ಶಾಲೆಯ ಮಗು.
ಶಾಲೆಯ ತೋಟದ ಅದ್ಭುತ ಹೂಗಳು; ಮಕ್ಕಳು
ಎಳೆ ಮನದಲ್ಲಿ ಕಳೆ ತಂದಿವೆ ಸುಂದರ ಚಿತ್ರಗಳು
ಹೊಸ ಹೂದೋಟವಾಗಲಿ ಮಕ್ಕಳ ಬಾಳು
ನನಸಾಗಲಿ ಸೊಗಸಾಗಲಿ ಕಂಡಂತ ಕನಸುಗಳು
ನಮಗದು ನೀತಿ ಜೀವನ ಜ್ಯೋತಿ ಹೊಸತನದಿ ಕೇಳು
ಎಳೆ ಮನದಲ್ಲಿ ಕಳೆತಂದಿವೆ ಹೊಸ ಚಿಗುರಲೆಗಳು.
ಮುಗ್ಧತೆ ಇದೆ ಮಕ್ಕಳ ಮನದಲ್ಲಿ ಕೆಸರಂತೆ,
ನಗುವೇ ತುಂಬಿರಲಿ ಹುಣ್ಣಿಮೆ ಬೆಳಕಂತೆ
ವಿನಯ ವಿರಲಿ ನಡೆ-ನುಡಿಯಲ್ಲಿ ತುಂಬಿದ ಹೂವಂತೆ
ಬಾಳಿನ ಸ್ಪೂರ್ತಿ, ತರಲಿದೆ ಕೀರ್ತಿ ಸೊಗಸಂತೆ.
ಮಕ್ಕಳಿಗದು ಶಿಕ್ಷಣ ಒಂದು ಕಲಿಕೆಯ ಸ್ವರೂಪ
ಒಂದೇ ತೋಟದ ಬಗೆ ಬಗೆ ಬಣ್ಣದ ಹೂಗಳ ರೂಪ
ಶಿಕ್ಷಣಕದು ಸಾಟಿಯಲ್ಲ ಬೇರೊಂದು ರೀತಿಯ ಬೆಲೆ ಶಿಕ್ಷಣದಿಂದಲೇ ಮಕ್ಕಳ ಜೀವನ ಅದ್ಭುತ ಶಿಲೆ.
ಭಾಗ್ಯಶ್ರೀ. 10ನೇ ತರಗತಿ ಸರ್ಕಾರಿ ಕನ್ಯ ಪ್ರೌಢಶಾಲೆ ಕಮಲಾಪುರ. ಜಿ.ಕಲಬುರಗಿ.
ನಮ್ಮೂರ ಶಾಲೆ
ಬನ್ನಿರಿ ಮಕ್ಕಳೆ ಬನ್ನಿ ನಮ್ಮೂರ ಶಾಲೆಗೆ
ಕನ್ನಡ ನಾಡಿನ ಗಂಧದ ಗೂಡಿದು ನಮ್ಮೂರ ಶಾಲೆ.
ಅಜ್ಞಾನವ ಅಳಿಸಿ ಸುಜ್ಞಾನವ ಬೆಳೆಸುವ ನಮ್ಮೂರ ಶಾಲೆ
ಶಿಸ್ತು ಸಂಸ್ಕೃತಿ ಕಲಿಸುವ ಈ ಶಾಲೆ
ಬದುಕಿನ ದಾರಿಗೆ ಬೆಳಕಾಗುವ ನಮ್ಮ ಈ ಶಾಲೆ
ಗೆಳೆಯರೊಡನೆ ಜೊತೆಗಾಡಿದ ಈ ಶಾಲೆ
ಬೀದವಿಲ್ಲದೆ ಭಾಗ್ಯವ ತೋರುವ ನಮ್ಮೂರ ಶಾಲೆ
ಧರ್ಮ ಕರ್ಮದ ತಪ್ಪು ತೀಡುವ ನಮ್ಮದು ಈ ಶಾಲೆ
–ಭಾಗ್ಯಲಕ್ಷ್ಮಿ . 10ನೇ ತರಗತಿ ಸರ್ಕಾರಿ ಕನ್ಯ ಪ್ರೌಢಶಾಲೆ ಕಮಲಾಪುರ. ಜಿ.ಕಲಬುರಗಿ