ಮೋಸದ ಜಾಲ
“ಯಾಕೆ ಪುಟ್ಟ ಇವತ್ತು ಇಷ್ಟೊಂದು ಲೇಟಾಗಿ ಬಂದಿದ್ದೀಯಾ? ಎಕ್ಸ್ಟ್ರಾ ಕ್ಲಾಸ್ ಇತ್ತಾ?”
“ಎಕ್ಸ್ಟ್ರಾ ಕ್ಲಾಸ್ ಇರಲಿಲ್ಲ. ಇವತ್ತು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅದಕ್ಕೆ ಸ್ವಲ್ಪ ಲೇಟಾಯ್ತು ಅಮ್ಮ. ಸಾರಿ..”
“ಅದ್ಸರಿ, ಯಾರು ಆ ನಿನ್ನ ಸ್ನೇಹಿತ?”
“ಅದೇ ಅಮ್ಮ ನಮ್ಮ ತೋಟದ ಕೆಲಸದಾಳು ಮಾರಯ್ಯನ ಮಗ ಭೀಮ. ಭೀಮ ನಮ್ಮ ಕ್ಲಾಸ್ ನಲ್ಲಿ ಎಲ್ರುಗಿಂತಲೂ ಬುದ್ಧಿವಂತ ಅವನು. ಭೀಮ ಮತ್ತು ನಾನು ತುಂಬ ಒಳ್ಳೆ ಸ್ನೇಹಿತರು ಕಣಮ್ಮ.”
“ಹೌದಾ? ಅದ್ಸರಿ; ಇನ್ನೊಂದ್ಸಲ ಅವರ ಮನೆಯತ್ತ ಹೋಗಬೇಡ.”
“ಭೀಮ ನನ್ನ ಒಳ್ಳೆ ಸ್ನೇಹಿತ ಅವನು. ನಾನೇಕೆ ಅವನ ಮನೆಗೆ ಹೋಗಬಾರದು ಅಮ್ಮ?”
“ಯಾಕೆ ಹೋಗಬಾರದು ಅಂದರೆ ಅವನೊಬ್ಬ ಶೂದ್ರ…”
“ನನ್ನ ಸ್ನೇಹಿತ ಭೀಮ ಶೂದ್ರನಾ? ಶೂದ್ರ… ಶೂದ್ರ ಹಾಗಂದರೆ ಏನಮ್ಮ?”
“ಶೂದ್ರ ಅಂದ್ರೆ ಕೆಳ ಜಾತಿಯವ. ಚಾತುರ್ವರ್ಣಧರ್ಮದ ಕೊನೆಯವನು ಅಂತ.”
“ಹಾಗಾದ್ರೆ ನಾನ್ಯಾರಮ್ಮ ಮತ್ತೆ?”
“ನೀನು ಚಾತುರ್ವರ್ಣ ಧರ್ಮದ ಮೊದಲನೆಯವ. ಸರ್ವಶ್ರೇಷ್ಠ ಕುಲದಲ್ಲಿ ಹುಟ್ಟಿದ ಬ್ರಾಹ್ಮಣ ನೀನು.”
“….. …..”
“ಬ್ರಾಹ್ಮಣರಾದ ನಾವುಗಳು ಶೂದ್ರರ ಮನೆಗೆ ಹೋಗಬಾರದು.”
“ಹೋದರೆ ಏನಾಗುತ್ತದಮ್ಮ?”
“ಮೈಲಿಗೆ ಆಗುತ್ತದೆ. ಪರಮ ಪಾಪವಾಗಿ ಅನಿಷ್ಟ ಉಂಟಾಗುತ್ತದೆ. ಅದೆಲ್ಲ ನಿನಗೆ ಅರ್ಥ ಆಗಲ್ಲ. ಸ್ಕೂಲ್ ಬ್ಯಾಗ್ ಕೊಡು ಇಲ್ಲಿ. ಈಗ ಮೊದಲು ಹೋಗಿ ಕೈ ಕಾಲ್ ಮುಖ ತೊಳ್ಕೊಂಡು ಬಾ. ಹಾಲು ಬಿಸಿ ಮಾಡ್ಕೊಂಡು ಬರ್ತೇನೆ. ಹಾಲು ಕುಡಿವಿಯಂತೆ.”
“ಇವತ್ತು ನಾನು ಹಾಲು ಕುಡಿಯುವುದಿಲ್ಲ ಅಮ್ಮ. ಇವತ್ತು ನನಗೆ ಹಸಿವೆ ಆಗಿಲ್ಲ.”
“ಯಾಕೆ ಪುಟ್ಟ ಹಸಿವೆ ಆಗಿಲ್ಲ?”
“ಹಸುವೆ ಯಾಕೆ ಆಗಿಲ್ಲಾಂದ್ರೆ ಸ್ಕೂಲಿಂದ ಬರುವಾಗ ನನ್ನ ಸ್ನೇಹಿತನ ಮನೆಯಲ್ಲಿ ಊಟ ಮಾಡಿಕೊಂಡು ಬಂದೆ ಅಮ್ಮ”ಎಂದು ಹೇಳಿದಾಗ ಆ ತಾಯಿ ಬೆಚ್ಚಿಬಿದ್ದು ಬಾಯಿಗೆ ಬಂದ ಹಾಗೆ ಕೆಟ್ಟ ಶಬ್ದಗಳಲ್ಲಿ ಬೈಯಲಾರಂಭಿಸಿದಳು.
“ಬ್ರಾಹ್ಮಣ ಕುಲದಲ್ಲಿ ಹುಟ್ಟಿ ಶೂದ್ರರ ಮನೆಯಲ್ಲಿ ಉಂಡು ಬಂದಿದೆಯಲೋ ಶೂದ್ರ
ಮುಂಡೆ ಗಂಡ! ಶೂದ್ರರ ಮನೆಯಲ್ಲಿ ಉಂಡು, ಮೈ ಮನೆಯಲ್ಲ ಮೈಲಿಗೆ ಮಾಡ್ಬಿಟ್ಟಿಯಲೋ ಪಾಪಿ… ಇನ್ನೊಂದ್ ಸಲ ಆ ಶೂದ್ರರ ಮನೆಯತ್ತ ಸುಳಿದಾಡುವುದನ್ನು ಕಂಡ್ರೆ ನಿನ್ನ ಕೊಂದ್ಹಾಕಿಡ್ತೇನೆ!”ಎಂದು ಬಯುತ್ತಾ ಕೋಪ ಮತ್ತು ತಿರಸ್ಕಾರದಿಂದ ತನ್ನ ಐದು ವರ್ಷದ ಏನು ಅರಿಯದ ಆ ಮುಗ್ಧ ಕಂದಮ್ಮನನ್ನು ಬೈದು- ಹೊಡೆದು ಆಕಳ ಉಚ್ಚೆ ತಂದು ಮೈಲಿಗೆ ಆದ ತನ್ನ ಮಗುವಿಗೆ ಉಚ್ಚೆಯಿಂದ ಸ್ನಾನ ಮಾಡಿಸಿ ಪವಿತ್ರಳಾಗಿಸಿದಳು ಆ ಮಹಾತಾಯಿ.
***
ವಿಶೇಷವಾದ-ವಿಚಿತ್ರವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಆ ಕಾರ್ಯಕ್ರಮದ ಹೆಸರು ಬ್ರಾಹ್ಮಣ ಭೋಜ!
ಬ್ರಾಹ್ಮಣ ಭೋಜನದ ವಿಶೇಷ ಏನು?
ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯ್ಯಾರಿಸಲಾಗಿದೆ.ಮ್ರಷ್ಟಾನ್ನ ಭೋಜನ ರೆಡಿಯಾಗಿದೆ..
ದಢೂತಿ ದೇಹದ-ಡೊಳ್ಳು ಹೊಟ್ಟೆಯ ಕೆಲ ಬ್ರಾಹ್ಮಣರು ತಿಂದು ತೆಗೆದ ನಂತರ ಅವರ ಎಂಜಲು ತಟ್ಟೆಯಲ್ಲಿ ಈಗ ಇವರು ತಿನ್ನುತ್ತಿದ್ದಾರೆ…
ಅರೆ… ಇದೇನು ವಿಚಿತ್ರ!
ಇದು ಯಾಕೆ ಹೀಗೆ…?
ಕೆಳ ಜಾತಿಯವರ ಮನೆಯಲ್ಲಿ ಮೇಲು ಜಾತಿಯವರು ಏಕೆ ಊಟ ಮಾಡುವುದಿಲ್ಲ?
ಮೇಲುಜಾತಿಯ ಬ್ರಾಹ್ಮಣರು ತಿಂದ ಎಂಜಲು ತಟ್ಟೆಯಲ್ಲಿ ಕೆಳಜಾತಿಯವರು ಏಕೆ
ಊಟ ಮಾಡುತ್ತಾರೆ?
ಈ ವಿಚಿತ್ರಕ್ಕೆ ಕಾರಣ ಏನು?
ಈ ಅನಿಷ್ಟಕ್ಕೆ ಕಾರಣ ಮನುಸ್ಮೃತಿ!
ಮನುಸ್ಮೃತಿಯ ಐದನೇ ಅಧ್ಯಾಯ 92ನೇಯ ಶ್ಲೋಕದಲ್ಲಿ ಈ ರೀತಿಯಾಗಿ ಇದರ ಬಗ್ಗೆ ವಿವರಿಸಿ ಬರೆಯಲಾಗಿದೆ-
೧.ಬ್ರಾಹ್ಮಣನ ಮನೆಯ ಊಟ ಅಮೃತ ಸ್ವರೂಪವಾಗಿದೆ.
೨.ಕ್ಷತ್ರಿಯನ ಮನೆಯ ಊಟ ಹಾಲಿನ ಸಮವಾಗಿದೆ.
೩.ವೈಶ್ಯನ ಮನೆಯ ಊಟ ಅನ್ನದ ರೀತಿಯಾಗಿದೆ.
೪.ಶೂದ್ರನ ಮನೆಯ ಊಟ ರಕ್ತಕ್ಕೆ ಸಮಾನವಾಗಿದೆ… ಆದಕಾರಣ ಮೇಲ್ಜಾತಿಯವರು ಯಾರೂ ಸಹ ಶೂದ್ರನ ಮನೆಯಲ್ಲಿ ಊಟ ಮಾಡಬಾರದು. ಪಾಪಿಗಳಾದ ಶೂದ್ರರು… ಶೂದ್ರರು ಅಂದರೆ ಸೂಳೆಗೆ ಹುಟ್ಟಿದವರು, ದಾಸಿಗೆ ಹುಟ್ಟಿದವರು ದೇವರಿಗೆ ಹುಟ್ಟಿದ ಅಮೃತ ಸ್ವರೂಪವಾದ ಬ್ರಾಹ್ಮಣರ ಮನೆಯ ಊಟ ತಿಂದು ರೋಗಮುಕ್ತ ಮತ್ತು ಪಾಪ ಮುಕ್ತರಾಗಬಹುದು ಎಂದು ಮನುವಾದಿಗಳ ಮನುಸ್ಮೃತಿ ಬೊಗಳುತ್ತದೆ.
ಮನುಸ್ಮೃತಿ ಪ್ರಪಂಚದ ಅತ್ಯಂತ ಪ್ರಾಚೀನವಾದ ಪವಿತ್ರ ಗ್ರಂಥ;ಮತ್ತೊಮ್ಮೆ ಮನುಸ್ಮೃತಿ ಭಾರತದ ಸಂವಿಧಾನವಾಗಬೇಕು.ಭಾರತ ಹಿಂದೂರಾಷ್ಟ್ರ ಆಗ್ಬೇಕು. ನಾವೆಲ್ಲರೂ ಹಿಂದುಗಳು… ಹಿಂದುಗಳು ಎಲ್ಲರೂ ಒಂದು! ಎಂದು ಸುಳ್ಳು ಬೊಗಳುತ್ತಿರುವ ನಿಯತ್ತಿಲ್ಲದ ನಾಯಿಗಳಿಗೆ ವೈಚಾರಿಕ ಪ್ರಜ್ಞಾವಂತರ ಧಿಕ್ಕಾರ ಇದೆ…!!
ಏಳಿ ದೇಶವಾಸಿಗಳೇ… ಎಚ್ಚೆತ್ತುಕೊಳ್ಳಿ!
ಮನುವಾದಿಗಳ ಮೋಸದ ಜಾಲಕ್ಕೆ ಸಿಲುಕದಿರಿ!!
ಬಲಿಯಾಗದಿರಿ!!!
– ಜಿ.ಎಲ್.ನಾಗೇಶ
ಧನ್ನೂರ್ (ಆರ್)
ಬಸವಕಲ್ಯಾಣ