Oplus_131072

ಮೋಡ ಸರಿದ ರವಿ

ನೆನ್ನೆ ರಾತ್ರಿಯಿಂದಲೂ ಒಂದೇ ಸಮನೆ ಧೂ ! ಎಂದು ಮಳೆ ಸುರಿತ್ತಿತ್ತು.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.

ಬೆಡ್ ರೂಮಿನ ಮಂಚದ ಮೇಲೆ ಮಲ್ಕೊಂಡು ಕುಡಿತದ ಅಮಲಿನಲ್ಲಿ ಮೊಬೈಲ್ ನೋಡುತ್ತಿದ್ದಳು ರಜನಿ.
ಅದರಲ್ಲಿ ಅಶ್ಲೀಲ ಸಿನಿಮಾ ಮೂಡಿ ಬರುತ್ತಿತ್ತು.
ಆ ಚಿತ್ರಗಳು ನೋಡುತ್ತಿದ್ದಾಗ ರಜನಿಯ ಮೈ ಬಿಸಿಯಾಗುತ್ತಿತ್ತು.
ಆಸೆ ಕೆರಳುತ್ತಿತ್ತು.

 

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.

ಅವಳು ಮಂಚದಿಂದ ಮೇಲೆದ್ದು ಇನ್ನಷ್ಟು ಬಿಯರ್ ಕುಡಿದಳು.
ಮೊಬೈಲ್ ಬಿಸಾಕಿದಳು.
ಆಸೆ ತಡ್ಕೊಳ್ಳಲಾಗದೆ ಅಲ್ಲಿಂದ ತೂರಾಡುತ್ತಾ ಪಕ್ಕದ ಕೋಣೆಗೆ ಬಂದಳು.
ಅಲ್ಲಿ… ಜಿ ಎಲ್ ನಾಗೇಶ್ ಬರೆದಿರುವ ರೋಚಕಮಯ ಪ್ರಣಯಭರಿತ ಪ್ರೇಮ ಕಾದಂಬರಿಯೊಂದನ್ನು ಓದುತ್ತಾ ಕುಳಿತಿದ್ದನು ರವಿ.
ಅಲ್ಲಿ… ಆಮೇಲೇನು ನಡೀತು ?
***

ಹೊರಗಡೆ ಮಳೆಯಲ್ಲಿ ಆಟೋ ಬಂದು ಬಂಗ್ಲೆ ಮುಂದೆ ನಿಂತುಕೊಂಡಿತು.
ಆಟೋದಿಂದ ಭೂಮಿ ಕೆಳ ಇಳಿದಳು.
***

“ಚಳಿಯಿಂದ ಕೂಡಿದ ಈ ಚಂಡಮಾರುತದ ಮಳೆ. ಕುಡಿತದ ಮತ್ತು. ಆ ಚಿತ್ರಗಳು ಮತ್ತು ವಿಡಿಯೋ. ಈ ನಿನ್ನ ಮನ್ಮಥ ರೂಪ ನನಗೆ ಹುಚ್ಚು ಹಿಡಿಸಿದೆ. ನನಗೆ ಈ ದಿನ ನೀನು ಬೇಕು ರವಿ. ಕಮಾನ್ ಎಂಜಾಯ್ ಮಿ ! ರವಿ” ಎಂದು ಹೇಳುತ್ತಾ ಅವನ ಮೇಲೆ ನುಗ್ಗಿದವಳೆ ಮುಖದ ತುಂಬ ಚುಂಬಿಸಲಾರಂಭಿಸಿದಳು.

ಈ ದೃಶ್ಯ ರವಿಯನ್ನು ಕಾಣಲೆಂದು ಅಲ್ಲಿಗೆ ಬಂದ ಭೂಮಿ ನೋಡಿದಳು.

ಪ್ರಪಂಚ ಪ್ರಳಯ ಆಗಿ ಹೋದಂತೆ ಫೀಲ್ ಆಗಿ ದಡಾರನೆ ಬಿದ್ದುಬಿಟ್ಟಳು.

” ಚಿತ್ತಿನಿ ಜಾತಿಯ ಕಾಮುಕ ಹೆಣ್ಣೇ ಬಿಡೆ ನನ್ನ! “ಎನ್ನುತ್ತಾ ಬಲವಾಗಿ ಹಿಂದಕ್ಕೆ ತಳ್ಳಿ ಅವಳಿಂದ ಬಡಿಸಿಕೊಂಡು ಗಾಬರಿಯಿಂದ-

“ಭೂಮಿ” ಎನ್ನುತ್ತಾ ಓಡಿ ಬಂದು ಬಿದ್ದಿರುವ ಅವಳನ್ನು ಮೇಲೆಬ್ಬಿಸಿದನು ರವಿ.
ಚೇತರಿಸಿಕೊಂಡು ಮೇಲೆದ್ದ ಭೂಮಿ… ರವಿಯನ್ನು ಅಪಾರ್ಥ ಮಾಡಿಕೊಂಡ ಭೂಮಿ… ರವಿಯತ್ತ ತಿರಸ್ಕಾರದ ನೋಟ ಬೀರಿದಳು.
ಅವಳಿಗೆ ಕೋಪ-ತಿರಸ್ಕಾರ, ಅಸಹ್ಯ ಉಂಟಾಗಿ-
“ರವಿ, ನೀನು ಈ ರೀತಿ ಮೋಸ ಮಾಡ್ತೀಯಾ ಅಂತ ನಾನಂದುಕೊಂಡಿರ್ಲಿಲ್ಲ. ನೀನು ನನ್ನ ಬದುಕು ಅಂತ ತಿಳ್ಕೊಂಡಿದ್ದೆ ನಾನು. ಆದರೆ ! ನೀನು… ಮುಗೀತು.. ನನ್ನ ನಿನ್ನ ಸಂಬಂಧ ಮುಗಿದು ಹೋಯಿತು. ನನ್ನ ಕಥೆ ಸಹ ಈಗ ಮುಗಿಯುತ್ತದೆ.ಗುಡ್ ಬೈ ರವಿ !”ಎಂದು ಹೇಳಿದವಳೆ ದುಃಖದಿಂದ ಅಳುತ್ತಾ ಅಲ್ಲಿಂದ ಮಳೆಯಲ್ಲಿಯೇ ಹೊರಗೊಡಿದಳು ಭೂಮಿ.
“ಎ ಭೂಮಿ, ನಿಲ್ಲು ಕಣೆ ಭೂಮಿ! ನೀನು ತಿಳ್ಕೊಂಡಂತೆ ನಾನು ಅಂಥವನಲ್ಲ ಕಣೆ ಭೂಮಿ. ನಿಲ್ಲು ಕಣೆ ಭೂಮಿ” ಎಂದು ಹೇಳುತ್ತಾ ರವಿ ಸಹ ಅವಳ ಬೆನ್ನಟ್ಟಿ ಬಂದನು.
ಆದರೆ ಭೂಮಿ ನಿಲ್ಲದೆ ಖಾಲಿ ಬರುತ್ತಿದ್ದ ಆಟೋ ಒಂದನ್ನು ಕೈ ಮಾಡಿ ನಿಲ್ಲಿಸಿ, ಆಟೋ ಹತ್ತಿದಳು.
ರವಿ ಅವಳ ಹತ್ತಿರ ಬರುವಷ್ಟರಲ್ಲಿಯೇ ಆಟೋ ಬರ್ರನೆ ಮುಂದಕ್ಕೆ ಚಲಿಸಿತು.
“ಭೂಮಿ” ಎಂದು ಕೂಗುತ್ತಾ ಆಟೋ ಹಿಂದೆ ಓಡಿ ಬಂದನು ರವಿ.
ಪ್ರಯೋಜನ ಆಗಲಿಲ್ಲ.
ನಿಮಿಷಾರ್ಧದಲ್ಲಿಯೇ ಆಟೋ ರವಿಯಿಂದ ದೂರ ಚಲಿಸಿ ಮರೆಯಾಗಿ ಹೋಯಿತು.

***
“ರವಿ… ನೀನು ನನ್ನನ್ನು ಮರೆತು ಆ ರಜನಿಯ ಮೋಹದ ಬಲೆಗೆ ಬಿದ್ದಿರುವಾಗ ನಾನು ಇನ್ನೇತಕ್ಕಾಗಿ ಬದುಕಿರಲಿ? ಯಾರಿಗಾಗಿ ಬದುಕಿರಲಿ ಹೇಳು ರವಿ ? ನನ್ನ ಬದುಕೇ ನೀನಾಗಿರುವಾಗ ನಿನ್ನನ್ನು ಅಗಲಿ ನಾನು ಹೇಗೆ ಬಾಳಲಿ ರವಿ ? ಇಲ್ಲ ರವಿ… ನಿನ್ನ ಸ್ನೇಹ-ಪ್ರೀತಿ ಇರದೆ ನಾನು ಬದುಕಿರಲಾರೆ ರವಿ. ಗುಡ್ ಬೈ ರವಿ!”
ಭೂಮಿ ಮಂಚದಿಂದ ಮೇಲೆದ್ದಳು.
ಟೇಬಲತ್ತ ಬಂದಳು.
ಅಲ್ಲಿರಿಸಿದ್ದ ಚಾಕು .
***

ಆ ಭೀಕರ ಆಕ್ರಂಧನವನ್ನು ಕೇಳಿ ಪಕ್ಕದ ಕೋಣೆಯಲ್ಲಿ ಟೈಮ್ ಪಾಸ್ ಗೋಸ್ಕರ ಇಸ್ಪೇಟ್ ಆಡುತ್ತಾ ಕುಳಿತಿದ್ದ ಅಲ್ಕಾ, ಸಂಧ್ಯಾ, ರಮ್ಯಾ, ಅರೆ ಏನಾಯಿತೆಂದು ಅತ್ತ ಕಡೆ ಓಡಿ ಬಂದರು.
ಭೂಮಿ…! ಎಂಬ ಗಾಬರಿಯ ಉದ್ಘಾರ ಹೊರ ಬಂದಿತ್ತು ಅವರ ಬಾಯಿಂದ.
ತಡ ಮಾಡಲಿಲ್ಲ ಸ್ನೇಹಿತೆಯರು.
ಆಂಬುಲೆನ್ಸ್ ಗೆ ಫೋನ್ ಮಾಡಿದರು.
ಆಂಬುಲೆನ್ಸ್ ಬಂದಿತು.
ಭೂಮಿಗೆ ಆಸ್ಪತ್ರೆ ಸೇರಿಸಲಾಯಿತು.
***

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಭೂಮಿಯನ್ನು ಡಾಕ್ಟರ್ ತುಂಬ ಶ್ರಮವಹಿಸಿ ಕೊನೆಗೆ ಬದುಕುಳಿಸಿದರು.
ಭೂಮಿ ಈಗ ಅಪಾಯದಿಂದ ಪಾರಾಗಿದ್ದಳು.
***

ರವಿ-
“ಭೂಮಿ.. ನೀನು ನನ್ನ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ, ವಿಶ್ವಾಸ – ಭರವಸೆ ಇಷ್ಟೇನಾ? ನೀನು ಈ ರೀತಿ ಸತ್ತುಹೋದರೆ ನಾನು ಬದುಕಿರುತ್ತೇನೆ ಅಂತ ಅಂದುಕೊಂಡಿದ್ದೀಯಾ ? ”
ಭೂಮಿ ಪ್ರತಿಕ್ರಿಯೆ ನೀಡಲಿಲ್ಲ.
ರಜನಿ-
“ಭೂಮಿ… ಇದರಲ್ಲಿ ನಿನ್ನ ರವಿದೇನು ತಪ್ಪಿಲ್ಲ. ರವಿ… ನಿಜಕ್ಕೂ ಅವನೊಬ್ಬ ಗ್ರೇಟ್ ಜೆಂಟಲ್ ಮ್ಯಾನ್! ನಿನ್ನ ಮತ್ತು ರವಿಯ ಸ್ನೇಹ-ಪ್ರೀತಿ ಎಂತದ್ದು ಅಂತ, ನನಗೆ ನೆನ್ನೆತಾನೆ ರವಿಯ ಡೈರಿ ಓದಿದ ನಂತರ ತಿಳಿಯಿತು. ನೀವಿಬ್ಬರು ಜನ್ಮದ ಜೋಡಿಗಳು. ಭೂಮಿ-ರವಿ ಎಂಬ ಜೋಡಿ ಹಕ್ಕಿಗಳನ್ನು ಯಾರಿಂದಲೂ ಬೇರ್ಪಡಿಸಲಾಗದು. ಕಾಮಾತುರದಲ್ಲಿ ನಿಮ್ಮಿಬ್ಬರ ಪ್ರೇಮದ ಬಗ್ಗೆ ಅರಿಯದೆ ನಿಮ್ಮನ್ನು ಬೆರ್ಪಡಿಸಲೇತ್ನಿಸಿದ ಈ ಕೊಳಕು ರಜನಿಯನ್ನು ದಯವಿಟ್ಟು ಕ್ಷಮಿಸಿಬಿಡು ಭೂಮಿ. ಭೂಮಿ… ನೀನು ತಿಳ್ಕೊಂಡಿರುವಂತೆ ಅಲ್ಲ ಈ ರವಿ. ಈ ನಿನ್ನ ರವಿಗೆ ರಜನಿ ಎಂಬ ಕಾರ್ಮೋಡ ಅಡ್ಡ ಬಂದಿದ್ದೇನೋ ನಿಜ, ಆದರೆ ಈಗ ಆ ಮೋಡ ಕರಗಿದೆ. ನಿನ್ನ ರವಿ ಈಗ… ಮೋಡ ಸರಿದ ರವಿ. ರವಿ ಎಂದೆಂದಿಗೂ ನಿನ್ನವನೇ. ದಯವಿಟ್ಟು ನನ್ನನ್ನು ಕ್ಷಮಿಸು ಭೂಮಿ”ಎಂದು ಕ್ಷಮೆ ಕೇಳಿದಳು.
ಆಗ-
“ನನ್ನ ಹೃದಯ ಹೇಳುತ್ತಿತ್ತು ನನ್ನ ರವಿ ಅಂಥವನಲ್ಲ ಅಂತ. ಆದರೂ ಸಹ ನಾನು ದುಡುಕಿದೆ. ಐ ಯಾಮ್ ಸೋ ಸಾರಿ ಕಣೋ ರವಿ”ಎಂದು ಭೂಮಿ ಸಹ ಕ್ಷಮೆ ಕೇಳಿದಳು.

“ಎ ಲ್ಯೂಸ್ , ಸಾರಿ ಕೇಳಿದರೆ ಮುಗಿದೋಯ್ತಾ? ಹೆಚ್ಚು ಕಡಿಮೆ ಆಗಿ ನಿನ್ನ ಕಥೆ ಮುಗಿದ್ಹೋಗಿದ್ದರೆ ನಾನೇನು ಮಾಡಬೇಕಿತ್ತು ಕಣೆ ? ನೀನು ಸತ್ತರೆ, ನಾನು ಬದುಕುಳಿಯುತ್ತಿದ್ದೆ ಅಂತ ನೀನು ತಿಳ್ಕೊಂಡಿದ್ದೀಯ ? ಇಲ್ಲ ಭೂಮಿ ನೀನಿಲ್ಲದೆ ನಾನೂ ಸಹ ಬದುಕಿರಲಾರೆ. ಇನ್ನೊಂದ್ ಸಲ ನೀನು ಈ ರೀತಿ ಮಾಡಿದ್ರೆ ಖಂಡಿತ ನಾನು ನಿನ್ನ ಕ್ಷಮಿಸಲಾರೆ ಕಣೇ ಭೂಮಿ!” ಎಂದು ಹೇಳುತ್ತಾ ಭಾವುಕತೆ ಮತ್ತು ಉದ್ವೇಗದಿಂದ ಭೂಮಿಯನ್ನು ತಬ್ಬಿಕೊಂಡನು ರವಿ.
ಭೂಮಿಗೂ ಸಹ ಪ್ರೀತಿ ಉಕ್ಕಿ ಬಂದಿತು.
ಇಬ್ಬರೂ ಬಿಗಿಯಾದ ಅಪ್ಪುಗೆಯಲ್ಲಿ ಲೀನವಾದರು.

ಜಿ ಎಲ್ ನಾಗೇಶ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ