Oplus_131072

ಮುಗಿಯದ ಕವಿತೆಗಳು.

ಜ್ಯೋತಿ,ಡಿ.ಬೊಮ್ಮಾ.

 

ಬೇಸರದ ಸಂಜೆಗಳು ಎಕಾಂಗಿ
ಮನಸ್ಸಿಗೆಷ್ಟೊಂದು ಆಪ್ತ..!

ಕನಸು ವಾಸ್ತವಗಳ ಕನವರಿಕೆ
ಮಾಯೆಯನ್ನು ನಿಜವೆನ್ನುವ ಭ್ರಮಿಕೆ
ಶೂನ್ಯ ವನ್ನೆ ತಬ್ಬಿಕೊಂಡು ತನ್ನನ್ನೆ
ಮರೆಯುವ ಹವಣಿಕೆ..

ಒಳಗೊಳಗೆ ಸುತ್ತುವ ವಿಷಾದಕ್ಕೆ
ಬೆಚ್ಚನೆಯ ಬಟ್ಟೆ ಹೊದಿಸಿ
ಮತ್ತಷ್ಟು ಬೆಚ್ಚಗಾಗಿಸುವದು
ಬೇಸರದ ಸಂಜೆಗಳ ಕಾಯಕ.

ಸುಖ ಸಂತೋಷಕ್ಕಿಂತ ವಿಷಾದವೇ
ಅಂತರಂಗದ ಪರಮ ಮಿತ್ರ..!
ಕಳೆದುಕೊಳ್ಳುವ , ಕಸಿದುಕೊಳ್ಳುವ
ಭಯವಿಲ್ಲದ ಹೃದಯದ ರೂಪಕ.

ಅಬ್ಬಾ , ಸುತ್ತಲೂ ಅದೇಷ್ಟು ಜಾತ್ರೆ..!
ನಗು , ಕೇಕೆ‌, ಅಟ್ಟಹಾಸ.
ಅಂತರಂಗಕ್ಕೆ ಅದೆಲ್ಲ ಅಪರಿಚಿತ.
ಒಂಟಿತನ ಅಟ್ಟಲು ಆಡುವ ನಾಟಕ.

ಬೇಸರದ ಸಂಜೆಗಳು
ವಿಷಾದದ ಮನಗಳು
ತಣಿಯದ ಆಸೆಗಳು
ಏಕಾಂತ ದ ಸ್ವಗತಗಳು
ಎಂದೆಂದಿಗೂ ಮುಗಿಯದ ಕವಿತೆಗಳು.

ಜ್ಯೋತಿ,ಡಿ.ಬೊಮ್ಮಾ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ