ನಯವಂಚನೆ
– ಜಿ ಎಲ್ ನಾಗೇಶ್
ಇಬ್ಬರೂ ಬಂದು ಬಾಲ್ಕನಿಯಲ್ಲಿ ಕುಳಿತರು.
ಕೆಲ ಸಮಯದ ನಂತರ ಸಿನಿಮಾ ಪ್ರಾರಂಭಗೊಂಡಿತ್ತು.
‘ಆಶಿಕ್ ಬಾನಾಯ ಆಪ್ನೆ…!’ ಬಾಲಿವುಡ್ ನ ಕಿಸ್ಸರ್ ಬಾಯ್, ಸ್ಟಾರ್ ಹೀರೋ ಇಮ್ರಾನ್ ಹಸ್ಮಿ ನಾಯಕ ನಟನಾಗಿ ನಟಿಸಿರುವ ರೋಚಕಮಯ ಪ್ರಣಯಭರಿತ ಹಿಂದಿ ಚಿತ್ರ ಅದು!
ರಸಿಕ ನಿರ್ದೇಶಕರು ತುಂಬ ರೋಚಕಮಯವಾಗಿ ಚಿತ್ರಿಸಿದ್ದಾರೆ.
ಥ್ರಿಲ್ಲಿಂಗ್ ಸ್ಟೋರಿ! ಪ್ರಣಯಭರಿತ ಗೀತೆ! ಚುಂಬನದ ದೃಶ್ಯ!
ಆಶಿಕ್ ಬನಾಯ…! ಆಶಿಕ್ ಬನಾಯ ಆಪ್ನೆತೇರೆಬಿನ್ ನಿಂದ್ನಹಿ ಆತಿ ತೇರೆಬಿನ್ ರಾತ್ನಹಿ ಕತ್ತಿ ತೇರೆಬಿನ್ ಚೈನ್ನಹಿ ಆತಿ
ತೇರೆಬಿನ್ ಪ್ಯಾಸ್ ನಹಿ ಭುಜ್ತಿ ತೇರೆ ಬಿನ್….
ಅಬ್ಬಾ… !
ನಿಜವಾಗಿಯೂ ಅದೆಂಥ ಅದ್ಭುತ ಪ್ರಣಯಭರಿತ ಗೀತೆ ಅದು!
ಅವಳಿಲ್ಲದೆ ನಿದ್ದೆ ಬರುವುದಿಲ್ಲವಂತೆ
ಅವಳಿಲ್ಲದೆ ರಾತ್ರಿ ಸರಿಯಿಲ್ಲವಂತೆ
ಅವಳಿಲ್ಲದೆ ಉತ್ಸಾಹ ಬರುವುದಿಲ್ಲವಂತೆ
ಅವನ ದಾಹ ತೀರುವುದಿಲ್ಲವಂತೆ…
ಆ ಸಿನಿಮಾದ ಹಾಡಿನ ದೃಶ್ಯ ನೋಡುತ್ತಿದ್ದರೆ ಮುದುಕನಿಗೂ ರಸಿಕತೆ ಮೂಡುತ್ತದೆ.
ಸಿನಿಮಾ ನೋಡಿ ರೋಮಾಂಚನಗೊಂಡಿದ್ದ ಮನೋಜ್ ಅವಳ ಬುಜದ ಮೇಲೆ ಕೈ ಹಾಕಿ ಮೆಲ್ಲಗೆ
ಸ್ಪರ್ಶಿಸತೊಡಗಿದ.
ಅವಳು ಪ್ರತಿಭಟಿಸದೆ ಅಷ್ಟೇ ಉದ್ರೇಕಗೊಂಡು ಸಹಕರಿಸಿದಳು. ಆಗ ಅವರಿಬ್ಬರು
ಪರಸ್ಪರ ರೊಮ್ಯಾನ್ಸ್ ಮಾಡಿಕೊಳ್ಳುತ್ತಾ ಸಿನಿಮಾ ನೋಡಲಾರಂಭಿಸಿದ್ದರು.
ಕೊನೆಗೆ ಸಿನಿಮಾ ಅಂತ್ಯಗೊಂಡಿತ್ತು.
ಸಿನಿಮಾ ಹಾಲಿನಿಂದ ಹೊರಬಂದು ಹೋಟೆಲ್ ಒಂದರಲ್ಲಿ ತಿಂಡಿ-ಐಸ್ ಕ್ರೀಮ್ ತಿಂದು ಮನೆಗೆ ಮರಳಿದರು.
ಮನೆ!
“ಸಿನಿಮಾ ಹೇಗಿತ್ತು ಗೀತಾ?”
“ಅಬ್ಬ… ಅದನ್ನು ನೆನೆಸಿಕೊಂಡರೆ ಮೈ ಬಿಸಿಯಾಗುತ್ತೆ.”
“ಮೈ ಬಿಸಿಯಾಗಿದ್ರೆ ತಂಪು ಮಾಡಿಕೊಳ್ಳೋಣ ಬಾ.”
“ಎಲ್ಲಿಗೆ?”
“ಇನ್ನೆಲ್ಲಿಗೆ,ಬೆಡ್ರೂಮಿಗೆ..”
“ಹಗಲಿನ ಹೊತ್ತಿನಲ್ಲಿ ಬೆಡ್ರೂಮಿಗಾ? ದಿಡೀರಂತ ಆನು ಬಂದ್ಬಿಟ್ಟರೆ?”
“ಅವಳು ಬರಲು ಇನ್ನು ತುಂಬ ಲೇಟಾಗುತ್ತೆ. ಅವಳು ಬರುವಷ್ಟರಲ್ಲೇ ಜೈ ಅನಿಸಿಬಿಡೋಣ.”
“ರಸಿಕನಿಗೆ ಆಸೆ ತುಂಬಾನೇ ಆಗಿರೋ ಹಾಗಿದೆ?”
“ಯಾಕೆ.. ನಿನಗೆ ಆಗಿಲ್ವೇ?”
ಅವಳು ಆಸೆಯಿಂದಲೇ ನಕ್ಕಳು.
ಇಬ್ಬರೂ ಬೆಡ್ ರೂಮಿನತ್ತ ಹೋದರು.
*****
“ಗೀತಾ ಇವತ್ಯಾಕೆ ಬೆಳಗ್ಗೆಯಿಂದ ಒಂದು ತರ ಇದೆಯಾ?”
“ಮನೋಜ್… ಅದು.. ನಾನು…”
“ನೀನು?”
“ಕಾಮದಾಹದಲ್ಲಿ ನಾವಿಬ್ಬರು ಅನುಭವಿಸಿದ್ದ ಆ ಸುಖದ ಪ್ರತಿಫಲದಿಂದಾಗಿ ನಾನೀಗ ಗರ್ಭಿಣಿಯಾಗಿದ್ದೇನೆ. ನಿಮ್ಮ ಪ್ರತಿರೂಪ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ.”
“ನೀನೇನು ಹೇಳುತ್ತಿದ್ದೀಯ ಗೀತಾ?”
“ನಿಜ ಹೇಳುತ್ತಿದ್ದೇನೆ ಮನೋಜ್. ನಾನು ಎರಡು ತಿಂಗಳ ಕಾಲಾವಧಿಯಲ್ಲಿಲ್ಲ. ಅನುಮಾನ ಬಂದು ಡಾಕ್ಟರ್ ವಿಜಯಲಕ್ಷ್ಮಿ ಹತ್ತಿರ ತೋರಿಸಿದೆ. ನನಗೆ ಅನುಮಾನ ನಿಜವಾಗಿದೆ. ನನಗೆ ಭಯವಾಗುತ್ತಿದೆ ಮನೋಜ್. ನನಗೇನು ಮಾಡಬೇಕು ಅಂತ ತೋಚುತ್ತಿಲ್ಲ…” ಎಂದಿನ್ನೂ ಅದೇನೋ ಹೇಳಿದಳು ಗೀತಾ.
ಅದಕ್ಕೆ ಮನೋಜ್ ಹೇಳಿದನು-
“ಭಯ ಪಡಬೇಡ ಗೀತಾ, ನಿನ್ನ ಜೊತೆಗೆ ನಾನಿದ್ದೇನೆ.ನಾನು ನಿನ್ನನ್ನು ಮದುವೆ ಆಗುತ್ತೇನೆ.”
“ನೀವು ನೀವೇನು ಹೇಳುತ್ತಿದ್ದೀರಾ ಮನೋಜ್ ? ನೀವು ಹೇಳುತ್ತಿರುವುದು ನಿಜಾನಾ ? ಅನುರಾಧಳನ್ನು ಮದುವೆ ಆಗಿರುವ ನೀವು ನನ್ನನ್ನು ಮದುವೆಯಾಗಲು ಸಾಧ್ಯನಾ ?”
“ಅನುರಾಧ ಕೇವಲ ಹೆಸರಿಗೆ ಮಾತ್ರ ಅವಳು ನನ್ನ ಹೆಂಡತಿಯಾಗಿದ್ದಾಳೆ. ಮದುವೆಯಾಗಿ ಎಂಟು ತಿಂಗಳಾದರೂ ನಾನು ಅವಳ ಮೈ ಮುಟ್ಟಿಲ್ಲ. ಅವಳನ್ಯಾಕೆ ನಿನ್ನನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಜೊತೆಗೂ ನಾನು ಸೇರಿಲ್ಲ. ನನ್ನ ಮೈಮನ ತಣಿಸಿದ ಮೊದಲ ಹೆಣ್ಣು ನೀನು. ನೀನೇ ನನ್ನ ಮೊದಲಿನವಳು; ನೀನೇ ನನ್ನ ಕೊನೆಯವಳು. ನಾನು ನಿನ್ನನ್ನು ಮದುವೆಯಾಗುತ್ತೇನೆ ಗೀತಾ. ಮದುವೆಗೆ ಅನುರಾಧವಾಗಬಹುದು ಕೇರ್ ಮಾಡಲ್ಲ.
ಅನುರಾಧಳಿಗೆ ಈ ವಿಷಯ ತಿಳಿದು ರಂಪ ಮಾಡಿದಳು.
ಮದುವೆಗೆ ಪ್ರತಿಭಟಿಸಿದಳು.
ಅತ್ತು ಕಣ್ಣೀರಿನ ಹೊಳೆಹರಿಸಿದಳು.
ಆದರೆ ಮನೋಜ್ ಕೇರ್ ಮಾಡಲಿಲ್ಲ.
ಗೀತಳನ್ನು ಮದುವೆಯಾಗಿ ಮುಂಬೈನ ಖಂಡಾಳದಲ್ಲಿ ಕೆಲವು ವಾರ ಹನಿಮೂನ್ ಎಂಜಾಯ್ ಮಾಡಿದನು ಮನೋಜ್.
ದಿನಗಳು ಉರುಳಿದವು.
ವಾರಗಳು ಕಳೆದವು.
ಕೆಲವು ತಿಂಗಳುಗಳು ಉರುಳಿದ ನಂತರ ಏನು?
******
ಅವರಿಬ್ಬರೂ ಹಾವಿನಂತೆ ಮಂಚದ ಮೇಲೆ ಉರುಳಾಡುತ್ತಿದ್ದಾರೆ.
ಅವನ ರಸಿಕ ಚೇಷ್ಟೆಗೆ ಅವಳು ಕಿಲಿಕಿಲಿ ನಗುತ್ತಿದ್ದಾಳೆ.
ಈ ದೃಶ್ಯ ಕಿಡಕಿಯಿಂದ ಮನೋಜ್ ನೋಡಿದನು.
ನಂಬಲಾಗದೆ ಬೆಚ್ಚಿಬಿದ್ದನು ಮನೋಜ್ !
“ಅಯ್ಯೋ ಎಂತಹ ಹೆಣ್ಣು ಇವಳು! ಹೆಣ್ಣು ಅಲ್ಲ ಇವಳು… ಚಿತ್ತಿನಿ ಜಾತಿಗೆ ಸೇರಿದ ಹೆಣ್ಣು ನಾಯಿ ಇವಳು ! ಈ ನಾನನ್ನು ನಂಬಿ ಇವಳೇ ನನ್ನ ಬದುಕು ಅಂದುಕೊಂಡಿದ್ದೆನಲ್ಲ ನಾನು ! ಅಯ್ಯೋ… ! ನಾನೆಂಥ ಮೂರ್ಖ!”
ಅವಳ ಮೇಲೆ ಕೋಪ ತಿರಸ್ಕಾರ ಅಸಹ್ಯ ಉಂಟಾಯಿತು ಅವನಿಗೆ.
“ಇಲ್ಲ… ನಾನು ಬಿಡೋಲ್ಲ!” ಅಂದುಕೊಳ್ಳುತ್ತಾ ಮತ್ತಿನಲ್ಲಿದ್ದ ಅವನು ತೂರಾಡುತ್ತಾ ಅಲ್ಲಿಗೆ ಬಂದನು.
ಬಿರುವಿನಲ್ಲಿದ್ದ ರಿವಾಲ್ವರ್ ಎತ್ತಿಕೊಂಡು ಬೆಡ್ರೂಮಿಗೆ ನುಗ್ಗಿದವನೇ, ಗುಂಡು ಹಾರಿಸಿದನು ಅವಳ ದೇಹ!
ಪ್ರಾಣಾಂತಿಕ ಕೂಗು!
ಅವಳು ನೆಲಕ್ಕುರುಳಿದಳು.
ಬೆಚ್ಚಿಬಿದ್ದು ಹೌಹಾರಿದ ಯುವಕ ಆದಿತ್ಯ ಪ್ರಾಣಭಯದಿಂದ ಹೊರಗೆ ಓಡಿ ಮನೋಜ್ ನಿಂದ ತಪ್ಪಿಸಿಕೊಂಡಿದ್ದನು.
ಈ ಗಲಾಟೆಯನ್ನು ಕೇಳಿ ಅಲ್ಲಿಗೆ ಓಡಿ ಬಂದಿದ್ದಳು ಅನುರಾಧ.
ಅಲ್ಲಿ ಭೀಕರ ಕಂಡು ನಂಬಲಾಗದೆ ಭಯದಿಂದ ಬೆಚ್ಚಿಬಿದ್ದಿದ್ದ ಅನುರಾಧ
“ಮ…ಮನೋಜ್… ನೀವು… ನೀವೇನು ಮಾಡಿ ಬಿಟ್ಟಿದ್ದೀರ ಮನೋಜ್ ? ನೀವ್ ಈ ರೀತಿ ಕೊಲೆ ಮಾಡಬಾರದಿತ್ತು” ಎಂದಾಗ ಕುಡಿತದ ಮತ್ತಿನಲ್ಲಿ ವ್ಶಾಘ್ರನಂತಾದ ಮನೋಜ್ ಹುಚ್ಚುಚ್ಚಾಗಿ ಅದೇನೇನೋ ! ಒದರಾಡಿದನು.
ಸೈರಾನ್ ಹಾಕೂತ ಪೊಲೀಸ್ ಜೀಪ್ ಬಂದು ಅಲ್ಲಿ ನಿಂತಿತ್ತು.
ಅದರಿಂದ ನಾಲ್ಕು ಜನ ಪಿ.ಸಿ.ಗೆ ಪೊಲೀಸ್ ಇನ್ಸ್ ಪೆಕ್ಟರ್ ತಾಯಪ್ಪ ಕೆಳಗಿಳಿದು ದಡದಡನೇ ಬಂಗಲೆ ಒಳಗೆ ಓಡಿ ಬಂದನು.
ಆಗೇನು ನಡೀತು ?
“ನನ್ನ ಗಂಡನನ್ನು ಬಲೆಗೆ ಹಾಕಿಕೊಂಡು ನನ್ನ ಬಾಳು ಹಾಳು ಮಾಡಿರುವ ಈ ಬಣ್ಣದ ಚಿಟ್ಟಿ , ಈಗ ತಾನೇ ನಾನು ಇದೇ ರಿವಾಲ್ವರ್ ನಿಂದ ಕೊಂದು ಬಿಟ್ಟೆ ಇನ್ಸ್ ಪೆಕ್ಟರ್. ನನ್ನನ್ನು ಅರೆಸ್ಟ್ ಮಾಡಿ” ಎಂದು ಹೇಳುತ್ತಾ, ರಿವಾಲ್ವರ್ ಹಿಡಿದುಕೊಂಡಿದ್ದ ಅನುರಾಧ ತನ್ನ ಪೊಲೀಸ್ ಅಧಿಕಾರಿ ತಾಯಪ್ಪನ ಮುಂದೆ ಚಾಚಿದಳು.
ತಾಯಪ್ಪ ಅವಳ ಕೈಗಳಿಗೆ ಬೇಡ ತೊಡಿಸಿದನು.
ಹೆಣವನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿದನು.
ನಂತರ ಪೊಲೀಸ್ ಜೀಪ್ ಅನುರಾಧ ಠಾಣೆಯತ್ತ ಹೊರಟರು.
*****
“ಹಲೋ…”
“ನಾನು ಆದಿತ್ಯ ಅಂತ ಮಾತಾಡುತ್ತಿದ್ದೇನೆ.”
“ಮಾತಾಡಿ”
“ಕೊಲೆ ಮಾಡಿದ್ದು ಅನುರಾಧ ಅಲ್ಲ ಇನ್ಸ್ಪೆಕ್ಟರ್.”
“ನೀನೇನ್ ಹೇಳ್ತಿದ್ದೀಯಾ! ಕೊಲೆ ಮಾಡಿದ್ದು ಅನುರಾಧ ಅಲ್ಲ ಅಂದ್ರೆ ಒಪ್ಲ್ರು?”
“ಕೊಲೆ ಮಾಡಿದ್ದು ಅನುರಾಧಳ ಗಂಡ ಮನೋಜ್… ಮನೋಜ್… ಮನೋಜ್ ಕೊಲೆಗಾರ!”
“ಅದು ಹೇಗೆ ಹೇಳ್ತೀಯ ? ಈ ಕೊಲೆಗೂ ನಿನಗೂ ಏನು ಸಂಬಂಧ ? ಕೊಲೆಗೀಡಾದ ಗೀತಾ ನಿನಗೇನಾಗಬೇಕು?”ಎಂದು ಕೇಳಿದಾಗ-
“ಗೀತಾ ನನ್ನ ಗರ್ಲ್ ಫ್ರೆಂಡ್ ಆಗಿದ್ದಳು. ನಮ್ಮಿಬ್ಬರ ಸಂಬಂಧದ ಬಗ್ಗೆ ಇವತ್ತು ಅವಳ ಗಂಡನಿಗೆ ತಿಳಿದು ಕುಡಿತದ ಮತ್ತಿನಲ್ಲಿದ್ದ ಮನೋಜ್ ನನ್ನ ಕಣ್ಣೆದುರಿಗೆ ರಿವಾಲ್ವರ್ ನಿಂದ ಶೂಟ್ ಮಾಡಿ ಗೀತಾಳನ್ನು ಸಾಯಿಸಿದ…”ಎಂದು ನಡೆದಳು. . . . . . ಸಂಗತಿ ವಿವರಿಸಿ ಹೇಳಿದನು ಆದಿತ್ಯ ಎಂಬ ಹೆಸರಿನ ಯುವಕ.
*****
ಕೊಲೆ ಅಪರಾಧವಾಗಿತ್ತು.
ಮನೋಜ್ ಈಗ ಕಂಬಿಗಳ ಹಿಂದೆ ಇದ್ದನು.
ಲಾಯರ್ ನೀಡಿದ ಪೇಪರ್ಸ್ ಮೇಲೆ ಸಹಿ ಮಾಡಿ-
“ಅನು… ನಾನು ನಿನಗೆ ಮಾಡಿರುವ ದ್ರೋಹಕ್ಕೆ ಆ ದೇವರು ಈಗ ನನಗೆ ಸರಿಯಾದ ಶಿಕ್ಷೆ ನೀಡಿದ್ದಾನೆ. ನನಗೀಗ ಜೀವಾವಧಿ ಶಿಕ್ಷೆಯಾಗಿದೆ. ನನ್ನ ಕಥೆ ಈಗ ಜೈಲಿನಲ್ಲಿಯೇ ಮುಗಿಯುತ್ತದೆ. ನೀನು ಈ ಪಾಪವನ್ನು ಬಿಟ್ಟು ಬೇರೆ ಯಾರನ್ನಾದರೂ ನೋಡಿ ಮದುವೆ ಮಾಡಿಕೊಂಡಿದ್ದೇನೆ. ನಿನಗೆ ನನ್ನ ಆಸ್ತಿಯಲ್ಲ ಈ ಪತ್ರದಲ್ಲಿ ಬರೆದಿದ್ದೇನೆ ತೊಗೊ “ಎಂದು ಹೇಳುತ್ತಾ ಪೇಪರ್ಸ್ ನೀಡಿದನು ಮನೋಜ್.
ಅನುರಾಧ ಬಂದು
“ಮನೋಜ್…” ಎಂದಾಗ
“ನನ್ನನ್ನು ಕ್ಷಮಿಸಿಬಿಡು ಅನುರಾಧಎಂದು ಮನೋಜ್ ಕ್ಷಮೆ ಕೇಳಿದನು.
*****
ಮನೋಜ್ ಆಸ್ತಿಯ ಹಕ್ಕು ಪತ್ರಗಳನ್ನು ನೀಡಿದ್ದಕ್ಕಾಗಿ ಜೈಲಿನಿಂದ ಹೊರ ಬಂದಳು ಅನುರಾಧ.
ಅಲ್ಲಿ… ಕಾರಿನಲ್ಲಿ ಕುಳಿತು ಅನುರಾಧಳ ಬರುವಿಕೆಗಾಗಿ ಕಾಯುತ್ತಿದ್ದ ಆದಿತ್ಯ.
ಕಾರು ಚಲಿಸುತ್ತಿದೆ!
ಕಾರಿನಲ್ಲಿ ಅನುರಾಧ ಮತ್ತು ಅವಳ ಪ್ರಿಯಕರ ಆದಿತ್ಯ ಅಲ್ಲಿ ಸೇರಿದರು. ಎಲ್ಲಿಗೆ ಹೋಗುತ್ತಿದ್ದಾರೆ.
ಸಮಯ ಉರುಳುತ್ತಿದೆ!
ಅವರಿಬ್ಬರ ಮುಖದಲ್ಲಿ ನಿಗೂಢ ವಿಜಯದ ಸಂಕೇತವೆಂಬಂತೆ ಮಂದಹಾಸ ಮಿನುಗುತ್ತಿದೆ…!
ನಯವಂಚಕರಿಂದಾಗಿ ತಾನು ಮೋಸ ಹೋಗಿದ್ದು ಅಮಾಯಕ ಮುಗ್ಧ ಮನೋಜನಿಗೆ ಕೊನೆಗೂ ಗೊತ್ತಾಗಲೇ ಇಲ್ಲ ಪಾಪ.
ಡಿಯರ್ ಫ್ರೆಂಡ್ಸ್ , ಅನುರಾಧ ಮತ್ತು ಆದಿತ್ಯರಂಥ ನಯವಂಚಕರು ನಮ್ಮ ನಿಮ್ಮ ಮಧ್ಯದಲ್ಲೂ ಸಹ ಇರಬಹುದು;
ಕೇರ್ ಫುಲ್ ಆಗಿರಿ…!
– ಜಿ.ಎಲ್.ನಾಗೇಶ.
ಕಥೆ ಚೆನ್ನಾಗಿ ಮೂಡಿ ಬಂದಿದೆ ಪ್ರಸ್ತುತ ಇಂದಿನ ದಿನಮಾನಗಳ ಯುವಕ ಯುವತಿಯರಿಗೆ ಎಚ್ಚರಿಕೆ ನೀಡುತ್ತಿದೆ