Oplus_131072

ನಮ್ ಮಂದಿ. (ಕವಿತೆ)

ನಮ್ ಮಂದಿ ಧ್ವರಿಗೋಳ್ ಮನ್ಯಾಗ್ ಜೀತಾ ಮಾಡ್ತಾನೆ ಆಕುಳ,ಎಮ್ಮಿ,ಕಾಯ್ದು ಅವ್ರು ಕೊಟ್ಟಿದ ತಂಗಳ್ ಕೊಟಗ್ಯಾಗ್ ಕುಂತಿ ಉಂಬಾ ಯಾಳಿಗ್ ಎಲ್ಲಾ ಚಂದೆ ಇತ್ತ ಅಂತ್ ಈ ಜಗತ್ತಿನ್ಯಾಗ್.

ನಮ್ ಮಂದಿ ಪಸಿನಾ ಸಂಗಟ್ ರಕ್ತ ಭೀ ಸುರ್ಸಿ ಹೊಲದಾಗ್ ಮಳ್ಯಾಗ್ ಚಳ್ಯಾಗ್ , ಬಿಸಲಾಗ್,ದಂಧ್ಯಾ ಮಾಡಿ ಜೋಪಡಿ ಕಟ್ಟಿ ಅದರಗ್ ಚಿಮಿಣಿ ಹಚ್ಚದಾಗ ಈ ಜಗತ್ತಿಂದ ನೆಮ್ಮದಿನೇ ಹೊಯ್ತು ಅಂತ್ .

ನಮ್ಮ ಪರಗೋಳ್ ಶಾಲಿಗ್ ಹೋಗಾ ಯಾಳಿಗಿ ಹಸದಿಂದ್ ಹೊಟ್ಟಿಲೇ ಕಾಲಗ್ ಚಪ್ಪಲಿ ಇಲ್ದೇ ಬರಿಗಾಲ ಅಂಬದೆ ಮರೆತು ಚೆಂದ್ ಓದಲಾಕ್, ಬರಿಲಾಕ್ ಮಾತಾಡಲಾಕ್, ಕಲ್ತಾಗ್ ಅಂತೂ ಈ ಜಗತ್ತಿಂದ ಎಲ್ಲಾನೆ ಹಾಳಾಯಿತ್ ಅಂತ್

ನಾವು ಹೀನಾ ಭೀ ಹಂಗೆ ಧ್ವರಿಗೋಳ ಮನ್ಯಾಗ್ ಹೆಂಡಿ ತೇಕ್ಕೊತ್ತಾನೆ ಇರದಿತ್ತ್ ಅಂತ ಮಾತಾಡಲಕ್ ಕಲಿತಿಂದೆ ಇಗೊತ್ತ್ ಎಲ್ಲೊರಿಗ್ ಮುಳ್ಳು ಆಗ್ಯಾದ್ ಅಂತ್.

ಬಾಜರದಾಗ್ ಅಂತಾರ್ ನಿಮ್ ಮಂದಿ ಶ್ಯಾಣೆ ಆಗ್ಯಾದ್ ಇಕಾಡಿ ಇಕಾಡಿ ತೊಲ್ ಭಾರಿ ಮ್ಯಾಲ್ ಹೊಗ್ಯಾದ್
ನಿಮ್ ಮಂದಿ ಅಂತ್
ಅದಕಾ ನಮ್‌ ಮಂದಿ ಮಾತಾಡಲಕ್ ಕಲಿತಿಂದೆ ಇಗೊತ್ತ್ ಆ ಧ್ವರಿಗೊಳಿಗಿ ತೊಲ್ ಮುಳ್ಳ್ ಚುಚಿದಾಂಗ್ ಆಗ್ಯಾದ್ ಅಂತ್.

ಶ್ರೀ ಸಿದ್ಧಾರ್ಥ ಟಿ‌ ಮಿತ್ರಾ
ಹುಮನಾಬಾದ್

(ಲೇಖಕರು ಬೀದರ ಗ್ರಾಮ್ಯ ಭಾಷೆಯಲ್ಲಿ ಈ ಕವಿತೆ ಬರೆದಿದ್ದಾರೆ.ಇಲ್ಲಿ ಕೆಲ ಪದಗಳ ಅರ್ಥ ಈ ಕೆಳಗೆ ನೀಡಲಾಗಿದೆ.)

ಪದಗಳ ಅರ್ಥ:

ಧ್ವರಿ– ಸಾಹುಕಾರ,ದೋರೆ. ಜೀತಾ – ಜೀತಗಾರ, ಗುಲಾಮಗಿರಿ ಆಳು, ತಂಗಳ್– ಹಳಸಿದ ಊಟ, ಉಂಬಾ– ಊಟ, ಯಾಳಿ– ವೇಳೆ, ಸಮಯ

ಪಸಿನಾ – ಬೆವರು, ಸಂಗಡ– ಜೊತೆಗೆ, ಜೋಪಡಿ– ಗುಡಿಸಲು, ದಂಧ್ಯಾ- ಕೆಲಸ, ಚಿಮಣಿ– ದೀಪ, ಪರಗೋಳು– ಹುಡುಗರು, ಅಂಬದೆ– ಅನ್ನೋದೆ,ಅನ್ನುವುದು, ಹೀನಾ– ಇನ್ನೂ, ಹೆಂಡಿ- ಸಗಣಿ, ಬಾಜಾರ– ಅಂಗಡಿ, ಶ್ಯಾಣೆ– ಜಾಗೃತರಾಗುವುದು, ಹುಷಾರ, ತಿಳಿವಳಿಕೆ, ಜ್ಞಾನಿ, ಇಕಾಡಿ– ಈ ಕಡೆಗೆ, ತೋಲ್ ಭಾರಿ– ತುಂಬ ಹೆಚ್ಚಿಗೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ