ಮನದ ಮಾತನಲಿ ಪರಮಾತ್ಮ.
ಮನದ ಮಾತನಲಿ ಹೇಳ ಹೊರಟೆ ನಾ ಪರಮಾತ್ಮ ನಿನ್ನನು. ಮರೆಯಾದರು ಸದಾ ಮನದಲ್ಲಿರುವ ಪರಮಾತ್ಮ ನೀ ಇರುವಾಗ ನನ್ನ ಜೊತೆಯಲ್ಲಿ ಯಾರು ಬೇಡವೆನಿಸಿತು .
ನಿನ್ನಯ ನೆನಪಿನ ಬುತ್ತಿಯನು ಬಿಚ್ಚಿ ನೋಡಿದಾಗ ನನ್ನ ಮನದಲ್ಲಿ ನೂರಾರು ಕನಸುಗಳು ಕಣ್ಣುಮುಂದೆ ಬಂದಂತಾಯಿತು
ಕಣ್ಣೀನಲಿ ಒಂದು ಸಣ್ಣ ಹನಿಯು ಮುತ್ತಿನಂತೆ ಕೆಳಗೆ ಜಾರಿತು ನಿನ್ನ ನೋಡುತಾ
ನಿನ್ನ ನೆನಪುಗಳ ಸರಮಾಲೆಯನು ಹಾಳೆಯಲಿ ಬರೆಯುವಾಗ ಅದು ಲೇಖನಯು . ಪ್ರಬಂಧವು. ಕಥೆಯೊ.ಕವನವೋ ! ಒಂದು ಅರಿಯದೆ ಲೇಖನಿಯು ಹಾಗೆ ಬರೆಯುತ್ತಾ ಮುಂದೆ ಮುಂದೆ ಸಾಗಿತು
ಕೋಟಿ ಕನ್ನಡಿಗರ ಹೃದಯದ ಒಡೆಯ ನೀನು ಶತಮಾನಗಳು ಕಳೆದರೂ ಎಂದೆಂದಿಗೂ ಮರೆಯಲಾಗದ ಮಾಣಿಕ್ಯವು ನೀವು ಸದಾ ಆಕಾಶದಲ್ಲಿ ನಕ್ಷತ್ರಗಳ ನಾಡಿನಲ್ಲಿ ಧ್ರುವ ತಾರೆಯಂತೆ ಹೊಳೆಯುತ್ತಿರುವೆ ಪರಮಾತ್ಮ.
– ರಾಧಾ ಹನುಮಂತಪ್ಪ ಟಿ. ಹರಿಹರ