Oplus_131072

ಮಾಸಿದ ಹಾಸಿಗೆ

– ಎಸ್.ಎಂ.ಜನವಾಡಕರ್.ಬೀದರ

 

“ಗ್ರಾಮೀಣ ಪ್ರದೇಶದ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಅನಕ್ಷರಸ್ಥ ಬಡ ದಲಿತ ಕುಟುಂಬಗಳಿಗೆ ಸಾಹುಕಾರರು ಜೀತ ಪದ್ಧತಿಯಂತೆ ದುಡಿಸಿಕೊಳ್ಳುವುದು ಮತ್ತು ಅವರಿಗೆ ಸಾಲದ ಸುಳಿಯಲ್ಲಿ ಸಿಲುಕಿ ಶೋಷಣೆ ಮಾಡುತ್ತಾ ಬದುಕುವ ಗೌಡನ ದರ್ಪದ ಕತೆಯೇ ಈ ಮಾಸಿದ ಹಾಸಿಗೆ.”

 

ಅಧ್ಯಾಯ-1

ಜಂಬುದ್ವೀಪದ ದಕ್ಷಿಣ ತೊಪ್ಪಲು ಮಲೆಗಳ ಮಡಿಲಲ್ಲಿ
ಧರ್ಮಪುರಿಯು ಒಂದು ಚಿಕ್ಕ ಗ್ರಾಮವಾಗಿತ್ತು. ಕೇವಲ ನೂರರಿಂದ ನೂರೈವತ್ತು ಕುಟುಂಬಗಳು ಅಲ್ಲಿ ವಾಸವಾಗಿದ್ದವು. ಹಸುಗಳನ್ನು ಸಾಕಿ
ಹೈನುಗಾರಿಕೆ ಮಾಡುವುದು ಅವರ ಮುಖ್ಯ ಉದ್ಯೋಗವಾಗಿತ್ತು. ಪುರುಷರು, ಮಹಿಳೆಯರು ಕೃಷಿ ಕೆಲಸದಲ್ಲಿ ತೊಡಗಿದ್ದರು. ಹಲವು ಮಹಿಳೆಯರು ಹಾಲು ಹೋಗುವುದು ಅದರಿಂದ ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ
ಮುಂತಾದ ಆಹಾರ ಪದಾರ್ಥಗಳು ಸಿದ್ಧಪಡಿಸಿ ದೂರದ ನಗರಕ್ಕೆ ಕರೆ ಮಾಡುವ ದಿನಗಳು ಮಾರಿ ಬರುತ್ತವೆ. ಗ್ರಾಮದಲ್ಲಿ ಎಲ್ಲರೂ ಅನಕ್ಷರಸ್ಥರು. ಮಕ್ಕಳಿಗೆ ಓದಲು ಬರಹ ಕಲಿಸಲು ಶಾಲೆಯಲ್ಲಿ ಇರಲಿಲ್ಲ. ಆಸ್ತಿವಂತರ ಮಕ್ಕಳು ಗ್ರಾಮದಿಂದ ಮೂರು ಮೈಲಿ ದೂರದಲ್ಲಿರುವ ಸಿರಿಗಿರಿಗೆ ಹೋಗಿ ಕಲಿಯುತ್ತಿದ್ದರು. ಗ್ರಾಮಸ್ಥರು ಅನಕ್ಷರಸ್ಥರಿದ್ದರೂ ಪ್ರಮಾಣಿಕರು, ನೀತಿವಂತರು
ಆಗಿದ್ದರು. ಮೋಸ, ವಂಚನೆ ಗ್ರಾಮದಲ್ಲಿ ಕಾಣದ ವಿಷಯಗಳಾಗಿದ್ದವು.

‘ಕಾಯಕವೇ ತಮ್ಮ ಜೀವನದ ಗುರಿ’ ಎಂಬಂತೆ ಬಾಳು ಸಾಗಿಸಲು. ಗ್ರಾಮದಲ್ಲಿ ನಾಲ್ಕಾರು ಕುಟುಂಬಗಳು ಕಡು ಬಡತನದ ಉದಾಹರಣೆಗೆ ಹೇಳಿ ಮಾಡಿಸಿದಂತೆ ವಾಸವಾಗಿದ್ದವು. ಜಮೀನು, ಉದ್ಯೋಗವಿಲ್ಲದೆ

ಕೂಲಿ-ನಾಲಿ ಮಾಡಿಕೊಂಡು ಬಾಳ ಸಂಗಾತಿ, ಗಂಡಸರು, ಹೆಂಗಸರು ಎಲ್ಲರೂ ದುಡಿದು ಜೀವನ ಸಾಗಿಸುತ್ತಿದ್ದರು. ಅರೆಬಟ್ಟೆ, ಅರೆಹೊಟ್ಟೆ ಅವರ ಜೀವನದ ಪರಿಯಿತ್ತು. ಹುಲ್ಲಿನ ಗುಡಿಸಲುಗಳು ವಾಸಕ್ಕೆ ಯೋಗ್ಯವಲ್ಲದ.
ರೀತಿಯಲ್ಲಿದ್ದವು. ಬೇಸಿಗೆಯಲ್ಲಿ ಬೆಂಕಿಯ ಭೀತಿಯಿದ್ದರೆ,
ಧೋ ಧೋ ಎಂದು ಸುರಿಯುವ ಮಳೆಯಿಂದ ಆಸರೆ
ವಿಫಲವಾಗಿದೆ. ಗಾಳಿ, ಬಿಸಿಲು, ಮಳೆ, ಮಂಜು ಎಲ್ಲಕ್ಕೂ ಅವರ ಶರೀರದ ತೊಗಲಿನ ಹೊದಿಕೆಯೇ ಮುಖ್ಯವಾಗಿತ್ತು. ಬಿಸಿಲಿನಿಂದ ಬೆಂದು ಕಂದುಬಣ್ಣದ ಕರನೆಯ ಶರೀರಗಳು ಚಳಿಯಲ್ಲಿ ಗಡಗಡ ನಡುಗುವ ರೀತಿಯಲ್ಲೇ ಅವರ ಜೀವನ, ಮಳೆಗಾಲದಲ್ಲಂತೂ ಮನೆಯೆಲ್ಲ ಸೋರಿ,
ನೀರು ತುಂಬಿಕೊಂಡು ಬೆಚ್ಚನೆಯ ಜಾಗ ಇರುತ್ತಿತ್ತು.

ಮಲಗುವುದೆಂತು ಸಾಧ್ಯ ? ಧರ್ಮಪುರಿಯ ಶಾಂತಿ, ನೆಮ್ಮದಿ ಜೀವನದ ಮಡಿಲಲ್ಲಿಯೇ ಮುರುಕು-ಹರುಕು ಜೀವಿಗಳ ಬಾಳು ಅದಾಗಿತ್ತು. ಸಾಹುಕಾರ ಸಿದ್ಧರಾಮನನು ಧರ್ಮಪುರಿಯ ಪ್ರತಿಷ್ಠಿತ ವ್ಯಕ್ತಿಯಾಗಿದ್ದನು. ಎರಡು ಹಸುಗಳು ಹಾಗೂ ಮುವ್ವತ್ತು ಎಮ್ಮೆಗಳು ಸಾಕಿ
ಹೈನುಗಾರಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದನು. ಎಂಬತ್ತು ಕೂರಗಿ ಜಮೀನು ಹೊಂದಿದ್ದ ಸಿದ್ಧರಾಮಣ್ಣನು ಹಿರಿದಾದ ದೊಡ್ಡಿಯೊಂದಿಗೆ ಬೃಹತ್ ಮನೆ ಹೊಂದಿದ್ದನು. ಆಕಳು ಮತ್ತು ಎಮ್ಮೆಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಿದ್ದನು. ಮನೆಯಲ್ಲಿ ದನಕರುಗಳು ಕಾಯಲು,
ಮೇಯಿಸಲು, ಮೇವು ತರುವುದಕ್ಕಾಗಿ, ಹಾಲು, ಮೊಸರು, ತುಪ್ಪ ಮುಂತಾದವುಗಳ ನಗರಕ್ಕೆ ಕೊಂಡೊಯ್ದು ಮಾರಲು ಹತ್ತಾರು ಜನ ಆಳುಗಳಿದ್ದರು. ಪುರುಷರು, ಮಹಿಳೆಯರು ದುಡಿಯದವರು. ಕಸ ಗೂಡಿಸುವುದು, ಸಗಣಿ ಬಳಿಯುವುದು, ರಾಸುಗಳ ಮೈ ತೊಳೆಯುವುದು ಮುಂತಾದ ಕೆಲಸ ಕೂಲಿಯವರು ಮಾಡುತ್ತಾರೆ. ಸಿದ್ದರಾಮಣ್ಣನು ಜಮಿನ್ದಾರಿಕೆಯೊಂದಿಗೆ ಹೈನು ವ್ಯಾಪಾರದ ಧೀಮಂತ ವ್ಯಕ್ತಿಯಾಗಿದ್ದನು. ಧರ್ಮಾಪೂರಿದೆ ಸಿದ್ಧರಾಮಣ್ಣನು ಹಾಕಿದ ಗೆರೆ ದಾಟುವಂತಿರಲಿಲ್ಲ. ಅವನು ಹೇಳಿದ್ದು ಕಾನೂನು ನುಡಿದಿದ್ದೆ. ನ್ಯಾಯ, ಅವನ ವಿರುದ್ಧ ಯಾರೂ ಚಕಾರ ಎತ್ತಲಿಲ್ಲ.

ಸಿದ್ಧರಾಮಣ್ಣನಿಗೆ ದರ್ಪದ
ಶ್ರೀಮಂತಿಕೆಯ ದೋಣಿಯಲ್ಲಿ ಕುಳಿತು, ಅನೀತಿ, ಜೀವನದ ರಾಡಿನೀರಿನ ಮೇಲೆ ಏರುತ್ತಿದ್ದನು. ಬಡವರ ಬಗ್ಗೆ ಕಾಳಜಿಯಾಗಲಿ, ಅನುಕಂಪ ನಾಗಲಿ ಅವನ ಹತ್ತಿರ ಸುಳಿದಿರಲಿಲ್ಲ. ಶುಭ್ರವಾದ ಅಂಚು ಪಂಚೆ,
ಬಾರಾಬಂದಿ ಅಂಗಿ ತಲೆಗೆ ಬಣ್ಣದ ರುಮಾಲು, ಧರಿಸುತ್ತಿದ್ದನು ಉದ್ಧವಾದ ಮೀಸೆಯೊಂದಿಗೆ ಗಂಭೀರ ಮುಖ ಹೊಂದಿದ್ದನು ಕೈಯಲ್ಲಿ ಬಿದಿರು ಕೋಲು ಹಿಡಿದು ದರ್ಪದ ಠೀವಿಯಿಂದ ಮದಗಜದಂತೆ ನಡೆಯುವ ಸಿದ್ಧರಾಮಣ್ಣನನ್ನು ಕಂಡರೆ ಗ್ರಾಮ ನಡುಗುತ್ತಿತ್ತು.

ಧರ್ಮಾಮರಿಯ ಸೂರು ಕಾಣದ ಹತ್ತಾರು ಬಡ ಕುಟುಂಬಗಳು ಹೊಟ್ಟೆ ಪಾಡಿಗಾಗಿ ಅಲೆಯುತ್ತಾ ಹೊರಡುವವುಗಳಿಂದ ಬಂದು ಅಲ್ಲಿ ನೆಲೆಸಿದ್ದವು. ಧರ್ಮಪುರಿಯ ಮೂಲ ನಿವಾಸಿಗಳಿಗೆ ಆ ಹೊರ ಕುಟುಂಬಗಳಿಗೆ ಮಾತ್ರ ಕೂಲಿಗಾಗಿ ವ್ಯವಹಾರವಿತ್ತು
. ಸಾಮಾಜಿಕ, ಸಾಂಸ್ಕೃತಿಕ ಸಂಬಂಧ ಹೇಳಿಕೊಳ್ಳುವಷ್ಟು ಇರಲಿಲ್ಲ. ಆದಾಗ್ಯೂ ಪ್ರಸಂಗಕ್ಕನುಸಾರವಾಗಿ ಕೂಲಿಯ ಆಳುಗಳ
ಪಾತ್ರದಲ್ಲಿ ಮಾತ್ರ ಗ್ರಾಮಸ್ಥರೊಂದಿಗೆ ಸಂಬಂಧವಿತ್ತು.

ವೆಂಕಟಗಿರಿ ಗ್ರಾಮದ ಅಲೆಮಾರಿಯಾಗಿ ಬಂದ
ಕುಟುಂಬಗಳಿಗೆ ಸೋಮಪ್ಪ ಮುಖ್ಯಸ್ಥನಾಗಿದ್ದನು. ಸೋಮಪ್ಪನು ಸುಮಾರು ಐವತ್ತರ ಹರೆಯದವನು, ಅವನಿಗೆ ಇಬ್ಬರು ಗಂಡು ಮಕ್ಕಳು ಮತ್ತು ಎರಡು ಜನ ಹೆಣ್ಣು ಮಕ್ಕಳಿದ್ದರು. ಎಲ್ಲಾ ಕುಟುಂಬದವರು ಸೋದರ ಸಂಬಂಧಿಗಳಾಗಿದ್ದರು. ಎಲ್ಲರೂ ಧರ್ಮಪುರಿಯ ಸಿದ್ಧರಾಮಣ್ಣನಲ್ಲಿ ಆಳಾಗಿ ದುಡಿಯುತ್ತಿದ್ದರು. ಮುಂಜಾವಿನಿಂದ ಸಂಜೆಯವರೆಗೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆಯಲ್ಲಿಯೂ ದನಕರುಗಳಿಗೆ ಮೇವು ಹಾಕಿ, ಅವುಗಳ ರಕ್ಷಣೆ ಮಾಡುವುದು ಅವರ ಜವಾಬ್ದಾರಿಯಾಗಿತ್ತು, ಸೋಮಪ್ಪ ಮತ್ತು ಅವನ ಎಲ್ಲ ಸೋದರ ಸಂಬಂಧಿಗಳು, ಮಹಿಳೆಯರು ಕಠಿಣವಾಗಿ ಕೆಲಸ ಮಾಡಬೇಕಾಗಿತ್ತು. ಕೆಲವು ಹಸುಗಳ ಪಾಲನೆಯಲ್ಲಿದ್ದಾರೆ ಇನ್ನೂ ಕೆಲಸ ನಿರ್ವಹಿಸುತ್ತಿದ್ದಾರೆ

ಸಿದ್ಧರಾಮಣ್ಣನು ತನ್ನ ಮುಖ್ಯ ಉದ್ಯೋಗವನ್ನು ಕೆಂಪುಗಲ್ಲಿನ ಗಣಿಯ ಗುತ್ತಿಗೆಯನ್ನು ಹೊಂದಿದ್ದನು. ಜನರಿಗೆ ಗಣಿಯಿಂದ ಕಲ್ಲುಗಳು ಸರಬರಾಜು ಮಾಡುವುದು ಅವನ ಕೆಲಸವಾಗಿತ್ತು. ಆ ಬಡ ಕುಟುಂಬಗಳಲ್ಲಿ ಗಣಿಗಾರಿಕೆಯಲ್ಲಿ ತೊಡಗಿದ್ದರು. ಅವರು ಹಗಲಿರುಳು ಗಣಿ ಪ್ರದೇಶದಲ್ಲಿ ವಾಸಿಸುವ ಸಿದ್ಧರಾಮಣ್ಣ ಆ ಕೂಲಿ ಕೆಲಸ ಮಾಡುವವರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಅಡಗಿಹೋಗಿತ್ತು. ಅವನು ಹೇಳಿದಷ್ಟು ಮಾಡಬೇಕು. ನೀಡಿದಷ್ಟು ಉಣ್ಣಬೇಕು. ತಪ್ಪಾಗಿ ಯಾವುದೇ ವಿಷಯದಲ್ಲಿ ಮುಂದುವರಿದು ಮಾತಾಡಿದರೆ

ಹೊಡೆತಗಳಿಗೆ ಸಿದ್ಧರಾಮಣ್ಣ ಹಿಂಜರಿಯುತ್ತಾರೆ. ವೆಂಕಟಗಿರಿಯಿಂದ ವಲಸೆ ಬಂದ ಆ ಬಡವರ ಬಾಳು ‘ಹಾಳು ಬಾವಿಯಲ್ಲಿನ ಆಹಾರದ ಕೊರತೆಯ ಕಪೆಗಳಿಗೆ ಸಮವಾಗಿತ್ತು.

ಸಿದ್ಧರಾಮನು ಸಿರಿಗಿರಿಯ ಪ್ರತಿತ ಮನೆತನದ ‘ಶಿವಣ್ಣನವರ
ಪುತ್ರಿ ಸುಶೀಲಮ್ಮಳನ್ನು ತನ್ನ ಇಪ್ಪತ್ತರ ವಯಸ್ಸಿನಲ್ಲಿಯೇ ಮದುವೆಯಾದನು . ಹೆಸರಿಗೆ ತಕ್ಕಂತೆ ಶೀಲವಂತೆಯಾದ ಸುಶೀಲಮ್ಮಳು ಉತ್ತಮ ಗೃಹಿಣಿಯಾಗಿದ್ದಳು. ಸಿದ್ಧರಾಮಣ್ಣನಿಗೆ ಮೂರು ಜನ ಗಂಡು ಮಕ್ಕಳು,
ಪುತ್ರಿ ಇದ್ದಳು. ಪುತ್ರಿ ಜಯಲಕ್ಷ್ಮೀಯನ್ನು ಸ್ಥಿತಿವಂತ ಮನೆಗೆ
ಮದುವೆ ಮಾಡಿಕೊಟ್ಟಿದ್ದನು. ಜಯಲಕ್ಷ್ಮೀ ತನ್ನ ಪತಿಯ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಳು.
ಸಿದ್ಧರಾಮಣ್ಣನ ಹಿರಿಯ ಮಗ ಸುರೇಂದ್ರನು ಜಮೀನಿನ ಕಾರ್ಯವನ್ನು ನೋಡಿಕೊಳ್ಳುತ್ತಿದ್ದನು. ಎರಡನೇ ಮಗ ಪುಟ್ಟರಾಜ ತಂದೆ ನಡೆಸುತ್ತಿದ್ದ ಗಣಿ ಉದ್ಯೋಗ ನೋಡಿಕೊಳ್ಳುತ್ತಿದ್ದನು. ಕಿರಿಯ ಮಗ ಗೋಪಾಲ
ಮನೆಯ ಹೈನುಗಾರಿಕೆಯ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಧರ್ಮಪುರಿಯಲ್ಲಿ ಶಾಲೆಯ ವ್ಯವಸ್ಥೆ ಇರಲಿಲ್ಲ. ಆದರೂ ಸಿದ್ಧರಾಮಣ್ಣನು ತನ್ನ ಯಾವ ಮಕ್ಕಳಿಗೂ ದೂರದ ಶಾಲೆಯ ಸೌಲಭ್ಯವಿದ್ದ ಗ್ರಾಮಕ್ಕೆ
ಓದು-ಬರಹ ಕಲಿಸಲಿಲ್ಲ. ಇದರಲ್ಲಿ ಎಲ್ಲರೂ
ಅನಕ್ಷರಸ್ಥರಾಗಿದ್ದಾರೆ. ಎಲ್ಲ ಮಕ್ಕಳಿಗೆ ವಯಸ್ಸಿಗನುಗುಣವಾಗಿ ಮದುವೆ ಮಾಡಿ ತನ್ನ ಜವಾಬ್ದಾರಿ ಕಡಿಮೆ ಮಾಡಿಕೊಂಡಿದ್ದನು. ಎಲ್ಲರು ತಮ್ಮ
ಹೊಟ್ಟೆ ಪಾಡಿನ ಉದ್ಯೋಗದಲ್ಲಿ ತೊಡಗಿದ್ದರು.
ಕಳುಹಿಸಿ ಸುಮಾರು ಎರಡು ವರ್ಷಗಳ ಹಿಂದೆ ಭಯಂಕರ
ಸಾಂಕ್ರಾಮಿಕ ರೋಗ ಹರಡಿತ್ತು. ಧರ್ಮಪುರಿಯ ಎಲ್ಲಾ ಜನರು ತತ್ತರಿಸಿ ಹೋಗಿದ್ದರು. ವೈದ್ಯಕೀಯ ಸೌಲಭ್ಯವಿಲ್ಲದ ಆ ಕಾಲದಲ್ಲಿ ರೋಗವು ತೀವ್ರತೆ ಪಡೆದು ಅನೇಕ ಜನರನ್ನು ಬಲಿತೆಗೆದುಕೊಂಡಿತು. ಆ ರೋಗದಲ್ಲಿ ಸುಶೀಲಮ್ಮಳು ಸಿಲುಕಿ, ರೋಗಪೀಡಿತಳಾಗಿ ಗುಣಮುಖವಾಗದೆ ನರಳುತ್ತ
ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದಳು, ನಿವಾರಣೆಯ ಬಗ್ಗೆ ಯಾವುದೇ ಬಲದಿಂದ ರೋಗ ತನ್ನಷ್ಟಕ್ಕೆ ತಾನೆ ಸಿದ್ಧರಾಮಣ್ಣ ತನ್ನ ಪತ್ನಿಯ ಕಾಳಜಿ ವಹಿಸಿರಲಿಲ್ಲ. ದೈವ ಬಲದಿಂದ ರೋಗ ತನ್ನಷ್ಟಕ್ಕೆ ತಾನೇ
ನಿವಾರಣೆಯಾಗಿದೆ ಎಂದು ನಂಬಿದ್ದನು. ಸಿದ್ದರಾಮಣ್ಣನ ಬದುಕು ಬಿಗುವಿನಿಂದ ಕ್ಷೇಮವಾಗಿ
ಸಾಗಿತ್ತು. ಕೈ ತುಂಬ ಗಳಿಕೆಯಿದ್ದರೂ ಮನೆ ತುಂಬವೂ ಇತ್ತು.

ಸೋಮಪ್ಪನ ಇಬ್ಬರು ಗಂಡು ಮಕ್ಕಳಾದ ಭೀಮಣ್ಣ ಮತ್ತು
ಶಿವಣ್ಣರನ್ನು ಗಣಿ ಕೆಲಸದಲ್ಲಿ ತೊಡಗಿಸಲಾಯಿತು. ಪುಟ್ಟರಾಜ ಗಣಿ ಕೆಲಸದ ಮೇಲುಸ್ತುವಾರಿಯನ್ನು ಮಾಡುತ್ತಿದ್ದನು. ಹಗಲು ರಾತ್ರಿ ಭೀಮಣ್ಣ ಮತ್ತು
ಶಿವಣ್ಣರು ಗಣಿ ಪ್ರದೇಶದಲ್ಲಿ ವಾಸಿಸಬೇಕಾಗಿತ್ತು. ಅವರನ್ನು ದಿನವಿಡಿ ದುಡಿಯಲು ಹೇಳಿ ಬಿಡುವಿಲ್ಲದ
ಕೆಲಸ ಮಾಡಲು ಹೇಳುತ್ತಿದ್ದನು.

ಗೌಡ ತನ್ನ ಅಹಂಕಾರ, ದರ್ಪ,ಮತ್ತು ಅಚ್ಚುಕಟ್ಟಾಗಿ ತನ್ನ ಕುಟುಂಬದ ಕಡೆಗೆ ಕಾಳಜಿ ವಹಿಸದೆ ಹೆಂಡತಿಯನ್ನು ಕಳೆದುಕೊಂಡ. ಆದರೂ ಅವನ ಸೊಕ್ಕು ಧಿಮಾಕು ಕಡಿಮೆಯಾಗದೇ ಅವನ ಮಕ್ಕಳು ಸಂಸ್ಕಾರವಿಲ್ಲದೆ ವ್ಯಸನಕಾರರಾಗಿ, ವ್ಯಭಿಚಾರಿಗಳಾಗಿ ದಾರಿ ತಪ್ಪಿರುವುದು ಗೌಡನಿಗೆ ಒಳಗೊಳಗೆ ಚಿಂತೆ ಕಾಡತೊಡಗಿತು.

ಸಿದ್ಧರಾಮಣ್ಣ ಪದೇ ಪದೇ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಮಿತಿ ಮೀರಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದನು. ಅವರ ಮೈಗೆ ಅರಿವಿಲ್ಲ, ಹೊಟ್ಟೆಗೆ ಅನ್ನವಿಲ್ಲದೆ ಶ್ರಮಪಡುವಂತೆ. ಬೇಸತ್ತು ಎಲ್ಲಿಯೂ ಹೋಗಬಾರದೆಂದು ಜೀತದ ಮಾದರಿಯಲ್ಲಿ ಅಪ್ಪಣೆಯಿತ್ತು ದುಡಿಸಿಕೊಳ್ಳುತ್ತಿದ್ದನು. ಗಣಿಯಿಂದ ಕಲ್ಲು ತೆಗೆದು ಸಾಗಿಸಿದರೆ ಅವರಿಗೆ ಊಟ ಕೊಡುವುದು; ಗಿರಾಕಿಗಳು ಕಲ್ಲು ತೆಗೆದುಕೊಳ್ಳದಿದ್ದರೆ ಹೊಟ್ಟೆಗೆ ಊಟ ಕೊಡುತ್ತಿದ್ದನು. ಕಲ್ಲು ಮಾರಿದರೆ ಹಣ ಬರುತ್ತದೆ. ಮಾರದಿದ್ದರೆ ಎಲ್ಲಿಂದ ಊಟ ನೀಡುವುದು ? ಎಂದು ಪೀಡಿಸುತ್ತಿದ್ದನು. ಭೀಮಣ್ಣ ಮತ್ತು ಶಿವಣ್ಣನವರು ಬಾಯಿಯಿದ್ದು ಮೂಕರಾಗಿದ್ದರು. ಮರು ಪ್ರಶ್ನೆಗಳಂತು ಇಲ್ಲವೇ ಇಲ್ಲ. ಹೇಳಿದಷ್ಟು ಕೇಳುವುದು, ನೀಡಿದಷ್ಟು ಉಣ್ಣುವುದು ಅವರ ಬಾಳಿನ ಪಾಲಾಯಿತು. ಸೊರಗಿ ಸೊಪ್ಪೆಯಾದ ಆ ಎರಡು ಶರೀರಗಳು ಕಬ್ಬಿಣ ಸಲಾಕೆಯ ಪಂಜರದಂತೆ, ಭಾಸವಾಗುತ್ತಿದ್ದವು. ಕನಿಕರವ ಪುಟ್ಟರಾಜನಲ್ಲಾಗಲಿ,ಸಿದ್ಧರಾಮಣ್ಣನಲ್ಲಾಗಲಿ ಇರಲಿಲ್ಲ. ಬಡವರ ಮೇಲೆ ಕೋಪಿಸಿಕೊಳ್ಳುವುದೇ ಸಿದ್ಧರಾಮಣ್ಣನಿಗೆ ಇತ್ತು.

ಮನ ಮೈಗೆ ಬಿಡದೆ ಕೆಲಸದಲ್ಲಿ ತೊಡಗಿಸಿಕೊಂಡು,
ನಿತ್ತಾಣರಾಗಿ ತಪ್ಪದೆ ಉರಿ ಬಿಸಿಲಿನಲ್ಲಿ ಇಬ್ಬರು
ದುಡಿಯುತ್ತಾರೆ. ಅವರ ದುಡಿತದಿಂದ ತೃಪ್ತಿಯಾಗದ ಸಿದ್ಧರಾಮಣ್ಣ ಎಷ್ಟೋ ಸಲ ಅವರ ಮೈ ಮೇಲೆ ಬಾಸುಂಡೆಗಳು ಎಳೆದನು. ಹೆಗಲಿಗೆ ಹೆಗಲು ಕೊಟ್ಟು ನಡೆಯುವಂತಾಯಿತು ಅವರ ಜೀವನ, ತಂದೆ ಸೋಮಪ್ಪ
ಮತ್ತು ಅವನ ಉಳಿದ ಕುಟುಂಬದವರು ಹೈನುಗಾರಿಕೆಯಲ್ಲಿ ಹಗಲಿರುಳು ದುಡಿದರೂ ಬೈಗುಳ ತಪ್ಪಿಸಿಕೊಂಡ. ಎಷ್ಟೋ ಸಲ ಮೇಲೇರಿ ಹಾಯ್ದದ್ದು ಉದಾಹರಣೆಗಳಿಗೆ ಕೊರತೆಯಿರಲಿಲ್ಲ. ಸೋಮಪ್ಪನು ಅಲ್ಲಿಂದ ಬಿಟ್ಟು ತೊಲಗಲು, ಕದಲಲು ಬಾರದ ಪರಿಸ್ಥಿತಿಯುಂಟಾಗಿತ್ತು. ಬಾಯಿ ಬಿಟ್ಟರೆ ಬೈಗಳು, ಹೊಡೆತಗಳು, ಪ್ರತಿವರ್ಷ ನೀಡುತ್ತಿದ್ದ ಪಗಾರ ಮುಂದಿನ ವರ್ಷದ ಪಗಾರದಲ್ಲಿ ಸಿಗುವುದಿಲ್ಲ

ಮುಂಗಡವಾಗಿ ಹಣ ಸಾಲದಲ್ಲಿ ದುಡಿಯುತ್ತಿದ್ದ
ಸೋಮಪ್ಪನ ಕುಟುಂಬ, ಅಲ್ಲಿಂದ ಬಿಡಲು ಸಾಧ್ಯವಿಲ್ಲ. ಹಳೆಯ ಸಾಲ ತೀರಿಸಲು ಆಗದು. ಬೇರೆಡೆ ದುಡಿದು ತರಲು ಅವಕಾಶವಿಲ್ಲ. ಅನಿವಾರ್ಯವಾಗಿ ಜೀವನ ನಡೆಸುವ ಪ್ರಸಂಗ ಮುಂದುವರಿಯಿತು. ‘ಸಾಲವೇ ಶೂಲ’ ಎಂಬಂತೆ ಸೋಮಪ್ಪನಿಗೆ ಶೂಲದ ಸ್ಥಿತಿ ಆ ಸಾಲ ತಂದೊಡ್ಡಿತು.

ಸೋಮಪ್ಪನಿಗೆ ಆ ಪರಿಸ್ಥಿತಿಯಿಂದ ಹೊರ ಬರಲು ಅಸಾಧ್ಯವಾಯಿತು. ಹಳೆಯ ಸಾಲ ತೀರಿಸಲು ದುಡಿಯುವಾಗ, ಹೊಸ ಸಾಲ ತರುವುದು ಅನಿವಾರ್ಯವಾಗಿರಲಿಲ್ಲ. ಸೋಮಪ್ಪನು ಕಾಲ ಹಣೆ ಮೇಲೆ ಕೈಯಿಟ್ಟು ಚಿಂತೆಗೀಡಾಗಿ ಆಹಾರ, ನೀರು ಇಲ್ಲದ ಕಣ್ಣೀರಿಡುತ್ತ ಕುಳಿತುಕೊಳ್ಳುತ್ತಿದ್ದನು. ಪಶುಗಳ ಪಾಲನೆಯಲ್ಲಿ ತೊಡಗಿದ್ದ ಸೋಮಪ್ಪನ ಕುಟುಂಬದವರಲ್ಲಿ ದಾನಮ್ಮ ಸೋಮಪ್ಪನ ಮಡದಿ. ತನ್ನ
ಮಕ್ಕಳ ಬಗ್ಗೆ ಚಿಂತಿಸಿದವಳು. ಅವರ ಮದುವೆಗಿಂತ ಉದ್ಯೋಗ ಮುಖ್ಯವೆಂದು ಅರಿತು ಅವರು ಶಾಶ್ವತವಾಗಿ ಒಂದು ನೆಲೆಕಂಡು ಅಲ್ಲಿಯೇ ದುಡಿದರೆ ಉತ್ತಮ. ಎಂದುಕೊಂಡಳು. ಸೋಮಪ್ಪನ ಇಬ್ಬರು ಹೆಣ್ಣು
ಮಕ್ಕಳಾದ ರಂಗಮ್ಮ ಮತ್ತು ಗಂಗಮ್ಮ ತಾಯಿ ಸಿದ್ಧಣ್ಣನ
ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಣ್ಣಂದಿರಾದ ಭೀಮಣ್ಣ ಮತ್ತು ಶಿವಣ್ಣ ಸಿದ್ಧರಾಮಣ್ಣನಲ್ಲಿಯೇ ಕೆಲಸ ಮಾಡುತ್ತಿದ್ದಾರೆ.

ಸೋಮಪ್ಪನು ಸಿದ್ಧರಾಮಣ್ಣನ ಮನೆಯಲ್ಲಿ ಸುಮಾರು ವರ್ಷಗಳ ಕಾಲದಿಂದಲೂ ಜೀತದ ಆಳಾಗಿ ಕೆಲಸ ಮಾಡುತ್ತಿದ್ದನು. ಸುರೇಂದ್ರ,
ಮುಟ್ಟರಾಜ ಮತ್ತು ಗೋಪಾಲರು ತಮ್ಮ ತಮ್ಮ ಕುಟುಂಬವನ್ನು ಪ್ರತ್ಯೇಕ ಮಾಡಿಕೊಂಡು ಬಾಳಲು ಪ್ರಾರಂಭಿಸಿದರು. ದನಕರುಗಳು, ಹೊಲ-ನೆಲ
ಮತ್ತು ಗಣಿಗಾರಿಕೆಗಳು ಮೂರು ಪಾಲು ಹಂಚಿಕೊಂಡು ಆದ ರೀತಿಯಲ್ಲಿ ಉದ್ಯೋಗ ನಿರ್ವಹಿಸುತ್ತವೆ. ಸಿದ್ಧರಾಮಣ್ಣನ ನಿರ್ಲಕ್ಷದಿಂದ ರೋಗದಿಂದ ಬಳಲುತ್ತಿದ್ದ ಸುಶೀಲಮ್ಮಳು ಕೊನೆಯುಸಿರೆಳೆದಳು. ಮನೆ
ಮೂರಾ ಬಟ್ಟೆಯಾಯಿತು. ಸಿದ್ಧರಾಮಣ್ಣ ರೆಕ್ಕೆ ಕಿತ್ತಿದ ಹಕ್ಕಿಯಂತೆ ಅಸಹಾಯಕನಾದನು. ಮೂವರು ಸೊಸೆಯಂದಿರಲ್ಲಿ ಒಬ್ಬರೂ ಕೂಡ ಸಿದ್ಧರಾಮಣ್ಣನ ಸೇವೆ ಮಾಡಲು ಸಿದ್ಧರಿರಲಿಲ್ಲ. ಅವನು ತನ್ನ ಪಾಡಿಗೆ
ತಾನು ಬಾಳಲು ಪ್ರಾರಂಭಿಸಿದನು. ಆದಾಗ್ಯೂ ಸಿದ್ಧರಾಮಣ್ಣನ ದರ್ಪ ಕಡಿಮೆಯಾಗಲಿಲ್ಲ. “ಹುಟ್ಟಿದ ಗುಣ ಹುಟ್ಟಿನಿಂದ ಹೊಡೆದರೂ ಹೋಗದು” ಎಂಬಂತೆ ವರ್ತಿಸುವುದು ಅವನಿಗಿತ್ತು. ಅವನ ಮನೆತನ
ಹರಿದು ಹಂಚಾಯಿತು. ನಿಧಾನವಾಗಿ ‘ಲಕ್ಷ್ಮೀ’ ಎಂಬ ನಿಧಿ ಅಲ್ಲಿಂದ ಮಾಯವಾಗ ತೊಡಗಿದಳು. ಸಿದ್ಧರಾಮಣ್ಣನು ಮಕ್ಕಳಿಗೆ ಬುದ್ಧಿ ಮಾತು ಹೇಳಿದರೂ ಅವರು ಯಾವುದಕ್ಕೂ ಕಿವಿಗೊಡುವ ಸ್ಥಿತಿಯಲ್ಲಿರಲಿಲ್ಲ.
ಜೂಜು, ಕುಡಿತಗಳು ಮನೆಯಲ್ಲಿ ಸಂಯೋಜನೆ. ಸುರೇಂದ್ರ ಜೂಜುಗಾರನಾಗಿ ಪರಿವರ್ತನೆಗೊಂಡನು. ಪುಟ್ಟರಾಜನು ಮದ್ಯ ಸೇವೆಯಲ್ಲಿ ಮುಳುಗಿದನು. ಗೋಪಾಲ ವ್ಯಭಿಚಾರವಾಗಿ ಮನೆತನದ ಹೆಸರಿಗೆ ಮಣ್ಣೆರೆಚುವಂತೆ, ಅವ್ಯವಹಾರದ ಬಣ್ಣ ಬಳೆದು, ಹರಿದ
ಹಾಸಿಗೆಯಂತೆ ಮೂರು ಮನೆತನಗಳು ಹೋಳಾಗಿ ಬಿಟ್ಟವು.

ಸಿದ್ಧರಾಮಣ್ಣನು ಗತವೈಭವವನ್ನು ನೆನೆಸುತ್ತ ಕಾಲ ಕಳೆಯಲು ಪ್ರಾರಂಭಿಸಿದನು.ಸುಶೀಲಮ್ಮಳ ಮರಣದ ನಂತರ ತುಂಬದು ರ್ಬಲನಾಗಿದ್ದನು. ಮಕ್ಕಳು ಮತ್ತು ಸೊಸೆಯಂದಿರು ತನ್ನ ಸೇವೆ ಮಾಡುವುದು ಅಸಾಧ್ಯವೆಂದು ಅರಿತು ಮನನೊಂದುಕೊಂಡನು.ಚಿತ್ತದಂತೆ ಅವನ ದಿನ ನಿತ್ಯದ ಸಂಗಾತಿಯಾಯಿತು.

ಧರ್ಮಪುರಿ ಗ್ರಾಮದಲ್ಲಿಯೇ ಪ್ರತಿಷ್ಠಿತನಾಗಿ
ಸಿದ್ಧರಾಮಣ್ಣನ ಸ್ಥಿತಿ ಹೀನಾಯವಾಗಿ ಪರಿವರ್ತನೆಗೊಂಡಿತು. ‘ಉರಿದವರು
ಇರುವುದಿಲ್ಲ, ಮೆರೆದವರು ಕೇರಿಯಲ್ಲಿ ಇರುವುದಿಲ್ಲ’ ಎಂಬ
ಗ್ರಾಮದ ಗಾದೆ ಮಾತಿನಂತೆ ಸಿದ್ಧರಾಮಣ್ಣನಿಗೆ ಕಷ್ಟಕರವಾದ ಸ್ಥಿತಿ ಬಂದೊದಗಿತು. ಆಸ್ತಿ ಎಲ್ಲಾ ಹಾಳಾಗಿ ಹರಿದು ಹಂಚಿಹೋದ ಮೇಲೆ ಸಿದ್ಧರಾಮಣ್ಣನ ಮನ ಸಂಪೂರ್ಣವಾಗಿ ವಿಕಲತೆಯಿಂದ ವರ್ತಿಸಲು ಸುರು ಮಾಡಿತ್ತು. ತನ್ನ ಆ ದರ್ಪದ ಜೀವನಕ್ಕೆ ತಕ್ಕ ಮನೆಯಲ್ಲಿ ಕೆಲಸ ಮಾಡುತಿದ್ದ. ಕೂಲಿ ಆಳಿನ ಬಿಸಿ
ಉಸಿರಿನಿಂದಲೇ ಈ ಸ್ಥಿತಿ ಒದಗಿರಬಹುದೆಂದು
ತನ್ನಷ್ಟಕ್ಕೆ ತಾನೇ ಪ್ರಶ್ನಿಸುವಂತಾಯಿತು.
ಸುಮಾರು ಎರಡು ವರ್ಷಗಳು ಗತಿಸಿದವು. ಸಿದ್ಧರಾಮಣ್ಣನ
ಮನೆತನ ಮುರಿದು ಕಾಸಿಗೂ ದಿಕ್ಕಿಲ್ಲದ ಸ್ಥಿತಿ ಬಂದೊದಗಿತ್ತು. ಮನೆಯ ಎಲ್ಲಾ ರಾಸುಗಳು ಮಾರಿ ಕೊಟ್ಟಿಗೆಗಳು ಬರಿದಾದವು. ಗಣಿಗಾರಿಕೆ ನಿಂತಿತು

. ‘ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ
ಜನಪದ ವಾಣಿಯಂತೆ ಇರುವ ಜಮೀನಿನಲ್ಲಿಯೇ ಸುರೇಂದ್ರನು ಸಾಗುವಳಿ ನೋಡಿಕೊಳ್ಳುತ್ತಿದ್ದನು. ಸಿದ್ಧರಾಮಣ್ಣನ ಸ್ಥಿತಿವಂತಿಕೆ ನಶಿಸಿ ಹಾಳಾಗಿ
ಹೋಗಿತ್ತು. ತಂದೆ ಮತ್ತು ಮೂವರು ಸಹೋದರರ ಚಿಂತಾಜನಕ ಸ್ಥಿತಿ ಕಂಡು ಏಕೈಕ ಪುತ್ರಿ ವಿಜಯಲಕ್ಷ್ಮೀ ಮಮ್ಮಲ ಮರುಗುತ್ತಿದ್ದಳು. ತನ್ನ ತವರು ದೂರವಾಯಿತು. ತವರಿಗೆ ಹೂ ತಂದು ಅಣ್ಣ ಅತ್ತಿಗೆಯವರಿಗೆ
ತವರಿನ ದೇವತೆಯೆಂದು ಪೂಜೆ ಮಾಡಲು ಬಯಸಿದ ವಿಜಯಲಕ್ಷ್ಮಿಗೆ ತವರಿನ ಲಕ್ಷ್ಮೀ ಓಡಿದ ಕಾರಣ ವಿಜಯ ದೂರವಾಗಿ ಕಷ್ಟವಾಯಿತು. ವರ್ಷಕ್ಕೆ ಒಮ್ಮೆಯಾದರೂ ತವರಿಗೆ ಬಂದು ತಂದೆ-ತಾಯಿಯವರನ್ನು ಕಾಣುವ
ಕನಸು ಭಗ್ನವಾಯಿತು. ಅಣ್ಣಂದಿರ ದುರ್ನಡತೆಯ ದೋಣಿಗಳು ತಂದೆಯ ಸೊಕ್ಕಿನ ಕಲಕು ನೀರಲ್ಲಿ ಹರಿದಾಡಲು ಶುರು ಮಾಡಿದವು. ಅವಳ ಸ್ಥಿತಿ
ತವರಿನ ಚಿಂತಾಜನಕ ಪರಿಸ್ಥಿತಿಯು ತಂದೆಯ ದರ್ಪ ಮತ್ತು ಸಹೋದರರ ಮೂಢತನದಲ್ಲಿ ಕಾಣದೆ “ಮಬ್ಬು ಕವಿದ ಕನ್ನಡಿಯಲ್ಲಿ ಮುಖ ನೋಡಿದಂತೆ ಆಯಿತು”.
‘ಹಿರಿಯಕ್ಕನ ಚಾಳಿ ಮನೆ ತುಂಬ’ ಎಂಬಂತೆ ಮನೆಯ
ಮುಖ್ಯಸ್ಥನ ಅನಾಗರಿಕತೆಯ, ಸುಸಂಸ್ಕೃತ ವಲ್ಲದ, ನೀತಿ-ನಡಾವಳಿಗಳೇ ಸಿದ್ಧರಾಮಣ್ಣನ ಮನೆತನ ಹಾಳಾಗಲು ಕಾರಣವಾಯಿತು. ಅತ್ತ ಸಿದ್ದರಾಮಣ್ಣಿನ ಸಂಸಾರ ಹಾಳಾದ ನಂತರ ಗಣಿಗಾರಿಕೆ ಕೈಗಿತ್ತ ಭೀಮಣ್ಣ ಮತ್ತು ಶಿವಣ್ಣ ಜೀತದಿಂದ ಮುಕ್ತರಾಗಿ ಹೊರಬಂದರು. ಸೋಮಣ್ಣಿನ ಕುಟುಂಬ ಜೀತದಿಂದ ಮುಕ್ತಿ ಪಡೆಯಿತು. ಇನ್ನು ಮುಂದೆ ಬಿಡುವುದು ಉಚಿತ ಎಂದು ಉದ್ಯೋಗ ಕಳೆದುಕೊಂಡ ಸೋಮಪ್ಪನ ಕುಟುಂಬದವರು, ಆ ಗ್ರಾಮದಿಂದ
ಹೊರಡಲು ಸಿದ್ಧರಾದರು. ಆದರೆ ಅನೇಕ ದಿವಸ ವಾಸ ಮಾಡಿದ ಗ್ರಾಮ ಬಿಡುವುದು ತಕ್ಷಣವೇ ಸಾಧ್ಯವಾಗಲಿಲ್ಲ. ಅನ್ಯ ಕೂಲಿ ಕೆಲಸಗಳನ್ನು ತಾತ್ಕಾಲಿಕವಾಗಿ ವಾಸಿಸಲು ಪ್ರಾರಂಭಿಸಿದರು. ಗ್ರಾಮದ ರೈತರ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವುದು ಅವರ ಜೀವನದ ಆಧಾರವಾಯಿತು.
ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಗುಡಿಸಲು ತಮ್ಮ ಹೊಟ್ಟೆ
ಪಾಡಿಗಾಗಿ ಬಾಳುವಂತೆ. “ಸುರೇಂದ್ರ, ಮುಟ್ಟರಾಜು ಮತ್ತು ಗೋಪಾಲ ಸಹೋದರರು ಕಂಡರಿಯದ ಜೀವನ ಸಾಗಿಸುವ ತಂದೆ ಸಿದ್ಧರಾಮಣ್ಣನ
ದರ್ಪವೇ ತಮ್ಮ ಈ ಸಂಸ್ಕೃತಿಗೆ ನಾಂದಿಯಾಯಿತು” ಎಂದು ತಮ್ಮ ಹಿಂದಿನ ಜೀವನಶೈಲಿಯನ್ನು ನೆನೆಸಿಕೊಂಡು
ಮೆಲುಕು ಹಾಕಿದರು. ‘ನಾಯಿಯ ಬಾಲ ಕೊಳವೆಯಲ್ಲಿ ಸರಿ ಮಾಡಿದರು ಡೊಂಕು ಬಾಲಕ್ಕೆ ಸರಿಹೊಂದುವುದೆ ?’ ಅದೇ ರೀತಿ ಅವರ ಜೀವನದ ಪರಿ ಕವಲು ದಾರಿಯಲ್ಲೇ ಸಾಗಿತ್ತು. ಕಲ್ಲು ಮುಳ್ಳುಗಳಿಂದ ಕೂಡಿದ, ದುರ್ಗಮ,
ಕಾಲು ದಾರಿಯಲ್ಲಿ ಮುನ್ನಡೆಯಿತು. ಅಸಂಸ್ಕೃತಿಯ, ಗುರಿಯಿಲ್ಲದ ಸಿದ್ಧರಾಮಣ್ಣನ ನಡಾವಳಿಗಳು ಅವನ ಸಂತಾನದ ಮೇಲೆ ಪ್ರಭಾವವೇ ಅವನ ಜೀವನ ಶೈಲಿಯಲ್ಲಿ ಅಭಿವ್ಯಕ್ತಿಯಾಯಿತು. ಬಡವರನ್ನು ಹಿಂಸಿಸುವುದು, ತೊಂದರೆ ಕೊಡುವುದು, ಕಷ್ಟ ನೀಡಿ ಅತ್ಯಾಚಾರ, ವ್ಯಭಿಚಾರಗಳು ಎಸಗುವುದು ಗೋಪಾಲನಲ್ಲಿ ಅಧಿಕಗೊಂಡವು.

( ಮುಂದುವರೆಯುವುದು…..)

ಎಸ್.ಎಂ.ಜನವಾಡಕರ. ಬೀದರ

ಕವಿ ಪರಿಚಯ:

ಎಸ್.ಎಂ.ಜನವಾಡಕರ್

      ಸಾಹಿತಿ ಎಸ್.ಎಂ.ಜನವಾಡಕರ್ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಎಂ.ಎ. ಬಿ.ಇಡಿಧರರು, ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಡಯಟ್‌ನ ಉಪನ್ಯಾಸಕರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ, 2008 ರಲ್ಲಿ ನಿವೃತ್ತರಾಗಿರುತ್ತಾರೆ.

ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ’ ಹಸಿರು ಕ್ರಾಂತಿ’ ಮತ್ತು ‘ಬುದ್ಧ ಗೆದ್ದ ಮಾರನ ಯುದ್ಧ’ (ನಾಟಕಗಳು) ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನಸಂಕಲನಗಳು) ಬಣ್ಣದ ನಂಟು ಬಿಡದೆ ಅಂಟಿಕೊಂಡವರು, ಮಾಸಿದ ಹಾಸಿಗೆ, ಬದುಕು ಕಾದ ಕಂಬನಿ (ಕಾದಂಬರಿಗಳು) ಧಮ್ಮಾವೃತ ಗೀತೆ, ತಥಾಗತ ಗಾಥೆಗಳು (ಬುದ್ಧ, ಧಮ್ಮ ಚರಿತ ಕಾವ್ಯಗಳು) ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ. (ವೈಚಾರಿಕ ಕೃತಿಗಳು) ಹಿಮ ಸಾಗರ (ಪ್ರವಾಸಕಥನ), ಕಲ್ಯಾಣ ಕಂಡ ಕಲ್ಯಾಣ (ಆಧುನಿಕ ವಚನ ಸಂಕಲನ) ಬೀದರ ಜನಪದ ಸಿರಿ (ಜಾನಪದ) ಬೆಡಗಿನ ಬೀದರ (ಐತಿಹಾಸಿಕ) ಎಂಬ ಕೃತಿಗಳನ್ನು ಪ್ರಕಟಿಸಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ