Oplus_131072

ಮನುವಾದಿಗಳಿಗೆ ಕೆಲ ಪ್ರಶ್ನೆಗಳು.

ಜಿ.ಎಲ್.ನಾಗೇಶ.

ಭಾರತ ದೇಶ ನನ್ನ ತಾಯಿನಾಡು !
ಬುದ್ಧ, ಬಸವ ಅಂಬೇಡ್ಕರ್ ,ಸಾಹು, ಫುಲೆ,ಪೇರಿಯಾರ್, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹಾ ಪುರುಷರು-ಸಮಾಜ ಸುಧಾರಕರು ಹುಟ್ಟಿ ಬೆಳೆದ ಪುಣ್ಯ ಭೂಮಿ ನಮ್ಮದು ! ಬಹು ಶ್ರೀಮಂತಿಕೆಯ ತವರೂರು ಆಗಿದ್ದ ಈ ನಮ್ಮ ದೇಶ ಇವತ್ತು ಏನಾಗಿದೆ…?

ಭಾರತವು ಜಾತ್ಯಾತೀತ ರಾಷ್ಟ್ರ. ಇಲ್ಲಿ ಹಿಂದು, ಜೈನ, ಸಿಖ್, ಮುಸ್ಲಿಂ, ಕ್ರಿಸ್ತ, ಪಾರ್ಸಿ, ಲಿಂಗಾಯತ, ಹಾಗೂ ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ಜನ ವಾಸವಾ ಗಿದ್ದಾರೆ. ಅವರವರ ವೇಷ – ಭಾಷೆ, ರೀತಿ ನೀತಿ ಬೇರೆ ಬೇರೆಯಾಗಿದ್ದರೂ ಸಹ ನಾವೆಲ್ಲರೂ ಒಂದೇ ‘ ಎಂಬ ಏಕತೆ ಭಾವ ಅವರಲ್ಲಿದೆ . ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರ ಈ ಭಾರತ…! ಸಂಸ್ಕೃತ ಭಾಷೆ ಮತ್ತು ವೈದಿಕ ಸಾಹಿತ್ಯ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ “ಎಂದು ಇತಿಹಾಸದ ಪಾಠ ಹೇಳುತ್ತದೆ. ಇದೆಲ್ಲ ನಿಜವೇ ?

ಇಲ್ಲ.
ನಿಜ ಅಲ್ಲ ! ಬರೀ ಸುಳ್ಳು. ಇದೆಲ್ಲಾ ಪುಸ್ತಕದ ಬದನೆಕಾಯಿ. ತುಂಬ ಸತ್ಯ ಹೇಳಲು ನಾಚಿಕೆ ಉಂಟಾಗಿ, ಆತ್ಮವಂಚನೆ ಮಾಡಿಕೊಂಡು ಹೇಳುವ ಮಾತಿದು…! ಸತ್ಯ ಹೇಳಬೇಕು ಅಂದರೆ ಈ ದೇಶದ ಜನಕ್ಕೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋಲ್ಲ . ಇವರೂ ಉದ್ದಾರ ಆಗಲ್ಲ‌. ಬೇರೆಯವರಿಗೂ ಉದ್ದಾರ ಆಗಲು ಬಿಡಲ್ಲ. ದಿನ ಬೆಳಗಾದರೆ ಸಾಕು, ಜಾತಿ- ಧರ್ಮ, ಭಾಷೆ ಎಂದು ಕಿತ್ತಾಡುತ್ತಿರುತ್ತಾರೆ ಅನಾಗರಿಕ ಮೌಢ್ಯ ಜನರಿವರು.

ಈ ವೈದಿಕ ಸಾಹಿತ್ಯದಿಂದಲೇ ಮೂಢನಂಬಿಕೆ ಬೆಳೆದು ಕೆಲ ಜನರ ವ್ಯಕ್ತಿತ್ವ ಕುಂಠಿತಗೊಂಡಿದೆ”ಎಂದು ಹೇಳಿದರೆ ತಪ್ಪಾಗಲಾರದು. ಸ್ನೇಹಿತ ಬಂಧುಗಳೇ…!

“ಸಾಲಾ ಏಕ್ ಮಚ್ಚರ್  ಆದ್ಮಿ ಇಂನ್ಸಾನ್ಕೂ ಹಿಜಡಾ ಬನಾ ದೇತಾಹೈ !” ಹಿಂದಿ ಚಿತ್ರನಟ ನಾನಾ ಪಾಟೇಕರ್ ಡೈಲಾಗ್ ನಂತೆ ಒಬ್ಬ ಮನುವಾದಿ ಪುರಾಣಗಳು ಬರೆದು ಇಡೀ ದೇಶವನ್ನೇ ಹಾಳು ಮಾಡಿದ”ಎಂದು ಹೇಳಿದರೆ ತಪ್ಪಾಗಲಾರದು.

ಬಂಧುಗಳೇ…!
ಮಠ-ಮಂದಿರಗಳಲ್ಲಿ ಕುಳಿತು ದೇವರ ಹೆಸರು ಹೇಳುತ್ತಾ ಮಡಿ- ಮೈಲಿಗೆ ಎಂದು ಮೇಲು-ಕೀಳು, ವರ್ಣ-ಅಸ್ಪೃಶ್ಯತೆ ಆಚರಿಸುತ್ತಿರುವ ಮನುವಾದಿ ಜನರಿಗೆ ನನ್ನ ಕೆಲ ಪ್ರಶ್ನೆಗಳು-

೧. ಮಹಮ್ಮದ್ ಬಿನ್ ಖಾಸಿಂ ಮತ್ತು ಘಜ್ನಿ ಮಹಮ್ಮದರಂಥ ಮುಸ್ಲಿಮರು ಹತ್ತಾರು ಬಾರಿ ನಿಮ್ಮ ದೇವಾಲಯಗಳನ್ನು ಧ್ವಂಸಗೊಳಿಸಿ ಅಪಾರವಾದ ಸಂಪತ್ತನ್ನು ಲೂಟಿಮಾಡಿ ತಮ್ಮ ದೇಶಕ್ಕೆ ಹೊತ್ತೊ ಯ್ಯುವಾಗ, ಪರಮ ಶಕ್ತಿಯುಳ್ಳ ನಿಮ್ಮದೇವರಗಳು ಅವರನ್ನು ಯಾಕೆ ತಡೆಯಲಿಲ್ಲ ?

೨.ಅಲ್ಲಾವುದ್ದೀನ್ ಖಿಲ್ಜಿ ಅಂತಹವರು ನಿಮ್ಮ ಹುಟ್ಟಡಗಿಸಿ, ನಿಮ್ಮ ಹೆಂಡತಿ- ಮಕ್ಕಳನ್ನು ಬಲಾತ್ಕರಿಸಿ, ನಿಮ್ಮ ರಾಜ್ಯ ತಮ್ಮದಾಗಿಸಿಕೊಂಡಿರಲ್ಲ,ಆಗ ನಿಮ್ಮ ಪೌರುಷ ಎಲ್ಲಿ ಹೋಗಿತ್ತು ?

೩.ನಿಮ್ಮ ಪರಾಕ್ರಮ ಕೇವಲ ಶೂದ್ರ- ದಲಿತ ಜನರಿಗೆ ಮಾತ್ರ ಮೀಸಲಾಗಿತ್ತಾ-ಹೇಗೆ ?
ಥೂ…! ಧಿಕ್ಕಾರವಿರಲಿ ನಿಮ್ಮಂಥ ಜಾತಿವಾದಿಗಳಿಗೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ರವರು ಅಂದೇ ಮನುಸ್ಮೃತಿಯನ್ನು ಸುಟ್ಟು ಆಧುನಿಕ ಮನು ಎನಿಸಿಕೊಂಡು ಈ ದೇಶಕ್ಕೆ ಸಮಾನತೆಯ ಸಂವಿಧಾನ ಕೊಟ್ಟರು ಅದಕ್ಕೂ ವಿರೋಧ ಮಾಡ್ತಿರಾ‌ ?  ನಿಮಗೆ ಒಳ್ಳೆಯ ಬುದ್ದಿ ಬರುವುದಾದರೂ ಯಾವಾಗ ?

ಬಹುಜನ ಭಾರತೀಯರು ಜಾಗೃತಗೊಳ್ಳುವ ಕಾಲ ಸನಿಹವಾಗುತ್ತಿದೆ. ಇನ್ನೂ ಕಾಲ ಮಿಂಚಿಲ್ಲ . ಈಗಲಾದರೂ ಶೀಘ್ರದಲ್ಲಿಯೇ ಎಚ್ಚೆತ್ತುಕೊಂಡು ಠಕ್ಕ ನರಿಯಂತೆ ಬಾಳುವುದನ್ನು ನಿಲ್ಲಿಸಿ. ಒಳ್ಳೆ ಮನುಷ್ಯರಾಗಿ ಬಾಳಲು ಪ್ರಯತ್ನಿಸಿ. ದೇಶದಲ್ಲಿ ಕೋಮು ಗಲಭೆಗೆ ಕಾರಣರಾಗದೆ ಜಾತಿ ಧರ್ಮದ ಬೇಧ- ಭಾವ ಮಾಡದೇ ನಾವೆಲ್ಲರೂ ಒಂದೇ ನಾವೂ ಭಾರತೀಯರೆಂಬ ಅಭಿಮಾನದಿಂದ ಬಾಳಿ ಬದುಕಿ. ಎಲ್ಲರೊಂದಿಗೆ ಸ್ನೇಹ ಸಹೋದರತೆಯಿಂದ ಜೀವನ ಸಾಗಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

– ಜಿ.ಎಲ್.ನಾಗೇಶ.ಧನ್ನೂರ್ (ಆರ್) ಬಸವಕಲ್ಯಾಣ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ