Oplus_131072

ನಾನು ದೀಪ ಹಚ್ಚುತ್ತೇನೆ

ನಾನು ದೀಪ ಹಚ್ಚುತ್ತೇನೆ
ಎಲ್ಲವೂ ಬದಲಾಗಬಿಡುತ್ತದೆಂಬ
ಹುಚ್ಚು ಭ್ರಮೆಯಿಂದಲ್ಲ.
ನನ್ನೊಳಗಿನ ತಮವ ನೀಗಿ
ನನಗೆ ನಾನೇ ಬೆಳಕಾಗಲೆಂದು..!

ನಾನು ದೀಪ ಹಚ್ಚುತ್ತೇನೆ
ಶಾಶ್ವತವಾಗಿ ಕತ್ತಲ
ಕೊಂದುಬಿಡುತ್ತೇನೆಂಬ ಹುಂಬತನದಿಂದಲ್ಲ
ಮುಖವಾಡ ಹೊರಗೆಳೆದು
ನನ್ನೊಳಗೆ ನನ್ನ ನಾ ಹುಡುಕಲೆಂದು..!

ನಾನು ದೀಪ ಹಚ್ಚುತ್ತೇನೆ
ಶ್ರೇಷ್ಟನೋ,ಕನಿಷ್ಟನೋ ಎಂದಲ್ಲ
ಎಲ್ಲರ ಮನೆಯ
ಸಾಲು ದೀಪಗಳ ಬೆಳಕಲ್ಲಿ
ಅವಿತುಕುಳಿತ ಏಕತೆ,
ಸಮಾನತೆ, ಮಾನವತೆಯ ಸಂತೈಸಲೆಂದು..!

ನಾನು ದೀಪ ಹಚ್ಚುವುದು
ಕೇವಲ ತೋರಿಕೆಯಿಂದಲ್ಲ
ಹೊತ್ತಿ ಉರಿಯುತ್ತಿರುವ
ಸುತ್ತಲಿನ ಬೆಳಕಿನ ಹಿಂದಣದ
ಹಲವು ಹಣತೆಗಳ ಆಹುತಿಯ
ಅಸ್ತಿತ್ವವ ಮನುತೊರಲೆಂದು..!

ನಾನು ದೀಪ ಹಚ್ಚುವುದು
ಕೇವಲ ನನ್ನಂತವರ ಖುಷಿಗಾಗಿಯಲ್ಲ
ನೊಂದವರ, ಹಸಿದವರ
ನಿರ್ಗತಿಕ,ಅಮಾಯಕರ ಮೂಕ ನರಳಾಟ
ಇನ್ನಾದರೂ ಆ ದೇವರಿಗೆ ಕಾಣಲೆಂದು..!

 – ಮನು ಪುರ.

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

Leave a Reply

Your email address will not be published. Required fields are marked *