Oplus_131072

ನೆನಪಿನಂಗಳ.

ಕಲಿತ ರೆಕ್ಕೆ ಬಲಿತ ಹಕ್ಕಿಗಳು
ಮತ್ತೇ ಗೂಡಿಗೆ ಮರಳಿವೆ !
ಕಲಿಸಿದ ಗುರುವಿನ ಸ್ಮರಣೆಗೆ ನೆನಪಿನಂಗಳಕ್ಕೆ ಕರೆದಿವೆ !!

ಎಂಥಹ ಚಂದ ಎನಿತು ಅಂದ
ಎಲ್ಲ ಸೇರಿ ಕೂಡೆ ಸಂಭ್ರಮವು !
ಆಟ ಊಟ ನಲಿವ ಕೂಟ
ನೋಡಲೆರಡು ಕಣ್ಣು ಸಾಲವು

ಅಂದು ನೆಟ್ಟ ಸಸಿಯು
ಇಂದು ಬೆಳೆದು ಹೆಮ್ಮರ !
ಕಾಯಲಿ ಕರುಣೆಯೊಂದು
ಅವರನೆಲ್ಲ ನೂರು ಕಾಲದೆತ್ತರ !!

ನವೋದಯದ ನವ ತೇಜೋ
ಹಬ್ಬಿ ನಿಲ್ಲಲಿ ನಿತ್ಯ ನಿರಂತರ !
ಯಾವ ಮಣ್ಣ ಕಣದ ಋಣವೋ
ಗುರು ಶಿಷ್ಯರ ಪ್ರೀತಿ ಸುಮಧುರ

             – ಅಶೋಕ್ ಕುಮಾರ್.ಎಂ.ಬಿ.                            (ಕಲಾ ಶಿಕ್ಷಕರು) ನವೋದಯ ವಿದ್ಯಾಲಯ ಮುಡಿಪು.ದಕ್ಷಿಣ ಕನ್ನಡ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ