ನಗು ಮೊಗದ ಒಡೆಯ
ಮುತ್ತುರಾಜ ಪಾರ್ವತಮ್ಮರ ಹೆಮ್ಮೆಯ ಸುಪುತ್ರ.
ರಾಘಣ್ಣ ಶಿವಣ್ಣರ. ಪ್ರೀತಿಯ ಭಾತೃ
ಬೆಟ್ಟದ ಹೂವಾಗಿ ಅರಳಿದೆ ನೀ ಎಲ್ಲರ ಹೃದಯದಲ್ಲಿ.
ಕರ್ನಾಟಕದ ಉತ್ತುಂಗದ ಶಿಖರದ ಮುಕಟಗಿರಿಯಲ್ಲಿ
ಸದಾ ನಗುಮೊಗದ ಮುದ್ದಾದ ಮಾತಿನ ಚತುರ
ದಾನ ಧರ್ಮಗಳಲ್ಲಿ ಅತಿಮಧುರ.
ಕೊಟ್ಟಿದ್ದು ಗೌಪ್ಯವಾಗಿಟ್ಟಿದ್ದ ಹಮ್ಮೀರ.
ಎಲ್ಲರ ಮನಸ್ಸನ್ನು ಗೆದ್ದ ಧೀರ.
ಬೆಟ್ಟದ ಹೂವಾಗಿ ಪ್ರೇಮದ ಕಾಣಿಕೆಯಾಗಿ ಬಂದೆ ನೀನು.
ಅರಸನಾಗಿ ಮೆರೆದೆ ನೀ ವೀರ ಕನ್ನಡಿಗನಾಗಿ ಬಾಳಿದೆ ನೀನು.
ಯುವ ಪೀಳಿಗೆಗೆ ಯುವರತ್ನನಾಗಿ ನಟಸಾರ್ವಭೌಮನಾದೆ ನೀನು.
ಅಭಿಮಾನಿಗಳ ಸಾಮ್ರಾಜ್ಯದ ಮೌರ್ಯ ನೀನು.
ದೊಡ್ಡ ಮನೆಯ ಯುವರಾಜನಾಗಿ ಬೆಳೆದೆ ನೀನು.
ನನ್ನ ಪುತ್ರನ ಜೊತೆ ನಿಮ್ಮ ಮನೆಗೆ ಬಂದಾಗ. ನಮ್ಮನ್ನು ಬಲುಅಕ್ಕರೆಯಿಂದ ಮಾತನಾಡಿಸಿ ಸಿಹಿಯನ್ನು
ಹಂಚಿದ ಸವಿನೆನಪು ನನ್ನ
ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ನೀವು ಡಾ ಪುನೀತ್ ರಾಜ ಕುಮಾರ ರಾಗಿ
ಅಜರಾಮರ ರಾದಿರಿ.
– ಸುಶೀಲ ಬಸವರಾಜ್
ದಾವಣಗೆರೆ