಯ ಪ್ರಭಾವದಿಂದ ಕನ್ನಡ ಭಾಷೆ ಹೊರರಾಜಗಳಲ್ಲಿ ಅದು ಈಗ ಈ ಮರಾಠವಾಡ ಪ್ರಾಂತ್ಯಗಳಲ್ಲಿ ನಸಿಶಿ ಹೋಗುತ್ತಿದೆ ಹಾಗಾಗಿ ಕರ್ನಾಟಕ ಸರ್ಕಾರ ಕನ್ನಡ ಮಾತನಾಡುವ ಹೊರನಾಡ ಕನ್ನಡಿಗರಿಗಾಗಿ ವೀಶೆಷ ಸೌಲಭ್ಯಗಳನ್ನು ನೀಡಿ ಕನ್ನಡ ನಾಡು ನುಡಿ ಮತ್ತು ಕನ್ನಡತನದ ಸಂಸ್ಕೃತಿಯನ್ನು ಉಳಿಸಿ ಬೇಳೆಸಬೇಕಾಗಿದೆ.

ಈ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಕನ್ನಡ ಎಂಬ ತಾಲೂಕು ವಿಶೇಷ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ ಅದರ ಉಳಿವಿನೊಂದಿಗೆ ಆ ತಾಲ್ಲೂಕಿನರುವ ಕನ್ನಡಿಗರ ಹಿತ ರಕ್ಷಣೆಯೊಂದಿಗೆ ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ನಾವು ನಿವೇಲ್ಲರೂ ಶ್ರಮಿಸಬೇಕಾಗಿದೆ.

ಮಚ್ಚೇಂದ್ರ ಪಿ ಅಣಕಲ್.ಕಲಬುರಗಿ

ಮೊಬೈಲ್- 6363042197

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ