Oplus_131072

ಮರಿಚಿಕೆ.

ನನಗೆ ನಾನೇ….ಅಂದುಕೊಂಡೆ.
ಆ ದೊಡ್ಡ ಆಲದ ಮರ.
ನನಗೆ ಒಂದಾಲ್ಲಾ…ಒಂದು ದಿನ…ಸಿಕ್ಕೆ ಸಿಗುತ್ತದೆ…ನಾನು ಆ ದೊಡ್ಡ ಆಲದ ಮರವನ್ನ ನೋಡೇ…ನೋಡುತ್ತೆನೆ.
ನೋಡಿ ಅದರ ಕೆಳಗೆ ಕುಳಿತು ನಾನೊಂದು ಭಾವಗೀತೆಯನ್ನ ಬರೆದೇ…ಬರಿಯುತ್ತೆನಂತ್ತ.ಆ ಗಿಡದ ನೆರಳೋಳಗ ಕುಳಿತುಕೊಂಡು ನನ್ನಾಸೆಯನ್ನು ನನಸು ಮಾಡಿಕೊಳ್ಳುತ್ತೆನಂತ್ತ….
ಆದರೇ…?
ಅದು ಆಗಿದ್ದೇ ಬೇರೆ…!
ನನ್ನ ಕೆಲಸದ ಮೇಲೆ ನಾನು ಬೇರೆ ಊರಿಗೆ ಹೋಗಿದ್ದಾಗ
ಆ ನನ್ನ ದೊಡ್ಡ ಆಲದ ಮರ ಈ ರಾಜಕಾರಣಿಗಳ ಹೊಲಸು ಕುತಂತ್ರದ ಬುದ್ಧಿಗೆ ಬಲಿಯಾಗಿ ಹೋಗಿತ್ತು…!
ನನ್ನೊಳಗಿರುವ ಆ ಭಾವಗೀತೆಯ ಬರೆಯುವ ಕನಸು ನನಗೆ ‘ಮರೀಚಿಕೆ’ ಯಾಗಿ ಉಳಿಯಿತು.
ಈಗ ನಾನು ಯಾರನ್ನ ಬೈಯಲಿ….?
ಯಾರನ್ನ ಹಳಿಯಲಿ…?
ಅಯ್ಯೋ ! ದೇವರೇ ….!!

ಕಳಕಪ್ಪ ಜಲ್ಲಿಗೇರಿ
ಹಿರೇವಡ್ಡಟ್ಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ