Oplus_131072

ನಾಡ ಹಬ್ಬ ದಸರಾ.

ದಸರ ಹಬ್ಬ ಅಂದರೆ ನಾಡಿಗೆಲ್ಲ ದೊಡ್ಡ ಹಬ್ಬ. ಇಡೀ ದೇಶದಾದ್ಯಂತ ಆಚರಿಸುವ ಈ ಹಬ್ಬವು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದೆ. ದಸರಾ ಹಬ್ಬದ ಇನ್ನೊಂದು ವಿಶೇಷ ಎಂದರೆ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ನಂತರ ಬನ್ನಿ ಮುಡಿಯುತ್ತಾರೆ . ಬನ್ನಿ ಮುಡಿಯುವುದು ಅಂದರೆ ಪರಸ್ಪರರು ಬನ್ನಿಯನ್ನು ತೆಗೆದುಕೊಂಡು ಬಂಗಾರ ಎಂದು ಪ್ರೀತಿ ವಿಶ್ವಾಸದ ಸಂಕೇತವಾಗಿ ಬಳಸುತ್ತಾರೆ. ಪರಸ್ಪರರು ಬನ್ನಿಯನ್ನು ವಿನಿಮಯ ಮಾಡಿಕೊಂಡು ಬಂಗಾರದಂತೆ ಬಾಳಿನಲಿ ಇರೋಣ ಎಂಬ ಸದಾಶಯ ವ್ಯಕ್ತಪಡಿಸುತ್ತಾರೆ.
ಇದು ಮಹಾಭಾರತದಲ್ಲಿಯೂ ಕೂಡ ಈ ಹಬ್ಬದ ಕುರಿತು ಉಲ್ಲೇಖವಿದೆ. ಪಾಂಡವರು ತಾವು ವನವಾಸಕ್ಕೆ ಹೊರಟಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಇಟ್ಟು ಹೋಗಿದ್ದರು ನಂತರ ವನವಾಸ ಮುಗಿಸಿ ವಿಜಯಶಾಲಿಯಾಗಿ ಬಂದಾಗ ತಮ್ಮ ಆಯುಧಗಳನ್ನು ಮರಳಿ ತೆಗೆದುಕೊಂಡುರು ಅಂದಿನ ದಿನವನ್ನು ಆಯುಧ ಪೂಜೆ ನಂತರದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ನಮ್ಮ ‌ನಾಡ ಹಬ್ಬವು ‌ ಹಿಂದಿನ ಕಾಲದಲ್ಲಿ ಹಿರಿಯರು
ಮಾಡಿಕೊಂಡು ಬಂದ ಪದ್ಧತಿ ಬಹಳಷ್ಟು ಅರ್ಥ ಪೂರ್ಣವಾಗಿದೆ. ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ . ಇದಕ್ಕೆ ಉದಾಹರಣೆ ಈಗಿನ ವಿಶ್ವ ವಿಖ್ಯಾತ ಮೈಸೂರು ದಸರಾ. ಒಂಭತ್ತು ದಿನಗಳ ಕಾಲ ನಡೆಯುವ ಈ ಹಬ್ಬವನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. ದಿನವೂ ಒಂದೊಂದು ದೇವಿಯ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ನಂತರದ ಹತ್ತನೇ ದಿನವೇ ದಸರಾ ಅದು ತುಂಬಾ ವಿಶೇಷ.

ಮೈಸೂರಿನ ರಾಜರು ಅರಮನೆಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವುದು ಅದಕ್ಕಾಗಿ ಆನೆಗಳನ್ನು ಬಳಸಲಾಗುತ್ತದೆ. ಆ ಸಮಯದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಒಂದೊಂದು ದಿನ ಒಬ್ಬ‌ ದೇವಿಯನ್ನು ಆರಾಧಿಸುವುದು
ಆ ಬಗ್ಗೆ ಕತೆ ಪುರಾಣಗಳು ಹೇಳುವುದು , ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುವುದು. ಹೀಗೆ ಒಂಭತ್ತು ದೇವಿಯರ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಪೂಜೆ , ವ್ರತಗಳ ಮಾಡುವುದು ಇದರ ಬಗ್ಗೆ ನಮಗೆ ಹಿರಿಯರು ಹೇಳುತ್ತಾರೆ. ನಾವು ಇದರ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಲೇಬೇಕು. ವರ್ಷಪೂರ್ತಿ ನಾವು ಮಾಡಿರುವ ಪಾಪ ಕರ್ಮಗಳನ್ನು ತೊಳೆದು ಕೊಳ್ಳಲು ನಿಟ್ಟಿನಲ್ಲಿ ದೇವಿಯನ್ನು ಆರಾಧಿಸುವುದು ಸಾಮಾನ್ಯ. ಹಾಗಾಗಿ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ವರೆಗೂ ಈ ದಸರಾ ಉತ್ಸವ ತುಂಬಾ ವಿಶೇಷವಾಗಿದೆ. ಮನೆಯಲ್ಲಿ ಎಲ್ಲರಿಗೂ ಹೊಸ ಬಟ್ಟೆ, ಸಿಹಿ ಊಟ ಈ ಆನಂದಕ್ಕೆ ಪಾರವೇ ಇಲ್ಲ. ಹಾಗಾಗಿ ನಮ್ಮ ನಾಡ ದಸರಾ ವಿಶ್ವ ವಿಖ್ಯಾತ ಹಬ್ಬವಾಗಿ ನಿಂತಿದೆ.

✍️ ರೇಣುಕಾ ವಾಯ್. ಎ.
ಹಟ್ಟಿ ಚಿನ್ನದ ಗಣಿ ರಾಯಚೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ