Oplus_131072

ನೆಲ ಸಂಸ್ಕೃತಿಯ ದೇವತೆಗಳು

ಹಿಮರಾಜನ ಮಗಳಾಗಿ ಪ್ರಕೃತಿಯೇ ತಾನಾಗಿ ವೃಷಭ ವಾಹನ ಮಾಡಿಕೊಂಡ ತಾಯಿಯ ಮೊದಲ ಅವತಾರ ಶೈಲ ಪುತ್ರಿ
ಪರ್ವತ ರಾಜನ ಮಗಳಾಗಿ ಜನ್ಮ ತಳೆದ ಬ್ರಹ್ಮಚಾರಿಣಿ ತ್ಯಾಗ ಸಂಯಮದ ಸಂಗಮದಿ ತಪವಗೈದ ತಪಶ್ಚಾರಿಣಿ

ಶಿವನ ತಲೆಯಲ್ಲಿ ಧರಿಸಿದ ಅರ್ಧಚಂದ್ರ ಪಾರ್ವತಿ ಹಣೆಯಲ್ಲಿ ಸಿಂಧೂರವನ್ನಾಗಿ ಧರಿಸಿದ ರೂಪವೆ ಚಂದ್ರಘಂಟಾ
ಬ್ರಹ್ಮಾಂಡ ಸೃಷ್ಟಿಯ ಮೂಲಶಕ್ತಿ ಮತ್ತು ಬೆಳಕಿನ ಸಮತೋಲನ ಕಾಪಾಡಲು ಸೂರ್ಯನ ಮಧ್ಯದಲ್ಲಿ ನೆಲೆಸಿದೆ ಕುಶ್ಮಾಂಡದೇವಿ

ಸ್ಕಂದ ಮಾತಾ ರೂಪ ಅದ್ಭುತ ಹಿತಕರ ಭಾವನೆಯಲ್ಲಿ
ಆರಾಧಿಸಿದವರಿಗೆ ಖ್ಯಾತಿ ಸಂಪತ್ತು ಸಮೃದ್ಧಿ ನೀಡಿವಳು ತಾಯಿ
ಮಹೀಷನೊಂದಿಗೆ ಯುದ್ಧ ಮಾಡಿ ಮಹೀಷನ ಸಂಹಾರ ಮಾಡಿ ಮಹಿಷಾಸುರಮರ್ದಿನಿನೆನೆಸಿಕೊಂಡೆ

ಉಗ್ರ ರೂಪದಿ ಶುಂಭ ನಿಶುಂಭರನ್ನು ಸಂಹಾರ ಮಾಡಿ ರಕ್ತಬೀಜಾಸುರನ ರಕ್ತ ಬಾಯಲ್ಲಿ ತುಂಬಿಕೊಂಡೆ ರಕ್ತಬೀಜಾಸುರನ ಎದೆ ಸೀಳಿ ಸಂಹಾರ ಮಾಡಿದೆ
ಮಹಾ ಗೌರಿ ಸರ್ವ ಸಿದ್ದಿಯನ್ನು ಸಿದ್ದಿಸಿದೆ ಸಿದ್ದಿಧಾತ್ರಿ

  ಬಂತನಾಳ ಶೋಭರಾಣಿ ಕಲ್ಬುರ್ಗಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ