ನನ್ನಾಕೆಯ ಸೋಶಿಯಾಲಿಜಂ.
– ಭಾಲಚಂದ್ರ ಜಯಶೆಟ್ಟಿ.ಬೀದರ
ನನ್ನಾಕೆಗೆ ಹಳೇ ಗುರುತಿನವರು ಈಗೇನಾದರೂ ಸಿಕ್ಕಿದರೆ ಆಶ್ಚರ್ಯ ಪಡುತ್ತಾರೆ.
‘ಆಗಿನ ಶಶಿರೇಖಾ ಇವಳಾ?’ ಅಂತ ಬೊಟ್ಟು ಕಚ್ಚುತ್ತಾರೆ, ಆಗಿನ ಪೆದ್ದು ಪೆದ್ದಾಗಿದ್ದ ಎಲ್ಲರ
ಬಾಯಲ್ಲೂ ಗುಗ್ಗೋ ಅನಿಸಿಕೊಳ್ಳುತ್ತಿದ್ದ ಶಶಿ ಎಲ್ಲಿ, ಇವತ್ತಿನ ಸಮಾಜ ಸೇವಕಿ, ಮಹಿಳ
ಕಾರ್ಯಕರ್ತೆ, ಆದರ್ಶ ಗೃಹಿಣಿ ಅನಿಸಿಕೊಂಡಂಥ ಪ್ರೊಫೆಸರಬಾಯಿ ಎಲ್ಲಿ ಪ್ರೊಫೆಸರರ
ಹೆಂಡತಿಯಾದ್ದರಿಂದ ‘ಪ್ರೊಫೆಸರಬಾಯಿ’ ಅಷ್ಟೆ.
ಇದರ ಹಿಂದೇ ಬಹಳ ದೊಡ್ಡ ಪರಿಶ್ರಮವೇ ಇದೆ, ಹರ ಮಾಡಿ, ಹರಿಬಿದ್ದು
ಜಬರು ತೋರಿಸಿ, ಜಗಳವಾಡಿ ಆಕೆ ಮಹಿಳಾ ಸಮಾಜಕ್ಕೆ ಹೋಗೋ ಹಾಗೆ ನಾನೇ
ಮಾಡಿದ್ದೆ. ಮುಂಜಾನೆ ತಯಾರಿ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸುವ ಹಾಗೆ ಪ್ರತಿದಿನ
ಸಂಜೆಯಾದ ಕೂಡಲೇ ನನ್ನಾಕೆಗೆ ಮಹಿಳಾ ಸಮಾಜಕ್ಕೆ ಕಳಿಸುತ್ತಿದ್ದೆ, ಎಂಥ ಸೀರೆ
ಉಡಬೇಕು, ಹೇಗೆ ಉಡಬೇಕು, ನೆರಿಗೆ ಹೇಗೆ ಸಿಗಿಸಬೇಕು, ಸೀರೆಗೆ ಮ್ಯಾಚ್ ಆಗುವಂಥ
ಯಾವ ದೌಜ್ ತೊಡಬೇಕು, ಸೀರೆಯ ಸೆರಗು ಎಷ್ಟು ಉದ್ದ ಉಡಬೇಕು, ಗೌಜಿನ ಎಷ್ಟು
ಭಾಗ ಸೆರಗಿನ ಹೊರಗಿರಬೇಕು, ಎಷ್ಟು ಭಾಗ ಮುಚ್ಚಿರಬೇಕು, ಮುಖಕ್ಕೆ ಎಷ್ಟು ಪೌಡರ
ಬಳಿ ಬೇಕು, ನಡೆಯುವಾಗ ಕಾಲು ಹೇಗೆ ಬಳುಕಿಸಬೇಕು; ಸಮಾಜದಲ್ಲಿ ಹೇಗೆ
ಮಾತಾಡಬೇಕು, ಮಾತಾಡುವಾಗ ಹೇಗೆ ನಗಬೇಕು, ನಗಬೇಕಾದರೆ ಎಷ್ಟು ಹಲ್ಲುಗಳನ್ನು
ಪ್ರದರ್ಶಿಸಬೇಕು – ಮುಂತಾಗಿ ಒಂದೂ ಬಿಡದಂತೆ ಮನೆಯಲ್ಲಿ ಟ್ರೇನಿಂಗ ಕೊಡುತ್ತಾ
ನನ್ನ ಟ್ರೇನಿಂಗು ಸುರುವಾದ ನಾಲ್ಕಾರು ತಿಂಗಳಿನೊಳಗೇ ಆಕೆ ಸಮಾಜದಲ್ಲಿ
ಚೆನ್ನಾಗಿ ಹೊಂದಿಕೊಂಡಳು. ಬರೀ ಹೊಂದಿಕೊಳ್ಳುವುದಷ್ಟೇ ಅಲ್ಲ ಇಡೀ ಸಮಾಜದಲ್ಲಿ
ಈಕೆಯ ನಡೆ ನುಡಿ, ಸ್ಟೈಲು, ಅಡಿಗೆಯ ರುಚಿ, ಟಾಪುಟೇಸುತನ ಎಲ್ಲವೂ ಒಂದು
ಮಾದರಿಯಾದುವು. ಸಭೆ ಸಮಾರಂಭಗಳಿಗೂ ಆಗ್ರಹದ ಆಮಂತ್ರಣಗಳು ಬರ ಹತ್ತಿದವು,
ತಾಲ್ಲೂಕಿನ ಒಂದೆರಡು ಪತ್ರಿಕೆಗಳಲ್ಲಿ ಈಕೆಯ ‘ಹೊಸ ರುಚಿಗಳು ಬೆಳಕು ಕಂಡವು,
ಇತ್ತೀಚೆಗೆ ‘ಬೀದರ ಭೇರಿ’ ಪತ್ರಿಕೆಯ ‘ಆದರ್ಶ ಗೃಹಿಣಿ’ ಲೇಖನ ಸ್ಪರ್ಧೆಗೆ ಒಂದು
ಲೇಖನವನ್ನೂ ಕಳಿಸಿದ್ದಳು. ಅಂತೂ ಪ್ರೊಫೆಸರನ ಹೆಂಡತಿ ಆದದ್ದು ಸಾರ್ಥಕವಾಗಯಿತು
ಎಂದು ನಾನು ಖುಷಿ
ಆದರೆ, ಇತ್ತೀಚೆಗೆ ಆಕೆ, ‘ಜಾಗೃತ ಮಹಿಳೆ’ಯಾಗಿ ಪ್ರಸಿದ್ಧಿಗೆ ಬಂದಾಗಿನಿಂದ
ನನಗೊಂದು ದೊಡ್ಡ ತಲೆನೋವು ಸುರುವಾಗಿದೆ.
‘ಬ್ಯಾರೆ ಗಣಸು ಹೆಣ್ಣಿಗೆ ಅಡಿನ್ಯಾಗ ಎಷ್ಟು ಸಹಾಯ ಮಾಡ್ತಾರ, ನೀವು ಒಂಚೂರು
ಮೈಗೆ ಹಚ್ಚಿಕೊಳ್ಳೋದೇ ಇಲ್ಲ’ – ಇದು ಆಕೆಯ ದಿನ ನಿತ್ಯದ ದೂರಾಗಿದೆ.
‘ಮೊನ್ನೆ ನಾ ಶೋಭಾ ಪಾಟೀಲ ಮನೀಗೆ ಹೋಗಿದ್ದೆ. ಆಕೀ ಯಜಮಾನು ಎಷ್ಟು
ಕೆಲ್ಸಾ ಮಾಡ್ತಾರ ಗೊತ್ತೇನ್ರಿ? ಅದಕೂ ಪುಣ್ಯಾ ಬೇಕ್ರಿ
ಇತ್ತಿತ್ತಲಾಗೆ ಮಾತು ಮಾತಿಗೂ ಶೋಭಾ ಪಾಟೀಲಳ ದೃಷ್ಟಾಂತ ಕೊಡುತ್ತಾಳೆ.
‘ನಾನೂ ಶೋಭಾ ಮಾತಾಡ್ತಾ ಕುಂತಿದ್ವಿ, ಆಕೀ ಯಜಮಾನು “ಚಹಾಕ್ಕ ನೀರಿದ್ದೇನಿ,
ಎಸರ ಬಂದ ಮ್ಯಾಲ ಪುಡಿ ಹಾಕು” – ಅಂತ ಹೇಳಿ ಹೊರಗೆ ತರಕಾರಿ ಕೊಳ್ಳಾಕ
ಹೋದ್ರು, ತರಕಾರಿ ತಂದು ತಾವೇ ಡಿಕಾಕ್ಷನ್ ಮಾಡಿ ಡಿಕಾಕ್ಷನ್ ತಯಾರೆತೆ, ಶಶಿರೇಖಾ
ಆವಿಗೆ ಚಹಾ ಕೊಡು. ನಾ ತರಕಾರಿ ತೊಳೀತೀನಿ ಅಂತ ಹೇಳಿ ಬಚ್ಚಲು ಮನೆಗೆ
ಹೋದ್ರು, ತರಕಾರಿ ತೊಳಕೊಂಡು ಬಂದು ತಾವೇ ಚಹ ಸೋಸಿ ತಂದು ಕೊಟ್ಟು
‘ಆ ಪಾಟೀಲ ಒಬ್ಬ ಮಾಡ್ತಾನಂತ ನಂಗೂ ಮಾಡಂತೀ ಏನು?’
‘ಆ; ಅಷ್ಟೆಲ್ಲ ನೀವು ಮಾಡ್ರಿ ಅಂತ ನಾ ಹೇಳ್ತಿಲ್ಲ, ಸುಮ್ಮೆ ಒಂಚೂರು ಸಹಾಯ
ಮಾಡಿದ್ರ ಎಷ್ಟು ಹಾಯನಸ್ತದ.’
‘ಒಮ್ಮೆ ಹೇಳಿದ್ದೆಲ್ಲ – ಅಡಿಗೆ ಕೆಲಸ ನನ್ನಿಂದ ಸಾಧ್ಯ ಇಲ್ಲ.
ಕಲ್ಲರೆ ಯಾಕ ಸಾಧ್ಯ ಇಲ್ಲಾರಿ? ಮಹಿಳಾ ಸಮಾಜ, ಸಮಾಜ ಸೇವಾ ಅಂತ ಇವೆಲ್ಲ
ನಂಗೇನು ಗೊತ್ತಿದ್ದು ಏನ್ರಿ? ನಿಮ್ಮ ಕಡೀಂದನ ಕಲೀಲಿಲ್ಲೇ?’
ಅಂತೂ ಈ ಶೋಭಾ ಪಾಟೀಲಳ ಸಲುಗೆ ಬೆಳೆದಾಗಿನಿಂದ ನಮ್ಮ ಮನೆಯಲ್ಲಿ ಈ
ರಗಳೆ ನಡೆದೇ ಇದೆ. ಆ ಪಾಟೀಲ ನನಗನ ಮ್ಯಾಲೆ ನನಗೆ ಎಲ್ಲಿಲ್ಲದ ಸಿಟ್ಟು ಬರ್ತಾ ಇದೆ.
ಒಮ್ಮೆ ಮುದ್ದಾಮಾಗಿ ಅವನಿಗೆ ಭೇಟಿಯಾಗಿ ಛಲೋಕ್ಕಾಗಿ ಝಾಡಿಸಿ ಬಿಡಬೇಕು ಅಂತ
ಮನಸಾಗ್ತಾ ಇದೆ. ಆದರೆ ನಾಗರಿಕ ಸೌಜನ್ಯಕ್ಕಾಗಿ ಸುಮ್ಮನಾಗೇನಿ.
ಮೊನ್ನೆ ನಮ್ಯಾಕೆ ಶೋಭಾ ಪಾಟೀಲ ಮನೆಗೆ ಹೋಗಿ ಬಂದಳು.
ಬಂದವಳೇ ಒಳ್ಳೆ
ಖುಷಿಯಿಂದ ಏನೋ ಸಂತೋಷದ ಸುದ್ದಿ ತಿಳಿಸುವವಳಂತೆ ಉತ್ಸಾಹಭರಿತಳಾಗಿ
ಹೇಳಿದಳು-
“ಛಲೋ ಜಾನ್ನ ಸಿಕ್ಕುರೀ ನಿಮಗ. ಮುಂದಿನ ರವಿವಾರ ಶೋಭಾ ತನ್ನ ಯಜಮಾನರ
ಕರ್ಕೊಂಡು ನಮ್ಮ ಮನೀಗೆ ಬರಾಕ್ಯದಾಳ.’
‘ಬಂದ್ರ ಬರ್ಲೆಳು, ನಂಗೇನಂತ.’ – ಅದು ನನಗೆ ಸಂಬಂಧವಿಲ್ಲದ ವಿಚಾರ
ಎಂಬಂತೆ ನುಡಿದೆ.
ಆ; ನೀವೂ ಒಂದು ಕೈ ತೋರ್ಸೆ ಬಿಡೀ ಅಂತೀನಿ. ಆಕೀ ಗಂಡನಕ್ಕಿಂತ
ನೀವೇನೂ ಕಮ್ಮಿ ಇಲ್ಲಾಂತ ತೋರಿಸ್ತಾಕ ಎಂಥ ಛಲೋ ಚಾನ್ಸ್ ಅದಾರಿ.’
-ಶಶಿಯ ಅಭಿಮಾನದ ಹೆಡೆ ಭುಸುಗುಟ್ಟುತ್ತಾ ಇತ್ತು.
‘ಶಶೀ, ನೀ ಹುಚ್ಚ ಇದ್ದೀ ಏನು? ಆಕೀ ಗಂಡ ಗಡಗಿ ತೊಳಿತಾನಂತ ನಂಗೂ
ತೊಳೀ ಅಂತಿ ಏನು? ಎಷ್ಟು ಸಾರೆ ಹೇಳೇನಿ; ಈ ಅಡಗೀ ಕೆಲಸ ನನ್ನ ಕೈಲೆ ಆಗಲ್ಲ
ಅಂತ.’ – ನಾನು ಸಿಡುಕಿ ನುಡಿದೆ.
‘ಪ್ಲಿಜ್; ಹಾಂಗ ಅನಬ್ಯಾಡ್ರಿ. ಇದು ನನ್ನ ಮರ್ಯಾದಿ ಪ್ರಶ್ನೆ ಅದ. ಸಮಾಜದಾಗ
ಆ ಶೋಭಿ ಎಷ್ಟು ಜಂಭ ಕೊಕ್ಕೋತಾಳ ಗೊತ್ತೇನಿ! – “ನನ್ನ ಗಂಡ ಹಾಂಗ, ನನ್ನ ಗಂಡ
ಹೀಂಗ” ಅಂತ. ಖರೇ ಮುಕ್ತ ಮಹಿಳೆ ಅಂದರ ತಾನೊಬ್ಬಳೇ ಅಂತ ಡೌಲ ಹೊಡೀತಾಳ,
ಆಕೀ ಜಂಬದ ಫುಗ್ಗಾಕ್ಕ ಠುಸ್ ಅನಸ್ಟೇಕಾಗೇದ; ಪ್ಲೇಜ್’
– ಶಶಿ ದಯನೀಯವಾಗಿ ಅಂಗಲಾಚಿದಳು.
ಹಂಗಾದ್ರೆ ಇದು ನನ್ನಾಕೆಯಲ್ಲಿ ಆದ ಮಹಿಳಾ ಜಾಗೃತಿಯ ಪರಿಣಾಮವಲ್ಲ; ತನ್ನ
ಗೆಳತಿಯ ಬಗ್ಗೆ ಮನೆ ಮಾಡಿಕೊಂಡಿದ್ದ ಹೊಟ್ಟೆಕಿಚ್ಚು ಎಂದು ನನಗೆ ಖಾತ್ರಿಯಾಯ್ತು.
ಆದರೂ ನಾನು ನನ್ನ ಪಟ್ಟು ಬಿಡಲಿಲ್ಲ.
“ಅಲ್ಲ… ನನಗೆ ಅಡಿಗೆ ಗಂಧನೇ ಗೊತ್ತಿಲ್ಲ. ನಾನರೇ ಏನ್ಮಾಡಲಿ?’
ನನ್ನ ಅಸಹಾಯಕ ಸ್ಥಿತಿಯನ್ನು ತೋಡಿಕೊಂಡೆ.
ನಾ ಕೆಲಸ, ಇನ್ನೂ ಹತ್ತು ದಿನ ಆದಾವ. ನೀವು ಮನಸು ಮಾಡಿದ್ರೆ ಅದೇನು
ಅರಿಷ್ಠ ದೊಡ್ಡ ಜಿಲ್ಲಾ ಅಲ್ಲ’ ಮಕ್ಕಳನ್ನು ಸಮಜಾಯಿಸುವ ರೀತಿಯಲ್ಲಿ ನನ್ನನ್ನು
‘ಆಕಿ ನೋಡೋದಾ’ – ನಾನು ಒಪ್ಪಿಕೊಂಡೆ.
ಮಾರನೆಯ ದಿನದಿಂದಲೇ ನನ್ನ ಅಡಿಗೆಯ ಪಾಠ ಶುರುವಾಯಿತು.
ತಲೆ ಕಟ್ಟಿ ಸೀದು ಹೋಗುವ ಹಾಗೆ ಅನ್ನ ಮಾಡಿದೆ. ಸಾರಿಗೆ ಒಂದು ದಿನ ಕಾರ
ಹೆಚ್ಚಿಗೆ ಹಾಕಿದರೆ ಇನ್ನೊಂದು ದಿನ ಉಪ್ಪು ಹೆಚ್ಚಿಗೆ ಹಾಕಿದೆ. ತರಕಾರಿ ಸೀದು ಘಾಟು
ವಾಸನೆ ಬರುವ ಹಾಗೆ ಒಗ್ಗರಣೆ ಕೊಟ್ಟೆ, ಚಪಾತಿ ಬೇಯಿಸುವಾಗ ಒಂದು ಮೈ ಪೂರ್ತಿ
ಕರಣಾಗುವ ಹಾಗೆಯೂ ಇನ್ನೊಂದು ಮೈ ಹಸಿಯಾಗಿರುವಂತೆಯೂ ಕಾಳಜಿ ವಹಿಸಿದೆ.
ನನ್ನ ನಳಪಾಕ ನೋಡಿ ಶಶಿ ಕೇಳಿದಳು-
“ಇದೇ; ಹೀಂಗ ಅಡಿಗಿ ಮಾಡಿರಿ?’
ನಾನು ಸಮಜಾಯಿಸಿ ಹೇಳಿದೆ, ‘ನೋಡು ಶಶಿ, ನಮ್ಮ ದೇಶದ ಆಹಾರ ಸಮಸ್ಯೆ
ನೀಗಬೇಕಾದರೆ ಎಂಥಾ ಆಹಾರ ಸೇವನೆ ಮಾಡಬೇಕು ಅನ್ನೋದನ್ನ ಪ್ರಯೋಗ ಮಾಡೆನಿ
ಕೂಳುಬಾಕರಾದ ನಮಗೆ ತಿನ್ನೊಂದೊಂದೇ ಗೊತ್ತು. ಅಡಿಗೆ ರುಚಿಕಟ್ಟಾಗಿದ್ದರೆ ತಿಂದೇ
ತಿಂತೀವಿ, ತಿಂದೇ ತಿಂತೀವಿ. ಬೊಜ್ಜು ಬೆಳೆಸ್ತೀವಿ. ಈ ರೀತಿಯಾಗಿ ಅಡಿಗೆ ಮಾಡಿದ್ರೆ
ಹಸಿವಿದ್ದಷ್ಟು ಮಾತ್ರ ತಿಂತೇವಿ. ಜಾಸ್ತಿ ತಿನ್ನೋದಿಲ್ಲ.”
ನನ್ನ ಈ ಲೆಕ್ಚರ ಕೇಳಿ ಮೆಚ್ಚಿಕೆಯಿಂದ ಮೂಗು ಮುರಿದು, ನಾಲಿಗೆ ಹೊರತೆಗೆದು
ಅಣಕಿಸುತ್ತ ಒಂದು ತುತ್ತು ಚಪಾತಿ ಮುರಿದು ಅದಕ್ಕೆ ಪಲ್ಲೆ ಹಚ್ಚಿಕೊಂಡು ನನ್ನ ಕಣ್ಣಲ್ಲಿ
ಕಣ್ಣಿಟ್ಟು ಮುಗುಲ್ನಗುತ್ತ ಬಾಯಲ್ಲಿ ತುತ್ತು ಹಾಕಿಕೊಂಡಳು. ಬಾಯಿಗೆ ಹಾಕಿಕೊಂಡ ತುತ್ತು
ಮೆಲೆದಳೋ ಇಲ್ಲವೋ, ತಕ್ಷಣ ‘ಯವ್ವಾ !’ ಎಂದು ಆರ್ಭಟಿಸಿ ಚೀರಿ ‘ನೀರು-ನೀರು’
ಎಂದು ಕೂಗ ಹತ್ತಿದಳು. ನಾನು ನೀರಿನ ತಂಬಿಗೆ ಆಕೆಯ ಎದುರಿಗೆ ಹಿಡಿದೆ, ಉಸ್ತಗರೆಯುತ್ತ
ಆಕೆ ತಂಬಿಗೆ ಖಾಲಿ ಮಾಡಿದಳು. ಆ ಒಂದು ತುತ್ತಿನಲ್ಲೇ ಆಕೆಗೆ ನನ್ನ ನಳಪಾಕದ
ಪರಿಚಯ ಆಗಿ ಹೋಯಿತು. ಅನ್ನದ ಪಾತ್ರೆ ತೆಗೆದು ನೋಡಿದಳು-
‘ಇದೇನ್ರೀ ?’- ಎಂದು ಕೇಳಿದಳು.
ನಾನು ಮುದ್ದಾಮಾಗೇ ಮಾಡಿದ್ದು, ಆದರೂ ಒಂದು ಬುರಡೆಬಿಟ್ಟೆ-
‘ಪಾಯಸಾ ಮಾಡಬೇಕೆಂದಿದ್ದೆ. ಬೆಲ್ಲ ಸಿಗಲಿಲ್ಲ.’
ಇದೇ ರೀತಿಯಾಗಿ ಒಂಬತ್ತು ದಿನಗಳವರೆಗೆ ನನ್ನ ಟ್ರೇನಿಂಗು ನಡೆಯಿತು. ಇನ್ನು
ಮೇಲೆ ನನಗೆ ಅಡಿಗೆ ಕಲಿಸಿಯೇ ಬಿಡುತ್ತೇನೆ ಅನ್ನುವ ವಿಶ್ವಾಸ ಆಕೆಗೆ ಉಳಿಯಲಿಲ್ಲ.
ಆದರೆ ‘ಹತ್ತನೆಯ ದಿನ’ ತಡೆಯಬೇಕಲ್ಲ! ಅದು ತಡೆಯಲಿಲ್ಲ. ಬಂದೇ ಬಂತು. ಆ ದಿನ
ಮುಂಜಾನೆ ಏಳಬೇಕಾದರೇನೇ ನಮ್ಮಾಕೆಗೆ ಚಳಿಜ್ವರ ಬಂದಂತಾಗಿತ್ತು. ವಿಷಮ ಜ್ವರದಲ್ಲಿ
ಬಡಬಡಿಸುವವರಂತೆ, ‘ಹ್ಯಾಂಗ್ರಿ ಮಾಡೋದು’ ಎಂದು ಒಂದೇ ಸಮನೇ ಪೇಚಾಡುತ್ತಿದ್ದಳು.
ಆಕೆಯ ತಲೆ ಸರಿಯಾಗಿ ಕೆಲಸ ಮಾಡುತ್ತಿದ್ದಿಲ್ಲ.
“ಅಲ್ವೇ, ಅವು ಬರೋ ಹೊತ್ತಿಗೆ ಸರಿಯಾಗಿ ನಾವು ಮನೀಗೆ ಬೀಗ ಹಾಕ್ಕೊಂಡು
ಎಲ್ಲಾದ್ರೂ ಹೋದ್ರ ಹ್ಯಾಂಗ್ರೀ?’
‘ನಂಗ ಒಂದೂ ತಿಳೀವಲ್ಲು ರೀ!’
‘ನಂಗ ಕೈಕಾಲಾನ ಶಕ್ತಿನೇ ಉಡುಗಿದಾಂಗ ಆಗ್ವಾದ, ನಾ ಹಾಸಿ ಹಾಕಿ ಮಲಗ್ತಿನಿ,
ನೀವು ಏನ ಬೇಕಾರ ಮಾಡಿ,’
ಶಶಿ ಸಂಪೂರ್ಣವಾಗಿ ಹತಾಶಳಾಗಿದ್ದಳು. ಇನ್ನು ಹೆಚ್ಚು ಹೊತ್ತು ಡೀಲು ಬಿಟ್ಟರೆ
ಆಕೆಗೆ ನಿಜವಾಗಿಯೂ ಜ್ವರ ಬರಬಹುದೆಂದು ನನಗೆ ಅನಿಸಿತು. ಈಗ ಸರಿಯಾಗಿ
ಧೈರ್ಯ ಹೇಳದಿದ್ದರೆ ಕೆಲಸ ಕೆಡಬಹುದೆಂದು ಮನವರಿಕೆಯಾಯ್ತು, ನಾನು ಹೇಳಿದೆ-
‘ಶಶಿ, ನೀ ಏಕದಂ ಹುಚ್ಚ ಪ್ಯಾಲಿ ಇದ್ದಿ ನೋಡು, ಅಲ್ಲ! ನಿನ್ನ ಶೋಭಾ ಪಾಟೀಲೇನು
ನಮ್ಮ ಮನೀಗೆ ಔತಣಕ್ಕೆ ಬರ್ತಾಳ? ಸಂಜಿ ಮುಂದ ಬರ್ತಾಳಂದ್ರ ಒಂದು ಕಪ್ ಚಹ
ಕೊಟ್ರಾತು, ಅಂಗಡಿಯಿಂದ ಬಿಸ್ಕತ ಬೇಕಾದ್ರ ತರೋಣಂತ, ಬ್ಯಾಡಾ, ಒಂದಿಟು ಪರಾಳ
ಮಾಡಿದ್ರಾತು, ಈ ಒಂಬತ್ತು ದಿನ ನನಗೆ ಅಡಿಗೀ ಟ್ರೇನಿಂಗ್ ಕೊಡೋ ಬದ್ಲು ಒಂದೀಟು
ಉಪ್ಪಿಟ್ಟೋ, ಸೂಸಲಾನೋ, ಮಂಡಕ್ಕಿನೋ ಮಾಡೋದು ಕಲಿಸಿದ್ರೆ ಆರಾಮಾಗಿ ಕಲಿತಿದ್ದೆ,
ಸುಮ್ಮೆ ದಿನಕ್ಕೊಂದು ಹೊಸಾ ಅಡಗೀ ಅಂತ ಬಡಕೊಂಡಿ.
ಗೌತಮ ಬುದ್ಧನಿಗೆ ಜ್ಞಾನೋದಯವಾದಂತೆ ಆಯಿತು ಶಶಿಗೆ.
‘ಹೌಂದ!! ಈ ಮಾತು ನಂಗ ಹೊಳೀಲೇ ಇಲ್ಲ. ಅತ್ತಾಗ ನಿಮಗ ಅಡಿಗೀ
ಮಾಡೋಕೂ ಬರ್ಲಿಲ್ಲ. ಇತ್ತಾಗ ನಾ ನಿಮಗ ಚಹಾ ಫರಾಳ ಮಾಡಾಕೂ ಕಲಿಸಲಿಲ್ಲ.
ಎಲ್ಲ ವ್ಯರ್ಥ ಆಯ್ತಲ್ಲರೀ! ಈಗ ಹ್ಯಾಂಗ ಮಾಡೋದ್ರಿ? ನೀವು ಒಂದು ಉಪಾಯ
ಹೇಳೋ, ವೀಜ,’
ಗೋಗರೆದು ಅಂಗಲಾಚಿ ಬೇಡಿಕೊಂಡಳು. ನನಗೂ ಕನಿಕರ ಹುಟ್ಟಿತು.
‘ನಾ ಹೇಳ್ತಾಂಗ ಚಹಾದ ಜೋಡಿಗೆ ಒಂದೀಟು ಫರಾಳ ಮತ್ತ ಬಿಸ್ಕತ್ತು ಆದ್ರ
ನಡೀತದಿಲ್ಲೋ?’ – ನಾನು ಧೈರ್ಯ ತುಂಬುವ ದಾಟಿಯಲ್ಲಿ ಕೇಳಿದೆ.
‘ಹ್ಯಾಂಗೋ ಮಾರಾಯೆ! ಈ ಒಂದು ವ್ಯಾಳ್ಯಾ ನೀಗಿದ್ರೆ ಸಾಕು.”
‘ಹಂಗಾರ ಹೀಂಗ ಮಾಡೋಣು. ಅವು ಬರೋದಕ್ಕುಂಚೇನೇ ನೀನು ಉಪ್ಪಿಟ್ಟೋ
ಸೂಸಲಾನೋ ಮಾಡಿಡು. ಚಹಾಕ್ಕ ಹಾಲು, ಸಕ್ಕರೆ, ಪುಡಿ ಎಲ್ಲಾ ಹಾಕಿಡು. ಅವು
ಬರೋ ಹೊತ್ತಿಗೆ ನೀನು ಬಾಜೂಕ್ಕೆ ಕಾಕೀ ಮನಿಗೆ ಹೋಗು. ನಾ ಇಲ್ಲೀದೆಲ್ಲ ನೋಡ್ಕೊತೀನಿ.
ಅಡಿಗೆಯ ವಿಚಾರದಲ್ಲಾಗಲೀ, ಗೃಹಕೃತ್ಯದಲ್ಲಾಗಲೀ ನನ್ನ ಯೋಗ್ಯತೆ ಎಷ್ಟಿದೆ
ಎಂಬುದನ್ನು ಕಳೆದ ಒಂಬತ್ತು ದಿನಗಳಲ್ಲಿ ಚೆನ್ನಾಗಿ ನಾಟಕವಾಡಿ ತೋರಿಸಿದ್ದೆ. ಹೀಗಾಗಿ
ಆಕೆಗೆ ನನ್ನ ಮೇಲೆ ನಂಬಿಕೆಯೇ ಇಲ್ಲದಂತಾಗಿತ್ತು. ನಾನು ಧೈರ್ಯ ಹೇಳಿದೆ-
“ನೀ ಏನೂ ಗಾಬರಿ ಪಡಬ್ಯಾಡ, ಅವು ಬಂದಾಗ ನಾನು ಅಡಗೀ ಮಾಡೋ
ನಾಟಕ ಆಡೇನಿ. ನಾ ಎಷ್ಟು ಛಲೋ ನಾಟಕ ಆಡ್ತೀನಿ ಅನ್ನೋದು ನಿನಗೆ ಗೊತ್ತೇ ಆದ.
ಆ ಪಾಟೀಲ ಯಾಕ, ಅವ್ರಪ್ಪ ಬಂದ್ರೂ ತಿಳ್ಯಾದಿಲ್ಲ.’
‘ಹಂಗಂತಿರಾ! ಹಂಗಾದ್ರ ನೀವು ಹೇಳೋದೇ ಬರೊಬ್ಬರಿ ಅನಿಸ್ತದ. ಆಗ್ಲಿ, ಬೇರೆ
ದಾರಿನೇ ಇಲ್ಲ. ಹಂಗs ಮಾಡೋಣು.’ – ನಿರ್ವಾಹವಿಲ್ಲದೇ ಅನುಮಾನದ ರಾಗ
ಎಳೆದಳು.
‘ನೀ ಯೋಚ್ಚಿ ಮಾಡಬ್ಯಾಡ ಅಂದೆಲ್ಲ. ಅವು ಬಂದ ಮ್ಯಾಲ ನೀನ ನೋಡೀಯಂತೆ;
ನನ್ನ ನಾಟಕ ಎಷ್ಟು ಬಣ್ಣ ಕಟ್ಟದ ಅಂಬೋದು.’ ನಾನು ಆಕೆಗೆ ಧೈರ್ಯ ತುಂಬಿ ವಿಶ್ವಾಸ
ಮೂಡಿಸಿದೆ.
ಅವರು ಬರೋದು ಸಂಜೆ ಐದು ಗಂಟೆಗೆ ನಾಲ್ಕೂವರೆಯ ಒಳಗೆ ಉಪ್ಪಿಟ್ಟು ಚಹ
ಮಾಡಿಟ್ಟು ಶಶಿ ಬಾಜೂಕ್ಕೆ ಕಾಕೀ ಮನೆಗೆ ಹೋಗೋದು, ಅವರು ಬಂದ ಮೇಲೆ ನಾನು
ಅಡಿಗೆ ಮನೆಯಲ್ಲಿ ಅವರಿಗೆ ಕಾಣಿಸುವ ಹಾಗೆ ತಿಂಡಿ ತೀರ್ಥ ಮಾಡುವ ನಾಟಕ
ಆಡೋದು, ನಡುನಡುವೆ ಬೇರೆ ಏನಾದರೂ ಮನೆಗೆಲಸ ಮಾಡುವುದು. ಸ್ವಲ್ಪ ಹೊತ್ತಾದ
ಮೇಲೆ ಹಿತ್ತಲ ಬಾಗಿಲಿನಿಂದ ಶಶಿಗೆ ಸನ್ನೆ ಮಾಡಿ ಕರೆಯುವುದು, ಆಗ ಶಶಿ ಏನೂ
ಗೊತ್ತಿಲ್ಲದವರಂತೆ ಬಂದು, ಅವರು ಬಂದಾಗ ತಾನು ಮನೆಯಲ್ಲಿ ಇಲ್ಲದೇ ಇದ್ದುದಕ್ಕಾಗಿ
ಕ್ಷಮೆ ಕೇಳುವುದು – ಇತ್ಯಾದಿ ನಾವು ಪ್ಲಾನು ಹಾಕಿಕೊಂಡೆವು.
–
ನಾಲ್ಕು ಗಂಟೆಗೇನೇ ಶಶಿ ತನ್ನ ಕೆಲಸ ಮುಗಿಸಿ, ಉಪ್ಪಿಟ್ಟು ಚಹ ಮಾಡಿ ಪ್ಲೇಟಿನಲ್ಲಿ
ಬಿಸ್ಕತ್ತು ಜೋಡಿಸಿಟ್ಟಳು. ನಾಲ್ಕೂವರೆ ಯಾವಾಗ ಆಗುತ್ತದೆ, ತಾನು ಕಾಕೀ ಮನೆಗೆ
ಯಾವಾಗ ಹೋಗಬೇಕು ಎಂಬ ತವಕದಲ್ಲಿ ಗಡಿಯಾರದ ‘ಟಿಕ್-ಟೆಕ್’ ಶಬ್ದ ಎಣಿಸುತ್ತ
ಕುಳಿತಳು. ಒಂದೊಂದು ಕ್ಷಣಕ್ಕೂ ಗಾಬರಿಯಾದ ಹುಲ್ಲೆಯಂತೆ ದೀನಳಾಗಿ ‘ಭಾಳ
ಹುಷ್ಯಾರಾಗಿ ನಕ್ಕೋ ಬೇಕ್ರೀ’ ಎಂದು ನನ್ನಲ್ಲಿ ಅಂಗಲಾಚುತ್ತಿದ್ದಳು. ನಾನು ಆಕೆಗೆ
ಧೈರ್ಯದ ಮಾತು ಹೇಳುತ್ತಲೇ ಇದ್ದೆ.
‘ಆ, ಹ್ಯಾಂಗೂ ಇವತ್ತು ರವಿವಾರ. ಲಗೂನೇ ನಮ್ಮ ಮನೀ ಮುಗಿಸಿಕೊಂಡು
ಸ್ಕೂಟರ ಮ್ಯಾಲ ಹುಮ್ನಾಬಾದಿಗೆ ಹೋಗಿ ಸಿನಿಮಾ ನೋಡಿ ಬರೋಣು ಅಂತ ಶೋಭಾ
ಏನರೆ ತನ್ನ ಗಂಡನ್ನ ಲಗೂನೇ ಹೊರಡಿಸಿಕೊಂಡು ಬಂದು ಅಂದ್ರ ಹ್ಯಾಂಗ್ರೀ?’-
ಇನ್ನೊಂದು ಅನುಮಾನ ಶಶಿಯ ತಲೆ ಹೊಕ್ಕಿತು.
ಬರ್ಲಿ.’
‘ಎಲ್ಲಾ ಮಾಡಿ ಇಟ್ಟಿಯಲ್ಲೋ? ಅಯ್ತು. ಈಗ ನೀ ಹೋಗು ಅವು ಬೇಕಾದಾಗ
‘ಹಂಗಾರ ನಾ ಹೋಗ್ತಿನಿ. ನೀವು ಮಾತ್ರ ಬಹಳ ಹುಷ್ಕಾರ, ಹಾಂ…..
ಕೆಡಬಾರ್ದು ನೋಡಿ.’
ಕೆಲಸ
-ಶಶಿ ಅವಸರಿಸಿ ನನಗೆ ತಾಕೀತು ಮಾಡಿ ನಾಲ್ಕೂ ಕಾಲಿಗೇನೇ ಕಾಕೀ ಮನೆಗೆ
ಹೋದಳು.
ಆಕೆಯ ಅಂದಾಜು ತಪ್ಪಾಗಲಿಲ್ಲ. ಸರಿಯಾಗಿ ನಾಲ್ಕೂವರೆ ಗಂಟೆಗೆ
ಒಂದು ಜೋಡಿ ನಮ್ಮ ಮನೆಯ ಬೆಲ್ಲು ಬಾರಿಸಿತು. ನಾನು ಲುಂಗಿ ಉಟ್ಟು, ಹೆಗಲಿನ
ಮೇಲೆ ಟವೆಲ್ ಹಾಕಿಕೊಂಡು ಅವರಿಗಾಗಿ ಕಾಯುತ್ತಾನೇ ಕುಳಿತಿದ್ದೆ. ಬಾಗಿಲು ತೆಗೆದು
ಮುಗುಲ್ನಗುತ್ತ ಅವರನ್ನು ಸ್ವಾಗತಿಸಿದೆ.
‘ನಮಸ್ಕಾರ, ಬದ್ರಿ, ಶಶಿ ಈಗ ಎಲ್ಲೋ ಹೋಗ್ಯಾಳ, ಇನ್ನೇನು ಬರೋ ಹೊತ್ತಾತು.
ನೀವು ಬರೋ ವಿಚಾರ ತಿಳಾ…………….. ಒಳಗ ಬರ್ರೆಲ
ಅವರಿಗೆ ಒಳಗೆ ಕರೆದು ತಂದು ಮೊದಲೇ ನೇಮಿಸಿದ್ದ ಜಾಗದಲ್ಲಿ ಕೂಡಿಸಿದ.
‘ನೀವೇನು ಈಗೊಂದು ಸಾರಿ ಚಹಾ ಕುಡ್ಯಾವ್ರೋ ! ಇಲ್ಲಾ ಶಶೀ ಬಂದ ಮ್ಯಾಲೆ
ಫರಾಳದ ಜೊತೆಗೆ ಕುಡ್ಯಾವ್ರೋ !’
‘ಛೇ, ಛೇ, ನೀವ್ಯಾಕ ತ್ರಾಸ ತೊಗೋತೀರಿ. ಶಶಿರೇಖಾ ಅವು ಬರ್ಲಿ ಬಿಡ್ರಿ’-
ಅವರು ಶಿಷ್ಟಾಚಾರವಾಗಿ ನುಡಿದರು.
‘ಇದರಾಗ ತಾನೇನು ಬಂತು! ಇದೇ ಈಗ ಮಾಡಿ ಇಟ್ಟೇನಿ. ಈಗ ಫ್ರೆಶ್ ಆಗಿ
ಒಂದೊಂದು ಕಪ್ಪು ಕುಡೀರಂತ, ಏನೂ ಭಿಡೆ ಮಾಡ್ಕೊಬ್ಯಾಡ್ರಿ’ ಎಂದು ಹೇಳುತ್ತ ಶಶಿ
ಮಾಡಿಟ್ಟ ಚಹ ಅವರಿಗೆ ತಂದುಕೊಟ್ಟೆ.
‘ನೀವು ಈ ಮ್ಯಾಗಿನ ಓಡ್ತಾ ಇರಿ, ಹ್ವಾದ ತಿಂಗಳು ಬಸವಕಲ್ಯಾಣ ಕಲ್ಯಾಣದ ಲೇಡೀಜ
ಹಾಸ್ಟೆಲ್ಲಿನ್ಯಾಗ “ಹೆಣ್ಣಿನ ಜೀತ ಮುಕ್ತಿ” ಅಂಬೋ ವಿಷಯದ ಮ್ಯಾಲ ಶಶಿ ಅಧ್ಯಕ್ಷ ಭಾಷಣ
ಮಾಡಿದಲ್ಲ, ಅದರ ವರದಿ ಬಂದದ. ಅಷ್ಟೊತ್ತು ನಾಕ ಬಟ್ಟೆ ಅದಾವ ಹಿಂಡ್ಯಾಕಿ ಬರ್ತೆನಿ’
ಎಂದು ಹೇಳಿ ನಾನು ಬಚ್ಚಲು ಮನೆಗೆ ಹೋದೆ.
ಬಕೇಟಿನಲ್ಲಿ ನೀರು ಸುರುವಿಕೊಂಡು ಶಶಿ ಒಗೆದಿಟ್ಟಿದ್ದ ಬಟ್ಟೆಗಳನ್ನೇ ಇನ್ನೊಮ್ಮೆ
ನೀರಿನಲ್ಲಿ ಚೆನ್ನಾಗಿ ಜಾಲಾಡಿಸಿ, ಬಟ್ಟೆ ಹಿಂಡಿ, ಪ್ಯಾಸೇಜಿನ ತಂತಿಯ ಮೇಲೆ ಒಣಗಿ
ಹಾಕುತ್ತ ಹೇಳಿದೆ—
ಓಗದ ಇಟ್ಟಿದ್ದೆ. ಇವತ್ತು ರವಿವಾರ ನೋಡ್ರಿ. ನೀರು ಬರ್ಲಿಲ್ಲ. ಒಂದು ವಾರದ
ಬಟ್ಟೆ ಇದ್ದು, ಅದಕ್ಕೆ ಇಷ್ಟೊತ್ತಾತು. ಒಂದೆರಡು ಪಾತ್ರಿ ಅದಾವ, ಅವಷ್ಟು ತೊಟ್ಟು ಬರ್ತೆನಿ.
ಚಂಬು, ತಾಟು, ತಂಬಿಗೆ, ಗಂಗಾಳ, ಪ್ಲೇಟು ಜೊತೆಗೆ ಅವರು ಚಹ ಕುಡಿದಿಟ್ಟ ಕಪ್ಪು
ಬಸಿ ಮೊದಲು ಮಾಡಿಕೊಂಡು ಎಲ್ಲ ಪಾತ್ರೆಗಳನ್ನು ಅವರಿಗೆ ಕೇಳಿಸುವ ಹಾಗೆ ಖಲಬಲ
ಶಬ್ದ ಮಾಡುತ್ತ ತೊಳೆದು ಅಡಿಗೆ ಮನೆಯಲ್ಲಿ ಒಯ್ದಿಟ್ಟೆ.
‘ಶಶಿ ಬರೋ ಹೊತ್ತಾಯ್ತು, ಆಕೀ ಬರೋದೊಳಗ ಒಂಚೂರು ಉಪ್ಪಿಟ್ಟು ಚಹ
ಮಾಡ್ತೀನಿ. ನೀವಿಬ್ರೇ ಹಾಲಿನ್ಯಾಗ ಕೂಡೋಕ್ಕೆ ಭಿಡೆ ಮಾಡೋ ಬ್ಯಾಡ್ರಿ ಮತ್ತ
ನಾನು ಕೆಳಗಣ್ಣಿನಿಂದ ಅವರನ್ನು ನೋಡುತ್ತಲೇ ಇದ್ದೆ. ಪರೀಕ್ಷೆಯಲ್ಲಿ ಡ್ರಿಲ್ ಮಾಸ್ತರ
ನೋಡುವ ಸರ ಅವರು ನನ್ನ ಚಲನವಲನಗಳನ್ನೇ ಪರೀಕ್ಷಿಸುತ್ತಾ ಇದ್ದರು. ಅವರಿಗೆ
ಕಾಣಿಸುವ ಹಾಗೆ ಉಟ್ಟು ಮಾಡುವ ನಾಟಕ ಶುರುಮಾಡಿದೆ. ತಾಟಿಗೆ ರವೆ ಸುರುವಿಕೊಂಡು
ಅಳು ಆರಿಸಿದೆ. ಉಳಾಗಡ್ಡಿ, ಮೆಣಸಿನಕಾಯಿ, ಕೊತ್ತುಂಬರಿ ಹೆಚ್ಚಿದಂತೆ ಮಾಡಿದೆ
ಒಗ್ಗರಣೆ ಕೊಡುವುದನ್ನೂ ಮೂಕಾಭಿನಯದಂತೆ ಮಾಡಿದರೆ ನಮ್ಮ ಹೊರಣ ಹೊರ
ಬೀಳುವುದು ಖಾತ್ರಿ ಎಂದು ಅನಿಸಿತು. ಯೋಚನೆಗೆ ಒಳಗಾದ ಆದದ್ದಾಗಲಿ
ವಾಸ್ತವವಾಗಿ ಒಗ್ಗರಣೆಗೆ ಇಟ್ಟೆ, ಅವರ ಮೂಗಿಗೆ ವಿಮನೆಯ ವಾಸನೆ ಹೊಡೆಯುವ
ಹಾಗೆ ಒಗ್ಗರಣೆ ಕೊಟ್ಟೆ ನೀರು ಹಾಕಿ ಗ್ಯಾಸ ಆರಿಸಿ ಬಿಟ್ಟೆ, ಗ್ಯಾಸಿನ ಜರೂರಿ ಏನೂ
ಇರಲಿಲ್ಲ. ಆದರೂ ಎಸರು ಬರುವವರೆಗೆ ಕಾಯ್ತಾ ಇದ್ದೇನೆ ಎಂದು ತೋರಿಸಿಕೊಳ್ಳ
ಬೇಕಾಗಿತ್ತಲ್ಲ. ಆದರೆ ಕೈಕಟ್ಟಿ ಕೊಂಡು ಸುಮ್ಮನೆ ಕೂಡುವ ಹಾಗೂ ಇಲ್ಲ. ಪಟ್ಟೆ ಪಾಲಿಗೆ
ಹೋಗಿ ಸ್ಕೂಲು ತಂದೆ, ಅಟ್ಟದ ಮೇಲಿಂದ ಉಪ್ಪಿನಕಾಯಿಯ ಭರಣಿ, ಶ್ಯಾವಿಗೆಯ ಡಬ್ಬಿ
ಕೆಳಕ್ಕೆ ಇಳಿಸಿದೆ. ಅವರಿಗೆ ಕಾಣಿಸುವ ಹಾಗೆ ಧೂಳು ಜಾಡಿಸಿ ಭರಣಿಯ ಬಾಯಿ ತೆರೆದು
ಸೌಟು ಆಡಿಸಿದೆ.
‘ಈ ಉಪ್ಪಿನಕಾಯಿ ಆಗಾಗ ನೋಡ್ತಾ ಇರ್ಬೆಕು ನೋಡ್ರಿ, ಇಲ್ಲಾಂದ್ರ ಎಲ್ಲಾ ನಾಸ
ಆಗಿ ಕೈಗೆ ಏನೂ ಹತ್ತೋದಿಲ್ಲ. ಶ್ಯಾವೀನೂ ಅಷ್ಟೇ; ನಾಕ-ನಾಕ ದಿನಕ್ಕೆ ಕೈ ಆಡಲಿಲ್ಲ
ಅಂದ ಹುಳಾ ಹತ್ತಿದುವೇ ಅಂತ ತಿಳ್ಕೊರಿ.’
ಉಪ್ಪಿನಕಾಯಿಯ ಭರಣಿ ಮತ್ತು ಶ್ಯಾವಿಗೆಯ ಡಬ್ಬ ಪುನಃ ಅಟ್ಟದ ಮೇಲಿಟ್ಟೆ. ಅಡಿಗೆ
ಮನೆಯಲ್ಲಿ ಉಪ್ಪಿಟ್ಟಿಗೆ ರವೆ ಹಾಕಿದ ನಾಟಕ ಮಾಡಿ ಹೊರಗೆ ಬಂದೆ.
`ನನಗೂ ನಿಮಗೂ ಮುಖಾಮುಖಿ ಗುರ್ತಿಲ್ಲ. ಅದಕ್ಕೆ ನೀವೇನೂ ಭಿಡೆ ಮಾಡೋ
ಬ್ಯಾಡ್ರಿ, ನಿಮ್ಮ ಬಗ್ಗೆ ಶಶಿ ಎಲ್ಲಾ ಹೇಳ್ತಾಳ. ನಾಲ್ಕೂ ಮುಕ್ಕಾಲಿಗೇನೇ ಬರ್ತಿನಿ ಅಂತ
ಹೇಳಿದ್ದು, ಐದಾಗ್ತಾ ಬಂತು…. ತಡೀರಿ, ಹಿತ್ತಾಗ ಏನೋ ಶಬ್ದ ಆದಾಂಗಾಯ್ತು. ನೋಡಿ
ಬರ್ತೆನಿ’ ಎಂದು ಹೇಳಿ ಹಿತ್ತಿಲ ಕಡೆಗೆ ಹೋದೆ.
ಕಾಕೀ ಮನೆಯ ಹಿತ್ತಲಿನಲ್ಲಿಯೇ ಶಶಿ ಮಕ್ಕಳ ಜೊತೆಗೆ ಆಟ ಆಡುತ್ತ ಕುಳಿತಿದ್ದಳು.
ನಾನು ಸನ್ನೆ ಮಾಡಿದೆ. ‘ಹ್ಯಾಂಗಾತು?’ ಎಂದು ಆಕೆ ಸನ್ನೆಯಿಂದ ಕೇಳಿದಳು. ಗ್ರ್ಯಾಂಡ್
ಸಕ್ಸೆಸ್’ ಅಂತ ನಾನು ಉತ್ತರವಾಗಿ ಸನ್ನೆ ಮಾಡಿದೆ. ಆಕೆಗೆ ಅತಿ ಖುಷಿಯಾಯ್ತು,
ಹಾಗೆ ಮಟಿಯುತ್ತ ಮನೆಯ ಕಡೆಗೆ ಹೊರಟಳು. ಆಕೆಗಿಂತ ಮುಂಚೆ ನಾನು ಹಾಲಿಗೆ
ಬಂದೆ
`ಶಶಿಗೆ ಉಳ್ಳಾಗಡ್ಡಿ ಸಂಡಿಗೆ ಅಂದ್ರೆ ಭಾಳ ಜೀಂವಾ, ಈಗ ಬ್ಯಾಸಗ್ಯಾಗೆ ಒಂದಿ
ಹಪ್ಪ, ಸಂಡಿಗೆ, ಶ್ಯಾವಿಗೆ ಮಾಡಿ ಇಳ್ಕೊಂಡ್ರೆ ವರ್ಷಪೂರ್ತಿ ಕುದಿ ಇರೋಲ್ಲ.
ವ್ಯಾಳ್ಯಾ ಸಿಗೋದಂದ್ರ ಈ ರವಿವಾರ ಅಷ್ಟೆ. ಅದಕ್ಕೆ ವಾರಾವಾರಾನೂ ಇಟೀಟೇ ಏನಾದ್ರೂ
ಮಾಡ್ತಾ ಇರ್ತೇನಿ. ಮಾಳಿಗೆ ಮ್ಯಾಲೆ ಸಂಡಿಗೆ ಹಾಕೇನಿ, ಒಣಗಿರಬೇಕು, ಒಂಚೂರು
ನೋಡಿ ಬರ್ಲ್ಯಾ?’
ಬಾಗಿಲೊಳಗೆ ಶಶಿ ಬರುವುದು ಕಾಣಿಸಿತು.
‘ಆದೋ ಬಂದು ನೋಡ್ರಿ, ಈಗರೆ ಭಿಡೆ ಬಿಟ್ಟು ಸಲೀಸಾಗಿ ಕೂಡ್ರಿ ……ಶಶಿ, ಎಷ್ಟು
ಹೊತ್ತಾತು ಇವು ಬಂದು, ಪಾಪ, ಗುರ್ತು ಪರಿಚಯ ಇಲ್ಲ. ಭಾಳ ಭಿಡೆ ಮಾಡಿಕೊಳ್ಳಾಕ
ಹತ್ಯಾರ. ಉಪ್ಪಿಟ್ಟು ಚಹ ಮಾಡಿ ಇಟ್ಟೇನಿ, ಅವ್ರ ಜೊತೆಗೆ ನೀನೂ ತಿನ್ನು, ನಾ ಸ್ವಲ್ಪ
ಮಾಳಗಿ ಮ್ಯಾಲ ಹಾಯ್ದು ಬರ್ತೆನಿ’-ಎಂದು ಹೇಳಿ ಮಾಳಿಗೆ ಮೆಟ್ಟಲು ಹತ್ತಿದೆ.
ಅವರು ಉಪ್ಪಿಟ್ಟು ತಿಂದು ಚಹ ಕುಡಿಯುವುದು ಮುಗಿಯಲಿ ಎಂದು ನಾನು
ಮಾಳಿಗೆಯ ಮೇಲೆ ಸುಮ್ಮನೆ ಸುತ್ತಾಡಿದೆ. ಹತ್ತು ಹದಿನೈದು ಮಿನಿಟು ಕಳೆದಿರಬೇಕು.
ತಲೆಬಾಗಿಲ ಶಬ್ದ ಕೇಳಿಸಿತು. ಯಾರು ಬಂದರು ಎಂದು ಕದ್ದು ಇಣುಕಿ ನೋಡಿದೆ.
ಮನೆಗೆ ಬಂದ ಅತಿಥಿಗಳು ಹೋಗುತ್ತಿದ್ದರು. ಇದೇನು: ಇಷ್ಟು ಬೇಗನೇ ಹೊರಟರಲ್ಲ
ಎಂದು ನನಗೆ ಆಶ್ಚರ್ಯವಾಯ್ತು. ಅವರ ನಡಿಗೆಯನ್ನು ನೋಡಿದರೆ ಸಿಡಿಮಿಡಿಗೊಂಡು
ಹೊರಟವರಂತೆ ಕಾಣುತ್ತಿತ್ತು.
ನಾನು ಸರಕ್ಕನೆ ಕೆಳಗಿಳಿದು ಬಂದೆ. ಕೈಕಾಲು ಸತ್ತವರಂತೆ ಶಶಿ ಆರಾಮ ಕುರ್ಸಿಯ
ಮೇಲೆ ಕುಳಿತಿದ್ದಳು. ಕಣ್ಣಿನಿಂದ ಟಪಟಪ ಎಂದು ಧಾರಾಕಾರವಾಗಿ ನೀರು ಸುರಿಯುತ್ತಾ
ಇತ್ತು. ಮುಖ ಒಣಗಿ ತಾರಾಗಿತ್ತು. ನನಗೆ ನೋಡಿದ ಕೂಡಲೇ ಆಕೆಯ ದುಃಖ
ಉಕ್ಕಿಬಂತು–
“ಅವ್ರು ಶೋಭಾ ಮತ್ತು ಆಕೀ ಗಂಡ ಆ’
‘ಹಂಗಾರ?!’ —ನಾನು ಗಾಬರಿ ತುಂಬಿದ ಆಶ್ಚರ್ಯದಿಂದ ಕೇಳಿದೆ.
‘ಬೀದರ ಭೇರಿ’ ಪತ್ರಿಕೆಗೆ “ಆದರ್ಶ ಗೃಹಿಣಿ” ಲೇಖನ ಕಳಿಸಿದ್ದೆಲ್ಲ. ಅದನ್ನ ಮೆಚ್ಚೊಂಡು
ಬಹುಮಾನ ಕೊಡೋದಕ್ಕೆ ಮುಂಚೆ ಒಂದು ಸಾರಿ ಖುದ್ದು ನೋಡಿ ಬರೋಣ; ಈಗಿನ
ಕಾಲ್ದಾಗ ಬರೀ ಬುರ್ಡೆ ಬಿಡಾವೇ ಜಾಸ್ತಿ, ಲೇಖನದಾಗ ಬರೆದಂತೆ ಖರೆ ಜೀವನದಾಗ
ಆದರ್ಶ ಗೃಹಿಣಿ ಆಗಿರೋವ್ರು ಅಪರೂಪ ಅಂತ ನೋಡಾಕ ಬಂದಿದ್ದ. ಅವರಿಬ್ಬರೂ
ತೀರ್ಪುಗಾರರು ಅಂತರೀ….ಆ ಶೋಭಿ ಸಲ್ಯಾಕ ನಾವು ಆಡಿದ ನಾಟಕ ನೋಡಿ ಈಕಿ
ಎಂಥಾ ಆದರ್ಶ ಗೃಹಿಣಿ ಅಂತ ಬಾಯಿಗೆ ಬಂದಾಂಗ ಬೈದು ಹ್ವಾದ್ರು ರೀ…..?
ನನ್ನ ಕೈಕಾಲುಗಳೂ ಕೂಡ ತಣ್ಣಗಾದುವು. ನಾಲಿಗೆ ಉಡುಗಿತು. “ಹೀs……ons
ಅಂತ ನನ್ನ ಬಾಯಿಯಿಂದ ಒಂದು ದೊಡ್ಡ ಉದ್ಗಾರ ಹೊರಟಿತು. ಶಶಿಯ
ಬಾಜೂ ಇದ್ದ ಕುರ್ಸಿಯ ಮೇಲೆ ನಾನೂ ಇದ್ದಕ್ಕಿದ ಹಾಗೇ ಕುಸಿದು ಬಿದ್ದೆ.
– ಭಾಲಚಂದ್ರ ಜಯಶೆಟ್ಟಿ. ರಾಜೇಶ್ವರ.ಬೀದರ