Oplus_131072

ಮುನಿಶ್ರೇಷ್ಠ

ಪ್ರಚೇತಸೇನನ ಅಚ್ಚುಮೆಚ್ಚಿನ ಮಗನಾಗಿ
ಜನಿಸಿಹರು ವಾಲ್ಮೀಕಿ ಮಹರ್ಷಿ ರತ್ನಾಕರರಾಗಿ
ಕ್ರೌಂಚ ಪಕ್ಷಿಯ ವಧೆ ಕಂಡು ಕ್ರೋಧಿತರಾಗಿ
ಶಾಪವಿತ್ತರು ಬೇಟೆಗಾರನಿಗಾಗ ಗದ್ಗದಿತರಾಗಿ

ಶ್ಲೋಕ ಹೊಮ್ಮಿತು ತಮಸಾ ನದಿಯ ತೀರದಲಿ
ರಚಿಸಿದರು ರಾಮಾಯಣ ಏಳು ಖಂಡಗಳಲಿ
ಇಪ್ಪತ್ನಾಲ್ಕು ಸಹಸ್ರ ಶ್ಲೋಕ ನಲಿದಿವೆ ಕಾವ್ಯದಲಿ
ನಾಲ್ಕುಲಕ್ಷದೆರಡು ಪದಗಳು ಅಪ್ಪಿವೆ ಗ್ರಂಥದಲಿ

ಮಾತಾ ಪಿತ್ರರ ಸೇವಾ ಪರಿ ಹುದುಗಿದೆಯಿದರಲಿ
ಸಹೋದರ ಬಾಂಧವ್ಯಗಳು ಮೂಡಿವೆ ಅಕ್ಷದಲಿ
ಗುರು ಶಿಷ್ಯರ ಸಂಬಂಧಕೆ ರಾಮ ಹನುಮರಿಲಿ
ಸೀತೆಯ ಅಪಹರಿಸಿ ರಾವಣನಾದ ದುಷ್ಟನಿಲಿ

ಲವ ಕುಶರು ಪಡೆದರು ಅಪರಿಮಿತ ನೀತಿ ಶಿಕ್ಷಣ
ಅಶ್ವಮೇಧ ಯಾಗಕೆ ಹಾಕಿದರವರು ಕಡಿವಾಣ
ಉಲಿದು ಮಹಾಕಾವ್ಯ ಬೀರಿದರವರು ಸುಜ್ಞಾನ
ತಟ್ಟಿತು ಚಪ್ಪಾಳೆ ಋಷಿಮುನಿಗಳ ಸಭಾಂಗಣ

ಇತ್ತರು ಆದಿಕವಿ ನ್ಯಾಯ ನೀತಿ ಶಿಸ್ತು ಸಂಯಮ
ಬದುಕಲಿ ಅಳವಡಿಸಿರೆ ಬಾಳಾಗುವುದು ಉತ್ತಮ
ಧರೆಯ ಮಹಾಕಾವ್ಯ ಬರೆದ ಋಷಿಗೆ ಪ್ರಣಾಮ
ನಿತ್ಯ ನಾಲಿಗೆ ನುಡಿಯಲಿ ಮುನಿ ಶ್ರೇಷ್ಠರ ನಾಮ.

ಮಾಣಿಕ ನೇಳಗಿ ತಾಳಮಡಗಿ.ಬೀದರ

ಕವಿ ಪರಿಚಯ: 

ಮಾಣಿಕ ನೇಳಗಿ ತಾಳಮಡಗಿ.

ಸಾಹಿತಿ ಮಾಣಿಕ ನೇಳಗಿ ಯವರು ಬೀದರ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದವರು. ಬಿ.ಎ. ಎಂ.ಎ ಕನ್ನಡ ಪದವಿಧರರಾಗಿದ್ದು, 1999ರಿಂದ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿದ ಇವರು ಈಗ ಬೀದರ  ಜಿಲ್ಲೆಯಲ್ಲಿ ಸಹಾಯಕ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.’ ಬದಲಾಗೋಣ. ಭರವಸೆ,ದಾಂಪತ್ಯ ಸವಿ, ಹರಿತವಾಗಲಿ (ಕವನ ಸಂಕಲನ) ‘ಬವಣೆ’ ‘ಗಾಂಧಿಜಿಗೆ ನಮನ‘ (ಹನಿಗವನ) ‘ರುಕ್ಕಿಣಿಯ ಆತುರ’ (ಕಥಾಸಂಕಲನ) ‘ಸಂಕೀರ್ಣ‘ (ಲೇಖನ) ‘ಮಾನವಿಯತೆ‘ (ಚಿಂತನ) ಎಂಬ ಕೃತಿಗಳು ಬರೆದಿದ್ದಾರೆ. ಇವರಿಗೆ ‘ಧರಿರತ್ನ ಪ್ರಶಸ್ತಿ, ಕುವೆಂಪು ಸಿರಿ ಪ್ರಶಸ್ತಿ, ಸೃಜನ ಕವಿ ರತ್ನ ಪ್ರಶಸ್ತಿ,ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *