Oplus_131072

ನಾವೇ ಸಂಪತ್ತು

ಬನ್ನಿರೆಲ್ಲರು ನಲಿಯುತ ಆಡುವ ಬಗೆಬಗೆ ತೆರದ ಆಟಗಳು
ಕೂಡಿ ಆಡುತ ಹಂಚಿ ತಿನ್ನುತ ಅರಳಿಸುವ ಮನದ ಭಾವಗಳು

ಸ್ನೇಹ ಬೀರುತ ಜ್ಞಾನ ಹರಡುತ ಕಲಿಯುವ ನಾವು ಜೊತೆಯಲ್ಲಿ
ಸಹೋದರ ಭಾವದ ಕಂಪು ಪಸರಿಸುವ ನಾವುಗಳು ನಿತ್ಯದಲಿ

ಭಾರತ ದೇಶವೆ ನಂದನವನ ನಾವಿದರ ಕುಸುಮಗಳು
ಭವ್ಯ ಭಾರತದ ಕನಸು ಕಾಣುವ ನಾವೇ ನಾಳಿನ ಪ್ರಜೆಗಳು

ಪರಿಸರ ಜಾಗೃತಿ ಮೂಡಿಸಿ ನಾವು ನೆಲಜಲವನ್ನು ಕಾಯೋಣ
ಭೂಮಂಡಲದ ಹಸಿರು ಹೆಚ್ಚಿಸಿ ಶುದ್ಧ ಗಾಳಿಯನು ಪಡೆಯೋಣ

ಮುದ್ದಿನ ಮಕ್ಕಳು ನಿಮ್ಮಯ ಕುಡಿಗಳು ಚಿತ್ತವಿರಲಿ ಹೊತ್ಹೊತ್ತು
ನಮ್ಮ ಏಳಿಗೆಗೆ ಶ್ರಮಿಸುತಿರಿ ನಾವುಗಳೇ ನಿಮ್ಮಯ ಸಂಪತ್ತು.

ಮಾಣಿಕ ನೇಳಗಿ ತಾಳಮಡಗಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ