Oplus_131072

ನುಡಿದಂತೆ ನಡೆಯದ ಡಾ. ಅಕ್ಕ ಗಂಗಾಂಬಿಕೆ ಪಾಟೀಲ್.

 

ಧರ್ಮೇಂದ್ರ ಪೂಜಾರಿ ಬಗ್ದೂರಿ.ಹೈದರಾಬಾದ್.

 

ಇವರಿಗೆ ಬಸವ ತತ್ವ ಸಿದ್ದಾಂತ ಬದ್ಧತೆ ಇಲ್ಲ, ಕೇವಲ ಶೋಕಿಗಾಗಿ ಬಿಳಿ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಪಾದಿಸುವ ದಾರಿ ಮಾಡಿಕೊಂಡಿರುವುದು ಸಮಾಜಕ್ಕೆ ಒಂದು ಕಳಂಕ.

 

ಬೀದರದ ಪೂಜ್ಯ ಡಾ ಅಕ್ಕ ಗಂಗಾಂಬಿಕೆ ಪಾಟೀಲ್ ರ ನಡೆ ಸಂಶಯಾಸ್ಪದವಾಗಿ ಕಂಡು ಬರುತ್ತಿದೆ.  ಮುಂಬರುವ ದಿನಗಳಲ್ಲಿ ಸೇಡಂನಲ್ಲಿ ಆಚರಿಸುತ್ತಿರುವ “ಭಾರತೀಯ ಸಂಸ್ಕೃತಿ ಉತ್ಸವ” ಅಕ್ಕ ಗಂಗಾಂಬಿಕೆ ಕಲಬುರ್ಗಿಯಲ್ಲಿ ರವಿವಾರ ವಿರೋಧ ಮಾಡಿ ಭಾಗವಹಿಸುವುದು ಬೇಡ ಎಂದು ದೊಡ್ಡ ಭಾಷಣ ಮಾಡಿ ಸೋಮವಾರ ಬೀದರದಲ್ಲಿ ಸೇಡಂ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಶುಭ ಕೋರಿದರು ಇದಕ್ಕೆ ಲಿಂಗಾಯತ ಸಮಾಜವು ಸಂಶಯಾಸ್ಪದವಾಗಿ ನೋಡುವಂತೆ ಮಾಡಿಕೊಟ್ಟಿದೆ. ಹೀಗಾಗಿ ಇದಕ್ಕೆ ಸಮಾಜದಲ್ಲಿ ಯಾವುದೇ ರೀತಿಯ ಆಸ್ಪದ ನೀಡಬಾರದು ಎಂಬುದನ್ನು ಯಾರು ಮರೆಯಬಾರದು. ಜನರು ಸಂಘಟಿತರಾಗಿ ಎಚ್ಚೆತುಕೊಳ್ಳಬೇಕು.

ಭಾರತೀಯ ಸಂಸ್ಕೃತಿ ಉತ್ಸವ ವಾಹನಕ್ಕೆ ಪೂಜೆ ಸಲ್ಲಿಸಿ ಗಂಗಾಂಬಿಕೆ ಚಾಲನೆ ನೀಡಿರುವುದು
ಅಕ್ಕ ಗಂಗಾಂಬಿಕೆ ಇವಾಗ ಕರ್ನಾಟಕ ರಾಜ್ಯದಲ್ಲಿ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ದಿನಾಂಕ 19 ಜನವರಿ 2025ರಂದು ಬಹುತ್ವ ಸಂಸ್ಕೃತಿ ಭಾರತೋತ್ಸವ ಕಾರ್ಯಕ್ರಮ ಕಲಬುರ್ಗಿಯಲ್ಲಿ ಭಾಗವಹಿಸಿ ಮಾತನಾಡಿ, ಬಸವ ತತ್ವ ಸಿದ್ದಾಂತಗಳ ಮೇಲೆ ಕೆಲವು ಹಿಂದೂ ಸಂಸ್ಥೆಗಳು ಅಪಪ್ರಚಾರ ಮಾಡುತ್ತಿದ್ದಾರೆ, ಬಸವ ತತ್ವ ಸಿದ್ದಾಂತ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ, ಅದರ ಮುಂದುವರೆದ ಭಾಗ ಸೇಡಂ ಪಟ್ಟಣದಲ್ಲಿ ಆಚರಿಸುತ್ತಿರುವ ಭಾರತೀಯ ಸಂಸ್ಕೃತಿ ಉತ್ಸವ ಆಗಿದೆ. ಆದರಿಂದ ಯಾರು ಆ ಉತ್ಸವದಲ್ಲಿ ಭಾಗವಹಿಸಬಾರದು ಎಂದು ದೊಡ್ಡ ಭಾಷಣೆ ಮಾಡಿದು ಯಾವ ಉದ್ದೇಶಕ್ಕಾಗಿ ಎಂಬುದು ಜನರ ಪ್ರಶ್ನೆಯಾಗಿದೆ. ಇಂದು ಗಂಗಾಂಬಿಕೆಯವರ ನಡೆಯನ್ನು ಸಂಶಯಕ್ಕೂ ಎಡೆ ಮಾಡಿಕೊಟ್ಟಿದೆ.

ಮರು ದಿವಸ 20ನೇ ಜನವರಿ 2025 ರಂದು ಬೀದರ ನಗರದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರ ನಿಮಿತ್ಯ ತಯಾರು ಮಾಡಿದ್ದ ವಾಹನಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಯಶಸ್ವಿಗಾಗಿ ಹಾರೈಸಿದ್ದಾರೆ. ಎರಡೇ ದಿನದಲ್ಲಿ ಭಿನ್ನ ಹೇಳಿಕೆ ಇದು ಒಬ್ಬ ಶರಣೆ ಅಕ್ಕ ಆಗಿದ್ದವರಿಗೆ ಶೋಭೆ ತರುವುದಿಲ್ಲ ಎಂಬುದು ಎಚ್ಚೆತುಕೊಳ್ಳಬೇಕು..

ಅಕ್ಕ ಗಂಗಾಂಬಿಕೆ ಶರಣೆ ಆಗಿ ಅಕ್ಕ ಅನ್ನಪೂರ್ಣ ಜೊತೆ ಸೇರಿ ಸಂಸ್ಥೆ ಕಟ್ಟಿ ಕೆಲವು ವರ್ಷ ನಂತರ ಮುನ್ನಿಸಿಕೊಂಡು ನಂತರ ಬಸವಕಲ್ಯಾಣ ಶಿಫ್ಟ್ ಆಗಿ ಅಲ್ಲಿಯ ಸರಕಾರಿ ಕಟ್ಟಡ ಹರಳಯ್ಯ ಗವಿ ಕಬ್ಜಾ ಮಾಡಿರುವುದು ಹರಳಯ್ಯ ಸಮಾಜಕ್ಕೆ ಬೇಸರಕ್ಕೆ ಕಾರಣವಾಗಿದೆ.

ಇವರಿಗೆ ಬಸವ ತತ್ವ ಸಿದ್ದಾಂತ ಬದ್ಧತೆ ಇಲ್ಲ, ಕೇವಲ ಶೋಕಿಗಾಗಿ ಬಿಳಿ ಬಟ್ಟೆ ತೊಟ್ಟು ಪ್ರಚಾರ ಗಿಟ್ಟಿಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಪಾದಿಸುವ ದಾರಿ ಆಗಿದೆ. ಲಿಂಗಾನಂದ ಮಹಾಸ್ವಾಮೀಜಿ ಮತ್ತು ಮಾತಾಜಿ ಮಾತೆ ಮಹಾದೇವಿ ಶಿಷ್ಯರಾದ ಅಕ್ಕ ಗಂಗಾಂಬಿಕೆ ಬಸವ ದಳ ಜೊತೆ ನಂಟು ಮುರಿದುಕೊಂಡು ತಮ್ಮ ಸೋದರ ಅತ್ತೆಯ ಮಗಳಾದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ಜೊತೆಗೂಡಿ ಬಸವ ಪ್ರತಿಷ್ಠಾನ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅಕ್ಕ ಅನ್ನಪೂರ್ಣ ಶಿಕ್ಷಕಿಯಾಗಿದ್ದರು, ಅಕ್ಕ ಗಂಗಾಂಬಿಕೆ ಅಕ್ಕಮಹಾದೇವಿ ಕಾಲೇಜ್ ನಲ್ಲಿ ಲೆಕ್ಚರ್ ಆಗಿದ್ದಾರೆ, ಅಕ್ಕ ಅನ್ನಪೂರ್ಣ ತಮ್ಮ ನೌಕರಿಗೆ ರಾಜಿನಾಮೆ ಕೊಟ್ಟು ಸಂಪೂರ್ಣ ಬಸವ ತತ್ವ ಪ್ರಚಾರ ಮಾಡಲು ತಮ್ಮ ಜೀವನ ಅರ್ಪಿಸಿಕೊಂಡರು, ಆದರೆ ಅಕ್ಕ ಗಂಗಾಂಬಿಕೆ ಮಾತ್ರ ಕೈತುಂಬಾ ಸಂಬಳ ಕೊಡುವ ನೌಕರಿ ಬಿಡುವದು ಬೇಡ ಎಂದು ಬಿಡುವಿನಲ್ಲಿ ಮಾತ್ರ ಅಕ್ಕ ಅನ್ನಪೂರ್ಣ ಜೊತೆ ಬಸವ ತತ್ವ ಪ್ರಚಾರ ಮಾಡುವಲ್ಲಿ ಕೈಜೋಡಿಸುತ್ತಿದ್ದರು, ಇವರಿಗೆ ಅಕ್ಕಿಯ ಮೇಲು ಪ್ರೀತಿ ನೆಂಟರ ಮೇಲೆಯೂ ಪ್ರೀತಿ ಅಂದಂಗೆ ಆಯಿತು.

ಸರಕಾರಿ ನೌಕರರು ಮತ್ತು ಅನುದಾನಿತ ಸಂಸ್ಥೆಯಲ್ಲಿ ಸರ್ಕಾರದಿಂದ ಸಂಬಳ ತೆಗೆದುಕೊಳ್ಳುವವರು kcsr ನಿಯಮದ ಪ್ರಕಾರ ಯಾವುದೇ ಲಾಭದಾಯಕ ಸಂಸ್ಥೆ ಅಥವಾ ಏನ್ ಜಿ ಒ ಸ್ಥಾಪನೆ ಮಾಡುವದು ಅಪರಾಧ ಆಗಿದೆ.

ಯಾರಾದರೂ ಈ ಬಗ್ಗೆ ಪ್ರಕರಣ ದಾಖಲಿಸಿದರೆ ಖಂಡಿತವಾಗಿ ಸಂಕಷ್ಟಕ್ಕೆ ಸಿಲುಕಬಹುದು. ಮಾತೇ ಮಹಾದೇವಿ ಜೊತೆ ಹೊರ ಬಂದ ಮೇಲೆ ಮಾತಾಜಿಯವರ ಶರಣ ಉದ್ಯಾನವನ್ನು ಇಬ್ಬರು ಸೇರಿ ಕಬಳಿಸಿಕೊಂಡರು, ನಿಜವಾಗಿಯೂ ಅದು ಕಾಯ್ದಿಟ್ಟ ಸರಕಾರಿ ಉದ್ಯಾನವನ ಇದೆ. ಇಬ್ಬರು ಸೇರಿ ಕೆಲವೇ ವರ್ಷಗಳಲ್ಲಿ ಶಿಷ್ಯಂದಿರ ಬಳಗ ಹಾಗೂ ಶ್ರೀಮಂತರಿಂದ ಹಣ ದಾನದ ರೂಪದಲ್ಲಿ ಪಡೆದು ಸಂಸ್ಥೆ ಹೆಮ್ಮರವಾಗಿ ಬೆಳೆಸಿ ನೂರಾರು ಕೋಟಿ ಆಸ್ತಿ ಮಾಡಿದ್ದರು, ಹಲವಾರು ಎಕರೆ ಜಮೀನಿನಲ್ಲಿ ಬಸವ ಗಿರಿ ಅನ್ನುವ ಕಟ್ಟಡ ನಿರ್ಮಾಣ ಮಾಡಿದರು, ಜಮೀನು ಖರೀದಿ ರಿಯಲ್ ಎಸ್ಟೇಟ್ ಉದ್ಯೋಗ ಪ್ರಾರಂಭ ಆಯಿತು ಎನ್ನಲಾಗಿದೆ. ಅಕ್ಕ ಅನ್ನಪೂರ್ಣ ಅವರ ಪ್ರವಚನ, ಸಾಹಿತ್ಯ ಬರೆಯುವ ಪುಸ್ತಕಗಳ ಮುಖಾಂತರ ನಾಡಿನ ತುಂಬಾ ಹೆಸರಾಯಿತು, ಆವಾಗ ಅಕ್ಕ ಗಂಗಾಂಬಿಕೆ ಹೊಟ್ಟೆ ಕಿಚ್ಚು ಪ್ರಾರಂಭವಾಯಿತು , ಕೋಟಿ ಕೋಟಿ ಆಸ್ತಿ ಆದ ಮೇಲೆ ಇವರ ಮಧ್ಯ ಆಸ್ತಿ ಕಾಳಗ ಪ್ರಾರಂಭವಾಯಿತು, ಇದಕ್ಕೆ ಶಿಷ್ಯರ ಭಾಗ ಎರಡು ತುಂಡಾಗಿ ಜಗಳಕ್ಕೆ ಮತ್ತಿಷ್ಟು ಪೆಟ್ರೋಲ್ ಸುರಿದರೂ. ಅಕ್ಕ ಗಂಗಾಂಬಿಕೆ ಕೆಲವು ಕಿಡಿಗೇಡಿಗಳ ಮಾತಿಗೆ ಬಲಿಯಾಗಿ ಅಥವಾ ಬಸವಕಲ್ಯಾಣದಲ್ಲಿ ಹರಳಯ್ಯ ಗವಿಯ ಮೇಲೆ ಕಣ್ಣು ಬಿದ್ದು ಅದನ್ನು ಕಬಳಿಸುವ ಹುನ್ನಾರ ಮಾಡಿ ತಮ್ಮ ವಾಸವನ್ನು ಬಸವಕಲ್ಯಾಣಕ್ಕೆ ಸ್ಥಳಾಂತರಿಸಿ ಕೊಂಡರು, ಹರಳಯ್ಯ ಸಮಾಜದ ಸಂಸ್ಥೆಯಲ್ಲಿ ಇವರು ತಮ್ಮ ಸ್ವಂತ ತಾಯಿ ಸಮೇತ ವಾಸಿಸುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಮತ್ತೆ ತಾಯಿ ಮಗಳು ಸೇರಿ ಒಂದು ಹೊಸ ಟ್ರಸ್ಟ್ ಮಾಡಿದ್ದಾರೆ, ಅದರಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ ಸೇರಿಸಿಕೊಂಡಿಲ್ಲ.

ಅಕ್ಕ ಅನ್ನಪೂರ್ಣ ತಾಯಿ ಪೂಜ್ಯ ಶ್ರೀ ಪ್ರಭುದೇವರನ್ನು ಉತ್ತರ ಅಧಿಕಾರಿ ನೇಮಿಸಿದ್ದು, ಜಗಳ ಮತ್ತಿಷ್ಟು ಉಲ್ಬಣ:

ಅಕ್ಕ ಅನ್ನಪೂರ್ಣ ತಾಯಿ ಪ್ರಭುದೇವ ಅವರನ್ನು ತನ್ನ ಉತ್ತರ ಅಧಿಕಾರಿಯಾಗಿ ನೇಮಿಸಿ ಅವರಿಗೆ ನೌಕರಿ ಬಿಡಿಸಿ ಜಂಗಮ ದೀಕ್ಷೆ ಕೊಟ್ಟರು. ಇದಕ್ಕೆ ಅಕ್ಕ ಗಂಗಾಂಬಿಕೆ ಕೆರಳಿದರು, ಕ್ಯಾತೆ ತೆಗೆಯಲು ಪ್ರಾರಂಭ ಮಾಡಿದರು, ಪ್ರಭುದೇವ ಜಂಗಮ ಜಾತಿಯವರು ಹಾಗೂ ನಮ್ಮ ಸಂಸ್ಥೆ ಲಿಂಗಾಯತ ಮಹಿಳೆಯರ ಸಂಸ್ಥೆ ಪುರುಷರಿಗೆ, ಜಂಗಮರಿಗೆ ಅವಕಾಶ ಬೇಡ ಎಂದು ಜಗಳ ದೊಡ್ಡ ಮಟ್ಟಕ್ಕೆ ಬೆಳೆಯಿತು. ಸಂಸ್ಥೆಯಲ್ಲಿ ತಿಂದು ಉಂಡು ಕಬಳಿಸಿ ಹಣ ಸಂಪಾದನೆ ಮಾಡಿ ದಪ್ಪಗೆ ಆದ ಶಿಷ್ಯರು ಇಬ್ಭಾಗವಾಗಿ ಎರಡು ಕಡೆ ಸೇರಿ ಸಾರ್ವಜನಿಕವಾಗಿ ಜಗಳ ಕೇಳಿ ಬಂತು. ಬಸವಣ್ಣನವರ ಹೆಸರ ಮೇಲೆ ಕಟ್ಟಿಕೊಂಡ ಸಂಸ್ಥೆಯ ಪದಾಧಿಕಾರಿಗಳು ಶ್ರೀಮಂತ ಮುಖಂಡರು ಗಂಗಾಂಬಿಕೆ ಜೊತೆ ಕೈಜೋಡಿಸಿದರು, ಅಕ್ಕ ಅನ್ನಪೂರ್ಣ ಅವರು ಬಹಳ ನಿಷ್ಠುರ ಆಗಿದ್ದರು, ಇಂತಹ ವ್ಯಕ್ತಿಗಳ ನಡಾವಳಿ ಕಂಡು ಹಾಗೂ ಸಂಸ್ಥೆಯ ಹಣ ನುಂಗಿದಕ್ಕೆ ಸಂಸ್ಥೆಯಿಂದ ದೂರ ಮಾಡಿದ್ದರು, ಅವರೆಲ್ಲರೂ ದುಷ್ಮನ ಕಾ ದುಷ್ಮನ್ ದೋಸ್ತ ಎಂದು ಕೂಡಿಕೊಂಡರು. ಬಸವ ಪ್ರತಿಷ್ಠಾನ ಕೆಲವೇ ವರ್ಷಗಳಲ್ಲಿ ಇಷ್ಟು ದೊಡ್ಡದಾಗಿ ಬೆಳೆದಿದ್ದು ಎಲ್ಲರಿಗೂ ಹೊಟ್ಟೆ ಕಿಚ್ಚಾಗಿತ್ತು. ಸಂಸ್ಥೆಯ ಶ್ರೀಮಂತ ಶಿಷ್ಯರು ಹಣ ಹೂಡಿಕೆ ಮಾಡಿ ಅಕ್ಕ ಅನ್ನಪೂರ್ಣ ಅವರ ಹೆಸರ ಮೇಲೆ ಜಮೀನು ಖರೀದಿ ಮಾಡಿ ಬಡಾವಣೆಗಳನ್ನು ನಿರ್ಮಾಣ ಮಾಡಿ ಹಣ ಸಂಪಾದಿಸುವ ಕೆಲಸ ಮಾಡುತ್ತಿದ್ದರೂ, ಅಕ್ಕ ಅನ್ನಪೂರ್ಣ ಹತ್ತಿರ ಹಣ ಪಡೆದು ಕೆಲವರು ಉದ್ಯೋಗ ವ್ಯವಹಾರಕ್ಕೆ ದೂರಬಳಕೆ ಮಾಡಿಕೊಂಡರು, ಹಣಕಾಸು ವ್ಯವಹಾರದಲ್ಲಿ ವೈಮನಸ್ಸು ಆಗಿತ್ತು. ಎಲ್ಲರೂ ಸೇರಿ ಅಕ್ಕ ಅನ್ನಪೂರ್ಣ ಅಕ್ಕ ಗಂಗಾಂಬಿಕೆ ಜಗಳ ಜೋರು ಮಾಡಿಸಿದ್ದರು.

ಅಕ್ಕ ಅನ್ನಪೂರ್ಣ ತಾಯಿಯ ಕ್ಯಾನ್ಸರ್ ಆಗಿ ಆರೋಗ್ಯ ತೀರಾ ಕೆಟ್ಟಿತು:

ಅಕ್ಕ ಅನ್ನಪೂರ್ಣ ಅವರ ಆರೋಗ್ಯ ಕೆಟ್ಟಿತು, ನಾನು ಸಾಯುತ್ತೇನೆ ಅನ್ನುವ ಅಳಕು ಹುಟ್ಟಿತು, ಆದರಿಂದ ಅವರು ಎಲ್ಲರಿಗೂ ವಾಗ್ದಾನದಂತೆ ಪ್ಲಾಟ್ ಜಮೀನು ಎಲ್ಲರ ಹೆಸರಿನ ಮೇಲೆ ಮಾಡಿಕೊಟ್ಟರು, ಹಾಗೂ ಅಕ್ಕ ಗಂಗಾಂಬಿಕೆ ಮತ್ತು ಪ್ರಭುದೇವರಿಗೆ ತಮ್ಮ ಸಂಸ್ಥೆ ಹಂಚಿಕೆ ಮಾಡಿಕೊಟ್ಟರು. ಸಂಪೂರ್ಣ ಆಸ್ತಿ ನನಗೆ ಬೇಕು, ಪ್ರಭೂದೇವರನ್ನು ನಮ್ಮ ಸಂಸ್ಥೆಯಿಂದ ಹೊರ ಹಾಕಬೇಕು ಎಂದು ಅಕ್ಕ ಗಂಗಾಂಬಿಕೆ ಕ್ಯಾನ್ಸರ್ ಪೀಡಿತ ಅಕ್ಕ ಅನ್ನಪೂರ್ಣ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು, ಮತ್ತೆ ಬೇರೆಯವರ ಕುಮ್ಮಕ್ಕಿನಿಂದ ಅಕ್ಕ ಅನ್ನಪೂರ್ಣ, ಪ್ರಭುದೇವರು ಮತ್ತು ಸಂಗಡಿಗರ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಆಸ್ತಿ ಹಣ ಅಂತಸ್ತು ಮೋಹದಲ್ಲಿ ಇಬ್ಬರು ಜಂಗಮ ಶರಣ ದೀಕ್ಷೆ ಪಡೆದು ಸನ್ಯಾಸಿ ಆಗಿದ್ದು ನಗೆ ಪಾಟಿಲಿಗೆ ಗುರಿಯಾಗಿ ಸಾರ್ವಜನಿಕರ ನಿಂದನಗೆ ಗುರಿ ಆದರು. ಇವರ ಹೇಳುತ್ತಿರುವ ಪ್ರವಚನಕ್ಕೂ ಇವರು ಆಡುತ್ತಿರುವ ಬೀದಿ ರಂಪಾಟ ಜಗಳಕ್ಕೂ ಜನ ಬೇಸತ್ತು ಇವರು ನಿಜವಾಗಿಯೂ ಬಸವಣ್ಣನವರ ಅನುಯಾಯಿಗಳು ಎಂದು ಪ್ರಶ್ನೆ ಮಾಡುತ್ತಿದ್ದರು. ಅಕ್ಕ ಅನ್ನಪೂರ್ಣ ಅವರು ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಟ ಮಾಡುತ್ತಿದ್ದಾಗ ಕರುಣೆಯ ಇಲ್ಲದ ಕೆಲವು ಬೀದರ ನಗರದ ಸ್ವಯಂಘೋಷಿತ ಲಿಂಗಾಯತ ಪ್ರತಿಷ್ಠಿತ ಶ್ರೀಮಂತ ವ್ಯಕ್ತಿಗಳು ಗಂಗಾಂಬಿಕೆ ಬೆನ್ನಿಗೆ ನಿಂತು, ದಿನ ನಿತ್ಯ ಸಭೆಗಳನ್ನು ಮಾಡಿ ಪತ್ರಿಕೆ ಹೇಳಿಕೆಗಳು ಕೊಟ್ಟು, ಸಾಯುವ ಸಂದರ್ಭದಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ ಕೆಟ್ಟ ಹೆಸರು ತರಲು ಸಂಪೂರ್ಣ ಪ್ರಯತ್ನ ಮಾಡಿದ್ದರು, ಅನಾರೋಗ್ಯದಲ್ಲಿದ ಅಕ್ಕಳಿಗೆ ಮತ್ತಿಷ್ಟು ಕಿರುಕುಳ ಕೊಟ್ಟರು. ಜನ ಇದನ್ನು ಕಂಡು ಕ್ಯಾನ್ಸರ್ ಪೀಡಿತ ಒಬ್ಬ ಸನ್ಯಾಸಿ ಮಹಿಳೆಗೆ ಕಿರುಕುಳ ಕೊಡುವದು ನೋಡಿ ನೊಂದು ಹೋದರು. ಕ್ಯಾನ್ಸರ್ ಗುಣಮುಖ ಆಗಿ ಬಂದ ಮೇಲೆ ಅಕ್ಕ ಗಂಗಾಂಬಿಕೆ ಅವರ ಅನುಯಾಯಿಗಳು ಸೇರಿ ಅಕ್ಕ ಅನ್ನಪೂರ್ಣ ಅವರ ಆಶ್ರಮ ಕಬಳಿಸುವ ಪ್ರಯತ್ನ ಮಾಡಿದ್ದರು, ಅಲ್ಲಿಯೂ ಇಬ್ಬರ ಮಧ್ಯೆ ಜಗಳ ಬೈಯುವದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಲಿಂಗಾಯತ ಸಮಾಜದ ಹೆಸರು ಹಾಳು ಮಾಡಿದ್ದರು. ಸಾವಿಗಿಂತ ಮೊದಲು ಅಕ್ಕ ಅನ್ನಪೂರ್ಣ ತನ್ನ ಕೊನೆಯ ಇಚ್ಚೆಯಂತೆ ಕೂಡಲಸಂಗಮದಲ್ಲಿ ಖಾವಿ ಧರಿಸಿ ಮತ್ತೆ ಪ್ರಭುದೇವರಿಗೂ ಖಾವಿ ನೀಡಿ ಗುರು ಭೋದನೆ ಮಾಡಿದರು.

ಅಕ್ಕ ಅನ್ನಪೂರ್ಣ ಸಾವಿನಲ್ಲಿಯೂ ರಾಜಕೀಯ ಮತ್ತು ರಂಪಾಟ:

ಅಕ್ಕಾ ಸಾವಿನ ದಿವಸ ಕೂಡ ಪೂಜ್ಯರ ಮಠಾಧೀಶರ ಸಾರ್ವಜನಿಕರ ಎದುರೇ ರಂಪಾಟ ಆದವು. ಮರು ದಿವಸವೇ ಅಕ್ಕ ಗಂಗಾಂಬಿಕೆ ಶರಣ ಉದ್ಯಾನದಲ್ಲಿ ತಮ್ಮ ಬೆಂಬಲಿತ ಲಿಂಗಾಯತ ಮುಖಂಡರ, ಲಿಂಗಾಯತ ಶ್ರೀಮಂತರ ಹಿರಿಯರ ಸಭೆ ಕರೆದು, ಅನ್ನಪೂರ್ಣ ಅವರ ಸಂಪೂರ್ಣ ಆಸ್ತಿ ನನಗೆ ಬರಬೇಕು ಇದರ ಹೋರಾಟಕ್ಕಾಗಿ ಒಬ್ಬ ಲಿಂಗಾಯತ ಹಿರಿಯರನ್ನು ಸಂಚಾಲಕರಾಗಿ ನೇಮಿಸಿದರು. ಸಂಚಾಲಕರು ಅಕ್ಕ ಅನ್ನಪೂರ್ಣ ತಾಯಿಯವರ ಸಮಾಧಿ ಮೇಲೆ ಏನು ಕಟ್ಟಡ ಕಟ್ಟಬಾರದು ಎಂದು ಸಮಾಧಿ ಸ್ಥಳಕ್ಕೆ ಹೋಗಿ ಪ್ರಭುದೇವರು ಅವರ ಸಂಗಡಿಗರಿಗೆ ತಾಕೀತು ಮಾಡಿದರು. ಇದು ಎಂತಹ ವಿಪರ್ಯಾಸವೆಂದರೆ ಮಾತೆಗೆ ಸಾವಿನಲ್ಲಿಯೂ ರಾಜಕೀಯ ಮಾಡಿದು ನಾವು ಕಂಡಿದ್ದೇವೆ. ಇದೆಲ್ಲ ನೋಡಿದಾಗ ಇವರೆಲ್ಲ ಸನ್ಯಾಸ ದೀಕ್ಷೆ ಪಡೆದು ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ಮೋಜಿಗಾಗಿ ಹಣ ಅಂತಸ್ತಿಗಾಗಿ ಎಂದು ಜನ ಛಿಮಾರಿ ಹಾಕಿದ್ದರು.

ಬಸವ ಪರ ಸಂಘಟನೆಗಳು : ಪೂಜ್ಯ ಅಕ್ಕ ಗಂಗಾಂಬಿಕೆಯ ಸಭೆ ಹಾಗೂ ಸಮಾರಂಭ ಬಹಿಷ್ಕಾರ :

ಪೂಜ್ಯ ಅಕ್ಕ ಗಂಗಾಂಬಿಕೆಯ ವಿರೋಧ ಅನೇಕ ಬಸವ ಪರ ಸಂಘಟನೆಗಳು ಅವರ ಸಭೆ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ವಚನ ವಿಜಯೋತ್ಸವದಲ್ಲಿ ಯಾರು ಭಾಗವಹಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಲಿಂಗಾಯತ ಸಮಾಜದ ಸಭೆಯಲ್ಲಿ ಆಹ್ವಾನಿಸಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎರಡು ದಿನದಿಂದ ನಾವು ನೋಡುತ್ತಿರುವ ದೃಶ್ಯವಾಗಿದೆ.

ಇಂದು ಕೂಡ ಇಂತವರು ಲಿಂಗಾಯತ ಧರ್ಮ ಹೆಸರ ಮೇಲೆ ಬಸವ ತತ್ವ ಸಿದ್ದಾಂತ ಪ್ರಚಾರ ಮಾಡುತ್ತಿರುವದು ಕೇವಲ ದುಡ್ಡಿಗಾಗಿ ಮಾತ್ರ ಎಂಬುದು ಯಾರು ಮರೆಯುವಂತಿಲ್ಲ. ಅದು ಬಿಟ್ಟು ಯಾವುದೇ ಬದ್ಧತೆಯಿಲ್ಲ, ಯಾವುದೇ ಆಚರಣೆ ಇಲ್ಲ, ನುಡಿದಂತೆ ನಡೆದು ತೋರಿಸುವ ಗುಣಗಳು ಇಲ್ಲ, ಇಂದು ಎಲ್ಲಾ ವೇಷಧಾರಿಗಳು ಮಾತ್ರ ಸಮಾಜದಲ್ಲಿ ಬಸವಣ್ಣನವರ ಹೆಸರಿನ ಮೇಲೆ ಅವರವರ ಅಂಗಡಿಗಳು ತೆಗೆದುಕೊಂಡು ವ್ಯಾಪಾರ ಮಾಡಿಕೊಂಡು ಚನ್ನಾಗಿ ಸಂಪಾದನೆ ಮಾಡಿ ನಿಜವಾದ ಬಸವಣ್ಣನವರ ತತ್ವ ಸಿದ್ದಾಂತಕ್ಕೆ ತಿಲ್ಲಾಂಜಲಿ ಇಡುತ್ತಿರುವುದು ಲಿಂಗಾಯತ ಸಮಾಜವು ಎಂದಿಗೂ ಕ್ಷೇಮಿಸಲಾಗದ ಅಪರಾಧ.. ಮುಂದಿನ ದಿನಗಳಲ್ಲಿ ಶಿವಶರಣರ ಹಾಗೂ ವಚನ ಸಾಹಿತ್ಯ ಮತ್ತು ಬಸವಣ್ಣನವರ ತತ್ವ ಸಂದೇಶಗಳನ್ನು ಪ್ರಸಾರ. ಪ್ರಚಾರ ಮಾಡುವ ಸಮಾಜಮುಖಿ ಚಿಂತಕರಿಗೆ ಮಾತ್ರ ಅವಕಾಶವನ್ನು ನೀಡಬೇಕು ಸ್ವಾರ್ಥಿಗಳನ್ನು ನೇರವಾಗಿ ಧಿಕ್ಕರಿಸಿ ಸಮಾಜದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ.

ಧರ್ಮೇಂದ್ರ ಪೂಜಾರಿ ಬಗ್ದೂರಿ.ಸಂಪಾದಕರು.ಶೋಧವಾಣಿ ಕನ್ನಡ ದಿನ ಪತ್ರಿಕೆ. ಹೈದರಾಬಾದ್.

ಕೃಪೆ: ಶೋಧವಾಣಿ ಪತ್ರಿಕೆ

By ಕಲ್ಯಾಣ ಸಿರಿಗನ್ನಡ

ಮಚ್ಚೇಂದ್ರ ಪಿ.ಅಣಕಲ್.

2 thoughts on “ನುಡಿದಂತೆ ನಡೆಯದ ಡಾ. ಅಕ್ಕ ಗಂಗಾಂಬಿಕೆ ಪಾಟೀಲ್.”
  1. ಡಾ ಗಂಗಾಂಬಿಕೆ ಪಾಟೀಲ್ ರವರ ನಡೆಯಿಂದ ಹಿರಿಯ ಸಾಹಿತಿ ರಂಜಾನ ದರ್ಗಾ ಅವರು ವಚನ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸುವುದಿಲ್ಲ ಎಂದು ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

  2. ಡಾ.ಅಕ್ಕ ಅನ್ನಪೂರ್ಣ ತಾಯಿಯವರು ಯಾರಿಗೂ ದ್ರೋಹ ಮಾಡಿರುವುದಿಲ್ಲ. ಇದು ಸರ್ವಕಾಲಿಕ ಸತ್ಯ. ದುಡ್ಡಿನ ಆಸೆಗೆ ಬಿದ್ದು ಕೆಲವು ಸಾಹುಕಾರರು ರಾಜಕೀಯ ವ್ಯಕ್ತಿಗಳು ಸೇರಿ ಡಾ.ಅಕ್ಕ ಗಂಗಾಂಬಿಕೆಯವರನ್ನು ತಮ್ಮ ಕಪಿಮುಷ್ಠಿಯಲ್ಲಿ ತಗೊಂಡು ಇಬ್ಬರು ಅಕ್ಕಂದಿರರಿಗೆ ಇಬ್ಬಾಗ ಮಾಡಿದರು. ಇದು ಗಂಗಾಂಬಿಕೆ ಅಕ್ಕಗೆ ತಿಳಿಯದೇ ಹೋಯಿತು. ಬೆಂಬಲಿಗರ ಮಾತು ಕೇಳಿ ಬಸವಗಿರಿಗೆ ಕಳಂಕ ಬಂತು. ಇವ ನಮ್ಮವ ಇವ ನಮ್ಮವ ಎನ್ನುವ ಬಸವಣ್ಣನವರ ವಚನ ಮರೆತು ಎಲ್ಲವೂ ನನ್ನದೇ ಎಲ್ಲವೂ ನನ್ನದೇ ಎನ್ನುವ ಭಾವನೆ ಮೂಡಿತು. ಪುರಾಣ ಹೇಳಲಿಕ್ಕೆ ಆಯಿತು ಬದನೆಕಾಯಿ ಉಣಲಿಕ್ಕೆ ಆಯಿತು ಎನ್ನುವ ಭಾವನೆಯಲ್ಲಿ ಪ್ರವಚನ, ವಚನ ವಿಜಯೋತ್ಸವ ನಡೆಯುತ್ತಿವೆ. ಜನರ ನಡುವೆ ನಂಬಿಕೆ ಕಳೆದುಕೊಂಡು ಮುಂಬರುವ ದಿನಗಳಲ್ಲಿ ಏನೆಲ್ಲಾ ಮಾಡಿಸಬೇಕು ಎಂಬುದು ಕಾಲ ನಿರ್ಣಯ ಮಾಡುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ. ಎಂಬತ್ತಾಗಿದೆ ಈಗ ಇವರ ಪರಿಸ್ಥಿತಿ.

    – ಕಾಶೀನಾಥ ಪಾಟಿಲ್ ಶಿವನಗರ ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ