ನಮ್ಮ ಬಾಬಾಸಾಹೇಬ ಅಂಬೇಡ್ಕರರು.
ಸರ್ವರ ಸಮಾನತೆಗಾಗಿ ದುಡಿದವರು
ಸರ್ವರ ಏಳಿಗೆಗೆ ಸಂವಿಧಾನ ರಚಿಸಿದವರು
ನಮ್ಮ ಬಾಬಾ ಸಾಹೇಬ್ ಅಂಬೇಡ್ಕರರು !
ದೀನ, ದಲಿತರ ಪರ ಹೋರಾಡಿದವರು
ಭಾರತ ಸಂವಿಧಾನ ಕರಡು ಸಮಿತಿ ಅಧ್ಯಕ್ಷರು
ನಮ್ಮ ಬಾಬಾ ಸಾಹೇಬ ಅಂಬೇಡ್ಕರರು !
ಮಾನವೀಯತೆಯ ಏಳಿಗೆಗಾಗಿ ದುಡಿದವರು
ಬಡವರ ಕತ್ತಲ ಬದುಕಿಗೆ
ಬೆಳಕಾದವರು
ನಮ್ಮ ಬಾಬಾ ಸಾಹೇಬ ಅಂಬೇಡ್ಕರರು !
ಬಾಲ್ಯದಲ್ಲಿ ಕಷ್ಟ -ನಷ್ಟ ಅನುಭವಿಸಿದವರು
ಬೀದಿ ದೀಪದ ಬೆಳಕಿನಲ್ಲಿ ಓದಿ,
ಜ್ಞಾನ ಪಡೆದವರು
ನಮ್ಮ ಬಾಬಾ ಸಾಹೇಬ ಅಂಬೇಡ್ಕರರು !
ನ್ಯಾಯ- ನೀತಿ ಧರ್ಮಗಳ ಬಗ್ಗೆ ಅರಿತುಕೊಂಡವರು
ಜಾತಿ, ಧರ್ಮ ಭೇದ ಭಾವವ ತೊಲಗಿಸಲು ಪಣ ತೊಟ್ಟವರು
ನಮ್ಮ ಬಾಬಾ ಸಾಹೇಬ ಅಂಬೇಡ್ಕರರು
ದೀನ ದಲಿತರ ಪಾಲಿನ
ದೇವರು
ಆಧುನಿಕ ಸಂವಿಧಾನದ ಶಿಲ್ಪಿ ಇವರು
ಭಾರತ ಮಾತೆಯ ಹೆಮ್ಮೆಯ ಸುಪುತ್ರರು
ನಮ್ಮ ಬಾಬಾ ಸಾಹೇಬ
ಅಂಬೇಡ್ಕರರು !
– ಓಂಕಾರ ಪಾಟೀಲ ಬೀದರ.
ಮಸ್ತ್ ಆದ್ ನೋಡ್ರಿ ಶರಣರೇ ನಿಮ್ಮ ಕವನ 👌
ಸುಪರ್ 👌
ಜೈ ಭೀಮ್