ನಮ್ಮೂರು 

ಸುತ್ತ ಹತ್ತಾರು ಹಳ್ಳಿ
ನಡುವೆ ಒಣಗದ ಹೂಬಳ್ಳಿ
ಅತ್ತಲಿತ್ತ ಹಸಿರು ತೊಟ್ಟ
ಹಸಿರು ತೋರಣಗಳ ಹೂದೋಟ
ದೇವತೆಗಳ ತವರು
ಇದೇ ನಮ್ಮೂರು

ಜಾತಿಗಳ ಒಡಕಿಲ್ಲ
ಭಾಷೆಗಳ ಭೇದವಿಲ್ಲ
ವಕ್ಕಲಗರಿಗೆ ವಲಿದ ಊರು
ಇದುವೇ ನಮ್ಮ ಮಿರ್ಜಾಪುರು

ಶೈಕ್ಷಣಿಕವಾಗಿದೆ ಇಲ್ಲಿ ಕ್ರಾಂತಿ
ಮನೆ ಮನಗಳಲ್ಲಿ ನೆಲೆಸಿದೆ ಶಾಂತಿ
ನೌಕರರಿಗೆ ಇಲ್ಲಿ ಇಲ್ಲ ಬರ
ಮನೆಗೊಬ್ಬರು ಇದ್ದಾರೆ ಊರ ದೇವರ ವರ

ಕರುಣಿಸು ಜನ್ಮ ಸುತನೆ
ಮೀರ್ಜಪೂರದ ಮಹಾರಾಜ ದೌಲಮಲಿಕನೆ
ಎಲ್ಲರಿಗೂ ಆಶೀರ್ವದಿಸಿ ಹರಿಸು
ಇದುವೇ ನಮ್ಮೂರು, ಇದುವೇ ನಮ್ಮೂರು

ಆಗಲಿ ಇದು ನಂದನವನ
ಬೆಳೆಯಲಿ ಸಾಮರಸ್ಯದ ಸಜ್ಜಿವನ
ಇರಲಿ ಕರ್ನಾಟಕದ ನಯನದ ಸೂರು
ಇದುವೇ ನಮ್ಮ ಮಿರ್ಜಾಪೂರು, ಮೀರ್ಜಾಪುರು

ಪ್ರಕಾಶ್ ತಿಪನೋರೆ

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ