Oplus_131072

ಮಿರ್ಚಿಬಾಬಾ

ರಾಸೂರಿನ ಕುಂಟೀಕೆರೆಯಲ್ಲಿ ಈಗ ಯಾವ ಕುಂಟಿಯೂ ಇಲ್ಲ; ಕೆರೆಯೂ ಇಲ್ಲ,
ಕುಂಟೀಕೆರೆ ಎಂಬ ಹೆಸರೂ ಕೂಡ ಜನರ ನೆನಪಿನ ಅಂಗಳದಿಂದ ಈಗ ಮರೆಯಾಗುತ್ತಿದೆ.
ಇತ್ತೀಚೆಗೆ ಕುಂಟೀಕೆರೆಯ ಆಚೆಗಿರುವ ಮಠಾಧಿಪತಿಗಳ ವಾರಸುದಾರಿಕೆ ಇಲ್ಲದ ಪಾಳು
ಮಠದಲ್ಲಿ ಮಿರ್ಚಿಬಾಬಾರವರು ಬಂದು ನೆಲೆ ನಿಂತಾಗಿನಿಂದ ಅದಕ್ಕೊಂದು ಕಳೆ ಬಂದಿದೆ.
ರಾಸೂರು ರಾಷ್ಟ್ರೀಯ ಹೆದ್ದಾರಿ ಮೇಲಿದ್ದೂ ಯಾವ ನಕಾಶೆಯಲ್ಲೂ ಕಾಣಸಿಗದಂಥ
ಊರು.

ಮಿರ್ಚಿಬಾಬಾರ ಪೂರ್ವಾಪರ ಏನು, ಅವರು ಎಲ್ಲಿಂದ ಬಂದರು ಎಂಬುದು
ಯಾರಿಗೂ ಗೊತ್ತಿಲ್ಲ. ಹಿಮಾಲಯದಲ್ಲಿ ತಪಸ್ಸು ಮಾಡಿ ಬಂದವರೆಂದು ಜನ ನಂಬಿದ್ದಾರೆ.
ಅಂತೂ ಪುರಾಣ ಪ್ರಸಿದ್ಧವಾದ ರಾಸೂರನ್ನು ಜೀರ್ಣೋದ್ಧಾರ ಮಾಡಲು ಅವತರಿಸಿದ
ಮಹಾತ್ಮರು ಎಂದು ಹೇಳಿದರೆ ತಪ್ಪಲ್ಲ.
ಬಾಬಾರವರ ಮಹಿಮೆ ಅಪರಂಪಾರ. ಹೆದ್ದಾರಿಯ ಮೇಲೆ ಹಾದು ಹೋಗುವ
ಯಾವ ವಾಹನದ ಚಾಲಕನಾದರೂ ಒಂದು ಕ್ಷಣ ರಸ್ತೆಯ ಮೇಲೆ ಬ್ರೆಕ್ಕು ಹಾಕಿ ಗಾಡಿ
ನಿಲ್ಲಿಸಿ ಅಲ್ಲಿಂದಲೇ ಬಾಬಾರಿಗೆ ಕೈಮುಗಿದು ಮುಂದೆ ಸಾಗುತ್ತಾನೆ.
ಒಮ್ಮೆ ಸರಿರಾತ್ರಿ ಹೊತ್ತಿನಲ್ಲಿ ಸಿ.ಎಂ. ಅವರು ಆ ಮಾರ್ಗವಾಗಿ ಹೋಗುತ್ತಿದ್ದರು.
ರಾತ್ರಿಯಾಗಿದ್ದರೂ ಕೂಡ ಮುಂದೆ ಪೋಲೀಸ್ ಪೈಲಟ್ ಗಾಡಿ “ಸುಂಞ.ಸುಂಞ”
ಎಂದು ಸೈರನ ಬಾರಿಸುತ್ತ ಸಾಗಿದೆ. ಆದರೆ, ಮಠದ ಎದುರಿಗೆ ಬಂದೊಡನೆ ನೂರಾ
ಇಪ್ಪತ್ತು ವೇಗಮಿತಿಯಲ್ಲಿ ಓಡುತ್ತಿದ್ದ ಗಾಡಿ ಗಕ್ಕನೆ ನಿಂತಿತು. ಚಕ್ರಗಳು ತಿರುಗುತ್ತಿವೆ, ಆದರೆ
ಗಾಡಿ ಕೂದಲಿನಷ್ಟೂ ಮುಂದೆ ಸಾಗುತ್ತಿಲ್ಲ. ಸಿ.ಎಂ. ಅವರಿಗೂ ಆಶ್ಚರ್ಯ. ವಿಷಯ ತಿಳಿದು
ಸ್ವತಃ ಅವರು ತಮ್ಮ ಕಾರಿನಿಂದ ಇಳಿದು, ಆ ಸರಿರಾತ್ರಿಯಲ್ಲಿ ಯಾರಿಗೂ ತೊಂದರೆ
ಕೊಡುವುದು ಬೇಡ ಎಂದು ಬಾಬಾರವರು ನಿದ್ರಾ ಸಮಾಧಿಯಲ್ಲಿದ್ದ ಕೋಣೆಯ ಬಾಗಿಲಿಗೆ
ಶಣಮಾಡಿ ಹೋದರು. ಈ ಸಂಗತಿಯನ್ನು ಹೆದ್ದಾರಿಯ ಮೇಲೆ ಮೆಣಸಿಕಾಯಿಯ ಅಂಗಡಿ
ಇಟ್ಟುಕೊಂಡಿದ್ದ ಬಾಗವಾನರ ಮುರ್ತುಜಾ ಹೇಳಿದಾಗ ಮೊದ ಮೊದಲಿಗೆ ಜನ ನಂಬಲಿಲ್ಲ.
ಆದರೆ ಆ ದಿನ ಮುಂಜಾನೆ ಬಾಬಾರ ಕೋಣೆಯ ಬಾಗಿಲಿನ ಎದುರಿಗೆ ಬಂಗಾರದ ಕಟ್ಟು
ಹಾಕಿದ ಹೊಗೆಸೊಪ್ಪು ಸೇದುವ ಪೈಪು ಸಿಕ್ಕಾಗ ಮತ್ತು ಅದು ಸಿ.ಎಂ.ರದೇ ಎಂದು
ಮಂಡಲ ಸದಸ್ಯೆ ಗೋದೂಬಾಯಿ ತಾನು ತಾಲ್ಲೂಕಿನ ಪ್ರವಾಸಿ ಬಂಗ್ಲೆಯಲ್ಲಿ ಒಮ್ಮೆ
ಸಿ.ಎಂ.ರೊಂದಿಗೆ ಏಕಾಂತದಲ್ಲಿದ್ದಾಗ ಹತ್ತಿರದಿಂದ ನೋಡಿರುವುದರಿಂದ ಗುರುತಿಸುವುದಾಗಿ
ಸಾಕ್ಷಿ ನುಡಿದಾಗ ಜನ ನಂಬಲೇಬೇಕಾಯ್ತು.
ಮುಂದೆ ಕೆಲವೇ ದಿನಗಳಲ್ಲಿ ಚುನಾವಣೆಗಳು ಬಂದಾಗ ಸ್ವತಃ ಸಿ.ಎಂ.ರು ಬಂದು
ಬಾಬಾರಿಂದ ಸಂಶೋದಕ ಪಡೆದದ್ದು, ನಾಮಪತ್ರ ಸಲ್ಲಿಸಿ ಭಾರೀ ಬಹುಮತದಿಂದ
ಆರಿಸಿ ಬಂದದ್ದು ಮತ್ತು ಸುನಃ ಸಿ.ಎಂ. ಆಗಿ ಅಧಿಕಾರ ವಹಿಸಿಕೊಂಡದ್ದು ಜನಜನಿತವಾದ
ಸಂಗತಿಯಾಗಿದೆ.
ಇವೆಲ್ಲ ದೊಡ್ಡವರ ವಿಚಾರಗಳಾದರೆ ಜನಸಾಮಾನ್ಯರ ಅನುಭವಗಳು
ರೋಮಾಂಚಕಾರಿಯಾಗಿವೆ. ಗೊಡ್ಡುದನಗಳು ಕರು ಹಾಕುವುದಾಗಲೀ, ಹುಟ್ಟಾ
ಬಂಜೆಯಾದವಳು ಹೆರುವುದಾಗಲೀ, ಒಣಮರ ಚಿಗಿಯುವುದಾಗಲೀ ಈಗ ರಾಸೂರಿನಲ್ಲಿ
ಪುರಾಣ ಕತೆಗಳಾಗಿಲ್ಲ. ಎಂಟು ವರ್ಷಗಳ ನಂತರ ರಾಮೋಜಿಯವರ ಬಕುಳಾಬಾಯಿ
ಮುತ್ತಿನಂಥ ಮಗುವಿನ ತಾಯಿಯಾಗಿದ್ದಾಳೆ, ಹನ್ನೆರಡು ವರ್ಷದ ನಂತರ ಬಾಳಿ ನಿಂಗವ್ವನಿಗೆ
ಗರ್ಭ ನಿಂತಿದೆ. ಅದರಂತೆ ಬಾಬಾರ ಅನುಗ್ರಹದಿಂದಾಗಿ ಅನೇಕ ಮರ್ಯಾದಸ್ಥರ ವಂಶದ
ಬಳ್ಳಿಗೆ ಕುಡಿಗಳು ಮೂಡಿವೆ. ಮಠದಲ್ಲಿ ಒಣಗುತ್ತಿದ್ದ ರುದ್ರಾಕ್ಷಿ ಮರ ಈಗ ಚಿಗಿಯುತ್ತಿದೆ.
ಬಾಬಾರವರು ಈ ಲೌಕಿಕ ಪ್ರಪಂಚದಿಂದ ಮೇಲೆ ಏರಿದ್ದಾರೆ. ಸಿರಿ ಸಂಪತ್ತು
ಅವರಿಗೆ ಕಾಲು ಕಸವಾಗಿದೆ. ಆದರೂ ಧನಕನಕ ಅವರ ಅಡಿಗೆ ಹುಚ್ಚು ಹೊಳೆಯಾಗಿ
ಹರಿದು ಬರುತ್ತಿದೆ. ಮೆಣಸಿನಕಾಯಿಯೊಂದನ್ನು ಬಿಟ್ಟರೆ ಅವರಿಗೆ ಬೇರೊಂದು ಪ್ರಿಯವಾದ
ವಸ್ತು ಇದ್ದಂತಿಲ್ಲ. ಅವರ ಸಿದ್ಧಿಯ ರಹಸ್ಯವೂ ಕೂಡ ಮೆಣಸಿನಕಾಯಿಯೇ ಆಗಿದೆ.
ಮೆಣಸಿನಕಾಯಿಯನ್ನು ತ್ಯಜಿಸಿದ ದಿನವೇ ಅವರ ಸತ್ವ, ಸಿದ್ಧಿಗಳು ಕೊನೆಗೊಳ್ಳುವವೋ
ಏನೋ – ಎಂದೆನಿಸುತ್ತದೆ. ಆದ್ದರಿಂದಲೇ “ಮಿರ್ಚಿಬಾಬಾ” ಎಂಬುದು ಅವರಿಗೆ ಅನ್ವರ್ಥಕ
ನಾಮವಾಗಿದೆ. ಅವರು ಪ್ರಸಾದ ರೂಪವಾಗಿಯೂ ಮೆಣಸಿನಕಾಯಿಯನ್ನೇ ಅನುಗ್ರಹಿಸುತ್ತಾರೆ.
ವಿಶೇಷ ಸಂದರ್ಭದಲ್ಲಿ ವಿಶೇಷ ವ್ಯಕ್ತಿಗಳಿಗೆ ಮಾತ್ರ ಪಂಚೋದಕವನ್ನು ಅನುಗ್ರಹಿಸುತ್ತಾರೆ.
ಪಂಚೋದಕದ ಅನುಗ್ರಹವಾದವರ ಯಾವ ಕೆಲಸವೂ ಹುಸಿಯಾಗಿಲ್ಲ ಎಂದು ಜನ
ನಂಬಿದ್ದಾರೆ.

ಪಂಚಲೋಹದ ತಟ್ಟೆಯಲ್ಲಿಟ್ಟಿರುವ ಕಂತಿಕೂಡಿಸಿದ ಪಂಚಪಿಂಡಗಳಿಗೆ ಬಾಬಾರವರು
ತಮ್ಮ ಪಾದೋದಕದಿಂದ ಅಭ್ಯಂಜನ ಸ್ನಾನ ಹಾಕಿದ ಪವಿತ್ರ ಜಲವೇ ಪಂಚೋದಕ. ಆ
ಪಂಚ ಪಿಂಡಗಳೇ ಬಾಬಾರ ಆರಾಧ್ಯ ದೈವ ಎಂದು ಜನ ನಂಬಿದ್ದಾರೆ. ಆದರೆ ಅವುಗಳನ್ನು
ತಮ್ಮ ಪಾದತೊಳೆದ ನೀರಿನಿಂದ ಅಭಿಷೇಕ ಮಾಡುವುದರ ರಹಸ್ಯ ಯಾರಿಗೂ ಅರ್ಥವಾಗಿಲ್ಲ.
ಆಗಾಗ ಸಣ್ಣಪುಟ್ಟ ಪವಾಡಗಳನ್ನು ತೋರಿ ಜನರ ಮನಸ್ಸನ್ನು ತಮ್ಮ ವಶದಲ್ಲಿ
ಹಿಡಿದಿರುವುದು ಬಾಬಾರ ಒಂದು ತಂತ್ರವೇ ಆಗಿದೆ. ಆದರೆ ಮೊನ್ನಿನ ಪವಾಡ ಅಂತಿಂಥದಲ್ಲ.
ಮೊನ್ನೆ ಬಸವ ಜಯಂತಿಯ ದಿನ ದೊಡ್ಡ ಪವಾಡವೇ ನಡೆಯಿತು. ಈಗ ಒಂದೆರಡು
2
ತಿಂಗಳ ಹಿಂದೆ ಬಾಬಾರವರಲ್ಲಿ ಏನೋ ತಳಮಳ ಕಾಣಿಸಿಕೊಂಡಿತಂತೆ, ಕುಂತರೆ
ಸಮಾಧಾನವಿಲ್ಲ. ನಿಂತರೆ ಸಮಾಧಾನವಿಲ್ಲ. ಬಾಬಾರವರು ರೇಗುವುದೇ ಅಪರೂಪ,
ಆದರೆ ಈಗ ರೇಗುವುದು ಹೆಚ್ಚಾಗಿದೆ. ಹಿಂದೆ ಪತ್ತಾರ ಎಂಕಟೆ ಮಾತ್ರ ಆಗಾಗ ಬಂದು
ಅದೂ ಇದೂ ಮಾತಾಡುತ್ತಾ ಬಾಬಾರನ್ನು ರೇಗುವಂತೆ ಮಾಡಿ, ತಕ್ಷಣ ಅವರ ಕಾಲಿಗೆ
ಬಿದ್ದು ಕ್ಷಮೆ ಕೇಳುತ್ತಿದ್ದ, ಬಹಳ ದಿನಗಳವರೆಗೆ ಇದನ್ನು ಯಾರೂ ಗಮನಿಸಿಯೇ ಇರಲಿಲ್ಲ,
ಆದರೆ, ಅನುಮಾನ ಪ್ರವೃತ್ತಿಯ ಕೆಲವು ಶಿಷ್ಯರಿಗೆ ಒಮ್ಮೆ ಎಂಕಟ ಮೇಲೆ ಗುಮಾನಿ ಬಂದು
ಪತ್ತೆದಾರಿ ಕೆಲಸಮಾಡಿ, ಆತನ ಗುಟ್ಟು ರಟ್ಟು ಮಾಡಿದರು. ಬಾಬಾರವರು ರೇಗಿದಾಗ
ಸಾಂಕೇತಿಕ ಭಾಷೆಯಲ್ಲಿ ಮಟಕಾ ನಂಬರುಗಳು ಹೊರ ಬೀಳುತ್ತಿದ್ದುವಂತೆ. ಎಂಕಟ ಅವುಗಳನ್ನು
ಗಪ್ಪನೇ ಹಿಡಿದುಕೊಂಡು ರೇಗಿಸಿದ್ದಕ್ಕಾಗಿ ಕ್ಷಮೆ ಕೇಳಿ ಅಲ್ಲಿಂದ ಕಾಲು ಕೀಳುತ್ತಿದ್ದನಂತೆ. ಆ
ದಿನ ಆತನಿಗೆ ಜಾಯಿಂಟ ಗ್ಯಾರಂಟಿ. ಈ ವಿಚಾರ ಬಯಲಾದಾಗಿನಿಂದ ಎಂಕಟಿಯಂಥವರನ್ನು
ಬಾಬಾರ ಹತ್ತಿರ ಬಿಡುತ್ತಿರಲಿಲ್ಲ. ಆದರೆ ಈಗ ಬಾಬಾರಿಗೆ ಮಾನಸಿಕ ತಳಮಳ
ಶುರುವಾದಾಗಿನಿಂದ ಅವರು ವಿನಾಕಾರಣ ತಮಗೆ ತಾವೇ ರೇಗುತ್ತಿದ್ದರು. ನಗುನಗುತ್ತ
ಇದ್ದವರು ಒಮ್ಮೆಲೇ ಹಣೆಗೆ ಗಂಟು ಹಾಕಿಕೊಂಡು ದುರದುರನೇ ನೋಡುತ್ತ ಕುಳಿತು
ಬಿಡುತ್ತಿದ್ದರು.
ಯಾರ ಮುಂದೂ ಹೇಳಿಕೊಳ್ಳದೇ ತಮಗೆ ತಾವೇ ಒಳಗೊಳಗೇ ಪಡುತ್ತಿರುವ
ಅವರ ಸಂಕಟವನ್ನು ಅವರ ಅಂತರಂಗದ ಶಿಷ್ಯನಾದ ಶಿವಮೂರ್ತಿಯಿಂದ
ನೋಡುವುದಾಗಲಿಲ್ಲ.
“ಅಪ್ಪಾರೆ, ಯಾಕ ಹಿಂಗಾಗೀರಿ? ಏನು ವಿಚಾರ?” ಎಂದು ಶಿವಮೂರ್ತಿ
ಕಳಕಳಿಯಿಂದ ಕೇಳಿದ.
ಬಾಬಾರವರು ಮಾತಾಡಲಿಲ್ಲ. ಆತನನ್ನು ಒಂದು ಕ್ಷಣ ದುರುಗುಟ್ಟಿ ಕೊಂಡು
ನೋಡಿದರು. ಆದರೂ ಶಿವಮೂರ್ತಿ ಪಟ್ಟು ಬಿಡದೆ ಬಹಳ ಮುತುವರ್ಜಿಯಿಂದ ಅವರನ್ನು
ಆಗ್ರಹಪಡಿಸಿದ.
ಕೋಡಿ ಒಡೆದು ಹೊರಗೆ ಧುಮ್ಮಿಕ್ಕುವ ಕೆರೆಯ ನೀರಿನಂತೆ ಅವರ ಬಾಯಿಂದ
ಮಾತುಗಳು ಹೊರ ಹೊಮ್ಮಿದುವು.
“ಮಾಳಪಕ್ಷದಲ್ಲಿ ಎಡೆ ನುಂಗುವ ಆತ್ಮಗಳು ಮ್ಯಾಲೆ ಬಂದು ಸ್ಥಾಪನೆ ಆಗಬೇಕಂತಾವ.”
ಇದಕ್ಕೂ ಹೆಚ್ಚಿಗೆ ಬಾಬಾರವರು ಯಾವ ಸೂಚನೆಯನ್ನೂ ಕೊಡಲಿಲ್ಲ.
ಈ ವಿಚಾರವಾಗಿ ಭಕ್ತ ಮಂಡಳಿಯಲ್ಲಿ ಪರ್ಯಾಲೋಚನೆ ನಡೆದು ಬಾಬಾರ
ಇಂಗಿತಾರ್ಥ ಸ್ಪಟಿಕದಷ್ಟು ನಿಚ್ಚಳವಾಗಿ ಸ್ಪಷ್ಟವಾಯಿತು. ವರ್ಷದ ಇತರ ದಿನಗಳಲ್ಲಿ
ದಿಕ್ಕೇಡಿಯಾಗಿ ಭಣಗುಡುತ್ತಿದ್ದ ಮಠಕ್ಕೆ ಮಾಳಪಕ್ಷದಲ್ಲಿ ಒಂದಿಷ್ಟು ಮಹತ್ವ ಒದಗಿ ಬರುತಿತ್ತು.
ಮಠದ ಬಾವಿಕಟ್ಟೆಯ ಮೇಲಿರುವ ಅಪರೂಪದ ರುದ್ರಾಕ್ಷಿ ಗಿಡದ ಅಡಿಯಲ್ಲಿ ಮಾಳಪಕ್ಷದಲ್ಲಿ
ಪಿತೃವರ್ಗಕ್ಕಾಗಿ ಪಿಂಡವನ್ನು ಭೂಮಿಯಲ್ಲಿ ಐಕ್ಯ ಮಾಡುವ ಸಂಪ್ರದಾಯ ರಾಸೂರಿನಲ್ಲಿ
ಅನೂಚಾನವಾಗಿ ನಡೆದು ಬಂದಿದೆ. ಬಾಬಾರವರು ಆ ಸ್ಥಳದಲ್ಲಿ ಪಾದಗಟ್ಟಿ
ನಿರ್ಮಿಸಬೇಕೆನ್ನುತ್ತಾರೆಂದು ಭಕ್ತರು ಅರ್ಥ ಮಾಡಿಕೊಂಡರು. ಅದು ಹೇಗೆ, ಎಂತು
ಎಂಬುದರ ಬಗ್ಗೆ ಬಾಬಾರಿಂದ ಯಾವ ನಿರ್ದೇಶನವೂ ಇಲ್ಲ.
ಆದರೆ ಶಿವಮೂರ್ತಿಯು ಬಾಬಾರಿಗೂ ಭಕ್ತವೃಂದಕ್ಕೂ ಸಂಪರ್ಕ ಜೋಡಿಸುವ
ಕೊಂಡಿಯಾಗಿ ತಾನೇ ಹೊಣೆ ಹೊತ್ತು ನಿಂತ. ಪಿತೃಗಳ ಪಾದಗಟ್ಟೆಗಾಗಿ ನಾಲ್ಕೂ
ಊರಿನಿಂದ ಪ್ರತಿ ಮನೆಯಿಂದ ಒಂದೊಂದು ಹಿಡಿ ‘ಮದನ’ ಅಂದರೆ ಮೃತ್ತಿಕೆಯನ್ನು
ಸಂಗ್ರಹಿಸಬೇಕೆಂದು ಶಿವಮೂರ್ತಿ ಸೂಚನೆ ಕೊಟ್ಟನು. ಕೂಡಲೇ ಬೀಜ ಒಡೆಯದ
ಹೋರಿಗಳನ್ನು ಹೂಡಿದ ರಥಗಳು ಹಳ್ಳಿಹಳ್ಳಿಗೆ ಹೋಗಿ ಮೃತ್ತಿಕೆಯನ್ನು ತಂದು ರಾಸೂರಿನ
ಕೆಂಪು ನೆಲದ ಮೇಲೆ ರಾಶಿರಾಶಿಯಾಗಿ ಸುರುವಿದವು. ಆ ಕಪ್ಪು ಎರೆಮಣ್ಣಿನ ಹೆಂಟೆಗಳು
ಲಕಲಕನೆ ಹೊಳೆಯುತ್ತಿದ್ದುವು.
ದವನದ ಹುಣ್ಣಿಮೆಗೆ ಮೊದಲೇ ಪಾದಗಟ್ಟಿ ಸಿದ್ಧವಾಗಿದ್ದರೂ ಅದರ ಮೇಲೆ ಬರೀ
ಪಾದಗಳೋ ಅಥವಾ ಯಾವುದಾರೂ ವಿಗ್ರಹ ಸ್ಥಾಪಿಸಬೇಕೋ ಎಂಬ ಬಗ್ಗೆ ಯಾವ
ಖಚಿತವಾದ ನಿರ್ಣಯವೂ ಆಗಲಿಲ್ಲ. ಈ ನಡುವೆ ಒಂದು ದಿನ ಶಿವಮೂರ್ತಿಯು
ಮಟಾಮಾಯನಾಗಿ ವಾರಗಟ್ಟಲೇ ಆತನ ಪತ್ತೆಯೇ ಇಲ್ಲದಂತಾಯ್ತು, ಯಾವುದೋ
ತಪ್ಪಿಗಾಗಿ ಬಾಬಾರವರು ಶಿವಮೂರ್ತಿಯನ್ನು ಬಯ್ದು ಹೊರಹಾಕಿದ್ದಾರೆಂದು ಗುಣುಪುಣು
ಸುದ್ದಿ ಹಬ್ಬಿತು. ವಸ್ತುಸ್ಥಿತಿ ಏನೆಂಬುದು ಯಾರಿಗೂ ತಿಳಿಯದು. ಬಾಬಾರವರ
ಗಾಂಭೀರ್ಯದಲ್ಲಾಗಲೀ ಅವರ ಪ್ರಭಾವದಲ್ಲಾಗಲೀ ಕಿಂಚಿತ್ತೂ ಕೊಂಕು ಕಾಣಿಸಲಿಲ್ಲ.
ಪಾದಗಟ್ಟಿ ಬಗ್ಗೆ ಬಾಬಾರವರೇ ಉದಾಸೀನರಾದುದರಿಂದ ಜನರಲ್ಲಿಯೂ ಆ ಬಗ್ಗೆ ಆಸಕ್ತಿ
ಕಡಿಮೆಯಾಗಿತ್ತು.
ಆದರೆ ಮೊನ್ನೆ, ಬಸವಜಯಂತಿಗೆ ಎರಡು ದಿನ ಮುಂಚೆ ನಸುಕಿನಲ್ಲೇ ಶಿವಮೂರ್ತಿಯು
ಕಾಣಿಸಿಕೊಂಡು ಪಾದಗಟ್ಟಿಯ ಸ್ಥಳವನ್ನು ಮಟ್ಟಸ ಮಾಡುತ್ತಿರುವುದು ಕಂಡು ಬಂತು.
ಕೂಡಲೇ ಒಂದು ಕೈಗೆ ನಾಲ್ಕು ಕೈಗಳು ಸೇರಿ ಆ ಕಟ್ಟೆಯನ್ನು ಸಮಗೊಳಿಸಿದುವು.
ಬೇರೆಡೆಯಿಂದ ಯಾವುದೇ ವಿಗ್ರಹ ತಂದು ಸ್ಥಾಪಿಸುವುದಿಲ್ಲ. ಭೂಗತ ಆತ್ಮಗಳೇ ವಿಗ್ರಹದ
ರೂಪದಿಂದ ಉದ್ಭವಿಸುತ್ತವೆ ಎಂದು ಬಾಬಾರವರ ಅಪ್ಪಣೆಯ ಮೇರೆಗೆ ಶಿವಮೂರ್ತಿ
ಸಾರಿದ. ಮಿಂಚಿನಂತೆ ಈ ಸುದ್ದಿ ನಾಲ್ಕೂ ನಿಟ್ಟಿಗೂ ಹಬ್ಬಿ ಪತ್ರಿಕೆಗಳಲ್ಲೂ ಗುಲ್ಲು ಮಾಡುವ
ವಾರ್ತೆಯಾಯ್ತು. ಬಸವ ಜಯಂತಿಯ ಸಾಡೇತೀನ ಮುಹೂರ್ತವು ಮೂರ್ತಿಯ
ಉದ್ಭವಕಾಲ ಎಂದು ಘೋಷಣೆಯಾಯ್ತು.
ಬಸವ ಜಯಂತಿಯ ಹಿಂದಿನ ಇಡೀ ರಾತ್ರಿ ಯಾರಿಗೂ ನಿದ್ದೆಯಿಲ್ಲ. ಅಖಂಡ
ಭಜನೆ, ಮರುದಿನ ಉದ್ಭವದ ನಂತರ ಅಭಿಷೇಕ ಆರತಿ ಮುಂತಾದ ವಿಧಿಗಳು ಪೂರೈಸಿದ
ಮೇಲೆ ಭಕ್ತವೃಂದಕ್ಕೆ ಅನ್ನದಾಸೋಹ. ಇದೆಲ್ಲ ತರಾತುರಿಯಲ್ಲಿ ತಯಾರಾದ್ದರಿಂದ ಯಾರಿಗೆ
ಯಾರೂ ಏನೂ ? ಎಂದು ಕೇಳದೇ ತಮ್ಮ ತಮ್ಮಲ್ಲಿದ್ದ ಕಾಳುಕಡಿ, ಬೆಲ್ಲ, ಸಕ್ಕರೆ ಇತ್ಯಾದಿ ಮರಗಳನ್ನು
ತವ ಹೊತ್ತುತಂದು ಹಾಕಿದರು ಹತ್ತೂರಿಂದ ಹತ್ತು ಕಡಾಯಿ ತರಿಸಿ ಬೆಳಗಾಗುವುದರಲ್ಲಿ
ಹಸಿ ಅನ್ನ, ಸಾರು ಸಿದ್ಧಗೊಳಿಸಿದರು.
ಬಟ್ಟೆ ಮುಹೂರ್ತದಲ್ಲಿ ಪಾದಗಟ್ಟಿಯನ್ನೇ ಆಸನ ಹಾಕಿಕೊಂಡು ಧ್ಯಾನಾರೂಢರಾಗಿ
ಅಂತ ಬಾಬಾರವರಿಗೆ ಇವು ಯಾವುದರ ಪರಿವೆಯೂ ಇರಲಿಲ್ಲ. ಸರಿಯಾಗಿ ಐದೂವರೆಗೆ
ಬಾಬಾರವರು ತಮ್ಮ ಅಸನದಲ್ಲಿ ಕುಳಿತುಕೊಂಡೇ ಭೂಮಿಪೂಜೆಯನ್ನು ಪ್ರಾರಂಭಿಸಿದರು.
ಒಂದೊಂದು ಮಂಡು ಮೂಜಿ ಮುಗಿಸಿದ ಕೂಡಲೇ ಮುತ್ತೈದೆಯರು ತಾಮ್ರದ ಕಳಸಗಳನ್ನು
ತುಂಬ ಭೂತಾಯಿಯ ಗರ್ಭಕ್ಕೆ ತಂಪನ್ನು ಎರೆಯುತ್ತಿದ್ದರು. ಈ ನಿರಂತರ ಪೂಜೆಯ
ನಡುವೆ ಸುಮಾರು ಆರುಗಂಟೆಯ ಹೊತ್ತಿಗೆ ಭೂತಾಯಿಯ ಗರ್ಭವು ಬಿರಿಯಹತ್ತಿತು.
ಮಂತ್ರಮುಗ್ಧರಾಗಿ ಪೂಜೆಯನ್ನು ನೋಡುತ್ತಾ ನಿಂತಿದ್ದ ಜನಕೋಟಿಯು ಈ ಕೌತುಕವನ್ನು
ಕಂಡು ಹರ್ಷದ್ದಾರ ಮಾಡಹತ್ತಿತು. “ಮಿರ್ಚಿ ಬಾಬಾ ಕೀ ಜೈ, ಮಿರ್ಚಿ ಬಾಬಾ ಕೀ ಜೈ*
ಎಂಬ ಘೋಷಣೆಗಳಿಂದ ದಿಗ್‌ದಿಗಂತಗಳು ಮೊಳಗಿದುವು.
ಭೂತಾಯಿಯ ಗರ್ಭವು ಬಿರಿಯುತ್ತಾ ಬಿರಿಯುತ್ತಾ ಒಂದು ಜೋಡಿ ಚೂಪಾದ
ಖೋಡು ಕಲ್ಲುಗಳು ಮೇಲೆ ಚಿಮ್ಮಿ ಬರುವುದನ್ನು ಜನರು ತಮ್ಮ ಕಣ್ಣಾರೆ ಕಂಡರು. ಅದು
ಪೂರ್ಣ ಉದ್ಭವವಾಗುವವರೆಗೆ ತಾಳುವಷ್ಟು ಸಹನೆಯು ಇಲ್ಲದೇ ಜನರು ಹರ್ಷಾತಿರೇಕದಿಂದ
ಆ ಮೂರ್ತಿಯನ್ನು ಕೈಯಾಸರೆ ಕೊಟ್ಟು ಹೊರತೆಗೆದರು. ಸುಂದರವಾದ, ನುಣುಪಾದ,
ಕಪ್ಪಾಗಿ ಮಿರಮಿರನೇ ಮಿರುಗುವ ಬಸವಣ್ಣ ಬಸವ ಜಯಂತಿಯ ದಿನ ನಂದಿಕೇಶ್ವರನ
ನಂದಿಕೇಶ್ವರನ ವಿಗ್ರಹವನ್ನು ಈಚೆಗೆ ತೆಗೆದ ಮೇಲೆ ಅಲ್ಲಿ ಬಿದ್ದ ಗುಳಿಯಲ್ಲಿ ಎರೆಮಣ್ಣಿನ
ಹುಟಿಗಳು ಸುಟ್ಟ ಸುಣ್ಣದ ಕಲ್ಲುಗಳು ಮುತ್ತೈದೆಯರು ಎರೆದ ನೀರಿಗೆ ಬಿರಿದು ಭೂತಾಯಿ
ಗರ್ಭದಿಂದ ಚಿಮ್ಮಿ ಬರುತ್ತಿದ್ದವು. ಕೂಡಲೇ ಶಿವಮೂರ್ತಿಯು ಚಾಕಚಕ್ಯತೆಯಿಂದ ಆ
ಬೆಳಿಯನ್ನು ಮುಚ್ಚಿ ಹತ್ತಿದ, ಭಕ್ತಿಯ ಆವೇಶದಲ್ಲಿ ಹುಚ್ಚೆದ್ದ ಜನ ಆ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳದ ಶಿವಮೂರ್ತಿಗೆ ನೆರವಾಗಿ ಉದ್ಭವ ಸ್ಥಾನವನ್ನು ಮಟ್ಟಸ ಮಾಡಿ
ಚೊಕ್ಕಗೊಳಿಸಿದರು.
ಈ ಮಾಡವನ್ನು ಈಕ್ಷಿಸಲು ದೂರದೂರದಿಂದ ಜನ-ಜಂಗುಳಿ ಬಂದು ಸೇರಿತ್ತು.
ವರನ್ನು ಗೇಲಿ ಮಾಡುತ್ತಿದ್ದ. ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದ ಓದಿ ಹೊರಬಂದ
ಹಸಿಬಿಸಿ ಯುವಕರಿಗೆ ಬಹಿರಂಗವಾದ ಈ ಪವಾಡದಿಂದ ಮುಖಕ್ಕೆ ಪಾಪಾಸು
ಹೊಡೆದಂತಾಯು, ಗೇಲಿ ಮಾಡುತ್ತಿದ್ದ ಸುಶಿಕ್ಷಿತ ಯುವಕರನ್ನು ಬಾಬಾರವರು ಆಗಾಗ
‘ಮೊದ್ದು ಬದುಕೋದು ಕಲಿ ತಮ್ಮಾ’ ಎಂದು ಹಿತನುಡಿ ಹೇಳುತ್ತಿದ್ದರು.
ಬಾಬಾರ ದರ್ಶನಕ್ಕಾಗಿ ಈ ಜನರ ಸೂಕುನುಗ್ಗಲು ಶುರುವಾಯ್ತು ಬಂದೋಬಸ್ತಿಗಾಗಿ ಬಂದಿದೆ
ಲೋಳಿನವರಿಗೆ ಆ ಜನಜಂಗುಳಿಯನ್ನು ನಿಯಂತ್ರಿಸಬೇಕಾದರೆ ಸಾಕುಸಾಕಾಯಿತು.
ಪೋಲೀಸರ ಬಂದೋಬಸ್ತಿನಲ್ಲಿ ಜಿಲ್ಲೆಯ, ತಾಲ್ಲೂಕಿನ ಅಧಿಕಾರಿಗಳು, ಮುಸ್ಲಿಪರ,
ಅವರ ಕುಟುಂಬ ವರ್ಗದವರು ಬಾಬಾರ ದರ್ಶ ನಾಶೀರ್ವಾದ ಪಡೆದು ಪುನೀತರಾದರು.
ಅವರ ಹಿಂದೆಯೇ ವಿಶ್ವವಿದ್ಯಾಲಯದಿಂದ ಬಂದಿದ್ದ ಕುಲಪತಿಗಳು, ಕುಲಸಚಿವರು, ವಿವಿಧ
ವಿಭಾಗಗಳ ಪಟ್ಟೋಡಿಗಳು ಅವರ ಮನೆಯವರು ಬಾಬಾರ ಸನ್ನಿಧಿಗೆ ಬಂದು ಪಾದ
ಮುಟ್ಟಿ ನಮಸ್ಕರಿಸ ಹತ್ತಿದರು.
ಭಾಷಾ ವಿಭಾಗದ ಎಚ್.ಓ.ಡಿ. ಡಾ. ಮಲ್ಲಿನಾಥರು ಬಾಬಾರ ಪಾದಸ್ಪರ್ಶ ಮಾಡಲು
ಬಾಗಿದಾಗ ಅದೇಕೋ ಬಾಬಾರಿಗೆ ಎದೆ ಝಲ್ಲೆಂದಿತು. ಒಂದು ಕ್ಷಣ ಅವರು ತಮ್ಮ
ಸ್ತಿಮಿತವನ್ನು ಕಳೆದುಕೊಂಡರು. ಮರುಕ್ಷಣ ಸುಧಾರಿಸಿಕೊಂಡು ಡಾ. ಮಲ್ಲಿನಾಥರಿಗೆ
ಪ್ರಸಾದ ನೀಡಿ ಆಶೀರ್ವದಿಸಿದರು. ಅವರ ಹಿಂದೆ ಡಾ. ಮಲ್ಲಿನಾಥರ ಪತ್ನಿ ಶ್ರೀಮತಿ
ಶಾಂತಪ್ಪ ಅಡ್ಡ ಬೀಳಲು ಮುಂದಾದಾಗ ಬಾಬಾರು ವಿಚಲಿತರಾದರು. ತಮ್ಮನ್ನು ತಾವು
ನಿಯಂತ್ರಿಸಿಕೊಳ್ಳದಾದರು. ಕೂಡಲೇ ಕೈಚಾಚಿ ಶಾಂತವ್ವನನ್ನು ತಡೆದು ತಾವೇ ಆಕೆಯ
ಕಾಲು ಹಿಡಿದು, “ಬೇಡ ತಾಯಿ, ನೀವು ಅನ್ನಪೂರ್ಣೆಶ್ವರಿ ಇದ್ದೀರಿ” ಎಂದು ನುಡಿದವರೇ
ದಿಗ್ಗನೇ ಎದ್ದು ದಾಪುಗಾಲಿಕ್ಕುತ್ತ ತಮ್ಮ ಅಂತರಂಗದ ಕೋಣೆಗೆ ಹೊರಟು ಹೋದರು.
ನೆರೆದ ಭಕ್ತರು ಜನರಲ್ಲಿ ಕೋಲಾಹಲವೋ ಕೋಲಾಹಲ, “ಏನಾಯಿತು
“ಏನಾಯಿತು?” ಎಂಬ ಜಿಜ್ಞಾಸೆಯ ಪ್ರಶ್ನೆಯೇ ಎಲ್ಲರ ಬಾಯಲ್ಲಿ, ಐದ್ದತ್ತು ನಿಮಿಷದ
ನಂತರ ಶಿವಮೂರ್ತಿ ಅಲ್ಲಿಗೆ ಬಂದು, “ವಿಶ್ವವಿದ್ಯಾಲಯದಿಂದ ಬಂದ ಸಾಹೇಬ್ರಿಗೂ
ಅವ್ಯಾವಿಗೂ ಬಾಬಾ ಅವರು ಕರೀತಿದ್ದಾರೆ” ಎಂದು ಹೇಳಿದ. ಕೂಡಲೇ ಡಾ. ಮಲ್ಲಿನಾಥರೂ,
ಶಾಂತವ್ವ ಮತ್ತು ಜಿಜ್ಞಾಸೆಯಿಂದ ಅವರ ಹಿಂದೆ ಕುಲಪತಿಗಳೂ, ಕುಲಸಚಿವರೂ ಬಾಬಾರ
ಅಂತರಂಗದ ಕೋಣೆಗೆ ಹೋದರು.
ಬಾಬಾರು ಎಲ್ಲರಿಗೂ ಕೂಡುವಂತೆ ಸನ್ನೆ ಮಾಡಿದರು. ಅವರೆಲ್ಲ ಕುಳಿತ ಮೇಲೆ
ಬಾಬಾರವರು ನಿಧಾನವಾಗಿ ಪಂಚಲೋಹದ ತಟ್ಟೆಗೆ ಕೈಹಾಕಿ ಪಂಚಪಿಂಡಗಳನ್ನು ಕೈಗೆ
ಎತ್ತಿಕೊಂಡು ಒಂದೊಂದನ್ನೇ ನೆಲಕ್ಕೆ ಅಪ್ಪಳಿಸಿ ಒಡೆದು ಅವುಗಳಿಂದ ಫಳಫಳನೇ
ಹೊಳೆಯುತ್ತಿದ್ದ ಬಂಗಾರದ ಜಿಲ್ಲೆಗಳನ್ನು ಹೊರತೆಗೆದು ವಿಶ್ವವಿದ್ಯಾಲಯದ ಅಧಿಕಾರಿಗಳ
ಮುಖಕ್ಕೆ ಎಸೆದು ನುಡಿದರು.
“ನೀವು ಕೊಟ್ಟ ಬಂಗಾರದ ಪದಕಗಳು ನೌಕರಿಯ ಮಾರುಕಟ್ಟೆಯಲ್ಲಿ ಚಲಾವಣೆಗೆ
ಬರಲಿಲ್ಲ. ಚಿನಿವಾರ ಪೇಟೆಯಲ್ಲಿಯೂ……..
ಸಾಗುತ್ತಿದ್ದಂತೆ ಶಾಂತವ್ವನಿಗೆ ಥಟ್ಟನೆ ಬಾಬಾರ ಗುರುತು ಹತ್ತಿತು.
“ನೀ……….ತಾಳವು……ಚಂದ್ರಣ್ಣ….” ಎಂದು ಆಕೆ ತೊದಲಿದಳು.
“ಹೌದು, ನಿಮ್ಮ ಕೈ ತುತ್ತು ಉಂಡು, ನಿಮ್ಮ ಪ್ರೇರಣೆಯಿಂದ ಓದಿ ಬಂಗಾರದ
ಪದಕಗಳನ್ನು ಗಳಿಸಿದ ಅನಾಥ ಹುಡುಗ ಚಂದ್ರ” ಬಾಬಾರಿಗೆ ಆವೇಶ ತುಂಬಿತ್ತು,
“ಇದೆಲ್ಲ ಏನು ಚಂದ್ರೂ….?” ಹೌಹಾರಿ ಶಾಂತವ್ವ ಕೇಳಿದಳು.
“ಬಂಗಾರದ ಪದಕಗಳಿಗೆ ಬೆಲೆ ಇಲ್ಲ ಎಂಬುದು ಅನುಭವದಿಂದ ಮನದಟ್ಟಾದಾಗ
ವಿಲಕ್ಷಣವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕಾಗಿ ಮೆಣಸಿನಕಾಯಿ ತಿನ್ನುವುದನ್ನು
ರೂಢಿಸಿಕೊಂಡು ಮಿರ್ಚಿ ಬಾಬಾ ಆದೆ, ನನ್ನ ಪ್ರತಿಯೊಂದು ನಡತೆಯಲ್ಲಿ ಜನ ಪವಾಡವನ್ನು
ಕಂಡರು. ನನ್ನನ್ನು ನಂಬಿದರು. ಅವರ ನಂಬಿಕೆಯೇ ಅವರವರನ್ನು ಕಾಪಾಡಿತು. ಬದುಕಲು
ನನಗೆ ಇದಕ್ಕಿಂತ ಸರಳವಾದ ಬೇರೊಂದು ಮಾರ್ಗ ಕಾಣಲಿಲ್ಲ.”
ಶಾಂತವ್ವ ಎದ್ದು ಹೋಗಿ ಬಾಬಾರ ಜಡೆಯಲ್ಲಿ ಕೈಯಾಡಿಸುತ್ತ ನುಡಿದಳು. “ಹುಚ್ಚಾ
ಎಲ್ಲ ಸಮಸ್ಯೆಗಳಿಗೂ ಇದೇ ಪರಿಹಾರ ಅಲ್ಲ, ನಡಿ ಏಳು.”
ಕುಲಪತಿಗಳೂ ಮತ್ತು ಇತರರೂ ಬಾಬಾರವರನ್ನು ಸಮಾಧಾನ ಮಾಡಿ ಎಬ್ಬಿಸಿದರು.

ಭಾಲಚಂದ್ರ ಜಯಶೆಟ್ಟಿ.  ಖ್ಯಾತ ಸಾಹಿತಿಗಳು ರಾಜೇಶ್ವರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ