Oplus_131072

ನಾನು ಯಾರು ?
ಮಂತ್ರಿ ಗುಂಡಣ್ಣನ ಪ್ರಶ್ನೆ.

ಮಚ್ಚೇಂದ್ರ ಪಿ.ಅಣಕಲ್.

ನಾನು ಹೋದಲೆಲ್ಲ ಪೋಲಿಸ್ ಬಂದೋಬಸ್ತಿನಿಂದ ಗಾಡಿಗಳೆಲ್ಲ ಸಾಲುಗಟ್ಟಿ ರೋಯ್ ! , ರೋಯ್ ! ಅಂತ ಒದರುತ್ತಾ ಒದರುತ್ತಾ ಹೋಗುತ್ತಿದ್ದಾಗ ಆ ಶಬುದಗಳ ತರಂಗಗಳು ಆಕಾಶದ ಎತ್ತರಕ್ಕ , ಆಕಾಸದ ಎತ್ತರಕ್ಕ , ಆಕಾಶ ಎತ್ತರಕ್ಕೆ ಹಾರಾಡತ್ತಾ ಹಾರಾಡ್ತಾ ಹೋದಂತೆಲ್ಲ ನನ್ನ ಎದುರಿನ ಪಾರ್ಟಿ ಜನರ ತಲೆಯ ಮಿದುಳು ದಿಂ ಅಂದು ಗಿರಗಿರನೇ ತಿರುಗಿದಂಗ ಆಗಬೇಕು

 

ಆಕಸ್ಮಿಕವಾಗಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವೊಂದರ ಟಿಕೇಟ್ ಗಿಟ್ಟಿಸಿದ ಗುಂಡಣ್ಣನಿಗೆ `ಅದೃಷ್ಟವೋ ! ಅದೃಷ್ಟ’ ಎನ್ನುವಂತೆ ಆ ಪಕ್ಷದ ವರಿಷ್ಠರ ಪ್ರಭಾವದಿಂದ ಚುನಾವಣೆಯಲ್ಲಿ ಆರಿಸಿ ಬಂದು,
ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದು, ರಾಜ್ಯಪಾಲರಿಂದ ಪ್ರಮಾಣ ವಚನವು ಸ್ವಿಕರಿಸಿದ.
ಈ ರೀತಿ ಚುನಾವಣೆಯಲ್ಲಿ ದಿಢೀರನೆ ಆರಿಸಿ ಬಂದು ಎಂ.ಎಲ್.ಎ ಆದದ್ದು ಗುಂಡಣ್ಣನಿಗೆ ತನ್ನನ್ನು ತನಗೆ ನಂಬಲಿಕೆ ಆಗಲಿಲ್ಲ.

“ನಾನು ಯಾರು ? ಎಲ್ಲಿದ್ದೇ ? ಎಲ್ಲಿಗೆ ಬಂದೆ ? ಹೇಗಿದ್ದವ, ನಾನು ಹೇಗಾದ್ದೇನಲ್ಲ ? ” ಎಂದು ಆಚರ್ಯ ಚಕಿತನಾದ.

ತುಂಬ ಬಡತನದಲ್ಲಿ ಹುಟ್ಟಿ ಬಂದ ಗುಂಡ ಹತ್ತಾರು ವರ್ಷಗಳಿಂದ ದುಬೈಯಲ್ಲಿ ಗೌಂಡಿ ಕೆಲ್ಸ ಮಾಡ್ತಿದ್ದ. ಇನ್ನೇನು ಈ ಸಲ ವಿಧಾನ ಸಭಾ ಕ್ಷೇತ್ರಗಳ ಮಿಸಲಾತಿ ಮರು ಹಂಚಿಕೆಯಾಗಿದ್ದರಿಂದ ಊರಲ್ಲಿ ಗೌಡರೊಬ್ಬರು ಗುಂಡಣ್ಣನಿಗೆ ಪೋನ್ ಮಾಡಿ ಕರೆಸಿಕೊಂಡು ಟೆಕೇಟ ಕೊಡಿಸಿದರು.

ಚುನಾವಣೆಯಲ್ಲಿ ಸೊಲುತ್ತೆನೆಂದವನೆ ಗೆದ್ದು ಬಿಟ್ಟಿದ್ದ. ಹಾಗಾಗಿ ಆತ ತನ್ನ ಗೆಲುವಿಗೆ ಕಾರಣಿ ಭೂತ ರಾದವರೆ ಲ್ಲರಿಗೂ ಅತಿ ಖುಷಿಯಿಂದ ಮಾತನಾಡಿ ಸಂತಸ ಹಂಚಿಕೊಂಡಿದ್ದ.

ಅಷ್ಟೇಯಲ್ಲದೆ ಇತ್ತ ವಿಧಾನ ಸಭೆಯಲ್ಲಿ ಸಚಿವ ಸಂಪುಟದ ರಚನೆಯಲ್ಲಿ ‘ಬಯಸದೆ ಬಂದ ಭಾಗ್ಯ’ ಎನ್ನುವಂತೆ ಮುಖ್ಯ ಮಂತ್ರಿಗಳು ಗುಂಡಣ್ಣನಿಗೆ ಮಿಸಲಾತಿ ಅಡಿಯಲ್ಲಿ ಮಂತ್ರಿಸ್ಥಾನ ನೀಡಿಯೆ ಬಿಟ್ಟಿದ್ರು. ಇನ್ನೇನು ವಿಧಾನಸಭೆಯ ಮೆಟ್ಟಿಲುಗಳ ಮುಂಭಾಗ ನಡೆದ ಸಭೆಯಲ್ಲಿ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವಿಕರಿಸಿದ. ಈತನಿಗೆ ಮಂತ್ರಿಸ್ಥಾನ ಸಿಕ್ಕಿದರಿಂದ ಅವನ ವಿಧಾನ ಸಭೆ ಮತ ಕ್ಷೇತ್ರದಲ್ಲಿ ಕಾರ್ಯಕರ್ತರೆಲ್ಲ ಪಟಾಕಿ ಹಚ್ಚಿ ಸಂತಸದ ಸಂಭ್ರಮ ಆಚರಿಸಿದರು.

ಇತ್ತ ಗುಂಡಣ್ಣನಿಗೆ
ಏಕಾ ಏಕಿ ಮಂತ್ರಿಗಿರಿ ಸ್ಥಾನ ಸಿಕ್ಕಿದ್ದರಿಂದ ಜನ ನನಗೆ ಮಂತ್ರಿಯೆಂದು ಗುರುತ್ತು ಹಿಡಿಯುತ್ತಾರೆಯೇ ? ಅಥವಾ ದುಬೈ ಗುಂಡನೆಂದೆ ಕರೆಯುವರೋ ? ಎಂದು ತನ್ನೊಳಗೆ ತಾನೆ ಪ್ರಶ್ನಿಸಿಕೊಂಡಿದ.

“ನನ್ನ ಕ್ಷೇತ್ರದಲ್ಲಿ ಜನ ನನಗೆ ಮಂತ್ರಿಯೆಂಬ ಗೌರವ ಕೊಡಬೇಕು. ನಾನು ಬರುತ್ತಿದ್ದರೆ ಆ ಕ್ಷೇತ್ರದಲ್ಲಿ `ಮಿನಿಸ್ಟರ್’ ಬರುತ್ತಿದ್ದಾರೆ ಅಂತ  ನನಗೆ ಅವರು ಗೌರವ ಕೊಡಬೇಕು. ಮತ್ತು ಹಳ್ಳಿ ಹಳ್ಳಿಗಳಲ್ಲಿ ಮತ್ತು ಸರ್ಕಾರಿ ಕಛೇರಿಗಳಲೆಲ್ಲ ನನ್ನ ಹೆಸರು ಕೇಳಿದರೆ ‘ಮಿನಿಸ್ಟರು’ ‘ಅಂಬೋ ಹವಾ ಬೀಳಬೇಕು.

ನಾನು ಹೋದಲೆಲ್ಲ ಪೋಲಿಸ್ ಬಂದೋಬಸ್ತಿನಿಂದ ಗಾಡಿಗಳೆಲ್ಲ ಸಾಲುಗಟ್ಟಿ ರೋಯ್ ! , ರೋಯ್ ! ಅಂತ ಒದರುತ್ತಾ ಒದರುತ್ತಾ ಹೋಗುತ್ತಿದ್ದಾಗ ಆ ಶಬುದಗಳ ತರಂಗಗಳು ಆಕಾಶದ ಎತ್ತರಕ್ಕ , ಆಕಾಸದ ಎತ್ತರಕ್ಕ , ಆಕಾಶ ಎತ್ತರಕ್ಕೆ ಹಾರಾಡತ್ತಾ ಹಾರಾಡ್ತಾ ಹೋದಂತೆಲ್ಲ ನನ್ನ ಎದುರಿನ ಪಾರ್ಟಿ ಜನರ ತಲೆಯ ಮಿದುಳು ದಿಂ ಅಂದು ಗಿರಗಿರನೇ ತಿರುಗಿದಂಗ ಆಗಬೇಕು ” ಅಂತ ಇನ್ನೂ ಏನೇನೆಲ್ಲ ಕನಸ್ಸು ಕಾಣ್ತಾ ಬೆಂಗಳೂರಿನಿಂದ ತನ್ನ ಕ್ಷೇತ್ರಕ್ಕೆ ಬಂದು ಬಿಟ್ಟಿದ.

ಹೊಸದಾಗಿ ಮಂತ್ರಿಯಾಗಿ ಬಂದಿದ್ದ ಗುಂಡಣ್ಣ ಮರುದಿನ  ದಿಢೀರನೆ ತಾಲೂಕಾ ಕಛೇರಿಯೊಂದಕ್ಕೆ ಬೇಟಿ ನೀಡಿದ. ಅಲ್ಲಿಯ ಗುಮಾಸ್ತನೊಬ್ಬ ಇವಾ ಬರುವುದನ್ನು ನೋಡಿಯು ನೋಡದಂತೆ ನಿಂತಿದನ್ನು.
ಅವಾ ಹಾಗೆ ನಿಂತ್ತಿದನ್ನು ಕಂಡ ಗುಂಡನಿಗೆ ಎಲ್ಲಿಲ್ಲದ ಕೋಪ ನೆತ್ತಿಗೇರಿತ್ತು.
`ತನಗೆ ಈತ ಸ್ವಲ್ಪವು  ಗೌರವ ಕೊಡುತ್ತಿಲ’ ವೆಂದು ತಿಳಿದು ಸಿಡಿಮಿಗೊಂಡು ಸುತ್ತಲೆಲ್ಲ ನೋಡಿ ಮಹಾಭಾರತದ ದುರ್ಯೋಧನನಂತೆ ಹಲ್ಲು ಅರೆಯುತ್ತಾ ಸಿಟ್ಟಿನಿಂದ ಆ ಗುಮಾಸ್ತನಿಗೆ ದುರುಗುಟ್ಟಿ ನೋಡುತ್ತಾ

“ಏ ! ಏ ! ಇಲ್ಲಿ ಬಾ. ” ಅಂತ ಕರೆದ. ಆಗ ಆತ ತುಸು ವಿಚಲಿತನಾಗಿ ಹತ್ತಿರ ಬರುತ್ತಿದಂತೆ,  “ಏ ! ಏ ! ನಾನು ಯಾರು ? ನಾನು ಯಾರು ? ” ಅಂತ ತರಾಟೆಗೆ ತೆಗೆದುಕೊಂಡು ಹುಚ್ಚನಂತೆ ಮೈಯಲ್ಲ ಪರಚಿಕೊಳ್ಳುವಂತೆ ಅರಚಿದ.

ಇವನ ಅರಚುವಿಕೆಗೆ ಬೆಚ್ಚಿ ಬಿದ್ದ ಐವತ್ತೆಂಟರ ಆಸು-ಪಾಸಿನ ಆ ವ್ಯಕ್ತಿ ಬಾಯಲ್ಲಿ ತಂಬಾಕು ಹಾಕಿ ಕೊಂಡಿದ್ದರಿಂದ ಮಾತನಾಡಲು ಆಗದೆ ಒಮ್ಮೆಲೆ

`ಥೂ !’ ಅಂತ ಪಿಚಕನೇ ಉಗುಳಿ,
“ಯಾರ‍್ರೀ ! ನೀವು ? ನನಗೇನು ಗೊತ್ತು ? ” ಅಂತ ದುರುಗುಟ್ಟಿ ಕೇಳಿದ.

ಆಗ ಕೋಪಗೊಂಡ ಗುಂಡಣ್ಣ, ” ಏ , ತಹಸಿಲ್ದಾರ ! ಇಲ್ಲಿ ಬಾ ! ನಾನು ಯಾರು ? ಅಂತ ಗೊತ್ತಿಲ್ಲ ಇವನಿಗೆ.” ಅಂತ ಒಮ್ಮೆ ಗಹಗಹಿಸಿ  ನಕ್ಕು , “ಇವನಿಗೆ ಮೊದ್ಲು ನಾನು ಯಾರು ? ಅಂತ ಹೇಳಿ ಸಸ್ಪೆಂಡ ಮಾಡಿ. ತಂಬಾಕು ಬೇರೆ ತಿಂದು ನನ್ನ ಎದುರಿಗೆ ಉಗುಳ್ತಾನೆ ದರಿದ್ರ ಮುಂಡ್ಯೆದಾವ.ಇವರಿಗೆಲ್ಲ ಯಾರು ಹೇಳೊರು ಕೇಳೊರು ಇಲ್ಲದಂಗಾಗ್ಯದ ? ಇದು ಸರ್ಕಾರಿ ಆಸ್ಪತ್ರೆ ಅನ್ನೊದು ಖಬರ್ ಇಲ್ವಾ ? ಇಲ್ಲೇ ತಂಬಾಕು ತಿಂದು ಉಗುಳ್ತಾನೆ  ” ಅಂತ ಕಿರುಚಾಡಿದಷ್ಟೇಯಲ್ಲದೆ , ಅಲ್ಲಿದ್ದ ಕೆಲ ಆಸ್ಪತ್ರೆಯ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು,

“ಹ್ಞೂಂ ! ನಾನು ಯಾರು ? ” ಅಂತ ಗೊತ್ತಿಲ್ಲದೆ ಇರೋ ! ಇವರಿಗೆಲ್ಲ ಈ ತಿಂಗಳ ಸಂಬಳ ತಡೆ ಹಿಡಿಯಬೇಕು” ಅಂತ ಮೇಲಾಧಿಕಾರಿಗಳಿಗೆ ತಾಕಿತ್ತು ಮಾಡಿ ಕೋಪದಲ್ಲಿ ಹೊರಟು ಹೋದ.

ಹೌದು ! ಯಾರಿವರು ?
ಅಲ್ಲಿಯ ಸಿಬ್ಬಂಧಿಗಳು `ಗುಜುಗುಜು’ ಮಾತಾಡತೋಡಗಿದರು. ಆಗ ಕೆಲ ನಿಮಿಷದ ನಂತರ ಗೊತ್ತಾತು. ಗುಂಡಣ್ಣ ಈ ಜಿಲ್ಲೆಯ ತಾಲೂಕು ಒಂದರ ನೂತನ ಶಾಸಕ. ನಿನ್ನೆ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಇಂದು ಕ್ಷೇತ್ರ ಸಂಚಾರ ಮಾಡುತ್ತಿದ್ದಾರೆ” ಅಂತ.

ಇರ‍್ಲಿ, ಈ ನಾನು ಯಾರು ? ಎಂಬ ಪ್ರಶ್ನೆ ಇದೇಯಲ್ಲ ?   ಇದು ಆದಿ- ಅನಾದಿ ಕಾಲದಿಂದಲೂ ಸೂಕ್ತವಾದ ಉತ್ತರ ಸಿಗದೆ ಅದೇಷ್ಟೋ ! ಮಹಾತ್ಮರು ತಮ್ಮ ಅಧ್ಯಾತ್ಮಿಕ ಚಿಂತನೆಗಳಿಂದ ದೇವರನ್ನು ಸ್ಮರಿಸುತ್ತಾ ತನ್ನನ್ನೇ ತಾನು ಯಾರೆಂಬ ಕಲ್ಪನೆಯಲ್ಲಿ ಹುಡುಕುತ್ತಾ ಮನೆ-ಮಠ, ಅರಮನೆ-ರಾಜವೈಭೋಗ, ಹೆಂಡ್ತಿ-ಮಕ್ಕಳು ಸಂಸಾರ, ತಾಯಿ- ತಂದೆ, ಬಂಧು- ಬಳಗ ಹೀಗೆ ಎಲ್ಲವೂ ಬಿಟ್ಟು ಸನ್ಯಾಸಿಯಾಗಿ ಕಾಡು-ಮೇಡುಗಳನ್ನು ಅಲೆಯುತ್ತಾ ಹಲವಾರು ವರ್ಷ ತಪ್ಪಸ್ಸನ್ನು ಮಾಡಿದ್ದಾರೆ. ಆದರೆ ಈ ಪ್ರಶ್ನೆ ಕೊನೆಗೆ ಪ್ರಶ್ನೆಯಾಗಿಯೇ ಉಳಿದಿದೆ ಹೊರತು ಯಾರಿಗೂ ಇದರ ಬಗ್ಗೆ ಸರಿಯಾದ ಉತ್ತರ ಸಿಕ್ಕಿಲ್ಲ.

ಕೆಲ ಋಷಿ-ಮುನಿಗಳು ಮಾತ್ರ ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಒಬ್ಬೊಬ್ಬರದು ಒಂದೊಂದು ತರಹದ ಉತ್ತರವಾಗಿದ್ದರಿಂದ ಕೊನೆಗೆ
‘ನಾನು ಯಾರು ?’ ಎಂಬ ಪ್ರಶ್ನೆ ಗೊಂದಲದ ಗೂಡಾಗಿದೆ.

ಈ ಕುರಿತು ಅದ್ವೈತ ಮತ ಸಿದ್ಧಾಂತದ ಶಂಕರಾಚಾರ್ಯರು ‘ಅಹಂ ಬ್ರಹ್ಮಾಸ್ಮಿ ! ‘ ಅಂತ ಹೇಳಿದ್ದಾರೆ. ಅಂದರೆ  ‘ನಾನೇ ಬ್ರಹ್ಮ , ನಾನೇ ಸೃಷ್ಠಿಕರ್ತ, ನನ್ನಿಂದಲೇ ಎಲ್ಲ ನಡೆಯುತ್ತದೆ. ” ಎಂದು ಹೇಳಿದರೆ, ಇದಕ್ಕೆ ಪ್ರತಿಯಾಗಿ ದ್ವೈತ ಮತ ಸಿದ್ದಾಂತದ ಪ್ರತಿಪಾದಕ ಮಧ್ವಾಚಾರ್ಯರು
“ನಾನು- ನಾನೇ. ನೀನು- ನೀನೆ ” ಎಂದು ಹೇಳಿದ್ದಾರೆ. ಅಂದರೆ  ‘ನಾನು ಬೇರೆ, ನೀನು ಬೇರೆ’ ಎನ್ನುವುದು ಇವರ ವಾದ. ಮತ್ತೇ ಕೆಲವರು  ”ನಾನು ಒಂದು ಆತ್ಮ, ನೀನು ಪರ ಆತ್ಮ,” ಎಂದು ಹೇಳಿದರೆ ಅನುಭಾವಿ ಕವಿಯೊಬ್ಬ ,
”ನಾನಾರೆಂಬುದು ನಾನಲ್ಲ ! ಈ ಮಾನವ ಜನ್ಮವು ನಿಜವಲ್ಲ ! ” ಅಂತ ಹಾಡಿ ಹೊಗಳಿದ್ದಾರೆ.

ಕೆಲ ಮಹಾತ್ಮರು `ನಾನು’ ಎಂದರೆ `ಅಹಂ’ ಇದು ಎಲ್ಲರೊಳಗಿದೆ. ಅದನ್ನು ಹೋಗಲಾಡಿಸಬೇಕು.” ಎಂದಿದ್ದಾರೆ. ಅಷ್ಟೇಯಲ್ಲದೆ
`ನಾನು, ನಾನು ‘ ಎಂದು ಮೆರೆದವರು ಇಲ್ಲಿ ಮಣ್ಣಾಗಿ ಹೋಗಿದ್ದಾರೆ. ಉದಾ: ರಾವಣ, ದುರ್ಯೋಧನ, ಹಿರಣ್ಯ ಕಶ್ಯಪು ಮೊದಲಾದವರನ್ನು ಇಲ್ಲಿ ಸ್ಮರಿಸಬಹುದು.

ಅಂತಹದರಲ್ಲಿ ಈ ಗುಂಡಣ್ಣ
”ನಾನು ಯಾರು ? ನಾನು ಯಾರು ? ನಾನು ಯಾರು ? ” ಅಂತ ಕಂಡ ಕಂಡವರಿಗೆ ತರಾಟೆಗೆ ತೆಗೆದುಕೊಂಡು ಸರ್ಕಾರಿ ಸಿಬ್ಬಂದಿಗಳಿಗೆ ಶಾಕ್ ನೀಡಿದಷ್ಟೇಯಲ್ಲದೆ ವರ್ತಮಾನ ಪತ್ರಿಕೆಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೆಲದಿನ ಹೆಸರು ಮಾಡಿದ.

ಮತ್ತೊಂದು ದಿನ ಗುಂಡಣ್ಣ ಕ್ಷೇತ್ರ ಸಂಚಾರದ ಸಂದರ್ಭದಲ್ಲಿ ಏಕಾ ಏಕಿಯಾಗಿ ಪಕ್ಕದ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿದ್ದರಿಂದ ಆ ಜಿಲ್ಲೆಯ ತಾಲೂಕಿನ ಕಛೇರಿಯೊಂದಕ್ಕೆ  ಬೇಟಿ ನೀಡಿದ. ಅಲ್ಲಿ ಆತ ಯಾರಿಗೂ ಹೇಳದೆ ಕೇಳದೆ ಮಂತ್ರಿಯೆಂಬ ಆಧಿಕಾರದ ‘ಅಹಂ’ ನಲ್ಲಿ ಸರ್ಕಾರಿ ಕಛೇರಿಯೊಂದರಲ್ಲಿ ದಿಢೀರನೆ ಒಳನುಗ್ಗಿದ. ಇದನ್ನು ಕಂಡ ಅಲ್ಲಿಯ ಕಾವಲುಗಾರ,

”ಏ ! ಏ ! ಯಾರು ನೀನು ? ” ಅಂತ ಅವನ ಕೊರಳ ಹಿಂಬದಿಯ ಪಟ್ಟಿ ಹಿಡಿದು, ಪೋಲಿಸ್ ಖೈದಿಗೆ ಹಿಡಿದೆಳೆದಂತೆ ಎಳೆದು ಬಾಗಿಲ ಬಳಿ ತಂದು ನಿಲ್ಲಿಸಿದ. ಆಗ ಗುಂಡಣ್ಣ ಉಗ್ರ ಪತಾಕೆಯಂತಾಗಿ ಕಣ್ಣು ಕೆಂಪಗೆ ಮಾಡಿಕೊಂಡು,
”ಏ, ಏ, ಏನು ? ಏನಂದೆ ? ನಾನು ಯಾರು ? ನಾನು ಯಾರು ? ಅಂತ ಕೇಳ್ತಿಯಾ ? ಹೇಳು. ನೀನೇ ಹೇಳು. ನಾನು ಯಾರು ?  ಹ್ಹ ಹ್ಹ ಹ್ಹ ! ” ಅಂತ ಒಂದು ನಮೂನೆ ನಕ್ಕು ದುರುಗುಟ್ಟಿ ನೋಡಿ ಹಲ್ಲು ಅರೆಯುತ್ತಾ

“ಗೊತ್ತಿಲ್ವಾ ನಿನಗೆ. ನಾನು ಯಾರು  ಅಂತ.?  ಈಗ ಹೇಳು. ನಾನು ಯಾರು ? ” ಅಂತ ಒಂದೇ ಸವನೇ ಗಹಗಹಿಸಿ   ನಗತೊಡಗಿದ. ಈ ಗುಂಡಣ್ಣನ ನಗೆಯ ವರ್ತನೆ ಕಂಡು ಆ ಕಾವಲುಗಾರ ಇವನ್ಯಾವನೋ ಕೆಲಸಕ್ಕೆ ಬಾರದ ಪುಡಾರಿ ಇರಬಹುದೆಂದು ತಿಳಿದು

“ನೀನು ಯಾರಾದ್ರೂ ನಂಗೇನು ? ನೀನು ಹೇಳದೆ ಕೇಳದೆ ಕಚೇರಿಯೊಳಗೆ ನುಗ್ತಿಯಲ್ಲ ? ಇಲ್ಲಿ ಹಳೆಯ ಕಡತಗಳಿರುತ್ತವೆ ಅಂತ ಗೊತ್ತಿಲ್ಲವೇನು ನಿಂಗೆ ?
ನಡೆ ಹೊರಗೆ ” ಅಂತ ಗುಂಡಣ್ಣನ ಎದೆ ಮ್ಯಾಲಿನ ಅಂಗಿ ಹಿಡಿದು ಹೊರ ನೂಕಿದ.
ಇದರಿಂದ ತುಂಬ ಅವಮಾನಿತನಾದ ಗುಂಡಣ್ಣನಿಗೆ ಮತ್ತೆ ಕೋಪ ನೆತ್ತಿಗೇರಿ,

“ಏ, ಏ ! , ತಹಸಿಲ್ದಾರ,  ಬರ್ರೀ ಇಲ್ಲಿ  ! ನಾನು ಯಾರು ? ಅಂತ ಗೊತ್ತಿಲ್ಲ ಇವನಿಗೆ.” ಅಂತ ಮತ್ತೆ ಕೆಂಡಮಂಡಲವಾಗಿ ಕೂಗಿದ.

ದೂರದಲ್ಲಿ ನಿಂತಿದ್ದ ತಹಸಿಲ್ದಾರರು ಓಡಿ ಬಂದು ಕಛೇರಿಯ ಎಲ್ಲ ಸಿಬ್ಬಂದಿಗಳಿಗೆ ಗುಂಡಣ್ಣನ ಬಗ್ಗೆ ತಿಳಿ ಹೇಳಿ ಸಮಧಾನ ಮಾಡಲು ಪ್ರಯತ್ನಿಸಿದರು ಆದರೂ ಗುಂಡಣ್ಣ ಮಾತ್ರ ಸಿಡಿಮಿಡಿಗೊಂಡು,

“ನೋಡಿ, ತಹಸಿಲ್ದಾರ ಸಾಹೇಬ್ರೇ ! ಇವನು ನನ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ, ಇವನಿಗೆ ಮೊದಲು ಸಸ್ಪೆಂಡ ಮಾಡಿ ವರದಿ ಕೊಡಿ.” ಅಂತ ಹೇಳಿ.

” ಛೇ ! ಸ್ವಲ್ಪನೂ ಕಾಮನ್ ಸೆನ್ಸ ಇಲ್ಲ ಈ ಜನಗಳಿಗೆ,   ನಾನು ಯಾರು ? ಅಂತ ಗೊತ್ತಿಲ್ಲದೆ ಕೆಲಸ ಮಾಡ್ತಿದ್ದಾರೆ. ಹ್ಹ ಹ್ಹ ಹ್ಹ ! ನಾನು ಯಾರು ? ನಾನು ಯಾರು ? ಅಂತ ಗುಂಡಣ್ಣ ತಾನು ಮಂತ್ರಿ ಯೆಂಬ ‘ಅಹಂ’ನಲ್ಲಿ ಮತ್ತೇ ಮತ್ತೆ ಗಹಗಹಿಸಿ  ನಕ್ಕು. “ಮುಂದಿನ ದಿನಗಳಲ್ಲಿ ಇವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇನೆ ” ಅಂತ ಕೋಪದಿಂದ ಸಿಡಿಮಿಡಿಗೊಂಡು ಅಲ್ಲಿಂದ ತನ್ನ ತವರು ಜಿಲ್ಲೆಯ ಕಡೆಗೆ ಸಾಗಿದ. ತಾನು ಕುಳಿತ ಗಾಡಿಯಲ್ಲಿ ಡ್ರೇವರ್  ಕನ್ನಡ ಗೀತೆಯೊಂದು ಹಾಕಿದ.ಅದು

ಒಳಿತು ಮಾಡು ಮನುಜ
ಇಲ್ಲಿ ಇರುವುದು ಮೂರು ದಿವಸ !
ನಾನು ನಾನು ಎಂದು
ಮೇರೆಯಬೇಡ ಮೂಢ…..
ನಾನು ಎಂಬುದು ಇಲ್ಲಿ….,.
..,………………………..”   ಎಂಬ ಹಾಡು ಕೇಳುತ್ತಿದಂತೆ ಗುಂಡಣ್ಣ ಒಮ್ಮೆ ಡ್ರೇವರನ ಮುಖ ನೋಡಿ ಅದ್ಯಾಕೋ ಇಲ್ಲಿಯವರೆಗೆ ಗಂಟು ಮೊರೆ ಹಾಕಿದವ ಒಮ್ಮೆ ಮುಗಳ್ನಗೆ ಬೀರಿ ಮೌನ ತಾಳಿದ.

ಮಚ್ಚೇಂದ್ರ ಪಿ.ಅಣಕಲ್.

2 thoughts on “ನಾನು ಯಾರು ? ಮಂತ್ರಿ ಗುಂಡಣ್ಣನ ಪ್ರಶ್ನೆ. (ಲಲಿತ ಪ್ರಬಂಧ)”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ