ನೆನಪಿನ ಲೋಕ
ಮರಳಿ ಬಾರದ ದಿನಗಳು
ಕಳೆದ ಸುಂದರ ದಿನಗಳು
ಮಾಸದ ನೆನಪಿನ ಸುಂದರ ಕ್ಷಣಗಳು
ಕೈ ಜಾರಿ ಹೋದ ಮೇಲೆ ಚಿಂತಿಸಿದ ಮನಗಳು
ಸಮಯವಿದ್ದಾಗ ಅರಿಯದ ಮನಸ್ಸು
ದಿನ ಕಳೆದು ವರ್ಷ ಉರುಳಿದಾಗ ಯೋಚಿಸು
ಮುಂದಿನ ದಿನಕ್ಕೆ ಸ್ವಾಗತ ಗೈವ ಕನಸು
ಕಷ್ಟ ಸುಖ ಎಲ್ಲ ಆ ದಿನಗಳೇ
ಸೊಗಸು
ಕಷ್ಟದಿಂದ ಪಾಠ ಉಂಟು ನಮಗೆ
ಸುಖದಿಂದ ನೂರೆಂಟು ನೋವು ತಮಗೆ
ಅರಿತು ಬಾಳದ ಆ ಮನ ಈಗ ಏಕೆ
ನೆನಪಿನ ಅಂಗಳದ ಹೂದೋಟ ಈಗೇಕೆ
ಜೀವನ ಬದಲಾದಂತೆ ಕಾಲ ಬದಲಾಗಿ
ಋತುಚಕ್ರದಂತೆ ಇಸ್ವಿಗಳ ಬದಲಾಗಿ
ಮರಳಿ ಬರುವ ಹೊಸ ವರ್ಷ ಇದಾಗಿ
ಹಳೆಯ ವರ್ಷದ ನೆನಪು ಕಾಡುವ ಪ್ರಶ್ನೆಯಾಗಿ
ಕು.ಕವಿತಾ ಎಮ್ ಮಾಲಿ ಪಾಟೀಲ.