Oplus_131072

ನಮ್ಮೂರು ಗುಲಬರ್ಗಾ.

ನಮ್ಮ ಊರಿದು ನಮ್ಮದು
ನಮ್ಮ ಹೆಮ್ಮೆಯ ಊರಿದು
ನಾನು ಹುಟ್ಟಿ ಬೆಳೆದದ್ದು
ಶರಣ ಸಂತ ಬೌದ್ದರ ನಾಡಿದು.
ಬಂದೇನವಾಜ ಶರಣಬಸಪ್ಪರು,
ಜನಿಸಿದಂತಹ ನಾಡಿದು.
ಹಿಂದೂ – ಮುಸ್ಲಿಂ ,ಬೌದ್ಧ, ಸಿಖ್,ಕ್ರೈಸ್ತ
ಜೈನ ಸೌಹಾರ್ದತೆಯ ಬೀಡಿದು.

ಗಾಣಗಾಪೂರದ ದತ್ತಾತ್ರೇಯ
ಘತ್ತರಗಿಯ ಭಾಗ್ಯಮ್ಮ !
ರಟಗಲ್ ರೇವಣಸಿದ್ದರು ನೆಲೆಸಿದಂತಹ ಪುಣ್ಯ ಭೂಮಿ ನಮ್ಮದು !
ಚಿತಾಪೂರ ನಾಗಾವಿ ಎಲ್ಲಮ್ಮದೇವಿ
ಚುಂಚೂರದ ಮಾಪೂರತಾಯಿ
ಗೋಳಾದ ಲಕ್ಕಮ್ಮ ತಾಯಿ
ಸನ್ನತ್ತಿಯ ಚಂದ್ರಲಾಂಬ ಪರಮೇಶ್ವರಿಯರು
ನೆಲೆಸಿದ ಪುಣ್ಯ ಭೂಮಿ ನಮ್ಮೂರು.

ಕಡಕೋಳದ ಮಡಿವಾಳಪ್ಪ,.
ಮಳಖೇಡದ ಕವಿ ನೃಪತುಂಗರು
ಮರ್ತುರಿನ ವಿಜ್ಞಾನೇಶ್ವರರು ಜನಿಸಿದ ಹೆಮ್ಮೆಯ ಊರು ನಮ್ಮದು
ಇದುವೇ ಗುಲಬರ್ಗಾ ನಮ್ಮೂರು
ಕಲ್ಯಾಣ ಕರ್ನಾಟಕದ ಬೀಡಿದು.

ಪ್ರವಾಸಿ ತಾಣಕ್ಕೆ ಹೆಸರಾದ ಊರಿದು
ಸಪ್ತ ಗುಂಬಜ್, ಬೌದ್ಧ ವಿಹಾರ
ಶರಣಬಸವೇಶ್ವರರ ದೇವಾಲಯ
ಸನ್ನತಿ ಬೌದ್ಧ ಸ್ತೂಪಗಳು
ಜಾಮಿ ಮಸಿದಿ
ಕೋಟೆ ಕೊತ್ತಲುಗಳ ನಾಡಿದು.
ನಮ್ಮ ಊರಿದು ನಮ್ಮದು
ನಮ್ಮ ಹೆಮ್ಮೆ ಗುಲಬರ್ಗಾ ನಾಡಿದು.

ಭೀಮಾ ಕೃಷ್ಣ ನದಿಗಳು.
ಹರಿಯುವ ನಾಡಿದು
ತೋಗರಿ ಕೆಂಬಾಳೆ
ಬೆಳೆವ ತವರೂರು ನಮ್ಮೂರು.
ಕಲೆ ಸಾಹಿತ್ಯಕ್ಕೆ ಹೆಸರಾದ
ಹೆಮ್ಮೆ ಜನಪದರ ನಾಡಿದು
ನಮ್ಮ ಊರಿದು ನಮ್ಮದು
ವಿಜಯ ಗುಲಬರ್ಗಾ ಊರಿದು  !

ರೇಣುಕಾ ವಿ. ಗಾಯಕವಾಡ
            ಕಲಬುರಗಿ

ಕವಯತ್ರಿ ಪರಿಚಯ.

ರೇಣುಕಾ ವಿ ಗಾಯಕವಾಡ

ಕವಯತ್ರಿ ರೇಣುಕಾ ವಿ ಗಾಯಕವಾಡ ರವರು ಕಲಬುರಗಿ ಜಿಲ್ಲೆಯ ಪಂಚಶೀಲನಗರ ನಿವಾಸಿ.
ಇವರ ತಂದೆ ಮೂಲತಃ ಮಹಾರಾಷ್ಟ್ರದ ಉಮರ್ಗಾ ದವರು. ಇವರ ಮಾತೃ ಭಾಷೆ ಮರಾಠಿಯಾಗಿದ್ದು,  ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಅಧ್ಯಯನ ಮಾಡಿದ್ದಾರೆ.ಬಾಲ್ಯದಿಂದಲೂ  ಸಾಹಿತ್ಯ ದಲ್ಲಿ ಆಸಕ್ತರಾದ ಇವರು ಕತೆ ,ಕವನ ,ಲೇಖನ ಮೊದಲಾದ  ಬರಹಗಳು ಬರೆಯುತ್ತಿದ್ದಾರೆ. ಸದ್ಯ ಇವರು ಕಲಬುರಗಿ ಪಂಚಶೀಲನಗರದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.