ನ್ಯಾಯ ಎಲ್ಲಿದೆ ?
ಸರಿ ತಪ್ಪುಗಳ ಲೆಕ್ಕ ಹಾಕಲು
ಸತ್ಯ ಹೇಳಬಾರದಂತೆ.
ಸುಳ್ಳಿನ ಬಂಗಾರದ ಸೂಜಿಯನ್ನು ಕಣ್ಣಿಗೆ
ಚುಚ್ಚಿಕೊಳ್ಳಲು ಆಗುತ್ತದೆಯೇ ?
ಮನದ ನೋವನ್ನು ಅಕ್ಷರಗಳ ಹೂರಣ ಮಾಡಿ
ಲೇಖನ ಬರೆಯಬಾರದತೆ
ಸತ್ತ ಶವದಂತೆ ನಿಜಾಂಶ
ಮುಚ್ಚಿಡಬೇಕಂತೆ !
ಭೇದ — ಭಾವ ಮಾಡಿದ
ಉದಾಹರಣೆ ಕಣ್ಣಿಗೆ ಕಂಡರು ಕಣ್ಣು ಕಾಣದ
ಕುರುಡರಂತೆ ತೆಪ್ಪಗೆ
ಇರಬೇಕಂತೆ !
ಮುಗ್ಧ ಕಂದಮ್ಮಗಳಿಗೆ
ಚುಚ್ಚಿ ಮಾತನಾಡಿ
ಮನಸ್ಸುಗಳಿಗೆ ಬೆಂಕಿ ಇಟ್ಟಾಗಲು ಆರಿಸಬಾರದಂತೆ
ಹಾರೈಸಬೇಕಂತೆ !
ಮನದ ನೋವನ್ನು ನಮ್ಮವರೆಂದು ಹೇಳಿ ಕೊಂಡಾಗ ಅದೂ ತಪ್ಪಂತೆ !
ನಾನೇನು ನಾಡೆನ್ಡ್ರಿ ಎಂದು
ಕೂಗಿದಾಗ ಪರಿಸ್ಥಿತಿಯ
ನೆಪವೊಡ್ಡಿ ಮನದ ದ್ವೇಷವನ್ನು ಮನೆತುಂಬಾ
ಹರಡಿದರಂತೆ !
ಸತ್ಯ ಹೊಸ್ತಿಲು ದಾಟಿಲ್ಲ
ಸುಳ್ಳು ಊರನ್ನೇ ಸುತ್ತಿಕೊಂಡು ಬಂದಿದೆ
ನಿಜಾಂಶ ಗೊತ್ತಾದರೆ ಮನಸ್ಸು ಗಹಗಹಿಸಿ
ನಗುತ್ತದೆಯೆಂತೆ !
ನಮ್ಮವರು ಎಂದು ನಂಬಬೇಡಿ ಯಾರನ್ನು
ಚೂರಿ ಇರಿಯುತ್ತಾರೆ
ಗೊತ್ತಿಲ್ಲದೆ ಬಟ್ಟೆಯಲ್ಲಿ ಕಲ್ಲು ಕಟ್ಟಿ ಎಸೆಯುತ್ತಾರೆ
ಗೊತ್ತಾಗುವುದು ಹೇಗೆ
ಯಾವುದು ಸತ್ಯ ಯಾವುದು
ಮಿಥ್ಯ ! ಎನ್ನುವರಂತೆ
ಕೊನೆಗೆ ಸನ್ನಿಧಾನದಲ್ಲಿ ಸುಳ್ಳಿಗೆ ಜಯ ಸಿಕ್ಕು
ಸಂದರ್ಭ ಮರೆಮಾಚಿ
ನಮಗೆ ಬುದ್ಧಿವಾದ
ಹೇಳಿ ನ್ಯಾಯ ತೀರ್ಮಾನ
ಮಾಡಿದಂತೆ
ಎಲ್ಲಿದೆ ನ್ಯಾಯ? ಎಂದು
ಹುಡುಕಬೇಕಂತೆ !
– ಮಹೇಶ್ ಎಸ್ ಹೆಚ್
ಕೊಟ್ಟೂರು