Oplus_131072

ಮಹಿಳಾ ಸಾಕ್ಷರತೆ.

ಮಹಿಳಾ ಸಾಕ್ಷರತೆ ದೀಪವನ್ನು ಹಚ್ಚಿದವರು ಸಾವಿತ್ರಿ ಫುಲೇಯವರು. ಇವರಿಗೊಂದು ಹೃದಯಪೂರ್ವಕ ಧನ್ಯವಾದಗಳು ಎಲ್ಲ ಮಹಿಳಾ ಮನಗಳಿಂದ.
ಸಾಕ್ಷರತೆ ಅಗತ್ಯವಿದೆ ಪ್ರತಿಯೊಂದು ಹೆಣ್ಣು ಅಥವಾ ಗಂಡಿಗೂ. ಎಲ್ಲಾ ವಿದ್ಯೆಗಳಲ್ಲಿಯೂ ಅಕ್ಷರ ವಿದ್ಯೆಯು ಅತಿ ಮಹೋನ್ನತವಾದದ್ದು. ವಿದ್ಯೆದಾತ್ರಿ ದೇವತೆ ಸರಸ್ವತಿ ದೇವಿ, ಶಾರದಾ ಮಾತೆಯನ್ನು ಪ್ರತಿಪಾದಿಸುತ್ತಾ, ಆರಾಧಿಸುತ್ತಾ ವಿದ್ಯೆಯನ್ನು ಪಡೆಯುವುದು ಒಂದು ಪುಣ್ಯವೇ ಸರಿ.

ನಮ್ಮ ಮನೆಯಲ್ಲಾಗಲಿ ಅಥವಾ ಯಾವುದೇ ಕುಟುಂಬದಲ್ಲಿ ಸಾಕ್ಷರರು ಇರುವಂತೆ, ಅನಕ್ಷರಸ್ತರು ಇಬ್ಬರಾದರು ಇರುತ್ತಾರೆ. ಹಾಗೆ ನೋಡಲು ಹೋದರೆ ಸಾಕ್ಷರಸ್ಥರೇ ಓದಲಾರದವರ ಅವರ ಮುಂದೆ ಒಮ್ಮೆಮ್ಮೆ ಲೆಕ್ಕದಲ್ಲಿಯೂ ಅಥವಾ ಯಾವುದೆ ಮಾಹಿತಿಯನ್ನು ಕೊಡಲು ಕೊರತೆ ಕಾಣಬಹುದು.

ನಾವು ಓದಿದವರು ಬಾಯಿ ಲೆಕ್ಕ ಮಾಡಲು ಒಮ್ಮೊಮ್ಮೆ ಬರುವುದಿಲ್ಲ. ಪ್ರತಿಯೊಂದುಕ್ಕೂ ಪುಸ್ತಕ ಪೆನ್ನು ಹಿಡಿದು ಕೂಡುತ್ತೇವೆ ಆದರೆ ಓದದೆ ಇರುವವರು ಹಾಗೆಯೇ ಬಾಯಿಂದನೆ ಲೆಕ್ಕ ಹಾಕಿ ಉತ್ತರವನ್ನು ಹೇಳಿಬಿಡುತ್ತಾರೆ.

ಒಮ್ಮೊಮ್ಮೆ ಓದಿದವರು ಓದುದೇ ಇರುವವರಿಗೆ ಹೋಲಿಕೆ ಮಾಡಿದರೆ ಅವರಲ್ಲಿ ಇರ್ತಕಂತ ತಾಳ್ಮೆ ನಮ್ಮಲ್ಲಿ ಕುಂದು ಕೊರತೆ ಕಾಣುತ್ತದೆ.

ಇತ್ತೀಚಿನ ಪೀಳಿಗೆಯವರು ಒಂದು ಡಿಗ್ರಿ ಅಥವಾ ಏನಾದರೂ ಓದಿದರೆ ಅಥವಾ ಗ್ರಾಜುವೇಶನ್ ಮುಗಿಸಿದರೆ ನಾನು ಓದಿದ್ದೇನೆ ಎಂಬ ‘ಅಹಂ‘ ಎಂಬುದು ಮನಸ್ಸಿನಲ್ಲಿ ಬೇರೂರು ಬಿಟ್ಟಿದೆ.
ಏನಾದರೂ ಕುಟುಂಬದಲ್ಲಿ ತೊಂದರೆ ಆದರೆ ನಾನು ಓದಿದ್ದೇನೆ, ನಾನು ಒಂಟಿಯಾಗಿ ಬದುಕಬಲ್ಲೆ ಎಂಬ ‘ಅಹಂ‘ ಇಂದ ಈ ಮಾತನ್ನು ನುಡಿಯುವವರು ಇದ್ದಾರೆ.
ಈ ರೀತಿ ಒಂಟಿಯಾಗಿ ಬದುಕಲು ಸಮಾಜದಲ್ಲಿ ಅಸಾಧ್ಯವಾದ ಮಾತು.

ಸಾಕ್ಷರತೆ ಅನ್ನುವುದು ಕೇವಲ ಅಕ್ಷರ ಗಳಿಕೆ ಮಾತ್ರವಲ್ಲ, ಅದರಿಂದ ನಾವು ಹೇಗೆ ಬದುಕಬಲ್ಲೆವು ಮತ್ತು ನಾವು ಸಮಾಜವನ್ನು ಹೇಗೆ ಸುಧಾರಿಸ ಬಲ್ಲೆವು ? ಎಂಬುದು ಸಾಕ್ಷರತೆಯ ಮುಖ್ಯ ಉದ್ದೇಶವಾಗಿದೆ.

ಹಳ್ಳಿಗಳಲ್ಲಿ ಈಗಲೂ ಸಾಕ್ಷರತೆಯ ಪ್ರಮಾಣದಲ್ಲಿ ಅಥವಾ ಹೆಣ್ಣಿನ ಸಾಕ್ಷರತೆಯಲ್ಲಿ ನ್ಯೂನತೆಯನ್ನು ಕಾಣಬಹುದು. ಇಂದಿಗೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಾರೆ, ಹಳ್ಳಿಗಳಲ್ಲಿ ಅದಕ್ಕೆ ಕಾರಣ ಅವರ ಬಡತನ. ಸರ್ಕಾರ ಏನೇ ಸವಲತ್ತುಗಳನ್ನು ಒದಗಿಸಿದರು ಅವರ ಜೀವನಕ್ಕೆ ಅಥವಾ ದಿನದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ತಮ್ಮ ಹೆಣ್ಣು ಮಕ್ಕಳನ್ನು ಶಿಕ್ಷಣವನ್ನು ಕೊಡಿಸಲು ಹಿಂದೇಟು ಹಾಕುತ್ತಾರೆ.

ನಮ್ಮ ಕರ್ನಾಟಕದಲ್ಲಿ ಹೆಣ್ಣಿನ ಸಾಕ್ಷರತೆಯಲ್ಲಿ ಮುಂದಿನ ಪೀಳಿಗೆ ಎಲ್ಲಾದರೂ ಸಾಕ್ಷರತೆಯಲ್ಲಿ ಸಾಧಿಸಬೇಕೆಂಬುದು ಬಯಕೆ.
ಕೇರಳದಲ್ಲಿ ಹೇಗೆ ಸಾಕ್ಷರತೆಯಲ್ಲಿ ಹೆಣ್ಣಿನ ಪ್ರಮಾಣದಲ್ಲಿ ಹೆಚ್ಚಿದೆಯೋ ! ಅದೇ ರೀತಿ ಪ್ರತಿ ರಾಜ್ಯದಲ್ಲಿಯೂ ಹೆಣ್ಣಿನ ಸಾಕ್ಷರತೆಯಲ್ಲಿ ಅಂಕಿ ಅಂಶಗಳ ಮೇಲೆ ಇರಬೇಕೆಂಬುದು ನನ್ನ ಆಶಯ.

ಹೆಣ್ಣು ಮಗು ಒಂದು ಕಲಿತರೆ ಶಾಲೆಯೊಂದು’ ತೆರೆದಂತೆ ಎಂದು ತಿಳಿದವರು ಹೇಳಿದ್ದಾರೆ. ಹೆಣ್ಣಿನ ಸಾಕ್ಷರತೆಯನ್ನು ಹೆಚ್ಚಿಸಬೇಕು ಇದಕ್ಕೆ ಪ್ರತಿಯೊಬ್ಬ ಮನೆಯಲ್ಲಿ ಆ ಹಿರಿಯರು ತಪ್ಪದೆ ಶಾಲೆಗೆ ಕಳುಹಿಸಿ ಅವರನ್ನು ಸಾಕ್ಷರರನ್ನಾಗಿ ಮಾಡಬೇಕು.
ಓದದೇ ಜೀವನವನ್ನು ಸಾಗಿಸುವವರು ಇದ್ದಾರೆ ಓದಿದವರು ಕೂಡ ಜೀವನವನ್ನು ಸಾಗಿಸುತ್ತಿದ್ದಾರೆ.ಆದರೆ ಓದಿದವರು ತಮ್ಮ ಶಿಕ್ಷಣದಿಂದ ಎಲ್ಲಿಯಾದರೂ ಬದುಕು ಕಟ್ಟಬಲ್ಲವರು ಎಂಬುದು ಶಿಕ್ಷಣದಿಂದ ದೊರೆತ ಶಕ್ತಿ.

ಶಿಕ್ಷಣವೇ ಒಂದು ದೊಡ್ಡದಾದ ಶಕ್ತಿ ಅದು ಪ್ರತಿಯೊಂದು ಹೆಣ್ಣಿಗೂ ದೊರೆಯಲೇಬೇಕು.

ಸವಿತಾ ಮುದುಗಲ್ .
ಬಳ್ಳಾರಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ