ಮಾಸಿದ ಹಾಸಿಗೆ (ಧಾರವಾಹಿ)
– ಎಸ್.ಎಮ್.ಜನವಾಡಕರ್.ಬೀದರ
(ಹಿಂದಿನ ಸಂಚಿಕೆಯಿಂದ)
ಅಧ್ಯಾಯ-3
ಸಾಹುಕಾರ ಸುರೇಂದ್ರನು ತಂದೆ ಸಿದ್ದರಾಮಣ್ಣನಂತೆ ಹಳೆಯ
ಸಂಪ್ರದಾಯದ ವ್ಯಕ್ತಿಯಾಗಿದ್ದನು. ತಾನು ಹೇಳಿದ್ದೇ ವೇದವಾಕ್ಯ ಎಂದು
ನಂಬಿದ್ದವನು. ತನ್ನ ಧರ್ಮಪತ್ನಿ ಕಮಲಮ್ಮಳ ಅಥವಾ ಮಕ್ಕಳಾದ
ಮಲ್ಲಿನಾಥ ಮತ್ತು ಸಂಗಮೇಶನ ಯಾವುದೇ ಮಾತುಗಳಾಗಲಿ,
ಮಾರ್ಗದರ್ಶನವನ್ನಾಗಲಿ ಕೇಳುವಂತವನಾಗಿರಲಿಲ್ಲ. ತಾನೊಬ್ಬ ಗ್ರಾಮದ
ಪ್ರತಿಷ್ಠಿತ ವ್ಯಕ್ತಿ, ಗಣ್ಯರಲ್ಲಿ ಅತಿ ಗಣ್ಯನೆಂದುಕೊಂಡು ತನ್ನ ಉಪಸ್ಥಿತಿಯಿಲ್ಲದೆ
ಒಂದು ಹುಲ್ಲಿನ ಕಡ್ಡಿಯೂ ಈ ಗ್ರಾಮದಲ್ಲಿ ಅಲುಗಾಡದಂತೆ
ನಡೆದುಕೊಂಡಿದ್ದನು. ಆತ್ಮ, ದೇವರು, ಗುಡಿ-ಗೋಪುರಗಳಲ್ಲಿ
ನಂಬಿಕೆಯಿಂದ ನಡೆದುಕೊಳ್ಳುತ್ತಿದ್ದನು. ವರ್ಣಾಶ್ರಮ ಧರ್ಮದ ಜೀವಾಳು
ಅದನ್ನು ತೊರೆದರೆ ಸಂಸ್ಕೃತಿ ಹಾಳಾದಿತು ಎಂದು ಚಾಚೂ ತಪ್ಪದ
ಅದರಂತೆ ನಡೆದುಕೊಳ್ಳುತ್ತಿದ್ದನು. ಸಮಾಜದ ವರ್ಗ ಪಂಗಡಗಳು ಉಳಿದು
ಬೆಳೆಯಬೇಕು ಎಂಬ ಮೂಢ ನಂಬಿಕೆಯ ಹೊನಲಿನಲ್ಲಿ ಯಾವಾಗಲು
ತೇಲಾಡುತ್ತಿದ್ದನು. ಆಳು-ಹೋಳುಗಳು ಕನಿಷ್ಠರು, ಅವರು
ಆದೇಶದಂತೆ ನಡೆಯಬೇಕು. ಅವರಿಗೆ ಸ್ವಾತಂತ್ರ್ಯವಾಗಿ ಮಾತಾಡುವ
ಹಕ್ಕಿಲ್ಲ. ಹೇಳಿದ್ದು ಮಾಡಿ, ನೀಡಿದ್ದು ತಿನ್ನಬೇಕು ಎಂದು ಬಲವಾಗಿ
ನಂಬಿದ್ದನು. ಅದಕ್ಕಾಗಿಯೇ ಮಾದಣ್ಣನು ಅತಿ ನಮ್ರತೆಯಿಂದ ಜೀವ
ಕೈಯಲ್ಲಿ ಹಿಡಿದು ಹೊಟ್ಟೆ ಪಾಡಿಗಾಗಿ ಶ್ರೀಮಂತ ಸುರೇಂದ್ರನಲ್ಲಿ ನೌಕರಿ
ಮಾಡುತ್ತಿದ್ದನು. ಅನೇಕ ಸಲ ವಿಪರಿತವಾದ ಬೈಗಳು ಮಾದಣ್ಣನು
ಅವರಿಂದ ಅನುಭವಿಸಿದ್ದನು.
ಸೋಮಪ್ಪನು ತನ್ನ ಹಿರಿಯ ಮಗಳಾದ ರಂಗಮ್ಮಳನ್ನು
ಮಾದಣ್ಣನಿಗೆ ಕೊಟ್ಟು ಮದುವೆ ಮಾಡಿದ್ದನು. ಮಾದಣ್ಣ
ಸೌಮ್ಯವ್ಯಕ್ತಿಯಾಗಿದ್ದವನು. ಬಡತನ ಮನೆತನದ ಮಗನಾಗಿ ಬೆಳೆದರೂಶ್ರೀಮಂತಿಕೆಯ – ಗುಣಗಳು ಅವನಲ್ಲಿ ನೆಲೆಸಿದ್ದವು. ತಾನಾಗಲಿ ತನ್ನ
ಕುಟುಂಬವಾಗಲಿ ಬದುಕುವುದೇ ಶ್ರೇಷ್ಠ ಎಂದು ಬಾಳು ಸಾಗಿಸುತ್ತಿದ್ದನು.
ಸೋಮಪ್ಪನು ಹೊಟ್ಟೆಪಾಡಿಗಾಗಿ ಬದುಕಲು ಬಂದು ನೆಲೆಸಿದ
ಧರ್ಮಾಪೂರಿಯ ನಿವಾಸಿಯಾದ ತಿಮ್ಮಪ್ಪನ ಮಗ ಮಾದಣ್ಣನಿಗೆ ತನ್ನ,
ಹಿರಿಯ ಮಗಳಾದ ರಂಗಮ್ಮಳನ್ನು ಕೊಟ್ಟು ಮದುವೆ ಮುಗಿಸಿರುವುದು
ಕೂಡ ಸೋಮಪ್ಪನು ಆ ಗ್ರಾಮದಲ್ಲಿ ನೆಲೆಯೂರಲು ಕಾರಣವಾಯಿತು.
ಮಗಳು, ಅಳಿಯ ತುಂಬ ನೆಮ್ಮದಿಯಿಂದ ಬಾಳು ಸಾಗಿಸುವುದು ತನ್ನ
ಕಣ್ಣು ಮುಂದೆ ಸಾಗಲಿ ಎಂಬುದೇ ಸೋಮಪ್ಪ ದಂಪತಿಗಳ
ಮನದಾಸೆಯಾಗಿತ್ತು. ಅಂತೆಯೇ ರಂಗಮ್ಮಳ ತಂಗಿ ಗಂಗಮ್ಮಳನ್ನು ತಕ್ಕ
ವರ ನೋಡಿ ಮದುವೆ ಮಾಡಿಕೊಟ್ಟು ಸೋಮಪ್ಪನು ತನ್ನ ಕುಟುಂಬದ
ಸಾಮಾಜಿಕ ಭಾರ ಇಳಿಸಿಕೊಂಡಿದ್ದನು. ಇಬ್ಬರು ಗಂಡು ಮಕ್ಕಳು ತಮ್ಮ
ತಮ್ಮ ಹೊಣೆಗಾರಿಕೆಯನ್ನು ಅರಿತು ದುಡಿದು ಬಾಳುತಿದ್ದರು. ಈರ್ವರು
ಹೆಣ್ಣು ಮಕ್ಕಳು ತಮ್ಮ ತಮ್ಮ ಗಂಡನ ಮನೆಯಲ್ಲಿ ಬಾಳು ಸಾಗಿಸುತ್ತಿದ್ದರು.
ಅದನ್ನು ಕಂಡ ಸೋಮಪ್ಪ ಬಡತನದ ಬಾಳು ಜೊತೆಗಿದ್ದರೂ
ನೆಮ್ಮದಿಯನ್ನು ಸಂಗಾತಿಯನ್ನಾಗಿ ಪಡೆದು ಜೀವಿಸುತ್ತಿದ್ದನು.
“ಉಪವಾಸವಿದ್ದರು ಪರವಾಗಿಲ್ಲ ಉಪದ್ರವ ಮಾತ್ರ ಇರಕೂಡದು” ಎಂದು
ತನ್ನ ಮಿತ್ರರಲ್ಲಿ ಸೋಮಪ್ಪ ಮೇಲಿಂದ ಮೇಲೆ ಹೇಳಿ, ತನ್ನ ಜೀವನದ
ಪರಿಯನ್ನು ಬಿಂಬಿಸುತ್ತಿದ್ದನು. ಮೈಮುರಿದು ದುಡಿದು ಸೋಮಪ್ಪನ
ಕುಟುಂಬ ಮತ್ತು ತಿಮ್ಮಪ್ಪನ
ತಿಮ್ಮಪ್ಪನ ಕುಟುಂಬಗಳು ಧರ್ಮಾಪೂರಿಯಲ್ಲಿ
ನೆಮ್ಮದಿಯ ಜೀವನ ನಡೆಸುತ್ತಿದ್ದವು. ಹಿರಿಯರು ನಡೆದುಬಂದ
ದಾರಿಯಲ್ಲಿಯೇ ಮಾದಣ್ಣ ತನ್ನ ಪತ್ನಿ ರಂಗಮ್ಮಳೊಂದಿಗೆ ಬಾಳುಬಂಡಿ
ಸಾಗಿಸುತ್ತಿದ್ದನು.
ಒಂದು ದಿನ ಬೇಸಿಗೆಯ ಬಿಸಿಲು ತುಂಬ ಪ್ರಖರವಾಗಿತ್ತು. ಬಿಸಿಲು
ಅಧಿಕಗೊಂಡಾಗ ಅಕಾಲಿಕ ಮಳೆ ಬರುವುದು ವಾಡಿಕೆ, ಗುಡುಗು, ಸಿಡಿಲು,
ಮಿಂಚು ಮತ್ತು ಬಿರುಗಾಳಿಯಿಂದ ಆರ್ಭಟ ಮಳೆಯು ಆಗಾಗ್ಗೆ
ಸುರಿಯುತ್ತಿರುವಂತೆ ಅಂದು ಮಾದಣ್ಣನು ಹೊಲ ಉಳಲು
ಪಾರಂಭಿಸಿರುವಾಗಲೇ ಮೋಡ ಬರಲು ಪ್ರಾರಂಭವಾಯಿತು. ಮಧ್ಯಾಹ್ನ
ಮೂರು ಗಂಟೆಯ ಸಮಯ, ಭಯಂಕರ ಮಳೆ ಬರಲು ಶುರುವಾಯಿತು.
ಮಾದಣ್ಣನು ಎತ್ತುಗಳು ಬಿಟ್ಟು ಮರದ ಕೆಳಗೆ ಕಟ್ಟಿದನು. ತಾನು ಪಕ್ಕದ
ತೋಟದ ಮನೆಯಲ್ಲಿ ಆಸರೆ ಪಡೆದನು.
ಪ್ರಸಂಗಗಳು, ಘಟನೆಗಳು ಯಾವಾಗಲು ಆಕಸ್ಮಿಕವಾಗಿರುವಂತೆ
ಅಂದು ಕ್ಷರ್ಣಾಧದಲ್ಲಿ ಭಯಂಕರ ಗುಡುಗು ಸಿಡಿಲು ಆವರಿಸಿತು.
ಹೊಲದಲ್ಲಿ ಮರದ ಕೆಳಗೆ ಕಟ್ಟಿದ ಎತ್ತುಗಳು ಹೆದರಿಕೊಂಡು ಹಗ್ಗ
ಕಡಿದುಕೊಂಡು ಓಡಲು ಯತ್ನಿಸಿದವು. ಅದರಲ್ಲಿ ಒಂದು ಎತ್ತು ಕೊರಳಿಗೆ
ಕಟ್ಟಿದ ಹಗ್ಗ ಕಾಲಿಗೆ ಸಿಕ್ಕಿಸಿಕೊಂಡು ಬಿಡಿಸಿಕೊಳ್ಳಲು ಯತ್ನಿಸಿ ಬಿದ್ದು
ಬಿಟ್ಟಿತ್ತು. ಅದರಿಂದ ಅದು ಕಾಲು ಮುರಿದುಕೊಂಡಿತು. ಸಿಡಿಲಿನ ಗರ್ಜನೆ
ಕೇಳಿದ ಕೂಡಲೆ ಮಾದಣ್ಣನು ಮಳೆಯಲ್ಲಿಯೇ ಕಟ್ಟಿದ ಎತ್ತುಗಳ ಕಡೆಗೆ
ಓಡಿ ಬಂದನು. ನೆಲಕ್ಕುರುಳಿದ ಎತ್ತನ್ನು ಮೇಲೆತ್ತಲು ಪ್ರಯತ್ನ ಮಾಡಿದನು.
ಅದಕ್ಕಾಗಿ ತನ್ನ ನೆರೆಯ ಗೆಳೆಯನ ಸಹಕಾರ ಪಡೆದನು. ಆದರೂ ಎತ್ತು
ಎದ್ದು ನಿಲ್ಲಲಿಲ್ಲ. ಅದರ ಕಾಲು ಅದುಮಿ ತಿರುವಿ ನೋಡಿದನು. ಅದು
ಮುರಿದುಹೋಗಿತ್ತು. ಕಾಲು ಮುರಿದುಕೊಂಡ ಎತ್ತನ್ನು ಕಂಡು ಮಾದಣ್ಣನು
ಗಾಬರಿಗೊಂಡನು. ಅವನಿಗೆ ದಿಕ್ಕು ತೋಚದಂತಾಯಿತು. ಧಾರಾಕಾರವಾದ
ಆಲೆಕಲ್ಲಿನ ಮಳೆ ಸುರಿಯುತಿತ್ತು. ಗಾಬರಿಗೊಂಡ ಮಾದಣ್ಣನು ತೋಟದ
ಮನೆಯ ಸ್ನೇಹಿತನೊಂದಿಗೆ ಚರ್ಚಿಸಿದನು. ಇಬ್ಬರು ಅಸಹಾಯಕರಾಗಿ
ದಿಗ್ಧಮೆಗೊಂಡು ನಿಂತರು. ಮಾದಣ್ಣನಿಗೆ ಎತ್ತು ಕಾಲು ಮುರಿದುಕೊಂಡ ದುಃಖದೊಂದಿಗೆ ಸಾಹುಕಾರನ ಹೆದರಿಕೆ ಅಧಿಕವಾಯಿತು. ಸೃಷ್ಟಿ
ಘಟನೆಯಿಂದ ಎತ್ತು ಕಾಲು ಮುರಿದುಕೊಂಡರೂ ಸಾಹುಕಾರ ಅದರ
ನನ್ನ ತಪ್ಪಿನಿಂದಲೇ ಆಗಿದೆ ಎಂದು ತನ್ನನ್ನು ಗುರಿ ಮಾಡಬಹುದೆಂದ
ಹೆದರಿಕೊಂಡನು. ಗಾಬರಿಗೊಳ್ಳಬೇಡ ಮಾದಣ್ಣ,
ಕೈಯಲ್ಲಿದೆ. ನಿಸರ್ಗದಿಂದ ನಡೆದ ಪ್ರಸಂಗವಿದು. ಯಾರೂ ತಪ್ಪಿಸಿಕೊಳ್ಳಲ
ಸಾಧ್ಯವಿಲ್ಲ. ಸಾಹುಕಾರನು ನಿನಗೆ ಗುರಿ ಮಾಡಬಹುದೆಂದು ಹೆದರಬೇಡ
ಇವರಲ್ಲಿ ನಿನ್ನ ತಪ್ಪೇನಿದೆ? ಎಂದು ತೋಟದ ಮನೆಯ ಗೆಳೆಯ
ಮಾವನಿಗೆ ಸಮಾಧಾನ ಹೇಳಿದರೂ, ಮಾದಣ್ಣನ ಕಣ್ಣಿನಿಂದ ನೀರು
ನೋಡು ಗೆಳೆಯ, ನಾನ
ಬಡವ ಆ ಸಾಹುಕಾರನಿಗೆ ಕನಿಕರ ಎಂಬುದು ಗೊತ್ತಿಲ್ಲ, ವಿನಾದರೂ
ನೆನಮಾಡಿ ನಗೆ ಕಷ್ಟಕ್ಕೆ ಗುರಿಪಡಿಸಬಹುದು ಎಂದು ತನ್ನ ಅಳಲನ್ನು
ಇರಲಿ, ಸಮಾಧಾನದಿಂದ
ಸುಬಲಕ್ಕೆ ಇದ್ದೇನೆ ಎಂದು ಹೇಳಿ, ಹೋಗು ಮನೆಗೆ ಹೋಗಿ
ಸಾಹುಕಾರನಿಗೆ ಈ ವಿಷಯ ತಿಳಿಸು ಎಂದು ಮಾದಣ್ಣನ ಮಿತ್ರ ಸಲಹೆ |
ನೀಡಿದನು. ಅದರಂತೆ ಮಾದಣ್ಣ ಕಾಲು ಮುರಿದ ಎತ್ತನ್ನು ಹೊಲದಲ್ಲಿಯೇ
ಬಿಟ್ಟು ಒಂದು ಎತ್ತನ್ನು ಮಾತ್ರ ಹೊಡೆದುಕೊಂಡು ಊರಿಗೆ ಮರಳಿ
ಸಾಹುಕಾರರಿಗೆ ನಡೆದ ಘಟನೆ ಬಗ್ಗೆ ತಿಳಿ ಹೇಳಿದನು. ಮಾದನ ಮಾತು
ಕೇಳುತಲೆ, ಸುರೇಂದ್ರನು ಕುಪಿತನಾಗಿ ಬೈಯಲು ಪ್ರಾರಂಭಿಸಿದ್ದರು ಅದು
ಹೆಗೆ ಕಾಲು ಮುರಿದುಕೊಂಡಿತ್ತು. ನೀನೆಲ್ಲಿಗೆ ಹೋಗಿದ್ದೆ ಎಂದು ಕೇಳುತ್ತ
dardam ಈ ಅನಾಹುತಕ್ಕೆ ನೀನೆ ಕಾರಣ ಎಂದನು.
ಮೌನವಾಗಿದೆ. ಮಾದಣ್ಣ ನಂತರ ಕೋಪಗೊಂಡ ಸಾಹುಕಾರನೊಂದಿಗೆ
ಎತ್ತು ಬಲರಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಕಾಲು ಮುರಿದ ಎತ್ತನ್ನು
ನಾಲ್ಕು ಜರ ಸಹಾಯದಿಂದ ಬಂಡಿಯಲ್ಲಿ ಏರಿಸಿ ಮನೆಗೆ ತಂದರು.
‘ಎತ್ತಿನ ಸ್ಥಿತಿ ಕಂಡು ಸುರೇಂದ್ರನು ರೌದ್ರಾವತಾರ ತಾಳಿದರು.
ಒಂದು ಕಡೆ ಎತ್ತು ಕಾಲು ಕಳೆದುಕೊಂಡ ದುಃಖವಾದರೆ ಮತ್ತೊಂದುಕಡ
ತನ್ನ ಆಳು ಮಾದಣ್ಣ ರಕ್ಷಣೆಗಾಗಿ ಸೂಕ್ತ ವ್ಯವಸ್ಥೆ ಮಾಡಿಲ್ಲ’ ಎಂದ
ಕೋಪಗೊಂಡನು. ವಿಧಿ ಲಿಖಿತ ಯಾರೇನು ಮಾಡುವುದು, ನಿಸರ್ಗಜ
ಮುಂದೆ ಯಾರ ಆಟವೂ ನಡೆಯುವುದಿಲ್ಲ ಎಂದು ತಾನು ಸಮಾಧಾನ
ಮಾಡಿಕೊಂಡು ತನ್ನ ಆಳು ಮಾದಣ್ಣನಿಗೆ ಆಯ್ತು, ನಿನ್ನದೇನು ತಪ್ಪು
ಯಾವಾಗ ಏನು ನಡೆಯಬೇಕೊ ಅದು ನಡೆಯುತ್ತದೆ ಎಂಬ ಮಾನವಿಯ
ಮಾತುಗಳನ್ನು ಸಾಹುಕಾರನ ಬಾಯಿಯಿಂದ ಹೊರಬೀಳಲಿಲ್ಲ. “ಎಲೋ
ಅಧಮ, ಮಾದು ನನ್ನ ಎತ್ತು ಕಾಲು ಮುರಿದುಕೊಳ್ಳಲು ನೀನೇ ಕಾರಣ.
ಎತ್ತುಗಳನ್ನು ಮರದ ಕೆಳಗಡೆ ಕಟ್ಟಿ ನೀನೇಕೆ ಆ ಪಕ್ಕದ ತೋಟದ
ಆ
ಮನೆಯಲ್ಲಿ ಸೇರಿಕೊಂಡೆ ? ನೀನು ಎತ್ತುಗಳ ಜೊತೆಯಲ್ಲಿ ಅಲ್ಲಿಯೇ
ಕುಳಿತುಕೊಳ್ಳಬೇಕಾಗಿತ್ತು. ಅವುಗಳೊಂದಿಗೆ ನಿನಗೂ ಅಪಘಾತವಾದರೆ
ಚೆನ್ನಾಗಿರುತಿತ್ತು. ನನಗೆ ಯಾವುದೇ ನೆಪ ಬೇಕಾಗಿಲ್ಲ. ಆ ಎತ್ತಿನ ಬೆಲೆ
ನೀನು ತೆರಬೇಕಾದಿತು. ನನಗೆ ನೆಪ, ಕಾರಣ ಬೇಕಾಗಿಲ್ಲ ಎಂದು”
ಗುಡುಗಿದನು.
ಬಡತನದಲ್ಲಿ ಸತ್ತು ಬದುಕುಳಿದ ಮಾದಣ್ಣ ಸಾಹುಕಾರನ
ದಬ್ಬಾಳಿಕೆಗೆ ನಲುಗಿ ಬೆದರಿ ಬೆಂಡಾದನು. ‘ಇಲ್ಲ ರಾಯರೇ ನನ್ನ ತಪ್ಪಿಲ್ಲ.
ಸೃಷ್ಟಿಯ ಆಕಸ್ಮಿಕ ಘಟನೆ. ನಾನೇನು ಮಾಡಲು ಸಾಧ್ಯವಿದೆ’ ಎಂದು ತನ್ನ
ಅಳಲು ತೋಡಿಕೊಂಡನು. ಅಲ್ಲಿ ನೆರೆದ ಗ್ರಾಮದ ಅನೇಕ ಜನ ಗಣ್ಯರು
ಸುರೇಂದ್ರನಿಗೆ ತಿಳಿ ಹೇಳಿದರು. ಅಲ್ಲಾ, ಸಾಹುಕಾರರೆ ಪಾಪ ಬಡಪಾಯಿ.
ಅವನೇನು ಮಾಡಲು ಸಾಧ್ಯ ? ಎಂದು ನೀತಿ ನುಡಿದರು. ಆ ಮಾತುಗಳು
ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಂತರ ಮಾದಣ್ಣ ಭಾರವಾದ
ಮನಸ್ಸಿನಿಂದ ಮನೆಗೆ ತೆರಳಿದನು.
ಮಾದಣ್ಣನು ಅಂದು ಹೊಲದಲ್ಲಿ ನರದ ಘಟನೆಯನ್ನು ತನ್ನ
ಪತ್ನಿ ರಂಗಮ್ಮಳಿಗೆ ತಿಳಿಸಿದನು.
ತಿಳಿಸಿದರು. ಅವಳು ತನ್ನ ಪತಿಯ ಮೇಲೆ
ನಡೆಯುತ್ತಿರುವ ದಬ್ಬಾಳಿಕೆಯನ್ನು ಸಹಿಸದೆ ಕೋಪತಾಪಳಾದಳು, ಆದರೆ
ಮಾಡುವುದೇನು, “ಬಡವನ ಸಿಟ್ಟು ದವಡೆಗೆ ಮೂಲ” ಎಂಬಂತೆ ಅವರು
ಅಸಹಾಯಕರಾದರು, ಎತ್ತಿನ ಬೆಲೆ ತೀರಿಸಲು ಜಮೀನು, ಆಸ್ತಿ ಇಲ್ಲದೆ
ಪರದಾಡಿದರು, ಸುರೇಂದ್ರನ ದಬ್ಬಾಳಿಕೆ ದಿನೇ ದಿನೇ ಅಧಿಕಗೊಂಡಿತು. ನನ್ನ
ಒಕ್ಕಲುತನ ಮುರಿದು ಬಿದ್ದಿದೆ.
ಕುಂಠಿತವಾಯಿತು’ ಎಂದು ಗರ್ಜಿಸುತ್ತ, ಪ್ರತಿ ದಿನ ಬೆಳಿಗ್ಗೆಯಿಂದ
ಸಂಜೆವರೆಗೆ ಮಾದಣ್ಣನಿಗೆ ಕಾಡಲು ಪ್ರಾರಂಭಿಸಿದನು.
ಉಳುವುದು
ಸೋತು ಸುಣ್ಣವಾದ ಮಾದಣ್ಣ ಒಂದು ದಿನ ಮುಂಜಾನೆ
ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳನ್ನು ನಡೆದ ಘಟನೆಯ ಬಗ್ಗೆ ಪರಿಹಾರ
ಕಂಡುಕೊಳ್ಳಲು ಕೂಡಿಸಿದನು.
ಕೂಡಿಸಿದನು. ಎಲ್ಲರೂ ಸಾಹುಕಾರನ ದಬ್ಬಾಳಿಕೆಗೆ
ಪರಿಹಾರ ಕಂಡುಹಿಡಿಯಲು ಸುಧೀರ್ಘವಾಗಿ ಚರ್ಚಿಸಿದರು. ಮಾದಣ್ಣನು
ನನಗೆ ಒಂದು ಪರಿಹಾರವನ್ನು ದಯಪಾಲಿಸಿ ಎಂದು ಅವರಲ್ಲಿ
ಅಂಗಲಾಚಿದನು. ಸರ್ವರು ಚರ್ಚಿಸಿ. ಸಾಹುಕಾರನನ್ನು ಕಂಡು
ನಡೆದುಹೋದ ಘಟನೆಯಿಂದ ಮಾದಣ್ಣನನ್ನು ಕ್ಷಮಿಸುವಂತೆ ಕೋರಲು
ನಿರ್ಧರಿಸಿದರು. ಅದರಂತೆ ಸಾಹುಕಾರ . ಸುರೇಂದ್ರನೊಂದಿಗೆ ತೆರಳಿ
ಪರಿಪರಿಯಿಂದ ವಿನಂತಿಸಿಕೊಂಡರು. ‘ಪಾಪ ಮಾದಣ್ಣ ಹೊಟ್ಟೆಗೆ ಕೂಳು,
ಮೈಗೆ ಬಟ್ಟೆ ಕಾಣದ ಕಡುಬಡವ, ಈ ಘಟನೆಯಲ್ಲಿ ಅವನದೇನು ತಪ್ಪಿಲ್ಲ.
ಕ್ಷಮಿಸಿಬಿಡಿ ಸಾಹುಕಾರರೇ’ ಎಂದು ಒಕ್ಕೊರಲಿನಿಂದ ಕೇಳಿದರು.
ಸುರೇಂದ್ರನು
ಅದು ಸಾಧ್ಯವಿಲ್ಲ, ನೀವು ತೆರಳಿ ಇಲ್ಲಿಂದ
‘ನನಗಾದ ಹಾನಿ, ನೀವು ತುಂಬಿ ಕೊಡುವಿರಾ?’ ಎಂದು ಹೇಳುತ್ತಾ
‘ವಸ್ತು ಕಳೆದ ಸ್ಥಳದಲ್ಲಿ ಮಾತ್ರ ಹುಡುಕಿದರೆ ಅದು ಸಿಗುತ್ತದೆ” ಎಂದು
ಗುಡುಗಿ ಅವರ ಬೇಡಿಕೆಗೆ ಸಮ್ಮತಿಸಲಿಲ್ಲ. ಅವರು ಬಂದ ದಾರಿಗೆ ಸುಂಕ
ಇಲ್ಲ ಎಂದು ಮರಳಿ ತಮ್ಮ ತಮ್ಮ ಮನೆಗೆ ಹೋದರು. ಎತ್ತಿನ ಬೆಲೆ
ಒಂದು ವರ್ಷ ಮಾದಣ್ಣನು ಉಚಿತವಾಗಿ ದುಡಿದು ಬೆಲೆ ತೀರಿಸಲು
ಸಾಹುಕಾರ ಒತ್ತಡ ಹೇರಿದನು. ಅದಕ್ಕೆ ಒಪ್ಪಿ ಮಾದಣ್ಣನು ಸಾಲದಲ್ಲಿ
* ದುಡಿಯಲು ಅಣಿಯಾದನು.
ಕಷದ . ದಿನಗಳು ದೀರ್ಘವಾಗುತ್ತವೆ . ಎಂಬಂತೆ, ಕ್ಷಣಗಳು
ನಿಮಿಷವಾಗಿ, ನಿಮಿಷಗಳು ಗಂಟೆಯಾಗಿ, ಗಂಟೆಗಳು, ದಿನವಾಗಿ, ದಿನಗಳು,
ತಿಂಗಳುಗಳಾಗಿ, ತಿಂಗಳುಗಳು ವರ್ಷವಾಗಿ ಮಾರ್ಪಡುವಂತೆ ಮಾದಣ್ಣ
ಮತ್ತು ರಂಗಮ್ಮಳವರಿಗೆ ಕಾಲ ದೀರ್ಘವಾದವು. ಅನೇಕ ದುಃಖದ
ಸಂಗತಿಗಳು ಒಂದರ ಮೇಲೊಂದರಂತೆ ಮರುಕಳಿಸಲು ಶುರುವಾದವು.
ಬಡತನದ ಬೇಗೆಯಲ್ಲಿ ಆ ಕಾಲ ನೂಕುತ್ತ ಸುಮಾರು ಹತ್ತು
ವರ್ಷಗಳು ಕಳೆದವು. ಶಾಂತಿ ಮತ್ತು ಕಾಂತಿ
ದೊಡ್ಡವರಾಗಿ ಬೆಳೆದರು. ತಲೆಗೆ ಸೂರು, ಹೊಟ್ಟೆಗೆ ರೊಟ್ಟಿ ಸಿಗದೇ ಹಿಂಡಿ
ಇಬ್ಬರು ಮಕ್ಕಳು
ತಿನ್ನುವ ಬಡತನದಲ್ಲಿ ಬೆಳೆದ ಮಕ್ಕಳ ಮದುವೆಯ ಚಿಂತೆ ಕಾಡಲು
ಪ್ರಾರಂಭಿಸಿತು. ವಯಸ್ಸಿಗೆ ಬಂದ ಮಕ್ಕಳನ್ನು ಸಮಯಾನುಸಾರ ಮದುವೆ
ಮಾಡಿ ಪತಿಯ ಮನೆಗೆ ಕಳುಹಿಸುವುದು ಭಾರತದ ಸಂಸ್ಕೃತಿಯಲ್ಲಿ ನಡೆದು
ಬಂದ ರೂಢಿಯಾಗಿದೆ.
ಒಂದು ದಿನ ಮಾದಣ್ಣ, ರಂಗಮ್ಮಳನ್ನು ಕರೆದು ಸಮೀಪ
ಕುಳ್ಳರಿಸಿಕೊಂಡು ‘ಅಲ್ಲ, ರಂಗೂ.. ಮಕ್ಕಳಂತು ದೊಡ್ಡವರಾದರು.
ಒಬ್ಬೊಬ್ಬರ ಮದುವೆ ಮುಗಿಸಿ ಬಿಡುವುದು ಸೂಕ್ತ. ಈ ವರ್ಷ ಶಾಂತಿಯ
ಲಗ್ನ ಮುಗಿಸಿದರೆ, ಇನ್ನೆರಡು ವರ್ಷಗಳ ನಂತರ ಕಾಂತಿಯ ಮದುವೆ
ಮಾಡಲು ಅನುಕೂಲವಾಗುತ್ತದೆ’ ಎಂದು ತನ್ನ ಪತ್ನಿಯನ್ನು ಹೇಳಿದನು.
ಸರಿ, ಅದೆಲ್ಲ ನಿಜ, ಒಳ್ಳೆಯ ಮನೆತನದ ತಕ್ಕ ವರ ನೋಡಿ ಮದುವೆ
ಮುಗಿಸೋಣ. ಆದರೆ… ಒಂದು ವಿಷಯ ಎಂದಳು. ಅದಕ್ಕೆ ಏನು ?
ಹೇಳು ರಂಗು, `ಹೇಳು ಸಂಕೋಚವೇಕೆ’ ಎಂದು ಮಾದಣ್ಣ ಕೇಳಿದುದಕ್ಕೆ
ರಂಗಮ್ಮ ಉಗುಳು ನುಂಗಿ ಗಂಟಲು ಸರಿಪಡಿಸಿಕೊಂಡು ‘ಹಿಂದಿನ ಕಾಲದ
ರೂಢಿಗಳು ನಶಿಸುತ್ತ ಬರುತ್ತಿವೆ. ನಮ್ಮ ಅಜ್ಜಿಯನ್ನು ಐವತ್ತು
ರೂಪಾಯಿಗಳು ತೆರು ಕೊಟ್ಟು ನಮ್ಮ ಅಜ್ಜ ಮದುವೆ
ಮಾಡಿಕೊಂಡಿದ್ದರಂತೆ. ಅಂದರೆ ಗಂಡಿನವರು ಹೆಣ್ಣಿಗೆ ತರು ನೀಡಿ (ವಧು
ದಕ್ಷಿಣೆ) ಮದುವೆಯಾಗುವ ಪದ್ಧತಿ ಇತ್ತಂತೆ. ಹೆಣ್ಣು ಮಕ್ಕಳಿಗೆ ತಂದೆ-
ತಾಯಿ ಜನ್ಮ ನೀಡಿ ಬೆಳೆಸಿ ಅನ್ಯರ ಮನೆಗೆ ಕಳುಹಿಸುವುದರಿಂದ ಆ ಹೆಣ್ಣು
ಮಕ್ಕಳನ್ನು ಉಚಿತವಾಗಿ ತರುವುದು ಅಪರಾಧ ಎಂದು ಭಾವಿಸಿ ಅಂದಿನ
ಕಾಲದಲ್ಲಿ ಹೆಣ್ಣಿನ ತಂದೆ-ತಾಯಿಯವರಿಗೆ ಅಲ್ಪ ಪ್ರಮಾಣದ ಹಣ ನೀಡಿ
ತರುವ ಪದ್ಧತಿ “ತರು ನೀಡುವುದು” ಎಂದು ಕರೆಯುತ್ತಿದ್ದರಂತೆ. ಆದರೆ
ಅದು ಈಗ ಕಾಲಕ್ರಮೇಣವಾಗಿ ನಿಂತು ಹೋಗಿದೆ. ಅದರ ಬದಲಾಗಿ
ವರದಕ್ಷಿಣೆ ನೀಡುವ ಪದ್ಧತಿ ಬಂದಿದೆ. ನಮ್ಮ ಮದುವೆಯಲ್ಲಿಯೇ ನಿಮಗೆ
ಎರಡು ಸಾವಿರ ರೂಪಾಯಿ ವರದಕ್ಷಿಣೆ ನೀಡಲಿಲ್ಲವೇ ?’ ಅದಕ್ಕಾಗಿ ಈಗ
ನಮ್ಮ ಮಕ್ಕಳ ಮದುವೆಗೆ ವರದಕ್ಷಿಣೆ ಕೊಡುವುದು ಹೇಗೆ ? ಎಂಬ ಚಿಂತೆ
ಕಾಡುತ್ತಿದೆ. ಕಿತ್ತು ತಿನ್ನುವ ಬಡತನದಲ್ಲಿ ವರದಕ್ಷಿಣೆ, ಮದುವೆ ವೆಚ್ಚ ಹೇಗೆ
ಭರಿಸುವುದು ಎಂದು ಮಾದಣ್ಣನಿಗೆ ರಂಗಮ್ಮ ವಿವರವಾಗಿ ಹೇಳಿದಳು.
ಇರಲಿ ರಂಗೂ, ಏನಾದರು ಮಾಡಲೇ ಬೇಕಲ್ಲವೇ ? ‘ಇನ್ನೂ ನಾಲ್ಕಾರು ವರ್ಷ ಸಾಹುಕಾರನಲ್ಲಿ ದುಡಿದು
ಸಾಲ
ತೀರಿಸುವೆ. ಸಾಲ-ಶೂಲ
ಏನಾದರೂ ಮಾಡಿ ಮದುವೆ ಮುಗಿಸೋಣ’ ಎಂದು
ಹೇಳಿದನು.
ಧೈರ್ಯ
ಆಷಾಢ ಮಾಸ ಪ್ರಾರಂಭವಾಗಿತ್ತು. ಹೊಲದಲ್ಲಿ ತುಂಬ
ಕೆಲಸ.
ಸುರೇಂದ್ರನು ಬಿಡುವು ನೀಡದಂತೆ ಒಂದರ ಮೇಲೊಂದು ಕೆಲಸಗಳು
ನಿರಂತರವಾಗಿ ಮಾದಣ್ಣನಿಗೆ ಹೇಳುತಿದ್ದನು. ಉಸಿರಾಡುವುದಕ್ಕೂ ಅವಕಾಶ
ನೀಡದಂತೆ ದುಡಿಸಿಕೊಳ್ಳುತ್ತಿದ್ದನು. ಸ್ವಲ್ಪವೂ ತಪ್ಪಾದರೆ ಬೈಯ್ಯುವುದು, ಕಷ್ಟ
ಕೊಡುವುದು ಸುರೇಂದ್ರನ ಮನೋಧರ್ಮವಾಗಿತ್ತು.
ಪುಷ್ಯ ನಕ್ಷತ್ರ ಮಳೆ ಆಗತಾನೆ ಪ್ರಾರಂಭವಾಗಿತ್ತು. ಸತತವಾಗಿ
ಮೂರು ದಿನಗಳಿಂದ ಹಗಲು-ರಾತ್ರಿ ಒಂದೇ ಸಮನೆ ಮಳೆ ಸುರಿಯುತಿತ್ತು.
ಮೋಡದ ಮರೆಯಿಂದ ಸೂರ್ಯ ಅಪರೂಪನಾಗಿದ್ದನು. ಹಳ್ಳ-ಕೊಳ್ಳಗಳು
ತುಂಬಿ ಹರಿಯುತ್ತಿದ್ದವು. ದನಕರುಗಳು ಕೊಟ್ಟಿಗೆಯಿಂದ ಬಿಟ್ಟು ಅಡವಿಗೆ
ಮೇಯಿಸಲು ತೆಗೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು. ಕೂಲಿ
ಕೆಲಸವಿಲ್ಲದೆ ರಂಗಮ್ಮ ಮನೆಯಲ್ಲಿಯೇ ಕುಳಿತಿದ್ದಳು. ಮಾದಣ್ಣನಂತೂ
ಸಾಲದಲ್ಲಿ ದುಡಿಯುತಿದ್ದನು. ಮನೆಯಲ್ಲಿ ಒಂದು ಕಾಳು ಜೋಳ-ಬೇಳೆ
ಇರಲಿಲ್ಲ. ಇದ್ದವರು ಸಾಲ ನೀಡುವುದು ಅಸಾಧ್ಯದ ಮಾತಾಗಿತ್ತು. ಎಲ್ಲ
ಹೊಲ-ಗದ್ದೆಗಳು ಅತಿವೃಷ್ಟಿಯಿಂದ ಬೆಳೆ
ಬಂದಿತ್ತು. ‘ದುಡಿಯಲು ಕೆಲಸವಿಲ್ಲ ಹೊಟ್ಟೆಗೆ ಹಿಟ್ಟಿಲ್ಲ’, ‘ಕೈಯಲ್ಲಿ ಕಾಸಿಲ್ಲ
ಹಾಳಾಗುವ ಸ್ಥಿತಿ ಒದಗಿ
ಮನೆಯಲ್ಲಿ ಕಾಳಿಲ್ಲ’ ಎಂಬಂತೆ ಕಾಲಘಟ್ಟ ಆವರಿಸಿತು. ಅಂದು ಸಂಜೆ
ಅಡುಗೆ ಮಾಡಲು ಏನೂ ಇಲ್ಲದೆ ಪತಿ-ಪತ್ನಿ ಚಿಂತೆಗೊಳಗಾದರು.
‘ಮಕ್ಕಳಿಗಾದರು ಅಲ್ಪ-ಸ್ವಲ್ಪ ಅರೆ ಹೊಟ್ಟೆಯ ಅನ್ನ ಸಿಕ್ಕರೂ ಸಾಕು. ನಾವು
ಹಾಗೆ ಉಪವಾಸ ಮಲಗಿ ರಾತ್ರಿ ಕಳೆಯೋಣ’ ಎಂದು ರಂಗಮ ಮರುಗಿದಳು. ಅಡವಿಯಿಂದ ತಂದ ನಾರಿನ ಸೊಪ್ಪು (ಮುಂಡೆ ತಪ್ಪಲು)
ಮತ್ತು ಹಸಿಮೆಣಸಿನಕಾಯಿ ಖಾರ ಕೂಡಿಸಿ ಎರಡು ಮುದ್ದೆ ಮಾಡಿ
ಮಕ್ಕಳಿಗೆ ಕೊಟ್ಟಳು. ಮಕ್ಕಳು ಅದನ್ನು ತಿಂದು ನೀರು ಕುಡಿದ
ಮಲಗಿದರು. ತಾವು ಅಳಿದುಳಿದ ತೊಪ್ಪಲು ಮತ್ತು ಖಾರ ತಿಂದು ನೀರು
ಕುಡಿದು ಮಲಗಿದರು.
ಮರುದಿನ ಬೆಳಿಗ್ಗೆ ಮಳೆಯ ಜೋರು ಕಡಿಮೆಯಾಗಿತ್ತು. ಆದರೂ
ಜಿಟಿಜಿಟಿಯಾಗಿ ಮಳೆ ಸುರಿಯುತ್ತಿತ್ತು. ಮಾದಣ್ಣನು ತನ್ನ ದಿನನಿತ್ಯದ
ಸಾಹುಕಾರನ ಎತ್ತುಗಳು ಹೊಡೆದುಕೊಂಡು 3
ದುಡಿಮೆಗಾಗಿ
ಮಳೆಯಲ್ಲಿಯೇ
ಅಡವಿಗೆ
ತೆರಳಿದನು. ರಂಗಮ್ಮಳು ಗ್ರಾಮದ
ಮನೆಯೊಂದರಲ್ಲಿ ಮಾಳಿಗೆಯ ಮೇಲೆ ಜೇಡಿ ಮಣ್ಣು ಕುಟ್ಟಲು ಕೂಲಿಗಾಗಿ
ಹೋದಳು. ಶಾಂತಿ ಮತ್ತು ಕಾಂತಿಯವರು ಮನೆಯಲ್ಲಿರದೆ ಉರುವಲು
ಆರಿಸಿ ತರಲು ಕಾಡಿಗೆ ಹೋದರು. ಒಣಗಿದ ಕಟ್ಟಿಗೆಗಳು ಸಿಗದ ಕಾರಣ
ಧರಿಯಿಂದ ಹಸಿದಾದ ಫುಲಾರಿ ಕಟ್ಟಿಗೆಗಳು ಮುರಿದು ಎರಡು ಹೊರ
ಮಾಡಿ ಇಬ್ಬರು ಅಕ್ಕ-ತಂಗಿಯರು ತಂದರು. ಒಲೆ ಊದಿ ಅಡುಗೆ
ಮಾಡುವುದು ಅತಿ ಕಷ್ಟದ ಕೆಲಸವಾಗಿತ್ತು. ‘ಫುಲಾರಿ ಜಾತಿಯ ಕಟ್ಟಿಗೆ
ಅಲ್ಪಸ್ವಲ್ಪ ಹಸಿ ಇದ್ದರೂ ಉರಿಯುವ ಕಟ್ಟಿಗೆ ಯಾಗಿದೆ’ ಎಂದು ತಾಯಿ
ಹೇಳಿದ ಅನುಭವದಿಂದ ಮಕ್ಕಳು ಅದನ್ನೇ ಕಡಿದು ತಂದರು.
ಅರಿವಿಲ್ಲದಂತೆ ಕಾಲಗಳು ಉರುಳುತ್ತವೆ. ಬಾಲ್ಯದಿಂದ ಪ್ರೌಢ
ತರುಣತನ, ಗ್ರಹಸ್ಥ, ವೃದ್ಧಾಪ್ಯದ ಹಂತಗಳು ಆವರಿಸುವ ನಿಖರವಾದ
ಅವಧಿ ತಿಳಿಯುವುದಿಲ್ಲ. ಅಂತೆಯೇ ಶಾಂತಿ ಬೆಳೆದು ದೊಡ್ಡವಳಾದಳು.
ಚಳಿಗಾಲದ ನಡು ಅವಧಿಯ ದಿನಗಳು ಅಂದು ಶುಕ್ರವಾರ
ಶಾಂತಿ ಮೈನೆರೆದಳು. ಅಂದಿನ ಕಾಲದ ರೂಢಿಯಂತೆ ಮಗಳು ಮೈನೆರೆದರೆ
ಹೊತ್ತಿಗೆ ತೆಗೆಸಿ ಕಾರ್ಯಕ್ರಮ ಮಾಡುವುದು. ನಡೆದುಬಂದ ಪದ್ಧತಿ,
ರಂಗಮ್ಮ ದಂಪತಿಗಳು ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಹಾರುವರ
ಮನೆಗೆ ಹೋಗಿ ಪಂಚಾಂಗ ತೆಗೆಸಿದರು. ‘ಮಗಳು ಮೈನೆರೆದ
ಮುಹೂರ್ತವನ್ನು ಕೇಳಿ ಎಷ್ಟು ದಿವಸದ ಕಾರ್ಯಕ್ರಮ ಆಚರಣೆ
ಮಾಡುವುದು’ ಎಂದು ಕೇಳಿದರು. ಅದಕ್ಕೆ ಬ್ರಹ್ಮಣನು ಒಂಬತ್ತು ದಿನ
ಕೂಡಿಸಿ ಕಾರ್ಯಕ್ರಮ ಮುಗಿಸುವುದು ಎಂದು ಹೇಳಿ. ಎಲ್ಲವೂ ಚೆನ್ನಾಗಿದೆ
ಆತಂಕ ಪಡಬಾರದು. ಆದರೆ ಒಂದು ಮಾತು….’ ಎಂದು
ಹೇಳುತ್ತಲೆ ಮಾದಣ್ಣ ಏನು ಮಹಾರಾಜರೆ, ‘ಯಾವ ಮಾತು ?’,
‘ಏನಾದರೂ ಆತಂಕ ಇದೆಯೇ’ ಎಂದು ಕೇಳಿದನು. ಇಲ್ಲ, ಅಂತದ್ದೇನು
ಸಮಸ್ಯೆ ಇಲ್ಲ. ಆದರೆ ನಿಮ್ಮ ಮಗಳು ಮೈನೆರೆದ ಗಳಿಗೆಯಲ್ಲಿ ಅಲ್ಪ
ಕುಂದು ಇದೆ. ಅದನ್ನು ನಿವಾರಿಸಲು ನೀವು ೧೦೧ ಬ್ರಾಹ್ಮಣರಿಗೆ
ಊಟೋಪಚಾರ ಮಾಡಿಸಿ ಸಂತೃಪ್ತಿಯಾಗುವಂತೆ ದಾನ ಮಾಡಬೇಕು.
ಒಂದು ಸುಂದರವಾದ ಬಿಳಿ ಬಣ್ಣದ ಆಕಳನ್ನು ಬ್ರಾಹ್ಮಣರಿಗೆ ದಾನ
ಮಾಡುವುದರೊಂದಿಗೆ ಉಡುಗೊರೆ ನೀಡಬೇಕು. ಮನೆಯಲ್ಲಿ ನಿಮ್ಮ
ಮನೆದೇವತೆಗೆ ಸಂತೃಪ್ತಿಪಡಿಸಲು ದೇವಿ ಕಾರ್ಯ ನಡೆಸಬೇಕಾಗುವುದು.
ಒಂದು ವೇಳೆ ಈ ಪರಿಹಾರ ಮಾಡಿಕೊಳ್ಳದಿದ್ದರೆ ಅವಳ ಜೀವನದಲ್ಲಿ
ಕಷ್ಟಗಳು ಎದುರಾಗಬಹುದು’ ಎಂದು ತಿಳಿಸಿದನು. ಮಗಳ ಜೀವನದ
ಅಘಾತ ಪೂರಕವಾದ ಬ್ರಾಹ್ಮಣನ ಮಾತು ಕೇಳಿ ಮಾದಣ್ಣ ಮತ್ತು
ರಂಗಮ್ಮ ಕುಸಿದು ಬಿದ್ದು ಚೈತನ್ಯರಹಿತ ಶರೀರದವರಾದರು. ಸರಿ ಆಯ್ತು
ಮಹಾರಾಜರೆ, ಎಲ್ಲಾ ಕ್ರಿಯೆಗಳು ಮುಗಿಸುತ್ತೇವೆ ಎಂದು ಹೇಳಿ ತಮ್ಮ
ಮನೆಗೆ ತೆರಳಿದರು.
ಮನೆಗೆ ಬಂದ ನಂತರ ಮಾದಣ್ಣನು ಏನೂ ತೋಚದೆ…
‘ರಂಗೂ ಎಂತಹ
ಅವಘಳಿಗೆಯಲ್ಲಿ ದೊಡ್ಡವಳಾದಳು.
ಪರಿಹಾರಕ್ಕಾಗಿ ಎಲ್ಲಾ ಕ್ರಿಯೆಗಳು ಹೇಗೆ ನೆರವೇರಿಸುವುದು. ಖರ್ಚಿಗಾಗಿ
ಹಣದ ವ್ಯವಸ್ಥೆ ಹೇಗೆ ?’ ಎಂದು ತನ್ನ ಪತ್ನಿಗೆ ಕೇಳಿದನು. ರಂಗಮ್ಮ
ಸ್ವಾಮಿ ನನಗೂ ಏನು ತಿಳಿಯದಾಗಿದೆ. ‘ಮಕ್ಕಳ ಮದುವೆ ಮಾಡುವುದೇ
ದೊಡ್ಡ ಸಮಸ್ಯೆ ಇದ್ದಾಗ ಇಂತಹ ಚಿಕ್ಕ-ಪುಟ್ಟ ಮಾರ್ಗಮಧ್ಯದ ಕ್ರಿಯೆಗಳು
ಪೂರ್ಣಗೊಳಿಸುವುದು ಹೇಗೆ’ ಎಂದಳು.
ಮರೋಹಿತನ ಹೇಳಿಕೆ ಪ್ರಕಾರ ಶಾಂತಿಯನ್ನು ಒಂಬತ್ತು ದಿವಸ
ಕೂಡಿಸಿದರು. ಕೊನೆಯ ದಿನ ಬಂಧು-ಬಳಗದವರನ್ನು ಕರೆದು
ಕಾರ್ಯಕ್ರಮ ಮಾಡಿದರು. ಆ ಕಡೆ ಬ್ರಹ್ಮಣರ ಉಟೋಪಚಾರಕ್ಕಾಗಿ
ದವಸ ಧಾನ್ಯ ನೀಡಿ ಉಡುಗೊರೆ ಸಲ್ಲಿಸಿದ್ದರು. ಒಂದು ಬಿಳಿ ಆಕಳನ್ನು
ದಾನ ನೀಡಿದ್ದರು. ಈ ಎಲ್ಲಾ ಖರ್ಚಿಗಾಗಿ ಸಾಹುಕಾರನಿಂದ ತಂದೆ
ಸಾಲವೆ ಆಧಾರವಾಗಿ ಮಾದಣ್ಣ ಬೆನ್ನು ಮೂಳೆ ಮುರಿದಂತಾಯಿತು. ಎಲ್ಲ
ನೆಂಟರು, ಬಂಧು-ಮಿತ್ರರು ಶಾಂತಿಗೆ ಉಡುಗೊರೆಯೊಂದಿಗೆ ಆಹಾರ
ಸಾಮಗ್ರಿಗಳನ್ನು ತಂದು ಊಟ ಮಾಡಿಸಿದರು. ಮಹಿಳೆಯರು ಅಂದು
ತಡರಾತ್ರಿಯವರೆಗೆ ಶೋಬಾನೆ ಹಾಡುಗಳನ್ನು ಹಾಡಿದರು. ಮುಂಜಾನೆ
ಎಲ್ಲಾ ಬಂಧು-ಮಿತ್ರರು ತಮ್ಮ ತಮ್ಮ ಊರಿಗೆ ಹೊರಟರು.
ಮಾದಣ್ಣನ ‘ಭಾವ ಮೈದುನರು ಎಲ್ಲಾ ಕಾರ್ಯಗಳು
ಪೂರ್ಣಗೊಂಡ ನಂತರವೇ ತೆರಳುವುದು ಎಂದು’ ನಿರ್ಧರಿಸಿದ್ದರು. ಅದು
ಚಿಕ್ಕ ಗ್ರಾಮ, ಸಾಮಾಜಿಕ ಅಸಮಾನತೆ ತುಂಬ ಹಾಸುಹೊಕ್ಕಾಗಿತ್ತು.
ಮೇಲು ಕೀಳು ಭಾವನೆಗಳು, ಹಳೆಯ ಸಂಪ್ರದಾಯಗಳು ತುಂಬ
ಪ್ರಭಾವಿಯಾಗಿದ್ದವು. ಶೋಷಿತರಿಗೆ ನಿಜವಾದ ಬಾಳುವ ಹಕ್ಕು ಇರಲಿಲ್ಲ.
ಗ್ರಾಮದಲ್ಲಿ ಹೋಟಲ್‌ಗಳು ಇದ್ದರೂ ಅವು ಸವರ್ಣಿಯರಿಗೆ
ಮೀಸಲಾಗಿದ್ದವು. ದಲಿತರು ಹೋಟಲ್‌ಗಳಿಗೆ ತೆರಳಿ ಚಹಾ ತಿಂಡಿ
ಮಾಡುವುದು ಅಸಾಧ್ಯದ ಮಾತಾಗಿತ್ತು. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯಂತೆ
ಮೇಲಿಂದ ನೀರು ಕೊಡುವುದು, ದಲಿತರಿಗಾಗಿ ಮೀಸಲಿದ್ದ ಹೊರಗಿಟ್ಟ
ಗ್ಲಾಸುಗಳಲ್ಲಿ ಚಹಾ ಕೊಡುವ ಪದ್ಧತಿ ಜಾರಿಯಲ್ಲಿತ್ತು. ಮಾದಣ್ಣನ ಭಾವ
ಬಸಪ್ಪ ಮತ್ತು ಮೈದುನ ರಾಮು ಗ್ರಾಮದ ಚಹಾದ ಅಂಗಡಿಗೆ ತೆರಳಿ
ಚಹಾ ಕುಡಿಯಲು ಹೋದಾಗ ಅಸ್ಪಶ್ಯತೆ ಕಾರಣ ತಲೆದೋರಿ ಜಗಳ
ಪ್ರಾರಂಭವಾಯಿತು. ಚಹಾ ಅಂಗಡಿಯ ಯಜಮಾನ ಶಂಕೆಪ್ಪನವರು
ಯಾವುದೇ ಕಾರಣಕ್ಕೂ ಸಹಮತಿಗೆ ಸಿದ್ಧನಿಲ್ಲವೆಂದು ಹೇಳಿ ಜಗಳ ಕಾಲು
ಕೆದರಿ ನಿಂತರು. ಗ್ರಾಮದ ಪ್ರಜ್ಞಾವಂತ ಜನರು ಸಮಸ್ಯೆ ಪರಿಹಾರಕ್ಕಾಗಿ
ಹೆಣಗಾಡಿದರು. ಆದರೆ ಪರಿಹಾರ ಸಾಧ್ಯವಾಗಲಿಲ್ಲ. ಶಂಕರಪ್ಪನವರು
ಮುಂದುವರೆದು ತಮ್ಮ ಮಕ್ಕಳ ಮತ್ತು ಹಿತೈಷಿಗಳ ಸಹಕಾರದಿಂದ ಬಸಪ್ಪ
ಮತ್ತು ರಾಮು ಅವರ ಮೇಲೆ ಕೈ ಮಾಡಿ ತನ್ನ ದಬ್ಬಾಳಿಕೆ
ತೋರಿಸಿಕೊಟ್ಟನು. ಅಸಹಾಯಕರಾದ ಶೋಷಿತರು ಮೌನವಹಿಸಿ
ತೆರಳಿದರು.
‘ಭಾರತೀಯ ವೈದಿಕ ಸಮಾಜ, ಸಂಸ್ಕೃತಿ, ಸಂಪ್ರದಾಯಗಳು
ನಡೆದು ಬಂದ ದಾರಿಯಲ್ಲಿಯೇ ನಾನು ನಡೆಯಬಯಸುತ್ತೇನೆ. ಸಮಾನತೆ
ಅದು ಹೇಗೆ ಸಾಧ್ಯ ? ನಮ್ಮ ಸಮಾಜದಲ್ಲಿ ವರ್ಣಗಳು, ಜಾತಿ ಪದ್ಧತಿ,
ವರ್ಗಗಳು ರೂಢಿಯಲ್ಲಿರುವಾಗ ಅದನ್ನು ಮುರಿಯುವುದು ಅಪಚಾರವೇ
ಸರಿ. ಒಂದು ವೇಳೆ ಈ ಪದ್ಧತಿಯನ್ನು ಉಲ್ಲಂಘಿಸಿದರೆ, ಅದು ನಮ್ಮ
ಪೂರ್ವಜರಿಗೆ ಎಸಗಿದ ದೊಡ್ಡ ವಂಚನೆ’ ಎಂದು ತನ್ನ ಸಂಪ್ರದಾಯ
ಗ್ರಾಮದ ವಿಚಾರವಾದಿಗಳು, ಪ್ರಜ್ಞಾವಂತರು ಸೇರಿ ಅನ್ಯಾಯವನ್ನು ಮುಂದುವರೆಯದಂತೆ ಮತ್ತು ಅದನ್ನು ದುರ್ಬಲರ ಮೇಲೆ ಹೇರದಂತೆ
ಕ್ರಮ ಜರುಗಿಸಲು ಮುಂದಾದರು. ಶಂಕ್ರೆಪ್ಪನನ್ನು ಕರೆದು ಕೊನೆಗೆ
ಬುದ್ಧಿವಾದ ಹೇಳಿದರು. ಆದರೂ ಅವನು ಇದು ನನ್ನ ಮನೆಮಾತು,
ನನಗೆ ಬಿಟ್ಟ ವಿಷಯ’ ಎಂದು ಹೇಳಿದುದಕ್ಕೆ ಮನೆ ನನ್ನ ಸ್ವಂತ ಆಸ್ತಿ.
ಅದನ್ನು ನೋಡಿಕೊಳ್ಳುವುದು ನನ್ನ ವಿಚಾರ.
ಸ್ಥಳಗಳಲ್ಲಿ ಕಾನೂನು ಪ್ರಕಾರ ಪ್ರವೇಶಕ್ಕೆ ನಿರ್ಬಂಧ ಹೇರುವುದು
ಅಪರಾಧ. ಇಲ್ಲಿ ಎಲ್ಲರೂ ಸಮಾನರು’ ಎಂದು ಹಿರಿಯರು ತಿಳಿಹೇಳಿದರು.
ಪಾಪ ಬಡಪಾಯಿ ಮಾದಣ್ಣನು ತನ್ನ
ತನ್ನ ಭಾವ ಮೈದುನರನ್ನು
ಕರೆದುಕೊಂಡು ‘ಆಗಲಿ ಯಜಮಾನರೆ ತಾವೇ ದೊಡ್ಡವರು. ನಮ್ಮ ಮೇಲೆ
ಅನ್ಯಾಯವಾದರೆ ಹೋರಾಡುವುದು ನಮ್ಮ ಹಕ್ಕಾಗಿದೆ ಆದರೂ ಇಂದು
ನಾವು ಸಹಿಸಿಕೊಳ್ಳುತ್ತೇವೆ’ ಎಂದು ಹಿರಿತನ ತೋರಿಸಿ ತಮ್ಮ ಮನೆಗೆ
ತೆರಳಿದರು.
ಅತ್ತ ಸುರೇಂದ್ರನು ತನ್ನ ದಿನ ನಿತ್ಯದ ಕೃಷಿ ಕಾರ್ಯಗಳಲ್ಲಿ
ಮಾದಣ್ಣನಿಂದ ಅಲ್ಪಸ್ವಲ್ಪ ತಪ್ಪಾದರೂ ಮಾದಣ್ಣನ ಮೇಲೆ ದಬ್ಬಾಳಿಕೆ
ಅಸಹಾಯಕತೆಯಿಂದ ಮಾದಣ್ಣ
ಮುಂದುವರೆಸಿದನು.
ಸೋತು
ಸಪ್ಪೆಯಾಗಿದ್ದನು. ಒಂದು ಕಡೆ ಕಿತ್ತು ತಿನ್ನುವ ಬಡತನ, ಮತ್ತೊಂದು ಕಡೆ
ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಮದುವೆಯ ಚಿಂತೆ. ಇನ್ನೊಂದು ಕಡೆ
ಸಾಹುಕಾರನ ದಬ್ಬಾಳಿಕೆ. ಹೀಗೆ ಅಷ್ಟ ದಿಕ್ಕುಗಳಿಂದ ಮುಳ್ಳು ಚುಚ್ಚಿದಂತೆ
ಕಷ್ಟಗಳು ಎರಗಲು ಪ್ರಾರಂಭವಾದವು. ಜೀವನದಲ್ಲಿ ಜಿಗುಪ್ಪೆ ಮೂಡಲು
ಪ್ರಾರಂಭವಾಯಿತು. ಮಡದಿಗೆ ಅಂತರಾಳದ ನೋವನ್ನು ಹೇಳಿಕೊಂಡು
ಒಮ್ಮೊಮ್ಮೆ ಮನ ಹಗುರು ಮಾಡಿಕೊಳ್ಳಲು ಮಾದಣ್ಣ ಯತ್ನಿಸುತ್ತಿದ್ದನು.
ಒಂದೊಂದು ಸಲ ಏಕಾಂಗಿಯಾಗಿ ಕುಳಿತು ಭಾರತದ ಸಮಗ್ರ ಸಾಮಾಜಿಕ
ವ್ಯವಸ್ಥೆ ಬಗ್ಗೆ ಅವಲೋಕಿಸಿ ಅದರ ಕುರುಡು ಸಂಪ್ರದಾಯಗಳಿಗೆ ತನ್ನಷ್ಟಕ್ಕೆ ತಾನೇ ದೂಷಿಸುತ್ತಿದ್ದನಲ್ಲದೆ ಗೆಳೆಯರೊಂದಿಗೆ ಚರ್ಚಿಸಿ ಅದನ್ನು
ಖಂಡಿಸುತ್ತಿದ್ದನು.
ವರದಕ್ಷಿಣೆ, ವರ್ಗ ವೈಷಮ್ಯ, ಜಾತೀಯತೆ, ಅಸಮಾನತೆ,
ವ್ಯಭಿಚಾರ, ಅನ್ಯಾಯ, ಅತ್ಯಾಚಾರ ಹೀಗೆ ಹಲವಾರು ಅವೈಜ್ಞಾನಿಕ,
ಸಮಾಜಿಕ ರೂಢಿಗಳ ಕುರಿತು ವ್ಯಾಪಕವಾಗಿ ಖಂಡನೆಯಾಗಬೇಕು. ಅದರ
ಪರಿವರ್ತನೆಯಿಂದ ಮಾತ್ರ ಭಾರತದಲ್ಲಿ ಸದೃಢ ಸಮಾಜ ನಿರ್ಮಾಣ
ಮಾಡಲು ಸಾಧ್ಯವೆಂದು ಬಲವಾಗಿ ನಂಬಿದ್ದನು.. ‘ಇದು ಸಮಾಜಕ್ಕೆ
ಶಾಶ್ವತವಾಗಿ ಅಂಟಿಕೊಂಡ ಕಪ್ಪು ಕಲೆ’ ಎಂದು ಪ್ರತಿಪಾದಿಸುತ್ತಿದ್ದನು.
‘ಇಂತಹ ಕಪ್ಪು ಕಲೆ ಹೊಡೆದಾಡಿಸುವುದಾದರೆ “ಆ ಕಪ್ಪು ಕಲೆ” ಎಂಬ
ಮೌಡ್ಯ ಅಳಿಯಲೇಬೇಕು’ ಎಂದು ಮನಗಂಡಿದ್ದನು. ಬುದ್ಧ, ಮಹಾವೀರ,
ಬಸವಣ್ಣರಂತಹ : ಅನೇಕ ಮಹಾಪುರುಷರು ತಮ್ಮ ಜೀವನವನ್ನೇ
ಮುಡುಪಾಗಿಟ್ಟು ಸಮಾಜ ಸುಧಾರಣೆಗಾಗಿ ಶ್ರಮಿಸಿ ತಮ್ಮದೇ ಆದ
ಕೊಡುಗೆ ನೀಡಿದ್ದಾರೆ. ಆದರೂ ಈ ವ್ಯವಸ್ಥೆಯಿಂದ ಹೊರಬರಲು ಮೂಢ
ಜನರು ಯತ್ನಿಸದೆ ಮುಂದುವರೆಯುತ್ತಿರುವುದು ದುರದೃಷ್ಟಕರವೆಂದು
ಮುಂತಾಗಿ ತನ್ನ ಮನದ ನೋವನ್ನು ಸ್ವಗತವಾಗಿ ಹೇಳಿಕೊಳ್ಳುತ್ತಿದ್ದನು.
ಸೃಷ್ಟಿಯಲ್ಲಿ ಈ ಮಾನವಜಾತಿಗೆ, ಜನಾಂಗೀಯ, ಭಾಷೆ, ಉಡುಗೆ-
ತೊಡುಗೆ, ಆಚಾರ-ವಿಚಾರ, ಊಟ-ಉಪಚಾರಗಳು ವ್ಯತ್ಯಾಸವಿರಬಹುದು.
ಆದರೆ ಭಾವನೆ-ಕಲ್ಪನೆ, ಆಸೆ-ಆಕಾಂಕ್ಷೆಗಳಿಗೆಲ್ಲಿಯ ಭೇದಭಾವ. ಶರೀರದ
ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದು. ಆದರೆ ರಕ್ತ, ಮಾಂಸಖಂಡಗಳಲ್ಲಿ
ಯಾವ ವ್ಯತ್ಯಾಸವೆಂದು ಮನದಲ್ಲಿಯೇ ನೊಂದುಕೊಳ್ಳುತ್ತಿದ್ದನು. ಕಾಲ
ಪ್ರಾಚೀನವಾದರು ಮಾನವ ಮಾನವರಲ್ಲಿ ವ್ಯತ್ಯಾಸ ಉಂಟುಮಾಡಿಕೊಂಡು
ವರ್ತಿಸುವುದು, ಆಚರಿಸುವುದು. ಅನಕ್ಷರರ ಮನದಲ್ಲಿಯೂ ಬೆಳಕಿನ
ಚುಕ್ಕೆಗಳಾಗಿ
ಕಂಡುಬಂದ ಉದಾಹರಣೆಗಳುಂಟು. ಸಾಮಾಜಿಕ ಅಸಮಾನತೆಯ ಪ್ರತಿ ಪ್ರಸಂಗಗಳಲ್ಲಿ ಇಂತಹ ಅನೇಕ ಚಿಂತನಶೀಲ
ಭಾವನೆಗಳು ಬಿಸಿ ಉಸಿರಾಗಿ ಹೊರಹೊಮ್ಮುತ್ತಿದ್ದವು.
ಮಾದಣ್ಣನು ತನ್ನ ಮಗಳ ಮದುವೆಯ ಚಿಂತೆಯಲ್ಲಿ ಕಾಲ ಹಿಂದೆ
ತಳ್ಳಲು ಯತ್ನಿಸುತ್ತ ಶ್ರಮ ಜೀವನ ಸಾಗಿಸಲು ಪ್ರಾರಂಭಿಸಿದನು. ಆದರೂ
“ಪತ್ನಿ ಸಮಾಧಾನದ ಮಾತು ಹೇಳಿ ಜೀವನದಲ್ಲಿ ಎದುರಾಗುತ್ತಿರುವ
ಸಮಸ್ಯೆಗಳಿಗೆ ನಾವೇ ದಿಟ್ಟತನದಿಂದ ಎದುರಿಸಿ ಪರಿಹರಿಸಿಕೊಳ್ಳಬೇಕು’
ಎಂದು ಧೈರ್ಯ ಹೇಳುತ್ತಿದ್ದಳು.
(ಮುಂದುವರೆಯುವುದು….)
– ಎಸ್.ಎಮ್.ಜನವಾಡಕರ್. ಬೀದರ.
ಕವಿ ಪರಿಚಯ:
ಸಾಹಿತಿ ಎಸ್.ಎಂ.ಜನವಾಡಕರ್ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದವರು. ಎಂ.ಎ. ಬಿ.ಇಡಿಧರರು, ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಡಯಟ್‌ನ ಉಪನ್ಯಾಸಕರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿಯಾಗಿ ಸೇವೆ ಸಲ್ಲಿಸಿ, 2008 ರಲ್ಲಿ ನಿವೃತ್ತರಾಗಿರುತ್ತಾರೆ.
ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ’ ಹಸಿರು ಕ್ರಾಂತಿ’ ಮತ್ತು ‘ಬುದ್ಧ ಗೆದ್ದ ಮಾರನ ಯುದ್ಧ’ (ನಾಟಕಗಳು) ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನಸಂಕಲನಗಳು) ಬಣ್ಣದ ನಂಟು ಬಿಡದೆ ಅಂಟಿಕೊಂಡವರು, ಮಾಸಿದ ಹಾಸಿಗೆ, ಬದುಕು ಕಾದ ಕಂಬನಿ (ಕಾದಂಬರಿಗಳು) ಧಮ್ಮಾವೃತ ಗೀತೆ, ತಥಾಗತ ಗಾಥೆಗಳು (ಬುದ್ಧ, ಧಮ್ಮ ಚರಿತ ಕಾವ್ಯಗಳು) ಗಾಜಿನ ಬಳೆ ಚೂರು, ಕರುಳಿನ ಕತ್ತರಿ, ಕವಲು ದಾರಿಯ ಪಯಣ. (ವೈಚಾರಿಕ ಕೃತಿಗಳು) ಹಿಮ ಸಾಗರ (ಪ್ರವಾಸಕಥನ), ಕಲ್ಯಾಣ ಕಂಡ ಕಲ್ಯಾಣ (ಆಧುನಿಕ ವಚನ ಸಂಕಲನ) ಬೀದರ ಜನಪದ ಸಿರಿ (ಜಾನಪದ) ಬೆಡಗಿನ ಬೀದರ (ಐತಿಹಾಸಿಕ) ಎಂಬ ಕೃತಿಗಳನ್ನು ಪ್ರಕಟಿಸಲಾಗಿದೆ.