Oplus_131072

ಮನದ ಭಾರ ಇಳಿದಿದೆ.

ಏಕೋ ಏನೋ .. !
ಸ್ವಲ್ಪ ಭಾರ ಇಳಿದಂತಾಗಿದೆ.
ಹೇಗೋ ಏನೋ… !
ಇನ್ನೂ ಸ್ವಲ್ಪ ಭಾರ ಇಳಿಯುವಂತಾಗಿದೆ.

ನನ್ನ ಮಡುಗಟ್ಟಿದ ದುಃಖವೆಲ್ಲಾ ಮೋಡವಾದಂತಿದೆ .
ನನ್ನ ಹೆಪ್ಪುಗಟ್ಟಿದ ಕಣ್ಣೀರೆಲ್ಲ ಮೋಡದಲ್ಲಿ ಕೂತಂತಿದೆ.
ರಾತ್ರಿ ಯಾವುದೋ ! ಯಾಮದಲ್ಲಿ ಇವೆಲ್ಲವೂ ಮಳೆಯಾಗಿ ಸುರಿಯುವಂತಿದೆ.
ಸುರಿದೂ ಸುರಿದೂ ನನ್ನೀ ಮನವನ್ನು ಹಗುರಾಗಿಸುವಂತಿದೆ.

ಏಕೋ ಏನೋ .. !
ಸ್ವಲ್ಪ ಭಾರ ಇಳಿದಂತಾಗಿದೆ.
ಹೇಗೋ ಏನೋ…!
ಇನ್ನೂ ಸ್ವಲ್ಪ ಭಾರ ಇಳಿಯುವಂತಾಗಿದೆ.

ಕಣ್ಣ ಹನಿಯೊಂದಿಗೆ…!
ನಿನ್ನ ನೆನಪು ಬಂದಿದೆ.
ಸಣ್ಣ ದನಿಯೊಂದಿಗೆ….!
ನನ್ನ ಮನವ ಇರಿದಿದೆ.

ಎಂದೂ ಬರದ….!
ಎಂದೋ ಅಳಿದ ಆ ನೆನಪು….
ಎಲ್ಲೋ ಕುಳಿತ…. ಹೇಗೋ ! ಮರೆತ ಆ ನೆನಪು….
ಕಹಿ ನೀಡುವ….ಮನ ಕಾಡುವ…. ಆ ನೆನಪು….
ಅಳಲು ತೋಡುತ… ಆಳಲು ಬಂದಿದೆ ಆ ನೆನಪು.

ಕಣ್ಣ ಹನಿಯೊಂದಿಗೆ…!
ನಿನ್ನ ನೆನಪು ಬಂದಿದೆ.
ಸಣ್ಣ ದನಿಯೊಂದಿಗೆ….
ನನ್ನ ಮನವ ಇರಿದಿದೆ.

ಅನಿಲ್ ಕುಮಾರ್ ಎಂ ಎಸ್.
ಬೆಂಗಳೂರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ