ನನ್ನವಳು ಮಾಡಿದ ಉಪ್ಪಿಟ್ಟು (ಹಾಸ್ಯ )
ನನ್ನವಳು ಮಾಡಿದ ಉಪ್ಪಿಟು
ನಾ ತಿಂದೆ ಒಂದು ಪ್ಲೇಟು
ತಾಜಾ ಆಗಿತ್ತು ಉಪ್ಪಿಟ್ಟು !
ಕೇಳಿದೆ ಮತ್ತೊಂದು ಪ್ಲೇಟು !
ನೀಡಿದಳು ಮತ್ತೊಂದು ಪ್ಲೇಟು !
ಮತ್ತೆ ಮನ ಬಯಸಿ…..!
ಕೇಳಿದೆ ಬೇಕು ಇನ್ನೊಂದು ಪ್ಲೇಟು…!
ದುರುಗುಟ್ಟಿ ನೋಡಿದಳು ಕಣ್ಣ ಬಿಟ್ಟು !
ಅಂದಳು !
ಸುಮ್ಮನೆ ನೀಡಿದಷ್ಟು ತಿನ್ನಿ ಉಪ್ಪಿಟ್ಟು…!
ತಿನ್ನದೇ ಹೋದ್ದರೆ…
ಮನೆಯಲ್ಲಿದೇ
ನಿಮ್ಮವ್ವನ ಘೋಟನಿ ಹುಟ್ಟು !
ತಿಂದು ನಡೆಯಿರಿ ತೆರಿದಿದೆ ಗೇಟು !
ತೆರೆದಿದೆ ಗೇಟು !
– ಓಂಕಾರ ಪಾಟೀಲ್ ಬೀದರ.