ಮಾನವ ಧರ್ಮ ಮೊಳಗಲಿ.
ಉರುಳಿ ಹೋಗಲಿ
ನಶಿಸಿ ಹೋಗಲಿ ಈ ಧರೆಗೆ
ಹೊರೆಯಾಗಿರುವ
ಈ ಧರ್ಮಗಳು, ಈ ಕರ್ಮಗಳು
ಮಣ್ಣಲ್ಲಿ ಮಣ್ಣಾಗಿ ಹೋಗಲಿ
ಅನಿಷ್ಟ , ಕನಿಷ್ಠ ಧರ್ಮಗಳು
ಜಾತಿ ಮತ ಕುಲ ಗೋತ್ರ ಎಣಿಸುತ್ತಾ
ನಾ ಹೆಚ್ಚು ನೀ ಹೆಚ್ಚು ಎಂದು ಮರೆಯುತ್ತಾ , ಮನುಷ್ಯರಲ್ಲಿ ವಿಷ ಬೀಜ ಬಿತ್ತುವ ಧರ್ಮಗಳು
ಈ ಧರೆಯಿಂದ ಮರೆಯಾಗಿ ಹೋಗಲಿ.
ಲವ್ ಜಿಹಾದ್ ಮಾಡುತ್ತಾ
ಲವ್ ಕೇಸರಿ ಮಾಡುತ್ತಾ
ಮತ್ತೊಂದು ಮಗದೊಂದು ಮಾಡುತ್ತಾ
ನಿಸರ್ಗದ ದೇವತೆಯಾಗಿರುವ
ಹೆಣ್ಣನ್ನು ನಿಕ್ಕಿಷ್ಟವಾಗಿ ಕಾಣುವ
ಈ ಧರ್ಮಗಳು ತೋಲಗಿ ಹೋಗಲಿ.
ದೇವರ ಹೆಸರಿನಲ್ಲಿ
ದ್ವೇಷ – ಅಸೂಹೆಗಳನ್ನು ಬಿತ್ತುತ್ತಾ
ಡೊಂಬರಾಟಗಳನ್ನಾಡುತ್ತಾ
ನಮ್ಮನ್ನ ಗುಲಾಮ ಮೂಢರಾಗಿ ಮಾಡಿರುವ ಈ ಧರ್ಮಗಳು
ನಮ್ಮಿಂದ ತೊಲಗಿ ಹೋಗಲಿ.
ಮಾನವ ಧರ್ಮದ ಜ್ಯೋತಿಯು
ಎಲ್ಲೇಡೆ ಮೋಳಗಲಿ.